ಭಾರತದ ಬಗ್ಗೆ ವಿಶ್ವಬ್ಯಾಂಕ್ ತಾಜಾ ಕಾಮೆಂಟ್
ಭಾರತದಲ್ಲಿ ಚುನಾವಣಾ ಸ್ವಾತಂತ್ರ್ಯವಿದೆ. ಕಡುಬಡತನವು ಅರ್ಧಕ್ಕರ್ಧ ಕಡಿಮೆಯಾಗಿದೆ. ಅನಕ್ಷರತೆಯು ಅತ್ಯದ್ಭುತವಾಗಿ ಇಳಿಕೆ ಕಂಡಿದೆ. ಆರೋಗ್ಯಸ್ಥಿತಿಯೂ ಸುಧಾರಣೆ ಕಂಡಿದೆ. ೧೯೯೦ರ ದಶಕದಿಂದ ಭಾರತವು ಜಗತ್ತಿನಲ್ಲೇ ಶರವೇಗದಿಂದ ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾಗಿದೆ. ಆದರೆ ಸಾರ್ವಜನಿಕ ಸ್ವಾಸ್ಥ್ಯ ಕುರಿತಂತೆ ಮಾತ್ರ ಭಾರತವು ಹಿಂದುಳಿದಿದೆ ! ಶಿಕ್ಷಣ, ನೀರು, ವಿದ್ಯುತ್ ಮತ್ತು ಸಾರಿಗೆ ರಂಗಗಳಲ್ಲಿ ಭಾರತದ ಪ್ರಗತಿ ಕುಂಠಿತವಾಗಿದೆ.
ಹಾಗೆಂದು ವಿಶ್ವಬ್ಯಾಂಕ್ ಹೇಳುತ್ತದೆ. ಅದರಲ್ಲೂ ಭಾರತದ ಲಸಿಕೆ ಕಾರ್ಯಕ್ರಮವು ಬಾಂಗ್ಲಾ ದೇಶಕ್ಕಿಂತ ಸಾಕಷ್ಟು ಹಿಂದುಳಿದಿದೆಯಂತೆ. ಬಾಂಗ್ಲಾ ದೇಶದಲ್ಲಿ ಶಿಶುಮರಣ ಪ್ರಮಾಣವು ಭಾರತದ ಪ್ರಮಾಣಕ್ಕಿಂತ ಸಾಕಷ್ಟು ಕಡಿಮೆಯಾಗಿದೆಯಂತೆ. ದಿಲ್ಲಿಯ ಪ್ರಾಥಮಿಕ ಆರೋಗ್ಯ ಕಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಒಬ್ಬ ಸಾಮಾನ್ಯ ವೈದ್ಯನ ಸೇವಾ ಗುಣಮಟ್ಟವು ಆಫ್ರಿಕಾದ ತಾಂಜಾನಿಯಾದ ವೈದ್ಯನಿಗಿಂತ ಕಡಿಮೆ ಎಂದು ವಿಶ್ವಬ್ಯಾಂಕ್ ಹೇಳುತ್ತೆ! ಅದಿರಲಿ, ಅವನನ್ನು ಇಂಡೋನೇಶ್ಯಾದ ವೈದ್ಯನಿಗಂತೂ ಹೋಲಿಸುವುದೇ ಕಷ್ಟವಂತೆ.
ಭಾರತದಲ್ಲಿ ಶೇ. ೫೫ರಷ್ಟು ಮಕ್ಕಳಿಗೆ ದಢಾರದ ವಿರುದ್ಧ ಲಸಿಕೆ ನೀಡಲಾಗಿದ್ದರೆ, ಬಾಂಗ್ಲಾ ದೇಶದಲ್ಲಿ ಶೇ. ೭೭ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆಯಂತೆ.
ಇನ್ನು ಶಿಕ್ಷಣದ ಬಗ್ಗೆಯೂ ವಿಶ್ವಬ್ಯಾಂಕಿಗೆ ಹೇಳುವುದಕ್ಕೆ ಬೇಕಾದಷ್ಟಿದೆ. ಭಾರತದ ಸರ್ಕಾರಿ ಶಾಲೆಯ ಮೂರನೇ ಎರಡರಷ್ಟು ಮಕ್ಕಳಿಗೆ ಒಂದು ಸಾಧಾರಣ ಕಥೆಯನ್ನೂ ಓದಲು ಬರುವುದಿಲ್ಲ. ಅರ್ಧಕ್ಕರ್ಧ ಮಕ್ಕಳಿಗೆ ಚಿಕ್ಕಪುಟ್ಟ ಸಂಕಲನ ಮಾಡುವುದೂ ಕಷ್ಟ.
