ಟಿಬೆಟ್ : ಹೇಳಿದಷ್ಟೂ ಬೆಳೆವ ಕಥೆ – ವ್ಯಥೆ
ಮೈಕೇಲ್ ಲೂಬ್ ಎಂಬಾತ ಡಬ್ಲ್ಯು ಟಿ ಎನ್ ಸುದ್ದಿಸಂಸ್ಥೆಯ ಬಾತ್ಮೀದಾರ. ಆತ ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಬಂದು ದೇಶಭ್ರಷ್ಟ ಟಿಬೆಟನ್ನರ ರಾಜಧಾನಿ ಧರ್ಮಶಾಲಾಗೆ ಭೇಟಿ ನೀಡಿದ. ಅಲ್ಲಿ ಆತ ಎದುರಾದದ್ದು ಪಾಲ್ದೆನ್ ಗ್ಯಾತ್ಸೋ ಎಂಬ ೬೮ರ ಹರೆಯದ ಭಿಕ್ಷುವನ್ನು. ಸುಮ್ಮನಿರಲಾರದೆ `ಅಲ್ಲ, ನಿನಗೆ ಚೀನೀಯರು ಅಂಥಾದ್ದೇನು ಮಹಾ ಹಿಂಸೆ ಕೊಟ್ಟಿದ್ದಾರೆ?' ಎಂದು ಕೇಳಿಯೇ ಬಿಟ್ಟ.
ಮೈಕೇಲ್ ಲೂಬ್ ಎಂಬಾತ ಡಬ್ಲ್ಯು ಟಿ ಎನ್ ಸುದ್ದಿಸಂಸ್ಥೆಯ ಬಾತ್ಮೀದಾರ. ಆತ ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಬಂದು ದೇಶಭ್ರಷ್ಟ ಟಿಬೆಟನ್ನರ ರಾಜಧಾನಿ ಧರ್ಮಶಾಲಾಗೆ ಭೇಟಿ ನೀಡಿದ. ಅಲ್ಲಿ ಆತ ಎದುರಾದದ್ದು ಪಾಲ್ದೆನ್ ಗ್ಯಾತ್ಸೋ ಎಂಬ ೬೮ರ ಹರೆಯದ ಭಿಕ್ಷುವನ್ನು. ಸುಮ್ಮನಿರಲಾರದೆ `ಅಲ್ಲ, ನಿನಗೆ ಚೀನೀಯರು ಅಂಥಾದ್ದೇನು ಮಹಾ ಹಿಂಸೆ ಕೊಟ್ಟಿದ್ದಾರೆ?' ಎಂದು ಕೇಳಿಯೇ ಬಿಟ್ಟ.
ಪಾಲ್ದೆನ್ ಗ್ಯಾತ್ಸೋ ತಣ್ಣಗೆ ನಗುತ್ತ ತನ್ನ ಕೃತಕ ಹಲ್ಲಿನ ಸಾಲನ್ನೇ ತೆಗೆದರು. ಚೀನೀಯರು ವಿದ್ಯುತ್ ಲಾಠಿಯನ್ನು ಬಾಯಿಗೆ ತುರುಕಿ ಎಲ್ಲಾ ಹಲ್ಲುಗಳನ್ನೂ ಬುಡಸಮೇತ ತೆಗೆದುಹಾಕಿದ್ದರು. ಪಾಲ್ದೆನ್ ಮತ್ತಷ್ಟು ಬಾಯಿ ತೆರೆದು ಮೇಲ್ಭಾಗದಲ್ಲಿ ಇದ್ದ ಗುರುತನ್ನೂ ತೋರಿಸಿದರು.
ವಕೇಲ್‌ಗೆ ಹೃದಯವೇ ಬಾಯಿಗೆ ಬಂದಿತ್ತು. ಇಷ್ಟಾಗಿಯೂ ಪಾಲ್ದೆನ್ ತನ್ನ ಕೃತಕ ಹಲ್ಲುಗಳ ಸಾಲನ್ನು ಮತ್ತೆ ಬಾಯಿಯಲ್ಲಿ ಇಟ್ಟುಕೊಂಡು ನಗುನಗುತ್ತಲೇ ಮುಂದಿನ ಪ್ರಶ್ನೆಗೆ ಸಿದ್ಧರಾದರು.
`ಅವರಲ್ಲಿ ಇನ್ನೂ ಅಂಥ ಸ್ನಿಗ್ಧ ನಗು ಹೇಗೆ ಉಳಿದುಕೊಂಡಿತು ಎಂಬುದೇ ನನಗೆ ಅರ್ಥ ಆಗ್ತಾ ಇಲ್ಲ. ೩೧ ವರ್ಷಗಳ ಕಾಲ ಪ್ರತಿದಿನವೂ ಹೊಡೆತ, ಚಿತ್ರಹಿಂಸೆ, ಕೋಳ, ಧರ್ಮವನ್ನು ಆಚರಿಸಲಾಗದ ನಿರ್ಬಂಧ, ದಿನವಿಡೀ ದುಡಿತ, ಅಲೆತ – ಎಲ್ಲವನ್ನೂ ದಾಟಿ ಈ ಮನುಷ್ಯ ಹೇಗೆ ಇಲ್ಲಿ ನಗುತ್ತ ಕುಳಿತಿದ್ದಾನೆ' ಎಂದು ಮೈಕೇಲ್ ಆಮೇಲೆ ಅಚ್ಚರಿಯಿಂದ ಬರೆಯುತ್ತಾರೆ……
ಅದೇ ಟಿಬೆಟ್ ಕಥೆ.
೨೦೦೬ ಸೆಪ್ಟೆಂಬರ್ ೩೦: ನಾಂಗ್&zwn
j;
ಪಾ ಕಣಿವೆಯ ಮೂಲಕ ನೇಪಾಳಕ್ಕೆ ತಪ್ಪಿಸಿಕೊಳ್ಳುತ್ತಿದ್ದ ೭೦ ಟಿಬೆಟನ್ನರ ತಂಡದ ಮೇಲೆ ಚೀನೀ ಸೈನಿಕರು ಗುಂಡಿನ ಮಳೆಗರೆದರು. ೧೭ರ ಹರೆಯದ ಭಿಕ್ಷುಣಿ ಕೆಲ್ಸಾಂಗ್ ನಾಮ್‌ಸೋ ಮತ್ತು ೨೦ರ ಹರೆಯದ ಕುನ್‌ಸಾಂಗ್ ನಾಮ್‌ಗ್ಯಾಲ್ ಅಲ್ಲೇ ಸತ್ತರು. ಆದರೂ ೪೦ ಜನ ಪಾರಾದರು; ೩೨ ಜನ ಸೆರೆಸಿಕ್ಕರು.
ಇದೂ ಟಿಬೆಟ್ ಕಥೆ. ತೀರಾ ಇತ್ತೀಚೆಗಿನದು.
ಕೇಳಿದಷ್ಟೂ ಇದೆ ಬಿಡಿ. ಈಗಲೂ ಪಾಲ್ದೆನ್ ಅಮೆರಿಕಾದಲ್ಲಿ ಟಿಬೆಟ್ ಧ್ವಜ ಹಿಡಿದು ಮೆರವಣಿಗೆ ನಡೆಸುತ್ತಾರೆ. ಟಿಬೆಟ್‌ನ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಟಿಬೆಟನ್ನರು ಈಗಲೂ ವಿಶ್ವದಾದ್ಯಂತ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.
