ನಮಗೆ ವಿಧಾಯಕ ವಿಕ್ಷಿಪ್ತತೆ ಯಾಕಿಲ್ಲ?

ಆರ್ಥರ್ ಕೀಸ್ಲರ್. ಬುಡಾಪೆಸ್ಟಿನಲ್ಲಿ ಹುಟ್ಟಿ ಲಂಡನ್ನಿನಲ್ಲಿ ಕೊನೆಯುಸಿರೆಳೆದ ಪತ್ರಕರ್ತ, ಲೇಖಕ, ಸಮಾಜ ತತ್ವಶಾಸ್ತ್ರದ ಚಿಂತಕ. ಅರವತ್ತರ ದಶಕದಲ್ಲಿ ಅಮೆರಿಕಾದ ಯುವಜನತೆಗೆ ಹುಚ್ಚೆಬ್ಬಿಸಿದ್ದ ವ್ಯಕ್ತಿ. ಅವನ ಕಥೆ ಕೇಳಿ. ಯಾಕೆ ಎಂದು ಆಮೇಲೆ ಹೇಳುವೆ.
ವಿಯೆನ್ನಾ ವಿವಿಯಲ್ಲಿ ವಿeನ ಮತ್ತು ಮನಶ್ಶಾಸ್ತ್ರ ಓದಿದ ಕೀಸ್ಲರ್ ಇನ್ನೇನು ಶಯಕ್ಷಣಿಕ ವ ರ್ಷ ಮುಗಿಯಬೇಕು ಎನ್ನುವಷ್ಟರಲ್ಲಿ ತನ್ನ ಮೆಟ್ರಿಕ್ಯುಲೇಶನ್ ಪುಸ್ತಕಗಳನ್ನು ಹರಿದು ಹಾಕಿದ; ಪರೀಕ್ಷೆ ಬರೆಯಲಿಲ್ಲ. ಇಸ್ರೇಲಿಗೆ ಬಂದು ಹಸಿವಿನಿಂದ ನರಳಿದ.  ಆಮೇಲೆ ವಿeನ ಪತ್ರಕರ್ತನಾಗಿ ದುಡಿದ. ೧೯೩೧ರಲ್ಲಿ ಕಮ್ಯುನಿಸ್ಟ್ ಪಕ್ಷ ಸೇರಿದ ಕೀಸ್ಲರ್ ಏಳು ವರ್ಷಗಳಾದ ಮೇಲೆ ಪಕ್ಷ ಬಿಟ್ಟ. ಆಮೇಲೆ ಕಮ್ಯುನಿಸ್ಟರ ಕಟು ಟೀಕಾಕಾರನಾದ. 
ಐವತ್ತರ ದಶಕದ ಪೂರಾ ಕೀಸ್ಲರ್ ರಾಜಕಾರಣಿಯ ಹಾಗೆಯೇ ವರ್ತಿಸಿದ. ಬ್ರಿಟಾನಿಕಾ ಎನ್‌ಸಐಕ್ಲೋಪಿಡಿಯಾಗೆ ಹಲವು ವಿಷಯಗಳ ಮೇಲೆ ಲೇಖನಗಳನ್ನು ಬರೆದ. ಅವನ `ಡಾರ್ಕ್‌ನೆಸ್ ಎಟ್ ನೂನ್' ಎಂಬ ಕಾದಂಬರಿಯು ನೊಬೆಲ್ ಪ್ರಶಸ್ತಿ ಪುರಸ್ಕೃತ ಜಾರ್ಜ್ ಆರ್ವೆಲ್‌ನ `೧೯೮೪'ಕ್ಕೆ ಸಮ ಎಂದು ವಿಮರ್ಶಕರು ಹೇಳುತ್ತಾರೆ. ಈ ಕಾದಂಬರಿಯಲ್ಲಿ ಮೂವತ್ತರ ದಶಕದಲ್ಲಿ ಸೋವಿಯೆತ್ ರಶ್ಯಾದಲ್ಲಿ ನಡೆದ ದಮನದ ಕೃತ್ಯಗಳನ್ನು ದಾಖಲಿಸಿದ್ದ ಕೀಸ್ಲರ್. ಉತ್ತರ ಧ್ರುವಕ್ಕೆ ಹೋಗಿ ಬಂದಿದ್ದ ಕೀಸ್ಲರ್ ಟರ್ಕಿಯ ಅರಾರತ್ ಪರ್ವತವನ್ನೂ ಹತ್ತಿ ಇಳಿದ ಜೀವನ ಕುತೂಹಲಿ.
