ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಸೇವಾ . org – ಕಾರ್ಯಕ್ರಮವು ಈ ಬಾರಿಯೂ ಡಿಸೆಂಬರ್ ೩೧ರಂದು ಬೆಂಗಳೂರಿನ ನ್ಯಾಶನಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಹೊಸ ಕ್ಯಾಲೆಂಡರ್ ವರ್ಷವನ್ನು ಸಂಕಲ್ಪದೊಂದಿಗೆ ಸ್ವಾಗತಿಸುವ ಜನಪ್ರಿಯ ಸಂಸ್ಕೃತಿ ಮೇಳವಾಗಿದೆ.
ಅನ್ನ – ಅಕ್ಷರ – ಆರೋಗ್ಯ ಈ ಧ್ಯೇಯವಾಕ್ಯವನ್ನು ತನ್ನ ಸೇವಾಕಾರ್ಯಗಳ ಮೂಲಕ ಕಳೆದ ಹನ್ನೊಂದು ವರ್ಷಗಳಿಂದ ಪಾಲಿಸುತ್ತಿರುವ ಅದಮ್ಯ ಚೇತನದ ಈ ಸಾಂಸ್ಕೃತಿಕ ಮೇಳವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಲು ಸಿದ್ಧತೆಗಳು ನಡೆದಿವೆ.
೨೦೦೮ರ ಡಿಸೆಂಬರ್ ೩೧ರಂದು ನ್ಯಾಶನಲ್ ಹೈಸ್ಕೂಲ್ ಮೈದಾನದಲ್ಲಿ ಸಾಂಸ್ಕೃತಿಕ ಮೇಳದ ರೂಪು ತಳೆಯಲಿರುವ ಈ ಸಲದ ಸೇವಾ.org ಇನ್ನಷ್ಟು ವಿಭಿನ್ನವಾಗಿ ಮೂಡಿಬರಲಿದೆ. ಸಂಜೆಯಿಂದ ನಡುರಾತ್ರಿವರೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವರ್ಷದ ಕೊನೆಯದಿನವನ್ನು ಮಧುರವಾಗಿಸಲಿವೆ.
ಮಿತ್ರಮಾಧ್ಯಮದ ಓದುಗರಾದ ನಿಮಗಿದು ಆತ್ಮೀಯ ಆಮಂತ್ರಣ !
1 Comment
ಕಾರ್ಯಕ್ರಮ ಮುಂದಿನ ವರ್ಷವಿಡೀ ನೆನಪಿರುವಷ್ಟು ಪ್ರಭಾವಶಾಲಿಯಾಗಿರಲಿ ಎಂದು ಹಾರೈಸುತ್ತೇನೆ.
-ನಾಹೆ