ಅಭಿವೃದ್ಧಿ ಎಂಬ ಸರ್ವನಾಶ
ಅದಿರಲಿ, ಟಿಬೆಟ್ ಅಭಿವೃದ್ಧಿ ಹೊಂದಿದೆಯಂತೆ ನೋಡಿ: ಖಿಂಘಾಯ್ ಪ್ರಾಂತದ ಗೊರ್ಮೊದಿಂದ ಲ್ಹಾಸಾಗೆ ರೈಲು ಬಂದಿದೆ. ೨೪ ಲಕ್ಷ ಜನ ಪ್ರವಾಸಿಗರು ಈ ವರ್ಷ ಭೇಟಿ ನೀಡಿದ್ದಾರೆ. ಚೀನೀಯರೇ ಶೇ. ೯೩ ಅಂತೆ. ಅವರಲ್ಲಿ ಹೆಚ್ಚಿನ ಮಂದಿ ಚೀನಾಗೆ ಹಿಂದಿರುಗುವುದಿಲ್ಲ. ಟಿಬೆಟಿನಲ್ಲೇ ಇರುವುದಕ್ಕೆ ಅವರಿಗೆ ಬೇಕಾದಷ್ಟು ಸರ್ಕಾರಿ ಬೆಂಬಲ ಇದೆ. ಟಿಬೆಟಿನಲ್ಲಿ ಇರುವ ಟಿಬೆಟನ್ನರು ೬೦ ಲಕ್ಷ. ಚೀನೀಯರು ೭೫ ಲಕ್ಷ.ಟಿಬೆಟನ್ ಮಹಿಳೆಯರಿಗೆ ಬಲವಂತದ ಗರ್ಭಪಾತ; ಸಂತಾನಹರಣ ಚಿಕಿತ್ಸೆಗಳು ನಡೆಯುತ್ತಿರುವುದೂ ಯಾಕೆ ಎಂದು ನಿಮಗೆ ಈಗ ಅಂದಾಜಾಗಬಹುದು.
ಟಿಬೆಟಿನಲ್ಲಿ ೬೦೬ ಹೊಸ ಹೋಟೆಲ್‌ಗಳಿವೆ. ಆರು ಸಾವಿರ ಕ್ಯಾಟರಿಂಗ್ ಸಂಸ್ಥೆಗಳಿವೆ. ಐದು ಸಾವಿರ ಅಂಗಡಿಗಳಿವೆ. ಮೂರೂ ಕಾಲು ಸಾವಿರ ಮನರಂಜನಾ ಕೇಂದ್ರಗಳಿವೆ. ಇವೆಲ್ಲವೂ ವರ್ಷಕ್ಕೆ ಶೇ. ೨೦ರ ಗತಿಯಲ್ಲಿ ಬೆಳೆಯುತ್ತಲೇ ಇವೆ. ಅಂದರೆ ಐದು ವರ್ಷಕ್ಕೆ ಈ ಹೋಟೆಲ್, ಮನರಂಜನಾ ತಾಣಗಳ ಪ್ರಮಾಣ ದುಪ್ಪಟ್ಟಾಗುತ್ತದೆ.
ಯಾಕೆಂದರೆ ಮುಂದಿನ ವರ್ಷ ನಲವತ್ತು ಲಕ್ಷ ಪ್ರವಾಸಿಗರನ್ನು ಟಿಬೆಟ್ ಆಕರ್ಷಿಸಬೇಕಿದೆ. ಹಾಗೆಂದು ಟಿಬೆಟನ್ನು ಆಳುತ್ತಿರುವ ಚೀನಾ ಸರ್ಕಾರ ಹೇಳಿದೆ. ಟಿಬೆಟ್ ಸ್ವಾಯತ್ತ ಪ್ರದೇಶದ ನಿವ್ವಳ ಆಂತರಿಕ ಉತ್ಪನ್ನ (ಜಿಡಿಪಿ) ಈ ವರ್ಷ ೩೭೦ ಕೋ&#
3231
;ಿ ಡಾಲರ್ ದಾಟಲಿದೆ. ಟಿಬೆಟಿನ ಬೆಳವಣಿಗೆಯ ಬಗ್ಗೆ ಚೀನಾ ಉದುರಿಸುವ ಕಥೆಗಳು ಮುಗಿಯುವುದೇ ಇಲ್ಲ.
ಟಿಬೆಟ್ ಮ್ಯೂಸಿಯಂ ಅಲ್ಲ !
ಹಾಗಾದರೆ ಟಿಬೆಟ್ ಒಂದು ಮ್ಯೂಸಿಯಂ ಆಗಿರಬಹುದೆ? ಲ್ಹಾಸಾ ಪೋಟಾಲಾ ಅರಮನೆ, ಜೋರ್ಖಾಂಗ್ ದೇಗುಲ, ಎಲ್ಲವೂ ಪ್ರವಾಸಿ ತಾಣಗಳೆ? ಅಲ್ಲಿರುವ ಟಿಬೆಟನ್ನರೆಲ್ಲರೂ ಸಂಸ್ಕೃತಿ – ಪರಂಪರೆಯನ್ನು ಕಳಚಿಟ್ಟ ಖಾಲಿ ಮನುಷ್ಯರೆ? ಭಾರತದಲ್ಲಿ ಇರುವ ಟಿಬೆಟನ್ನರೆಲ್ಲ ಸುಮ್ಮನೆ ಕನಸು ಕಾಣುತ್ತಿರುವ ಭ್ರಮಾಧೀನರೆ?
ಚೀನಾದೊಳಗೇ ನಮಗೆ ಸ್ವಾಯತ್ತತೆ ಬೇಕು; ಸಂಪೂರ್ಣ ಸ್ವಾತಂತ್ರ್ಯ ಬೇಡ ಎಂದು ಟಿಬೆಟನ್ ಧರ್ಮಗುರು ದಲಾಯಿ ಲಾಮಾ ಹೇಳುವುದೇಕೆ? ಟಿಬೆಟ್ ಒಂದು ಮುಗಿದ ಕಥೆ ಎಂಬ ಚೀನಾದ ಜಾಣ – ಕಿವುಡನ್ನು ಭಾರತದ ಎಲ್ಲ ಪಕ್ಷಗಳೂ ಒಪ್ಪಿಕೊಳ್ಳುವುದಾದರೂ ಯಾಕೆ?
ಟಿಬೆಟಿನ ಮೇಲೆ ಎದ್ದ ಪ್ರಶ್ನೆಗಳೂ ಮುಗಿಯುವುದಿಲ್ಲ.
ಜನ,ಪರಿಸರ ಎಲ್ಲ ಖತಂ !