ಎರಡನೇ ಮಹಾಯುದ್ಧ ಮುಗಿದ ಮೇಲೆ ಆತ ಕೆಲವು ತಿಂಗಳುಗಳ ಕಾಲ ಫ್ರಾನ್ಸಿನ ಸೇನೆಯ ಬಂಧನಕ್ಕೆ ಒಳಗಾದ. ಆಮೇಲೆ ಇಂಗ್ಲೆಂಡಿಗೆ ಪರಾರಿಯಾಗಿ ಬ್ರಿಟಿಶ್ ಸೇನೆ ಸೇರಿದ.  ಅಲ್ಲಿಂದ ಅವನ ಬರವಣಿಗೆ, ಭಾಷಣ ಎಲ್ಲವೂ ಹರಿತವಾದವು. ಜರ್ಮನಿ, ಹಂಗೆರಿ, ಫ್ರೆಂಚ್, ಹಿಬ್ರೂ, ರಶಿಯನ್ ಭಾಷೆಗಳನ್ನು ಸರಾಗವಾಗಿ ಕಲಿತ ಕೀಸ್ಲರ್ ಒಬ್ಬ ಬಹುಭಾಷಾ ಲೇಖಕನಾದ. `ದಿ ಗ್ಲೇಡಿಯೇಟರ್ಸ್' ಕಾದಂಬರಿಯನ್&amp
;#32
40;ು ಹಂಗರಿ ಭಾಷೆಯಲ್ಲಿ ಬರೆದ ಕೀಸ್ಲರ್ `ಡಾಕ್‌ನೆಸ್ ಎಟ್ ನೂನ್' ಬರೆದದ್ದು ಜರ್ಮನ್ ಭಾಷೆಯಲ್ಲಿ. `ಅರೈವಲ್ ಎಂಡ್ ಡಿಪಾರ್ಚರ್'  ಕಾದಂಬರಿಯನ್ನು  ಇಂಗ್ಲಿಶಿನಲ್ಲಿ ಬರೆದ. ಹಿಬ್ರೂ ಭಾಷೆಯಲ್ಲಿ ಪದಬಂಧವನ್ನೂ ರ ಚಿಸಿದ!  `ದಿ ಸ್ಲೀಪ್ ವಾಕರ್ಸ್' ` ದಿ ಘೋಸ್ಟ್ ಇನ್ ದಿ ಮ ಎಶಿನ್' – ಹೀಗೆ ಹಲವು ಪ್ರಸಿದ್ಧ ಪುಸ್ತಕಗಳನ್ನು ಬ ರೆದ.
ಲೇಖಕನಾಗಿ ಮೆರೆದ ಕೀಸ್ಲರ್ ಆಮೇಲೆ ವಿಶ್ವದಲ್ಲೇ ಮೊತ್ತಮೊದಲ ಬಾರಿಗೆ ಮಾದಕದ್ರವ್ಯ ಎಲ್ ಎಸ್ ಡಿಯನ್ನು ಪ್ರಯೋಗಾತ್ಮಕವಾಗಿ ಬಳಸಿದ ವಿeನಿಯಾದ. ಡಾರ್ವಿನ್‌ವಾದವನ್ನು ಪ್ರಶ್ನಿಸಿದ. ಅತಿಭೌತಿಕ ಸಂಗತಿಗಳ ಬಗ್ಗೆ ಆಸಕ್ತಿ ವಹಿಸಿದ. ಇಚ್ಛಾಮರಣದ ಪ್ರತಿಪಾದಕನಾದ. ಮರಣದಂಡನೆಯನ್ನು (ತಲೆದಂಡ) ವಿರೋಧಿಸಿದ.
ಕೊನೆಗೆ, ಎಲ್ಲದಕ್ಕೆ ವಿದಾಯ ಹೇಳುವುದನ್ನೂ ಆತ ನಿರ್ಧರಿಸಿದ. ಪಾರ್ಕಿನ್‌ಸನ್, ಲ್ಯೂಕೇಮಿಯಾ ರೋಗಕ್ಕೆ ತುತ್ತಾಗಿದ ಕೀಸ್ಲರ್ ೧೯೮೩ರಲ್ಲಿ ತನ್ನ ಹೆಂಡತಿ ಸಿಂತಿಯಾ ಜೊತೆ ಅತಿಯಾಗಿ ಮದ್ದು ಸೇವಿಸಿ ಆತ್ಮಹತ್ಯೆ ಮಾಡಿಕೊಂಡ.