ಇನ್ನು ಭಾರತವನ್ನು ಚೀನಾಗೆ ಹೋಲಿಸುವುದರಲ್ಲಿ ವಿಶ್ವವಬ್ಯಾಂಕ್ ಕೂಡಾ ಹಿಂದೆ ಬಿದ್ದಿಲ್ಲ. ೧೯೯೮ರಲ್ಲಿ ಭಾರತದಲ್ಲಿ ತಲಾವಾರು ೧೦೦ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದ್ದರೆ ಚೀನಾದಲ್ಲಿ ಈ ಪ್ರಮಾಣ ೨೦೦ ವ್ಯಾಟ್. ಈ ಪ್ರಮಾಣ ೨&am
p;#330
2;೦೩ರಲ್ಲಿ ಭಾರತದಲ್ಲಿ ಹೆಚ್ಚಾಗಿಲ್ಲ. ಆದರೆ ಚೀನಾದಲ್ಲಿ ಇದು ೨೭೫ ವ್ಯಾಟ್‌ಗೆ ಹೆಚ್ಚಿದೆ. ಒಳ್ಳೆಯ ರಸ್ತೆಗಳ ಪ್ರಮಾಣ ಲಕ್ಷಕ್ಕೆ ೭೦ ಕಿಮೀ. ; ಚೀನಾದಲ್ಲಿ ಇದು ೮೦ರಲ್ಲಿದ್ದದ್ದು ಈಗ ೧೨೦ಕ್ಕೆ ಹೆಚ್ಚಿದೆ. ಭಾರತದಲ್ಲಿ ಇದು ೮೦ಕ್ಕೆ ಹೆಚ್ಚಿದೆ. ಇನ್ನು ಭೂದೂರವಾಣಿ ಸಂಪರ್ಕಗಳಂತೂ ಭಾರತದಲ್ಲಿ ೧೦೦ ಜನರಿಗೆ೩೦ ಇದ್ದಿದ್ದು ೨೦೦೩ರಲ್ಲಿ ೫೦ಕ್ಕೆ ಹೆಚ್ಚಿದೆ. ಆದರೆ ಚೀನಾದಲ್ಲಿ ಇದು ೧೯೯೮ರಲ್ಲಿ ೫೦ ಇದ್ದದ್ದು ೨೦೦೩ರಲ್ಲಿ ೨೦೦ರ ಹತ್ತಿರ ಬಂದಿದೆ.
ಇನ್ನು ರಫ್ತಿನ ವಿಷಯದಲ್ಲಿ ಭಾರತಕ್ಕೂ ಚೀನಾಗೂ ಅಜಗಜಾಂತರ: ೨೦೦೪ರ ಹೊತ್ತಿಗೆ ವಿಶ್ವ ಮಾರುಕಟ್ಟೆಯಲ್ಲಿ ಭಾರತದ ರಫ್ತಿನ ಪ್ರಮಾಣ ಶೇ. ೧.೧ ಒದ್ದರೆ ಚೀನಾದ ರಫ್ತಿನ ಪ್ರಮಾಣ ಶೇ. ೬.೩.
ಇನ್ನು ಬಡತನದ ಪ್ರಮಾಣದಲ್ಲಿ ಭಾರತದ ರಾಷ್ಟ್ರೀಯ ದಾಖಲೆಯೇನೋ ಸಮಾಧಾನಕರವಾಗಿದ್ದರೂ, ಕೆಲವು ರಾಜ್ಯಗಳು ಬಡತನದಲ್ಲಿ ಆಫ್ರಿಆಕದ ಕಡುಬಡ ದೇಶಗಳನ್ನೂ ಮೀರಿಸಿವೆ. ಗ್ರಾಮೀಣ ಒರಿಸ್ಸಾದಲ್ಲಿ ಶೇ. ೪೩ರಷ್ಟು ಕಡುಬಡವರಿದ್ದರೆ ಗ್ರಾಮೀಣ ಬಿಹಾರದಲ್ಲಿ ಶೇ| ೪೧ರಷ್ಟು ಜನ ಕಡುಬಡವರು. ಆದರೆ ಘಾನಾದಲ್ಲಿ ಇರುವಕಡುಬಡವರಸಂಖ್ಯೆ ಶೇ. ೨೮ ; ಮಲಾವಿಯಲ್ಲಿ ಶೇ. ೨೭. ಮೆಕ್ಸಿಕೋದಲ್ಲಿ ಶೇ. ೭. ವಿಚಿತ್ರವೆಂದರೆ ಭಾರತದ ಗ್ರಾಮೀಣ ಹರ್‍ಯಾನಾದಲ್ಲಿ ಶೇ. ೬ರಷ್ಟು ಮತ್ತು ಗ್ರಾಮೀಣ ಪಂಜಾಬಿನಲ್ಲಿ ಶೇ. ೨ರಷ್ಟು ಕಡುಬಡವರಿದ್ದಾರೆ!