ಚೀನಾ ಆಕ್ರಮಣದ ಬೆನ್ನಲ್ಲೇ ಕಡಿಮೆಯೆಂದರೆ ೧೨ ಲಕ್ಷ ಟಿಬೆಟನ್ನರು ಜೀವ ಕಳೆದುಕೊಂಡಿದ್ದಾರೆ. ಸಾವಿರಾರು ಟಿಬೆಟನ್ನರು ಇನ್ನೂ ಸೆರೆಮನೆಗಳಲ್ಲಿ ಇದ್ದಾರೆ. ೬೦೦೦ಕ್ಕೂ ಹೆಚ್ಚು ಬೌದ್ಧಾಲಯಗಳು ಅವಶೇಷಗಳಾಗಿವೆ. ಟಿಬೆಟಿನ ನೈಸರ್ಗಿಕ ಸಂಪನ್ಮೂಲಗಳು ದಿನಾಲೂ ಲೂಟಿಯಾಗುತ್ತಿವೆ ; ಸೂಕ್ಷ್ಮ ಜೈವಿಕ ಪರಿಸರ ಇನ್ನೆಂದೂ ಸರಿಯಾಗದಂತೆ ಕೆಟ್ಟುಹೋಗಿದೆ. ವಿಶ್ವದ ಛಾವಣಿ ಎಂದೇ ಹೆಸರಾದ ಟಿಬೆಟ್ ಏಶ್ಯಾದ ಪ್ರಮುಖ ನದಿಗಳಿಗೆ ಮೂಲವಾಗಿದೆ. ಈ ನದಿಗಳೇ ಭಾರತ, ಚೀನಾ, ನೇಪಾಳ, ಭೂತಾನ, ಬಾಂಗ್ಲಾದೇಶ, ಪಾಕಿಸ್ಥಾನ, ಮ್ಯನ್ಮಾನ್, ಥೈಲ್ಯಾಂಡ್, ಲಾವೋಸ್, ಕ್ಯಾಂಬೋಡಿಯಾ ಮತ್ತು ವಿಯೆಟ್ನಾಮ್ ದೇಶಗಳ, ಅಂದರೆ ಏಶಿಯಾ ಖಂಡದ ಅರ್ಧದಷ್ಟು ಜನರ ಬದುಕಿನ ಆಧಾರ. ಆದರೆ ಈಗ ಇವೆಲ್ಲವೂ ವ್ಯವಸ್ಥಿತವಾಗಿ ನಾಶವಾಗುತ್ತಿವೆ. ವನ್ಯಜೀವಿ ಸಂಕುಲ, ಕಾಡುಗಳು, ಸಸ್ಯಗಳು, ಖನಿಜಗಳು, ಜಲಮೂಲಗಳು – ಎಲ್ಲ ಕರಗುತ್ತಿದೆ.
೧೯೮೫ರ ಹೊತ್ತಿಗೇ ಟಿಬೆಟಿನ ಅರಣ್ಯ ಸಂಪತ್ತಿನಿಂದ ೫೪೦ ಕೋಟಿ ಡಾಲರ್ ಬೆಲೆಯ ಮರಮುಟ್ಟುಗಳು ಸದ್ದಿಲ್ಲದೆ ಚೀನಾಗೆ ರವಾನೆಯಾಗಿದ್ದವು. ಅಮ್‌ದೋ
ಪ್ರಾಂತವೊಂದರಲ್ಲೇ ಐದು ಕೋಟಿ ಬೃಹತ್ ಮರಗಳನ್ನು ಕಡಿದು ಉರುಳಿಸಲಾಗಿದೆ. ಟಿಬೆಟಿನ ಉಳಿದ ಪ್ರದೇಶಗಳ ಕಥೆಯೂ ಅಷ್ಟೇ ಬಿಡಿ. ಅರಣ್ಯನಾಶದ ಫಲ ನದಿಗಳಲ್ಲಿ ಹೂಳು ಎಂಬುದು ಎಲ್ಲ ವಿದ್ಯಾರ್ಥಿಗಳಿಗೂ ಗೊತ್ತು. ಚೀನಾವೂ ಸೇರಿದಂತೆ ನೆರೆದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. ೧೯೮೭-೮೮ರ ಭಾರತದ ನೆರೆ ಹಾವಳಿಗಳಲ್ಲಿ ಬ್ರಹ್ಮಪುತ್ರ ನದಿಯದ್ದೇ ಮೂರನೇ ಒಂದು ಪಾಲು ಯಾಕೆ ಎಂಬುದೀಗ ನಿಮಗೆ ಅರ್ಥವಾಗಿರಬಹುದು.
ಖಿಂಘಾಯ್ ಪ್ರಾಂತದ ಪರಿಸರ ಸ್ಥಿತಿಯು ಭಾರತ ಮತ್ತು ಚೀನಾದ ಜಲ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು ಎಂದು ಚೀನಾದ ಏರೋಜಿಯೋಫಿಸಿಕಲ್ ಸಂಸ್ಥೆಯ ದೂರಸಂವೇದಿ ಸಮೀಕ್ಷೆ ಹೇಳಿದೆ ಎಂದು ಇದೇ ಡಿಸೆಂಬರ್ ೩೦ರ ಬೀಜಿಂಗ್ ವರದಿ ಹೇಳುತ್ತದೆ. ಮೂವತ್ತು ವರ್ಷಗಳ ಹಿಂದಿದ್ದ ಕಾಡು ಕರಗಿದೆಯಂತೆ; ಮರುಭೂಮೀಕರಣ ಆಗುತ್ತಿದೆಯಂತೆ. ಯಾಂಗ್‌ತ್ಸೆ, ಹಳದಿ. ಬ್ರಹ್ಮಪುತ್ರ ಮತ್ತು ಗಂಗಾನದಿಗಳ ಮೂಲ ನಾಡಿದು. ಇದು ಸಾಲದು ಎಂಬಂತೆ ಬ್ರಹ್ಮಪುತ್ರ ನದೀಪಾತ್ರವನ್ನು ಬದಲಿಸುವ ಯೋಜನೆಯನ್ನು ಚೀನಾ ಪ್ರಕಟಿಸಿದೆ. ಮುಂದಿನ ಪಾಳಿ ಸಿಂಧೂ ನದಿಯದೆ? ಇರಬಹುದು.
ಟಿಬೆಟಿನ ಪರಿಸರ ಒಣಗಿದರೂ, ಪರಿಸರದ ಕಥೆ ಮುಗಿಯುವುದಿಲ್ಲ.
ಸೇನಾನೆಲೆ, ಪರಮಾಣು ಕೇಂದ್ರ
ಈ ವಿಷಯ ಗೊತ್ತ? ಬುದ್ಧನಿಗೆ ಶರಣಾಗಿದ್ದ ಟಿಬೆಟ್ ಈಗ ಬೃಹತ್ ಸೇನಾನೆಲೆಯಾಗಿದೆ. ಸುಮಾರು ೫ಲಕ್ಷಸೇನಾಬಲ, ೧೭ ರಹಸ್ಯ ರಾಡಾರ್ ಕೇಂದ್ರಗಳು, ೧೪ ಮಿಲಿಟರಿ ವಿಮಾನ ನೆಲೆಗಳು, ೮ ಕ್ಷಿಪಣಿ ನೆಲೆಗಳು. ೮ ಐ ಬಿ ಸಿ ಎಂಗಳು – ಅಂತಾರಾಷ್ಟ್ರೀಯ ಚಿಮ್ಮು ಕ್ಷಿಪಣಿಗಳು , ೧೨೦ ಇತರೆ ಕ್ಷಿಪಣಿಗಳು ಸೇರಿವೆ. ರಾಸಾಯನಿಕ ಸಮರ ಅಭ್ಯಾಸಗಳಿಗೂ ಟಿಬೆಟ್ ತಾಣವಾಗಿದೆ; ಇತರೆ ದೇಶಗಳಿಂದ ಭಾರೀ ಪ್ರಮಾಣ ಹಣ ಪಡೆದು ಸ್ವೀಕರಿಸಿದ ಪರಮಾಣು ತ್ಯಾಜ್ಯವನ್ನು ಹುಗಿಯಲೂ ಟಿಬೆಟ್ ಒಂದು ಪರಮಾಣು ಸ್ಮಶಾನ! ಪರಮಾಣು ಪರೀಕ್ಷೆಗಳಿಂದಾಗಿ ಸತ್ತ ಟಿಬೆಟನ್ನರ ಲೆಕ್ಕವಿಲ್ಲ.