 

ನಾನು ಈ ಲೇಖಕನ ಕೆಲವು ಪುಸ್ತಕಗಳನ್ನು ಹುಡುಕಿಸಿ ಕೊನೆಗೆ ದಿಲ್ಲಿಯಿಂದ ಖರೀದಿಸಿ ತರಿಸಿದೆ. `ದಿ ಘೋಸ್ಟ್ ಇನ್ ದಿ ಮೆಶಿನ್' ನ ಹಲವು ಪುಟಗಳನ್ನು ಓದಿದೆ. ಆದರೆ ಅವನ ಕಟು ಮತ್ತು ಸಂಕೀರ್ಣ ಭಾಷೆ ನನಗೆ ಅರ್ಥವಾಗಲೇ ಇಲ್ಲ. ಆದ್ದರಿಂದಲೇ ಅವನ ಬಗ್ಗೆ ಹೆಚ್ಚು  ತಿಳಿಯಲು ಹೋದೆ. ಪುಸ್ತಕಪ್ರೇಮಿಯೊಬ್ಬರು ಕೀಸ್ಲರ್ ಬಗ್ಗೆ ಹೇಳುತ್ತ `ಅವನು ನೊಬೆಲ್‌ಪ್ರಶಸ್ತಿಯ ಅಂತಿಮಪಟ್ಟಿಯಲ್ಲೂ ಇದ್ದ' ಎಂದರು. ಆತ್ಮಹತ್ಯೆಯ ವಿಷಯವನ್ನೂ ಅವರೇ ತಿಳಿಸಿದರು.
ಕೀಸ್ಲರ್ ಬದುಕಿದ್ದ ಕಾಲವೇ ಮನುಕುಲದ ಅತ್ಯಂತ ಸಂಕಷ್ಟದ ಮತ್ತು ಸಂಘರ್ಷದ ದಿನಗಳಾಗಿದ್ದವು. ಈ ದಿನಗಳನ್ನು  ಕೀಸ್ಲರ್ ಪೂರ್ಣವಾಗಿ ಅನುಭವಿಸಿದ್ದು ನಿಜ. ಇದ್ದ ೭೮ ವರ್ಷಗಳನ್ನು ಆತ ಕಳೆದ ರೀತಿಯನ್ನು ನೋಡಿದರೆ ಬದುಕಿನಲ್ಲಿ ಹೀಗೂ ಇರಬಹುದೆ ಅನ್ನಿಸುತ್ತದೆ.  ಆದರೆ ಹೀಗಿದ್ದದ್ದು ನಿಜ. ಕಮ್ಯುನಿಸಂ, ಸಮಾಜವಾದ, ಬಂಡವಾಳವಾದಗಳ ಒಟ್ಟಾರೆ ಮಿಶ್ರ
ಯುಗದಲ್ಲಿ ಕೀಸ್ಲರ್ ಮಿಂದರು. ಆತ್ಮಹತ್ಯೆಯೂ ಅವರ ಇಚ್ಛಾಮರಣದ ಭಾಗವೇ ಆಗಿತ್ತು ಎನ್ನಬಹುದೇನೋ.
ವ್ಯಕ್ತಿಯೊಬ್ಬ ವಿಕ್ಷಿಪ್ತವಾಗಿಯೂ ಕ್ರಿಯಾಶೀಲನಾಗಿದ್ದರೆ ಹೇಗೆ ಬದುಕಬಹುದು ಎಂಬುದಕ್ಕೆ ಕೀಸ್ಲರ್ ಒಂದು ಉದಾಹರಣೆ. ಇಂಥ ಹಲವು ವ್ಯಕ್ತಿಗಳು ನಮಗೆ ಸಿಗುತ್ತಾರೆ. ನಮ್ಮ ನಡುವೆಯೇ ಇದ್ದ ಡಾ|| ಶಿವರಾಮ ಕಾರಂತರದು ವಿಧಾಯಕ ವಿಕ್ಷಿಪ್ತತೆ ಎನ್ನಬಹುದು. ಬದುಕನ್ನು ಅಪಾರವಾಗಿ ಪ್ರೀತಿಸಿ, ಬದುಕಿನ ವಿವಿಧ ಮಗ್ಗುಲುಗಳನ್ನು ಅರಿತು ನಮಗೂ ತಿಳಿಸಲು ಅವರು ನವಿರಾಗಿ ಯತ್ನಿಸಿದರು. ಸಿನೆಮಾ ತೆದರು. ಯಕ್ಷಗಾನ ಮಾಡಿದರು; ಮಕ್ಕಳ ಪುಸ್ತಕ ಬರೆದರು. ಪರಿಸರ ಹೋರಾಟಕ್ಕೂ ಧುಮುಕಿದರು. ಅದಕ್ಕಾಗಿ ಚುನಾವಣೆಗೂ ನಿಂತರು. ಇತ್ತೀಚೆಗೆ ಕಣ್ಮರೆಯಾದ  ಪೂರ್ಣಚಂದ್ರ ತೇಜಸ್ವಿಯವರೂ ಕಾರಂತರ ಹಾದಿಯಲ್ಲೇ ಮುನ್ನಡೆದವರು. ಮಾಹಿತಿ ಸಾಹಿತ್ಯ, ಛಾಯಾಗ್ರಹಣ, ಹೀಗೆ ಬದುಕಿನ ಎಲ್ಲ ಸ್ವಾರಸ್ಯಗಳನ್ನು  ಕಟ್ಟಿಕೊಡಲು ಯತ್ನಿಸಿದರು.