ಕೃಷಿ ಸಬ್ಸಿಡಿಯು ಕೇವಲ ಕೆಲವರಿಗೆ ಮಾತ್ರ ಮುಟ್ಟಿದೆ ಎಂದು ವಿಶ್ವಬ್ಯಾಂಕ್ ಅಂಕಿ ಅಂಶಗಳೊಂದಿಗೆ ಹೇಳುತ್ತದೆ. ಕೃಷಿ ಸಬ್ಸಿಡಿಯೇನೋ ಹೆಚ್ಚಿದ್ದರೂ ಉತ್ಪಾದಕತೆಯನ್ನು ಹೆಚ್ಚಿಸುವ ಹೂಡಿಕೆಗಳು ಮಾತ್ರ ಆಗುತ್ತಿಲ್ಲ. ಬದಲಿಗೆ ಇಂಥ ಉಪಯುಕ್ತ ಹೂಡಿಕೆಗಳು ಕಡಿಮೆಯಾಗುತ್ತಲೇ ಬಂದಿವೆ.
ಸಂಘಟಿತ ಖಾಸಗಿ ರಂಗದಲ್ಲೇ ೩೯ ಕೋಟಿ ಜನ ಇದ್ದರೆ, ಇವರಲ್ಲಿ ಕೇವಲ ೮೦ ಲಕ್ಷ ಜನರಿಗೆ ಮಾತ್ರ ಕೆಲಸ ಸಿಕ್ಕಿದೆ.
ಹೀಗೆ ಭಾರತದ ಬಗ್ಗೆ ವಿಶ್ವಬ್ಯಾಂಕ್ ಹಲವು ಅಂಕಿಅಂಶಗಳನ್ನು ಇತ್ತೀಚೆಗೆ ಹರಿಯಬಿಟ್ಟಿದೆ. ವಿಶ್ವಬ್ಯಾಂಕ್ ಬಗ್ಗೆ ಏನೇ ಹೇಳಲಿ, ಅದು ಭಾ&
;#32
48;ತಕ್ಕೆ ಎಷ್ಟೇ ಸಾಲವನ್ನು ನೀಡಲಿ, ವಿವಿಧ ರಾಜ್ಯಗಳ ಅಭಿವೃದ್ಧಿ ಬಗ್ಗೆ ಎಷ್ಟೇ ಒಳ್ಳೆಯ ಮಾತುಗಳನ್ನು ತನ್ನವರದಿಯಲ್ಲಿ ದಾಖಲಿಸಲಿ, ಇಂಥ ಹಿನ್ನಡೆಯ ಸಂಗತಿಗಳನ್ನೂ ಅದು ಹೇಳದೆ ಬಿಟ್ಟಿಲ್ಲ. ಇತ್ತೀಚೆಗೆ ಕರ್ನಾಟಕಕ್ಕೆ ವಿಶ್ವಬ್ಯಾಂಕ್ ೬೫೨ ಕೋಟಿ ರೂ.ಗಳ ಮೆದು ಸಾಲವನ್ನು ಆರೋಗ್ಯ ಸೇವೆಗಳ ಅಭಿವೃದ್ಧಿಗಾಗಿ ನೀಡಿದೆ. ಎರಡನೇ ಹಂತದಲ್ಲಿ ೮೯೭.೭೯ ಕೋಟಿ ರೂ.ಗಳನ್ನು ನೀಡಿದೆ ಎಂದು ರಾಜ್ಯದ ಆರೋಗ್ಯ ಸಚಿವ ಆರ್. ಅಶೋಕ್ ಇತ್ತೀಚೆಗಷ್ಟೆ ಪ್ರಕಟಿಸಿದ್ದಾರೆ.
ವಿಶ್ವಬ್ಯಾಂಕಿನ ಹೊಸ ಟೀಕೆಗಳು ಮುಂದಿನ ಯೋಜನೆಗಳ ಫಲಪ್ರದ ಜಾರಿಗಾಗಿ ನೀಡಿರುವಮುನ್ನೆಚ್ಚರಿಕೆಗಳು ಎಂದು ತಿಳಿಯೋಣವೆ?