ಗೊರ್ಮೊ – ಲ್ಹಾಸಾ ನಡುವಣ ೧೧೧೮ ಕಿಮೀ ಉದ್ದದ ರೈಲುಮಾರ್ಗ ಕೇವಲ ಮನರಂಜನಾ&
amp;
nbsp; ಪ್ರವಾಸಕ್ಕಾಗಿ ಎಂದು ನೀವು ತಿಳಿದಿದ್ದರೆ ತಪ್ಪು: ಮಿಲಿಟರಿ ಅಗತ್ಯಗಳಿಗೆ ಈ ಮಾರ್ಗದ ಬಳಕೆ ಆಗುತ್ತಿದೆ.
`ರೈಲ್ವೆ ಮಾರ್ಗವು ಕೊನೆಗೊಂಡ ಮೇಲೆ ಭಾರತೀಯ ಮಾರುಕಟ್ಟೆಯು ಅಗ್ಗದ ಚೀನೀ ನಿರ್ಮಿತ ವಸ್ತುಗಳ ಭಾರೀ ಪ್ರವಾಹಕ್ಕೆ ತುತ್ತಾಗಲಿದೆ. ಇದರಿಂದ ಭಾರತದ ಗೃಹ ಉದ್ಯಮಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ನೆಲ ಕಚ್ಚಲಿವೆ' ಎಂದು ಎರಡು ವರ್ಷಗಳ ಹಿಂದೆಯೇ ಟಿಬೆಟನ್ನರು ಹೇಳಿದ್ದರು. ಅದೀಗ ನಿಜವಾಗುತ್ತಿದೆ.
ನಿಜ; ಟಿಬೆಟಿನ ಮಿಲಿಟರೀಕರಣದ ಪುಟಗಳು ಬೆಳೆಯುತ್ತಲೇ ಇವೆ. ಹೇಳಿದಷ್ಟೂ ಇದೆ.
ಖೈದಿಗಳು: ನಾಪತ್ತೆ ಅಥವಾ ಸಾವು ನಿಮಗೆ ಈ ಅಂಕಿ ಸಂಖ್ಯೆಗಳ ಕಥೆ ಇಷ್ಟವಾಗದೇ ಹೋದರೆ…… ಈ ರಾಜಕೀಯ ಖೈದಿಗಳ ಕಥೆ ಕೇಳಿ.
ಲೇಖನದ ಮೊದಲೇ ಉದಾಹರಣೆಯಾಗಿ ಬಂದ ಪಾಲ್ದೆನ್ ಗ್ಯಾತ್ಸೋ: ೩೧ ವರ್ಷ ಚೀನೀ ಸೆರೆಮನೆಯಲ್ಲಿದ್ದರು; ಈಗ ಅಮೆರಿಕಾದಲ್ಲಿ ಟಿಬೆಟ್ ಹೋರಾಟ ಮುಂದುವರೆಸಿದ್ದಾರೆ. ತಮಗೆ ಚಿತ್ರಹಿಂಸೆ ನೀಡಲು ಬಳಸಿದ ಆಯುಧಗಳನ್ನು ಅವರು ಕದ್ದು ತಂದಿದ್ದಾರೆ. (ಚಿತ್ರ ನೋಡಿ). ಅವುಗಳಲ್ಲಿ ಒಂದು ಲಾಠಿಯಲ್ಲಿ ೭೦ ಸಾವಿರ ವೋಲ್ಟ್‌ನಷ್ಟು ವಿದ್ಯುತ್ ಹರಿಯುತ್ತದೆ ಎಂಬ ಪುಟ್ಟ ಮಾಹಿತಿ ನಿಮಗೆ ಗೊತ್ತಿರಲಿ.
ಕೇರಿ ನಿಯಾಮಾ ದ್ರಾಕ್‌ಪಾ: ೨೦೦೩ರ ಅಕ್ಟೋಬರ್ ೧ರಂದು ೨೯ರ ಹರೆಯಲ್ಲಿ ಚೀನೀ ಸೆರೆಮನೆಯಲ್ಲಿ ಸತ್ತರು. ೨೦೦೧ರಲ್ಲೇ ಅವರು ಬರೆದು ಕಳಿಸಿದ್ದ ನಾಲ್ಕು ಪುಟಗಳ ಸ್ಯಂಪ್ರೇರಿತ ಹೇಳಿಕೆ ಈಗಲೂ ದಲಾಯಿ ಲಾಮಾರ ಬಳಿ ಇದೆ.
ನೀದ್ರೋನ್ ಎಂಬ ದಾದಿ: ೧೧ ತಿಂಗಳ ಕಾಲ ಏಕಾಂತ ಸೆರೆವಾಸವೂ ಸೇರಿದಂತೆ ಐದು ವರ್ಷಗಳ ಸೆರೆ; ಮುಂದಿನೆರಡೂ ಹಲ್ಲುಗಳು ಚೀನಾ ಸೈನಿಕರ ದಾಳಿಗೆ ಬಲಿ. ಅವಳನ್ನು ಫುಟ್‌ಬಾಲ್ ಮಾಡಿ ಒದ್ದಿದ್ದಾರೆ; ಬೆಲ್ಟು, ಲಾಠಿಗಳಿಂದ ಕಂಡಕಂಡಲ್ಲೆಲ್ಲ ಬಿಗಿದಿದ್ದಾರೆ.
ಚೀನಾ ಸರ್ಕಾರವು ಟಿಬೆಟನ್ನರಿಗಾಗೇ ವಿಶೇಷವಾದ ಕೋಳಗಳನ್ನು ರೂಪಿಸಿದೆ. ವಿದ್ಯುದಾಘಾತ ನೀಡುವ ಲಾಠಿಗಳು (ಬೇಟನ್) ಬೇಕಾದಷ್ಟಿವೆ. ಹಗ್ಗದಿಂದ ನೇತು ಹಾಕುವ ಏರೋಪ್ಲೇನ್‌ಶಿಕ್ಷೆ ನಡೆಯುತ್ತಿರುವಾಗಲೇ ಮೈ ಮೇಲೆ
ಬಿಸಿನೀರು ಎರಚುತ್ತಾರೆ. ಕೆಳಗೆ ಅಗ್ಗಿಷ್ಟಿಕೆ ಉರಿಸುವುದೂ ಇದೆ. ಲೈಂಗಿಕ ಆಕ್ರಮಣಗಳೂ ಶಿಕ್ಷೆಯ ಭಾಗವೇ. ಬಲವಂತದ ಮೂತ್ರಪಾನ, ರಕ್ತದಾನವೂ ಇಲ್ಲಿ ನಡೆಯುತ್ತದೆ. ಕೈಯುಗುರಿನ ಕೆಳಗೆ ಸೂಜಿ ಚುಚ್ಚುವುದು, ಕೀಲುಗಳಿಗೆ ಸುತ್ತಿಗೆಯಿಂದ ಚಚ್ಚುವುದು, – ಇವೆಲ್ಲ ಇಲ್ಲಿ ಸಾಮಾನ್ಯ. ದ್ರಾಪ್‌ಚಿ, ಸಾಂಗ್ ಯಿಪ್, ಗುತ್ಸಾ, ತ್ರೀಸಮ್, ಪೋವೋ ತ್ರಾಮೋ, ಲ್ಹಾಸಾದ ಸೆರೆಮನೆಗಳಲ್ಲಿ ಈ ಖೈದಿಗಳಿದ್ದಾರೆ.
