ಓಟ್ ಕರ್ನಾಟಕ,  ಓಟ್ !

ಮತದಾನ ಒಂದು ಪವಿತ್ರ ಕರ್ತವ್ಯ. ಅದನ್ನು ನಾವು ನಿರ್ವಹಿಸಲೇಬೇಕು. ಆದರೆ ಯಾರನ್ನು ಚುನಾಯಿಸಬೇಕು? ಇದು ಈ ಅಂಕಣದಲ್ಲೂ ಚರ್ಚೆಯಾಗಬಹುದಾದ ಸಂಗತಿ. ಕೆಲವೊಮ್ಮೆ ನಮ್ಮ ಕ್ಷೇತ್ರದಲ್ಲಿ ನಿಂತಿರುವ ಅಭ್ಯರ್ಥಿಗೆ ಯಾವ ಕಾರಣಕ್ಕಾಗಿ ಮತ ಹಾಕಬೇಕು ಎಂಬ ಗೊಂದಲ, ಹತಾಶೆ, ಅನುಮಾನಗಳು ನಮ್ಮನ್ನು ಆವರಿಸುತ್ತವೆ. ನಿಜ. ವಿಪರೀತ ಎನ್ನಬಹುದಾದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ವಶೀಲಿಯೇ ಮುಂತಾದ ಅತಿರೇಕಗಳಿರುವ ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಬಗ್ಗೆ ಒಂದು ಬಗೆಯ ಸಿನಿಕತನ ಆವರಿಸುತ್ತದೆ. ಯಾರಿಗೆ ಓಟು ಕೊಟ್ಟರೇನು, ಬಿಟ್ಟರೇನು ಎಂಬ ಭಾವ ಆವರಿಸಿ ವಿಷಣ್ಣರಾಗುತ್ತೇವೆ.

ಬೆಂಗಳೂರಿನಲ್ಲಿ ಸಾವಿರಾರು ಮತದಾರರು ತಮ್ಮ ಹೆಸರೇ ಮತದಾರರ ಯಾದಿಯಿಂದ ನಾಪತ್ತೆಯಾದ ಬಗ್ಗೆ ಅಸಹಾಯಕರಾಗಿ ಫಾರ್ಮ್ ೬ನ್ನು ತುಂಬಿ ಕಾಯುತ್ತಿದ್ದಾರೆ. ಅವರಿಗೆಲ್ಲ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಸಿಗುತ್ತದೋ ಇಲ್ಲವೋ ಗೊತ್ತಿಲ್ಲ.

ಇಷ್ಟಾಗಿಯೂ ಮತದಾನ ಮಾಡುವುದು ನಿಜಕ್ಕೂ ಒಂದು ಕರ್ತವ್ಯ ಎಂದು ತಿಳಿದುಕೊಂಡಿರುವ ಜನರಲ್ಲಿ ಕಡಿಮೆ ಆದಾಯ ಇರುವವರೇ ಹೆಚ್ಚು ಎಂಬ ಮಾತು ಯಾವಾಗಲೂ ಕೇಳಿಬರುತ್ತದೆ.  ಮೇಲ್ ಮಧ್ಯಮ ವರ್ಗದವರು, ಮತ್ತು ಉಚ್ಚ ವರ್ಗದವರು ಮತ ಚಲಾಯಿಸುವುದೇ ಇಲ್ಲವಂತೆ. ಇರಬಹುದು.

