ನಿನ್ನ ಗುರ್ತಿದೆ ನನಗೆ ಎದೆ ಕಳಚಿ ನಡೆದವಳೆ
ಸ್ವಪ್ನಸೂಕ್ಷ್ಮದ ಸಮಯ ಬೇಡವೆಂದೆ.
ಅಪಮುಹೂರ್ತದ ಹೊತ್ತು ಕಳೆದೆ ಮುತ್ತಿನ ಗುರ್ತು
ಕೆನೆಮಾತು, ತುಟಿಗೀತ ತೊರೆದುಬಿಟ್ಟೆ

ಸಾಲುಬೆಟ್ಟದ ನೆರಳುಸಂಜೆಗೆ ಮುನ್ನ
ಕಡಿದಿದ್ದೆ ಬೆರಳು- ದಿಕ್ಕುಗಳು ತೆಕ್ಕೆಮುಕ್ಕೆ.
“ಹೆಜ್ಜೆ  ಹಿತವಿಲ್ಲ ಸಖ, ನಿನ್ನ ಜತೆ ಸಾಕು”
ಹೌದು ಬಿಡು ಎದೆ ಕವಾಟಕ್ಕೆ ಧಕ್ಕೆ.

ಏಕಾಂತದೆದೆ ಕೊಟ್ಟು ಹೋಗಿಬಿಟ್ಟೆಯ ಹುಡುಗೀ
ಹಣೆಗೆ ನೆನಪಿದೆ ಹೂವು ನಿನ್ನ ಗಲ್ಲ.
ಆ ದಿನಾಂತದ ಗಳಿಗೆ ಈ ಸುಗಂಧದ ಹೆರಳು
ಅಯ್ಯೊ ಅಂಗೈ ತೊರೆದು ಹಾರಿತಲ್ಲ ?

ಹಾಗೆಯೇ ಇರಬಹುದೆ ಹೇಳಬಾರದ ನೋವು
ಹೇಳಿಬಿಡು ಗೆಳತೀ ನಾಳೆ ಬರಬಹುದೇ –
ನನ್ನ ಕಣ್ತೆರೆ ಸರಿಸಿ ನೀನು ಹೊರಟಾಗ ?
ನಿನ್ನ ನೆನಪೇ ನಾಳೆ ಬೇಡವೆಂದಾಗ ?

Share.
Leave A Reply Cancel Reply
Exit mobile version