ಟಿಬೆಟಿನ ಖೈದಿಗಳ ಕಥೆಯೂ ಮುಗಿಯುವುದಿಲ್ಲ.
ಕಳೆದ ಅರವತ್ತು ವರ್ಷಗಳಲ್ಲಿ ನಡೆದದ್ದು ನಾಲ್ಕೇ ನರಮೇಧಗಳು ಎಂದು ದಿ ಟೈಮ್ಸ್ ಪತ್ರಿಕೆಯಲ್ಲಿ ಬರ್ನಾರ್ಡ್ ಲೆವಿನ್ ಬರೆಯುತ್ತಾರೆ: ಒಂದು: ಯೂರೋಪಿನಲ್ಲಿ ನಡೆದ ಯಹೂದಿಗಳ ನರಮೇಧ; ಎರಡು: ರಶಿಯಾದಲ್ಲಿ ನಡೆದ ಸ್ಟಾಲಿನ್ ಕ್ರೌರ್ಯ; ಮೂರು: ಕ್ಯಾಂಬೋಡಿಯಾದಲ್ಲಿ ಖ್ಮೆ – ರೂ ನಾಯಕ ಪೋಲ್‌ಪೋಟ್ ನಡೆಸಿದ ಹತ್ಯಾಕಾಂಡ; ನಾಲ್ಕು: ನೀವು ಊಹಿಸಿದಂತೆ ಚೀನಾ ಅಧ್ಯಕ್ಷನಾಗಿ ಮೆರೆದ ಮಾವೋ ತ್ಸೆ ತುಂಗ್ ನಡೆಸಿದ ಟಿಬೆಟನ್ನರ ಬರ್ಬರ ಹತ್ಯಾಕಾಂಡ.
ಸ್ವಾತಂತ್ರ್ಯವೆ? ಸ್ವಾಯತ್ತತೆಯೆ?
ಹಾಗಾದರೆ ಟಿಬೆಟ್ ಸ್ವತಂತ್ರವಾಗಬೇಕೆ? ಹಾಗೇನೂ ಕೇಳುತ್ತಿಲ್ಲ. ನೈಜವಾದ ಸ್ವಾಯತ್ತತೆಯನ್ನು ಚೀನಾ ಸಂವಿಧಾನದ ಅಡಿಯಲ್ಲೇ ನೀಡಿದರೆ ಸಾಕು ಎಂದು ದಲಾಯಿ ಲಾಮಾ ಹೇಳುತ್ತಿದ್ದಾರೆ. ಅದಕ್ಕೂ ಕಾರಣವಿದೆ. ಮೊದಲೇ ಓದಿದಿರಲ್ಲ, ಟಿಬೆಟ್ ಸ್ವಾಯತ್ತ ಪ್ರಾಂತ ಎ ಂದು … ವಾಸ್ತವವಾಗಿ ಈ ಪ್ರಾಂತದಲ್ಲಿ ಇರುವುದು ಅರ್ಧ ಟಿಬೆಟ್ ಮಾತ್ರ. ಉಳಿದರ್ಧ ಚೀನಾದ ಭಾಗಗಳೇ. ಈ ಸ್ವಾಯತ್ತ ಪರಾಂತದಲ್ಲಿ ಇರುವುದು ಮೂರನೇ ಒಂದು ಭಾಗದಷ್ಟು ಟಿಬೆಟನ್ನರು ಮಾತ್ರ.
ದಲಾಯಿ ಲಾಮಾರವರು ಈಗ ವ್ಯೂಹಾತ್ಮಕ ಮಾರ್ಗ ಹಿಡಿದಿರಬಹುದು. ಮೊದಲು ಸ್ವಾಯತ್ತತೆ ಪಡೆಯೋಣ. ಆಮೇಲೆ ಸ್ವಾತಂತ್ರ್ಯದತ್ತ ಗಮನ ಹರಿಸೋಣ ಎಂದು ಯೋಜನೆ ಹಾಕಿಕೊಂಡಿರಬಹುದು.
ದಲಾಯಿ ಲಾಮಾರ ಮಾತುಗಳನ್ನೇ ಉಲ್ಲೇಖಿಸಿ ಟಿಬೆಟನ್ ಸಂಸತ್ತಿನ ಅಧ್ಯಕ್ಷರೂ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಚೀನಾ ಅಧ್ಯಕ್ಷ ಹೂ ಜಿಂತಾವೋಗೆ ಬಹಿರ&
;#32
02;ಗ ಕಾಗದ ಬರೆದಿದ್ದಾರೆ. ಆದರೆ ದಲಾಯಿ ಲಾಮಾ ಮಾತ್ರ ಜಿಂತಾವೋ ಭೇಟಿಯ ದಿನಗಳಲ್ಲಿ ದಿವ್ಯ ಮೌನ ವಹಿಸಿದ್ದರು. ಡಿಸೆಂಬರಿನಲ್ಲಿ ಬೆಂಗಳೂರಿಗೆ ಬಂದಾಗಲೇ ಅವರು ಮತ್ತೆ ಸ್ವಾಯತ್ತತೆಯ ಮಾತು ಎತ್ತಿದ್ದು. ಜಿಂತಾವೋ ಭೇಟಿಯ ಸಂದರ್ಭದಲ್ಲಿ ಟಿಬೆಟನ್ನರು ಸಾವಿರ ಸಾವಿರ ಸಂಖ್ಯೆಯಲ್ಲಿ ಶಾಂತಿಯುತ ಪ್ರತಿಭಟನೆ ಮಾಡಿದರು.
ಹಾಗಾದರೆ ಟಿಬೆಟ್‌ನ ಸಂರಕ್ಷಣೆ ಎಂದರೆ ಬೌದ್ಧ ಧರ್ಮದ ರಕ್ಷಣೆಯಾಗುತ್ತದೆಯೆ? ಟಿಬೆಟನ್ನರು ಗೋಮಾಂಸ ತಿನ್ನುವುದಿಲ್ಲವೆ? ಟಿಬೆಟ್‌ನಲ್ಲಿ ಇರುವುದು ದಲಾಯಿ ಲಾಮಾರ ಏಕಾಧಿಪತ್ಯವಲ್ಲವೆ? ಸ್ವಾಯತ್ತತೆ ಕೇಳಿದರೆಂದರೆ ಟಿಬೆಟ್‌ಗೆ ಸ್ವಾತಂತ್ರ್ಯ ಬರುವುದಿಲ್ಲವಲ್ಲ?…. ಈ ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದೇವೆ.