ಅದಿರಲಿ, ನಿಮ್ಮ ಊರಿನಲ್ಲಿ ಯಾವ ಅಭ್ಯರ್ಥಿಗೆ ಮತ ಹಾಕಬಹುದು ಎಂದು ಯೋಚಿಸಿದ್ದೀರ? ಈ ಕೆಳಗಿನ ಅರ್ಹತೆಗಳನ್ನು ನಿಮ್ಮ ಆಯ್ಕೆಗೆ ಮಾನದಂಡವಾಗಿ ಇಟ್ಟುಕೊಳ್ಳಿ:
ಅಭ್ಯರ್ಥಿಗೆ ಒಳ್ಳೆಯ ಹೆಸರಿದೆ ಎಂಬ ಮಾತು ಬಂದಾಗ ಈ “ಒಳ್ಳೆಯದು ಎಂಬುದರ ಅರ್ಥವನ್ನು ಬಿಡಿಸಿ ಕೇಳಿ. ಊರಿನ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಕ್ಕೋ, ವ್ಯಕ್ತಿತ್ವವೇ ತುಂಬಾ ಒಳ್ಳೆಯದು ಎಂದೋ…… ಯಾವ ಕಾರಣದಿಂದ ಈ ಮಾತು ಬಂತು ಎಂದು ವಿಚಾರಿಸಿ.
ಅಭ್ಯರ್ಥಿಯ ವಿದ್ಯಾರ್ಹತೆ, ಸಮಾಜದ ಸಮಸ್ಯೆಗಳನ್ನು ಅರಿತುಕೊಂಡಿರುವ ಬಗೆ  ಇವೆಲ್ಲವನ್ನೂ ತಿಳಿಯಲು ಯತ್ನಿಸಿ.
ಅಭ್ಯರ್ಥಿಯು ನಿಂತಿರುವ ಪಕ್ಷ&#323
8;
ಸಿದ್ಧಾಂತದ ಆಧಾರದ ಮೇಲೆ ಮತ ನೀಡಬೇಕೋ, ಅಥವಾ ಅಭ್ಯರ್ಥಿಯ ವ್ಯಕ್ತಿತ್ವವೇ ಮುಖ್ಯವೇ ಎಂಬುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು. ನಿಮಗೆ ಯಾವುದೇ ಪಕ್ಷದ ಮೇಲೆ ಪ್ರೀತಿ ಇದ್ದು, ಆ ಪಕ್ಷದ ಅಭ್ಯರ್ಥಿಯ ಬಗ್ಗೆ ನಿಮಗೆ ಒಲವೇ ಇಲ್ಲದಿದ್ದರೆ? ಈ ಪ್ರಶ್ನೆ ಈ ಚುನಾವಣೆಯಲ್ಲಿ ಮುಖ್ಯವಾಗಿ ಮೇಲೆದ್ದಿದೆ. ಯಾಕೆಂದರೆ ಈ ಸಲದ ಚುನಾವಣೆ ಹಿಂದಿನಂತಿಲ್ಲ. ಎಲ್ಲ ಪಕ್ಷಗಳಲ್ಲೂ ಬೇರೆ ಪಕ್ಷದಿಂದ ಬಂದ ಹೊಸ ಮುಖಗಳಿವೆ. ಗೆಲ್ಲುವ ಸಾಧ್ಯತೆಗಳೇ ಹೀಗೆ ಸಿದ್ಧಾಂತಗಳ ಬಗ್ಗೆ ಪಕ್ಷಗಳು ರಾಜಿಯಾಗುವಂತೆ ಮಾಡಿವೆ ಎಂದು ಹೇಳಬಹುದು. ಈ ಮಾತನ್ನು ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಮಾಧ್ಯಮಗಳಿಗೂ ಖಚಿತಪಡಿಸಿದ್ದಾರೆ.