ನಿಮಗೂ ಇಂಥ ಹಲವು ವ್ಯಕ್ತಿತ್ವಗಳ ಪರಿಚಯ ಇರಬಹುದು. ಒಮ್ಮೆ ನೋಡಿದರೆ ವಿಕ್ಷಿಪ್ತರ ಹಾಗೆ ಕಾಣುತ್ತಾರೆ. ಆದರೆ ಇನ್ನೊಮ್ಮೆ ನೋಡಿದರೆ ಅತ್ಯಂತ ಕ್ರಿಯಾಶೀಲ ವ್ಯಕ್ತಿಯ ಹಾಗೆ ಕಂಡುಬರುತ್ತಾರೆ. ಇಂಥವರು ಎಲ್ಲ ಕಾಲದಲ್ಲೂ, ಎಲ್ಲ ಕಡೆಯೂ ಇರುತ್ತಾರೆ. ಕೆಲವು ಕೀಸ್ಲರ್‌ನಂತೆ ಸಂಕಿರ್ಣ ಮನಸ್ಸಿನವರು. ಕೆಲವರು ಕಾರಂತ – ತೇಜಸ್ವಿಯ ಹಾಗೆ ನೇರ ನಡೆಯವರು. ವಿಶೇಷ ಏನೆಂದರೆ ಇವರಾರೂ ಕೇವಲ ಬೋಧಕರಲ್ಲ. ಎಲ್ಲರೂ  ತಮ್ಮ ನಿಲುವನ್ನು ಬದಲಿಸದೆ ಬದುಕಿದವರು. ಎಲ್ಲಿಯೂ ಇವರ ಕಲಿಕೆಎಗ ಸಿದ್ಧಾಂತಗಳು  ಅಡ್ಡಿಯಾಗಲಿಲ್ಲ. ಬದಲಿಗೆ ಸಿದ್ಧಾಂತಗಳು ಇವರೆಲ್ಲರ ತಿಳಿವಳಿಕೆಯ ಕ್ಷಿತಿಜವನ್ನು ವಿಸ್ತರಿಸಿದವು. ಇವರಿಗೆಲ್ಲ ಬದುಕಿನ ಯಾವ ಹಾದಿಯಲ್ಲಿ ಸಾಗಿದರೂ ಕಲಿಕೆಯೇ ಮುಖ್ಯವಾಯಿತು.
ಬದುಕಿನಲ್ಲಿ ವೃತ್ತಿಯೇ ಮುಖ್ಯವಲ್ಲ, ಬದುಕುವುದು ಎಂಬುದನ್ನು ಈ ಬಗೆಯ ಹತ್ತಾರು ವ್ಯಕ್ತಿತ್ವಗಳು ನಮಗೆ ಹೇಳುತ್ತಲೇ ಬಂದಿವೆ. ನಾವು ಮಾತ್ರ ಬೆಳಗ್ಗೆಯೋ, ಮಧ್ಯಾಹ್ನವೋ, ಸಂಜೆಯೋ, ರಾತ್ರಿಯೋ, ಒಂದು ಪ&#
3262
;ಳಿಯಲ್ಲಿ ಕೆಲಸ ಮಾಡಿ, ಇನ್ನೊಂದು ಪಾಳಿಯಲ್ಲಿ ನಿದ್ದೆ ಮಾಡಿ, ಮೂರನೇ ಪಾಳಿಯಲ್ಲಿ ಒಂದಷ್ಟು ಸ್ವಂತ ಸುಖಕ್ಕಾಗಿ ಕಾತರಿಸುವುದೇ ಬದುಕು ಎಂದು ತಿಳಿಯುತ್ತೇವೆ. ವೃತ್ತಿಯ ನೆಪದಲ್ಲಿ ಬದುಕನ್ನೇ ಕಳೆದುಕೊಳ್ಳುತ್ತಿದ್ದೇವೆ. ಕಲಿಕೆಗಾಗಿ, ಹೊಸ ಅನುಭವಗಳಿಗಾಗಿ ವಿಕ್ಷಿಪ್ತರಾಗುವುದಕ್ಕೆ ನಮಗೆ ಮನಸ್ಸಿಲ್ಲ. ಸುಮ್ಮನೇ ಅವರಿವರ ಟೀಕೆಗಳಿಗೆ ಉಗ್ರರಾಗುತ್ತೇವೆ; ಮನಸ್ಸು ಕೆಡಿಸಿಕೊಳ್ಳುತ್ತೇವೆ. ಯಾವುದೋ ಸೈಟಿಗಾಗಿ ವರ್ಷಗಟ್ಟಳೆ ಕಂತು ತೆರುತ್ತೇವೆ. ಯಾವುದೋ ಶೇರಿನ ಹಣ ಬರಲಿಲ್ಲ ಎಂದು ಖೇದಿಸುತ್ತೇವೆ.