ಟಿಬೆಟ್‌ಗೆ ಸ್ವಾತಂತ್ರ್ಯ ಬರಬೇಕಾಗಿದ್ದು ಕೇವಲ ಧರ್ಮದ ರಕ್ಷಣೆಗೆ ಅಲ್ಲ. ಅಲ್ಲಿ ಲಕ್ಷಗಟ್ಟಳೆ ಟಿಬೆಟನ್ನರು ಮಾನವ ಹಕ್ಕುಗಳೆಲ್ಲವನ್ನೂ ಕಳೆದುಕೊಂಡಿದ್ದಾರೆ; ಅಲ್ಲಿ ಆರು ದಶಕಗಳಿಂದಲೂ ಚೀನೀ ಪ್ರಜೆಗಳು ಬಲವಂತವಾಗಿ ಬಂದು ನೆಲೆಸಿದ್ದಾರೆ. ಅವರೂ ಒಂದು ರೀತಿಯಲ್ಲಿ ಖೈದಿಗಳೇ. ಇಂದು ಜಗತ್ತಿನ ಅತಿ ದೊಡ್ಡ ಬಲವಂತದ ಶಿಬಿರಗಳನ್ನು ನಡೆಸುತ್ತಿರುವ, ಸುಮಾರು ೬೦ ಲಕ್ಷ ಜನರನ್ನು ಖೈದಿಗಳ ರೂಪದಲ್ಲಿ ನಡೆಸಿಕೊಂಡು ಅಗ್ಗದ ಉತ್ಪನ್ನಗಳನ್ನು ಸೃಷ್ಟಿಸುತ್ತಿರುವ ಏಕೈಕ ದೇಶ ಚೀನಾ. `ಲಾಗೊಯ್' ಎಂದು ಕರೆಯುವ ಈ ಶಿಬಿರಗಳ ಕಥೆ ಬರೆದರೆ ಅದೇ ದೊಡ್ಡ ಲೇಖನವಾಗುತ್ತದೆ. ಟಿಬೆಟಿನ ಲ್ಹಾಸಾ, ದ್ರಾಪ್ಚಿಗಳಲ್ಲೂ ಇಂಥ ಶಿಬಿರಗಳಿವೆ. ನಮ್ಮ ಬುದ್ಧಿ ಜೀವಿಗಳಿಗೆ, ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಮಾತ್ರ ಚೀನಾವೇ ಮಾದರಿ. ಆರ್ಥಿಕ ತಜ್ಞರಂತೂ ಭಾರತ – ಚೀನಾ ಹೋಲಿಕೆ ಮಾಡಿದ್ದೇ ಮಾಡಿದ್ದು.
ಭಾರತಕ್ಕೂ ಅಪಾಯ
ಟಿಬೆಟಿನ ಹೋರಾಟದ ಮರ್ಮವೇ ಮಾನವ ಹಕ್ಕುಗಳ ಸಂರಕ್ಷಣೆ. ಜೊತೆಗೆ, ಭಾರತದ ಸುರಕ್ಷತೆಯ ಪ್ರಶ್ನೆಯೂ ಹೌದು. ಭಾರತ – ಚೀನಾ ನಡುವೆ ಟಿಬೆಟ್ ಒಂದು ಸುರಕ್ಷಿತ ಅಂತರವಾಗಿತ್ತು. ಈಗ? ಪೂರ್ವದ ಗಡಿಯುದ್ದಕ್ಕೂ ಚೀನೀ ನೆಲೆಗಳು. ಪಶ್ಚಿಮದಲ್ಲಿ ನಾ&
#325
3;ೇ ಸೃಷ್ಟಿಸಿಕೊಂಡ ಪಾಕಿಸ್ತಾನ. ಪಾಕಿಸ್ತಾನದ ಜೊತೆ ಕೈ ಜೋಡಿಸಿರುವ ಚೀನಾ. ಅತ್ತ ಬರ್ಮಾದಲ್ಲಿ ಸೇನಾ ಆಡಳಿತ. ಒಟ್ಟಿನಲ್ಲಿ ಭಾರತದ ಭದ್ರತೆಯ ದೃಷ್ಟಿಯಿಂದ ಟಿಬೆಟ್ ಶಾಂತಿ ವಲಯವಾಗುವುದು ಅತ್ಯವಶ್ಯ. ಅದಿಲ್ಲವಾದರೆ ಬೌದ್ಧ ಧರ್ಮದ ಪವಿತ್ರಗ್ರಂಥ ತ್ರಿಪಿಟಕವನ್ನು ಪ್ರಚುರಗೊಳಿಸುವ ಚೀನಾದ ಯತ್ನವೂ ಹುಸಿ ಎಂದೇ ಆಗುತ್ತದೆ.
ಶಾಂತಿಯೂ ಲ್ಹಾಸಾದ ಮ್ಯೂಸಿಯಂನಲ್ಲಿ ಕಾಣಸಿಗುವ ವಸ್ತು ಆಗುವ ಎಲ್ಲ ಸಾಧ್ಯತೆಗಳಿವೆ.
ಹಾಗಾದರೆ ಟಿಬೆಟ್ ಏನಾಗಬೇಕು? ೧೯೮೭ರಲ್ಲಿ ದಲಾಯಿ ಲಾಮಾ ಅಮೆರಿಕಾದ ಕಾಂಗ್ರೆಸಿನಲ್ಲಿ ಇಟ್ಟ ಈ ಐದು ಬೇಡಿಕೆಗಳೇ ಈಗ ಸಾರ್ವತ್ರಿಕ ಸಮ್ಮತಿಯ ರಾಜಿ ಸೂತ್ರವಾಗಿದೆ:
೧) ಟಿಬೆಟ್‌ನ್ನು ಒಂದು ಶಾಂತಿವಲಯವೆಂದು ಘೋಷಿಸುವುದು
೨) ಟಿಬೆಟನ್ನರೂ ಮನುಷ್ಯರು ಎಂಬುದನ್ನೇ ಮರೆಮಾಚುವ ಚೀನೀ ಪ್ರಜೆಗಳ ವರ್ಗಾವಣೆಯನ್ನು ನಿಲ್ಲಿಸುವುದು
೩) ಟಿಬೆಟನ್ನರ ಮೂಲಭೂತ ಹಕ್ಕುಗಳು ಹಾಗೂ ಪ್ರಜಾತಾಂತ್ರಿಕ ಸ್ವಾತಂತ್ರ್ಯವನ್ನು ಗೌರವಿಸುವುದು
೪) ಟಿಬೆಟಿನ ನೈಸರ್ಗಿಕ ಸಂಪತ್ತಿನ ಮರುಸ್ಥಾಪನೆಗೆ ಯತ್ನಿಸುವುದು; ಟಿಬೆಟ್ ಎಂದೂ ಪರಮಾಣು ಅಸ್ತ್ರಗಳ ನಿರ್ಮಾಣಕ್ಕೆ ಬಳಕೆಯಾಗದಂತೆ ಮತ್ತು ಪರಮಾಣು ತ್ಯಾಜ್ಯಗಳ ಗುಂಡಿಯಾಗದಂತೆ ನಿರ್ಬಂಧಿಸುವುದು
೫) ಟಿಬೆಟನ್ನರು ಮತ್ತು ಚೀನೀಯರ ನಡುವೆ ವಿಶ್ವಾಸ ಮರಳಿ ಗಳಿಸುವಂತೆ ಮಾಡಲು ಮಾತುಕತೆಗಳನ್ನು ಆರಂಭಿಸುವುದು.
ಆದರೆ ಈ ಶಾಂತಿಮಂತ್ರವನ್ನು ಕೇಳುವವರು ಯಾರು?
