ಡಿಜಿಟಲ್ ಕವಿಗಳ ಕಿವಿಯೊಳಗೆಲ್ಲ
ಡಾಟುಕಾಮುಗಳ ಲೆಕ್ಕ.
ಬರೆಯಲಾರರು ಮೌಸಿಲ್ಲದೆ
ಪ್ರೀತಿ ಪ್ರೇಮಗಳ ಲೆಕ್ಕ.
ಮರೆತೇನೆಂದರು ಕವಿಗಳು ಈಗ
ಹೊರಗಡೆ ಜಗತ್ತು ಮಳೆಯ.
ಬೀಳುತ್ತಿಲ್ಲವೆ ಪಟಪಟ ಹನಿಹನಿ
ಪರದೆಯೆ ಮೋಡದ ಮಾಯ.
ಭಾವುಕ ಮನಸ್ಸು ಬೇಕಿದೆ ಈಗ
ಹಳೆಯ ಫೈಲುಗಳ ಸುಡಲು.
ಕಳೆದುಹೋಗಿವೆ ಕಣ್ಣಬಯಕೆಗಳು
ಬೇಕಿದೆ ಹೊಸ ಹಗಲು.