ಹಾಗಾದರೆ ನೀವು ಏನು ಮಾಡಬಹುದು? ಪಕ್ಷದ ಸಿದ್ಧಾಂತಗಳೇ ಮುಖ್ಯವಾಗಿದ್ದರೆ ನಿಮಗೆ ಬೇರೆ ಆಯ್ಕೆ ಇಲ್ಲ. ನೀವು ಪಕ್ಷದ ಗುರುತಿಗೆ ಮತ ಚಲಾಯಿಸಲೇಬೇಕು. ಈ ಮಾತು ನಿಮಗೆ ಪಥ್ಯವಾಗದಿದ್ದರೆ ನನಗೆ ನಿಮ್ಮ ಬಗ್ಗೆ ವಿಷಾದವಿದೆ.
ಪಕ್ಷಕ್ಕಿಂತ ವ್ಯಕ್ತಿಯ ಚಾರಿತ್ರ್ಯವೇ ಮುಖ್ಯವಾಗುವುದಾದರೆ ನೀವು ಸೋಲುವ ವ್ಯಕ್ತಿಗೇ ಮತ ಹಾಕುವ ಸಾಧ್ಯತೆಯೇ ಹೆಚ್ಚು! ಯಾಕೆಂದರೆ ಇಂಥ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಹಣಬೆಂಬಲ ಇರುವುದಿಲ್ಲ. ಮತದಾರನನ್ನು ಮತಗಟ್ಟೆಗೆ ತರುವುದಕ್ಕೆ ನೆರವಾಗುವ ಮತಚೀಟಿಯನ್ನು ವಿತರಿಸುವ ಕೆಲಸವನ್ನೂ ಈ ಘನ ವ್ಯಕ್ತಿತ್ವದ ಅಭ್ಯರ್ಥಿಗೆ ಮಾಡಲಾಗುವುದಿಲ್ಲ.
ಇನ್ನು ಒಂದು ಪಕ್ಷದ ಮೂಲಕ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ಎಂದು ಇನ್ನೊಂದು ಪಕ್ಷ ಸೇರಿದವರ ಸಂಖ್ಯೆ ಈ ಬಾರಿ ಗಮನಾರ್ಹವಾಗಿದೆ. ಆದ್ದರಿಂದ ಪಕ್ಷದ ನೀತಿ-ಸಿದ್ಧಾಂತಗಳ ಬಗ್ಗೆ ಮಾತ್ರವೇ ಕಾಳಜಿ ಇದ್ದು ಮತ ಹಾಕುವವರಿಗೆ ಫಜೀತಿ ಕಾದಿದೆ. ಬಹುಮತದ ಸರ್ಕಾರವೇ ಇದ್ದರೆ ಒಳ್ಳೆಯದೆಂಬ ಭಾವನೆಯೂ ಇರುವುದರಿಂದ ಪಕ್ಷದ ಬೆಂಬಲಿಗ ಮತದಾರರು ಇಕ್ಕಟ್ಟಿನಲ್ಲಿ ಸಿಲುಕಿರುವುದಂತೂ ನಿಜ.
 