ಭಾರತದಲ್ಲಿ ಇರುವ ಟಿಬೆಟನ್ನರು ಈಗ ಶ್ರೀಮಂತರಾಗಿದ್ದಾರೆ, ಬೈಲುಕುಪ್ಪೆಯಲ್ಲಿ ಇರುವ ಟಿಬೆಟನ್ನರು ಶೋಷಣೆ ಮಾಡುತ್ತಾರೆ, ಮುಂಡಗೋಡಿನಲ್ಲಿರುವ ಟಿಬೆಟನ್ನರು ಪರಿಸರವನ್ನೇ ಹಾಳುಗೆಡವಿದ್ದಾರೆ ಎಂದೆಲ್ಲ ಮಾಧ್ಯಮದ ವರದಿಗಳು ಬರುತ್ತವೆ…ಟಿಬೆಟನ್ನರೂ ಮನುಷ್ಯರಾದ್ದರಿಂದ ಮತ್ತು ಟಿಬೆಟನ್ ಸಮಾಜವೂ ನಗರಗಳ ಪ್ರಭಾವಕ್ಕೆ ಒಳಗಾಗಿದ್ದರಿಂದ ಕೆಲವೆಡೆ ಅಹಿತಕರ ಘಟನೆಗಳು ನಡೆದಿವೆ ಎಂಬುದು ನಿಜ. ಎಲ್ಲ ಟಿಬೆಟನ್ನರೂ ಕ್ರಿಮಿನಲ್‌ಗಳು ಎಂದು ಬೆರಳು ತೋರಿಸು&a
mp;#
3253;ುದು ಸರಿಯಲ್ಲ. ಆದರೆ ಟಿಬೆಟ್‌ನಂಥ ಒಂದು ದೇಶ – ಸಂಸ್ಕೃತಿಯನ್ನೇ ಚೀನಾ ತಿಂದು ತೇಗುತ್ತಿದೆ ಎಂದು ಧೈರ್ಯವಾಗಿ ಹೇಳುವ ಮಾಧ್ಯಮಗಳ ಸಂಖ್ಯೆ ಕಡಿಮೆ.
ಶಾಂತಿಯಿಂದ ಇದ್ದದ್ದೇ ಟಿಬೆಟಿನ ಮಹಾಪರಾಧವೆ? ಟಿಬೆಟನ್ನರಿಗೆ ಟಿಬೆಟ್ ದಕ್ಕುವುದೆ? ಅವರ ಛಲ ನೋಡಿದರೆ ಹೌದು ಎನ್ನಿಸುತ್ತದೆ. ಪರಿಸ್ಥಿತಿ ನೋಡಿದರೆ ಸಾಧ್ಯವಿಲ್ಲವೇನೋ ಎನಿಸುತ್ತದೆ.
ಟಿಬೆಟ್ ಎಂಬ ಸುಂದರ ದೃಶ್ಯ ನಮ್ಮೆದುರೇ ಚೂರಾಗುತ್ತಿರುವುದಂತೂ ನಿಜ. ೨೦೦೮ರ ಬೀಜಿಂಗ್ ಒಲಿಂಪಿಕ್ಸ್ ವೇಳೆಗಾದರೂ ಟಿಬೆಟ್ ಬಗ್ಗೆ ಮನುಕುಲದಲ್ಲಿ ಹೆಚ್ಚು ಅರಿವು ಮೂಡಿದರೆ, ಭಾರತವೂ ಗಟ್ಟಿ ದನಿ ಎತ್ತಿದರೆ, ಟಿಬೆಟ್ ಮತ್ತೆ ಪ್ರಾರ್ಥನೆಯ ಕಲರವದಲ್ಲಿ, ಘಂಟಾನಾದದಲ್ಲಿ ಮುಳುಗುವುದೂ ನಿಜ.
ಹಾಗಾಗದೇ ಹೋದರೆ, ಅದು ಪಕ್ಕಾ ಸಜೀವ ಮ್ಯೂಸಿಯಂ ಆಗುವುದಂತೂ ಖರೆ.
(ಮುಖ್ಯ ಲೇಖನ ಮುಗಿಯಿತು)
ಟಿಬೆಟನ್ನು ಚೀನಾ ತಿಂದ ಕಥೆ ಇಷ್ಟು:
ಟಿಬೆಟ್ ಹೇಗೆ ಚೀನಾದ ಆಸ್ತಿಯಾಯಿತು? ಚೀನೀಯರೂ ಅದನ್ನು ಯಾಕೆ ತಮ್ಮ ಮಾತೃಭೂಮಿ ಎಂದು ಕರೆದರು?
ಬಹು ಹಿಂದಿನಿಂದಲೂ ಟಿಬೆಟ್ ಬೌದ್ಧ ಧರ್ಮದ ನೆಲೆಯಾಯಿತಷ್ಟೆ? ಆಗ ಚೀನೀ ಆಡಳಿತಗಾರರು, ಮಂಗೋಲಿಯನ್ ದೊರೆಗಳೂ ಬೌದ್ಧ ಧರ್ಮವನ್ನು ಅನುಸರಿಸುತ್ತಿದ್ದರು. ಟಿಬೆಟಿನ ರಕ್ಷಣೆಯ ಹೊಣೆ ಇಂಥ ದೊರೆಗಳ ಮೇಲೇ ಇತ್ತು. ಚೀನಾದಲ್ಲಿ ಕಮ್ಯುನಿಸಂ ಬಂದಮೇಲೆ ಧರ್ಮದ ಮೇಲೆ ನಂಬಿಕೆಯೇ ಹೋಯಿತು.
ಧರ್ಮಭೂಮಿಯಾಗಿದ್ದ ಟಿಬೆಟ್ ಸಹಜವಾಗೇ ಚೀನಾದ ಕಣ್ಣಿಗೆ ದೊಡ್ಡ ಆಸ್ತಿಯ ಹಾಗೆ ಕಾಣಿಸಿತು. ಮುಂದೆ ನಡೆದದ್ದು ಇತಿಹಾಸ. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಟಿಬೆಟಿನ ಮೇಲೆ ಆರಾಮಾಗಿ ದಾಳಿ ನಡೆಸಿದ ಕಮ್ಯುನಿಸ್ಟರು ಖಾಂಪಾ ಬುಡಕಟ್ಟಿನವರ ಕೊಂಚ ಪ್ರತಿರೋಧದ ನಡುವೆ ಟಿಬೆಟನ್ನು ಆಕ್ರಮಿಸಿದರು.ಟಿಬೆಟಿಗೆ ಇಂಥ ಗತಿ ಬರುತ್ತದೆ ಎಂದು ೧೩ನೇ ದಲಾಯಿ ಲಾಮಾ ತುಬ್‌ತೆನ್ ಗ್ಯಾತ್ಸೋ ೧೯೩೩ರಲ್ಲೇ ಎಚ್ಚರಿಸಿದ್ದರು. ಕಾಳರಾತ್ರಿ ಅಪ್ಪಳಿಸಲಿದೆ ಎಂದು ಅವರು ಬಹಿರಂಗವಾಗೇ ಹೇಳಿದ್ದರು. ಅವರೇ ಟಿಬೆಟನ್ನು ೨೦ನೇ ಶ&
amp;
#3236;ಮಾನದ ಆಧುನಿಕತೆಗೆ ತೆರೆದವರು; ಆಡಳಿತ ಸುಧಾರಣೆ ತಂದವರು. ಅವರ ಎಚ್ಚರಿಕೆ ನಿಜವಾಯಿತು.