ಕಲಿಯಲು ಬೇಕಾದಷ್ಟಿದೆ; ಆದರೆ ಯಾವುದನ್ನು ಕಲಿಯಬೇಕು ಅನ್ನೋ ಕುತೂಹಲವನ್ನೂ ನಾವು ಬೆಳೆಸಿಕೊಳ್ಳುವುದಿಲ್ಲ. ಹೀಗೆ ಉಪದೇಶ ಹೇಳುವುದಕ್ಕೆ ನನಗೇನೂ ಅರ್ಹತೆಯಿದೆ ಎಂದು ಭಾವಿಸಿಲ್ಲ. ನಾನೂ ಈ ಕಲಿಕೆಯ ಹಿಂದೆ ಬಿದ್ದಿದ್ದೇನೆ. ಯುವ ಪತ್ರಕರ್ತರು ಸಿಕ್ಕಾಗಲೆಲ್ಲ `ನೀವು ವೃತ್ತಿಗಾಗಿ ಬರೆದದ್ದನ್ನು ಬಿಟ್ಟು ಬೇರೇನಾದರೂ ಬರೆದಿದ್ದೀರಾ?' ಎಂದು ಪ್ರಶ್ನಿಸಿ ಉತ್ತರ ಸಿಗದೆ ಹೋಗಿದ್ದಿದೆ.
ಕೀಸ್ಲರ್ ಒಂದು ಉದಾಹರಣೆ ಅಷ್ಟೆ. ಅವನೇ ನಮ್ಮ ಮಾದರಿಯಾಗಬೇಕಿಲ್ಲ. ಅವನ ಬಗ್ಗೆ ಆಸಕ್ತಿ ಹುಟ್ಟಿ ಮಾಹಿತಿ ಸಂಗ್ರಹಿಸಿದ್ದರಿಂದ, ಅವನ ಕೃತಿಗಳ ಕೆಲವು ಪುಟಗಳನ್ನು ಓದಿದ್ದರಿಂದ ಅವನನ್ನು ಉದಾಹರಿಸಿದೆ, ಅಷ್ಟೆ.
ಕೀಸ್ಲರ್ ಬಿಡಿ. ಕೊನೇಪಕ್ಷ ಕಾರಂತರನ್ನಾದರೂ ಮತ್ತೊಮ್ಮೆ ಗಮನಿಸಿ; ತೇಜಸ್ವಿಯವರನ್ನು ಇನ್ನೊಮ್ಮೆ ನೆನಪಿಸಿಕೊಳ್ಳಿ.
ಗ್ರಹಾಂ ಹ್ಯಾನ್‌ಕಾಕ್ ರವರ `ಸೂಪರ್ ನ್ಯಾಚುರಲ್' ಬಗ್ಗೆ ಮಾಹಿತಿ ಕೇಳಿದ್ದಾರೆ, ಖತಾರ್‌ನಿಂದ ಯಶವಂತ ಶೆಟ್ಟಿ.  ಹ್ಯಾನ್‌ಕಾಕ್‌ರವರ ಜಾಲತಾಣ www.grahamhancock.comಇಲ್ಲಿ ಹೆಚ್ಚಿನ ಮಾಹಿತಿಗಳು ಸಿಗುತ್ತವೆ.

 

Share.
Leave A Reply Cancel Reply
Exit mobile version