——————-

ವಿಚಿತ್ರವೆಂದರೆ ನಮ್ಮ ಚುನಾವಣಾ  ಆಯೋಗವು ಅಭ್ಯರ್ಥಿಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಹಾಗೆ ಮತದಾರರ ಬಗ್ಗೆ ತಲೆ ಕೆಡಿಸಿಕೊಳ್ಳ&
#326
5;ವುದೇ ಇಲ್ಲ. ಮತದಾರರೇ ತಮ್ಮ ಹೆಸರು ಇಲ್ಲದಿದ್ದರೆ ಚುನಾವಣಾ ಕಚೇರಿಗೆ ಬಂದು ನೋಂದಾವಣೆ ಮಾಡಿಕೊಳ್ಳಬೇಕು. ಆಮೇಲೆ ಈ ಬಗ್ಗೆ ಅಧಿಕಾರಿಗಳನ್ನು ಕೇಳಿ ಕೇಳಿ ದೃಢೀಕರಣ ಪಡೆದು, ಗುರುತಿನ ಚೀಟಿಯನ್ನು ಪಡೆಯಲು ಹೆಣಗಬೇಕು.

ಇಷ್ಟೆಲ್ಲ ಆದಮೇಲೆ ಮನೆಗೆ ಮತದಾರ ಚೀಟಿ ಬರುತ್ತೆಯೆ? ಚುನಾವಣಾ ಆಯೋಗ ಈ ಬಗ್ಗೆ ಏನೂ ಮಾಡುವುದಿಲ್ಲ. ಮಾಡುವುದಿದ್ದರೆ ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನೂ ಈ ಚೀಟಿಯ ಬದಿಯಲ್ಲೇ ಮಾಡಿಕೊಂಡು ಮನೆಮನೆಗೆ ಚೀಟಿಗಳನ್ನು ವಿತರಿಸುತ್ತವೆ. ಅಂದರೆ ಸಾಮಾನ್ಯ ಅಭ್ಯರ್ಥಿಗೆ ಈ ರೀತಿ ಬೂತ್ ಸ್ಲಿಪ್ ಹಂಚುವುದೇ ದೊಡ್ಡ  ತಾಪತ್ರಯ. ಗಣಕೀಕೃತ ವ್ಯವಸ್ಥೆಯ ಮೂಲಕ ಈ ಚೀಟಿ ಮಾಡುವುದಕ್ಕೂ ಕನಿಷ್ಠ ಒಬ್ಬ ಮತದಾರನಿಗೆ ಇಪ್ಪತ್ತು ಪೈಸೆ ಖರ್ಚಾಗುತ್ತದೆ. ಅಂದರೆ ಒಂದೂವರೆ ಲಕ್ಷದಷ್ಟು ಮತದಾರರಿದ್ದರೆ ಮೂವತ್ತು ಸಾವಿರ ರೂಪಾಯಿ ಇದಕ್ಕೇ ಖರ್ಚಾಗುತ್ತದೆ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತೀ ಅಭ್ಯರ್ಥಿಗೆ ೧೦ ಲಕ್ಷ ರೂ.ಗಳ ಚುನಾವಣಾ ವೆಚ್ಚನವನ್ನು ನಿಗದಿ ಮಾಡಿರುವುದಂತೂ ನಮ್ಮ ಪ್ರಜಾತಂತ್ರದ ಅಣಕ ಎಂದೇ ಹೇಳಬೇಕು.

ಏನೇ ಇರಲಿ, ಮೇ ೧೦-೧೬-೨೨ರ ದಿನಗಳಂದು ನೀವು ಮತಗಟ್ಟೆಗೆ ಹೋಗಿ ಮತದಾನ ಮಾಡಲೇಬೇಕು, ಇಷ್ಟವಿರುವ, ಅಥವಾ ಕಡಿಮೆ ಇಷ್ಟವಿರುವ ಅಭ್ಯರ್ಥಿಗೆ ನಿಮ್ಮ ಮತವನ್ನು ಹಾಕಿ ಪ್ರಜಾತಂತ್ರವನ್ನು ಉಳಿಸಬೇಕು.

ಪ್ರಜಾತಂತ್ರವನ್ನು ದುರಸ್ತಿ ಮಾಡುವುದು ಮುಂದಿನ ಕೆಲಸ.

————————————–

ಮತದಾನ ಮಾಡುವ ಬಗ್ಗೆ, ಇಂದಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕಾಳಜಿ ಉಳ್ಳವರು ವೋಟ್‌ಕರ್ನಾಟಕ (www.votekarnataka.org)ಎಂಬ ಜಾಲತಾಣವನ್ನು ವೀಕ್ಷಿಸಬಹುದು. ಬೆಂಗಳೂರಿನಲ್ಲಿ ಈಗಾಗಲೇ ೭೫ ಸಾವಿರಕ್ಕೂ ಹೆಚ್ಚು ಭೇಟಿ ಕಂಡಿರುವ ಈ ಜಾಲತಾಣದಿಂದ ಈಗಾಗಲೇ ೪೦ ಸಾವಿರ ಜನರು ಮತದಾರ ಯಾದಿಗೆ ತಮ್ಮನ್ನು ಮತ್ತೆ ಸೇರಿಸಿಕೊಳ್ಳುವಂತೆ ಕೋರುವ ಅರ್ಜಿಯನ್ನು ಪಡೆದಿದ್ದಾರೆ.

Share.
Leave A Reply Cancel Reply
Exit mobile version