೧೯೫೭ರಂದು ೧೪ನೇ ದಲಾಯಿ ಲಾಮಾ (ಈಗಿನವರು) ಚೀನಾದ ಹಿಡಿತದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದರು. ಈಗ ಭಾರತದಲ್ಲಿ ಹಲವೆಡೆ ಟಿಬೆಟ್ ನಿರಾಶ್ರಿತ ಶಿಬಿರಗಳಿವೆ. ಅವರಿಗೆ ಭೂಮಿ ನೀಡಿ ಬದುಕು ಸಾಗಿಸಲು ಭಾರತ ಸರ್ಕಾರ ಅನುವು ಮಾಡಿದೆ.
———————————————————————–
ಹೆಚ್ಚಿನ ಮಾಹಿತಿಗೆ ನೀವು ಓದಬಹುದಾದ ಪುಸ್ತಕಗಳು:
ಟಿಬೆಟನ್ ಇತಿಹಾಸ, ವರ್ತಮಾನದ ಸ್ಥಿತಿಯ ಅರಿವಿಗೆ:
ಟಿಯರ್ಸ್ ಆಫ್ ಬ್ಲಡ್ – ಎ ಕ್ರೈ ಫಾರ್ ಟಿಬೆಟ್: ಮೇರಿ ಕ್ರೇಗ್/ ಹಾರ್ಪರ್ ಕಾಲಿನ್ಸ್ ಪ್ರಕಟಣೆ
ದಿ ಫೇಟ್ ಆಫ್ ಟಿಬೆಟ್: ಕ್ಲಾಡ್ ಆರ್ಪಿ / ಹರ್ ಆನಂದ್ ಪ್ರಕಟಣೆ
ಟಿಬೆಟ್: ಮಂಗ್ಳೂರು ವಿಜಯ / ಅಭಿನವ ಪ್ರಕಟಣೆ
ಟಿಬೆಟ್ ಕುರಿತ ಕುತೂಹಲಕರ ಅಂಶಗಳಿಗೆ:
ಟ್ರೆಸ್‌ಪಾಸರ್ಸ್ ಆನ್ ದಿ ರೂಫ್ ಆಫ್ ದಿ ವರ್ಲ್ಡ್ – ದಿ ರೇಸ್ ಫಾರ್ ಲ್ಹಾಸಾ : ಪೀಟರ್ ಹಾಪ್‌ಕಿರ್ಕ್ / ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರಕಟಣೆ
ಎ ಸ್ಟ್ರೇಂಜರ್ ಇನ್ ಟಿಬೆಟ್ – ದಿ ಅಡ್ವೆಂಚರ್ಸ್ ಆಫ್ ಎ ಝೆನ್ ಮಾಂಕ್ : ಸ್ಕಾಟ್ ಬೆರ್ರಿ / ಹಾರ್ಪರ್ ಕಾಲಿನ್ಸ್
ಜಾಲತಾಣಗಳು
www.tibet.org ಇಲ್ಲಿ ಟಿಬೆಟ್ ಕುರಿತ ಎಲ್ಲ ಪ್ರಮುಖ ಜಾಲತಾಣಗಳ ವಿಳಾಸಗಳಿವೆ.
ಪಾಲ್ದೆನ್ ಗ್ಯಾತ್ಸೋ ಬರೆದ `ದಿ ಫೈರ್ ಎಂಡ್ ದಿ ಸ್ನೋ ' ಆತ್ಮಕಥನ ಈಗ ಈ ಜಾಲತಾಣದಲ್ಲಿ ಇದೇ ಲೇಖಕರಿಂದ ಕನ್ನಡದಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದೆ.
ಟಿಬೆಟಿನ ಇಂಥ ಖೈದಿಗಳ ಅನುಭವಗಳ ಕಥೆಗಳನ್ನು, ಹಾಗೆ ಶಿಕ್ಷೆ ಅನುಭವಿಸಿ ಸತ್ತ ೮೮ ಜನರ ಬದುಕಿನ ಚಿತ್ರಣವನ್ನು, ಹಿಂಸೆಯನ್ನು ತಾಳಲಾರದೆ ಜೀವ ಕಳೆದುಕೊಂಡ ಇನ್ನೂ ನೂರಾರು ಟಿಬೆಟನ್ನರ ಸರುಗಳನು, ಚಿತ್ರಹಿಂಸೆಯ ವಿಧಿಗಳನ್ನು ಮತ್ತಷ್ಟು ತಿಳಿಯಬೇಕೆ? ಟಿಬೆಟನ್ ಸೆಂಟರ್ ಫಾರ್ ಹ್ಯುಮನ್ ರೈಟ್ಸ್ ಎಂಡ್ ಡೆಮಾಕ್ರಸಿ ಎಂಬ ಸಂಸ್ಥೆ ಪ್ರಕಟಿಸಿದ `ಟಿಬೆಟ್‌ನಲ್ಲಿ ಚಿತ್ರಹಿಂಸೆ' ಪುಸ್ತಕವನ್ನು ಟಿಬೆಟ್ ಕುರಿತ ಎಲ್ಲ ಪ್ರಮುಖ ಜಾಲತಾಣಗಳ ವಿ&
amp;
#3251;ಾಸಗಳಿವೆ.
ಪಾಲ್ದೆನ್ ಗ್ಯಾತ್ಸೋ ಬರೆದ `ದಿ ಫೈರ್ ಎಂಡ್ ದಿ ಸ್ನೋ ' ಆತ್ಮಕಥನ ಈಗ ಈ ಜಾಲತಾಣದಲ್ಲಿ ಇದೇ ಲೇಖಕರಿಂದ ಕನ್ನಡದಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದೆ.
ಟಿಬೆಟಿನ ಇಂಥ ಖೈದಿಗಳ ಅನುಭವಗಳ ಕಥೆಗಳನ್ನು, ಹಾಗೆ ಶಿಕ್ಷೆ ಅನುಭವಿಸಿ ಸತ್ತ ೮೮ ಜನರ ಬದುಕಿನ ಚಿತ್ರಣವನ್ನು, ಹಿಂಸೆಯನ್ನು ತಾಳಲಾರದೆ ಜೀವ ಕಳೆದುಕೊಂಡ ಇನ್ನೂ ನೂರಾರು ಟಿಬೆಟನ್ನರ ಸರುಗಳನು, ಚಿತ್ರಹಿಂಸೆಯ ವಿಧಿಗಳನ್ನು ಮತ್ತಷ್ಟು ತಿಳಿಯಬೇಕೆ? ಟಿಬೆಟನ್ ಸೆಂಟರ್ ಫಾರ್ ಹ್ಯುಮನ್ ರೈಟ್ಸ್ ಎಂಡ್ ಡೆಮಾಕ್ರಸಿ ಎಂಬ ಸಂಸ್ಥೆ ಪ್ರಕಟಿಸಿದ `ಟಿಬೆಟ್‌ನಲ್ಲಿ ಚಿತ್ರಹಿಂಸೆ' ಪುಸ್ತಕವನ್ನು www.tchrd.org ಈ ಜಾಲತಾಣದಿಂದ ಓದಿ.
(ಜನವರಿ ೭ರ ಉದಯವಾಣಿಯಲ್ಲಿ ಪ್ರಕಟಿತ ಲೇಖನ)
(ಜನವರಿ ೭ರ ಉದಯವಾಣಿಯಲ್ಲಿ ಪ್ರಕಟಿತ ಲೇಖನ)