ನನಗೆ ಹಾಡು
ಕಚಗುಳಿಯಿಟ್ಟು ಕೇಳುವುದಿಷ್ಟ
ಸ್ಪಷ್ಟ ಪದಗಳ ಕಟ್ಟು
ನನಗೆ ಹಾಡು.
ನೀನೂ ಹಾಡು
ದನಿ ಹರಿಸುವುದಿಷ್ಟ
ಕಷ್ಟವಿದೆಯೇ ಹೇಳು ?
ನೀನು ಹಾಡು.
ಅವಳು ಹಾಡು
ತನಿ ಬೆರೆಸಿ ಎರೆಯುವಳಲ್ಲ
ನಷ್ಟವಿದೆಯೇ ಹಾಡು ?
ಅವಳು ಹಾಡು.
ಅವರು ಹಾಡು ಹಂದರದಲ್ಲಿ
ಬೆಳೆದದ್ದು ದಿಟ-
ಬಯಕೆಗಳು.
ಸತ್ಯವೇ ಅವರ ಹಾಡುಗಳು.
ನಾವು ಹಾಡುಗಳು
ಇಲ್ಲ
ಎಂದವರಲ್ಲ
ನಮಗಿಷ್ಟ
ನಾವು ಹಾಡುಗಳು.