ಬರೀ ಮಾತುಗಳಿರುವ ಸಾಲುಗಳು
೧೪-೬-೯೧
ಬೆಂಗಳೂರು
ಮಳೆ-ಚಳಿ-ಬಿಸಿಲಿನ ಬರಿ ಮಾತುಗಳು
ಈ ಹಾಳೆಯ ಹೊಸ ಸಾಲುಗಳು
ಮಳೆಬಿದ್ದರೆ ಬರಿ ಹೂವುಗಳಲ್ಲ
ಕೊಡೆಗಳು ಕೂಡಾ ಅರಳುವವು
ಮೋಡಗಳಂತೆ ಮೊಗ್ಗುಗಳಂತೆ
ದಿನಗಳ ನಡುವೆ ನರಳುವುವು.
ಚಳಿ ಕೊರೆದರೆ ಬರಿ ಮಾತುಗಳಲ್ಲ
ದಾರಿದೀಪಗಳು ನಡುಗುವವು
ಮಂಜಿನ ಹಾಗೆ ಮೌನದ ಹಾಗೆ
ಮಾತಿಲ್ಲೇದನೆ ಕೊರಗುವವು
ಬಿಸಿಲೇರಿದ ಹೊತ್ತಿಗೆ ನೆತ್ತಿಯ ಹಾಗೆ
ಬೆವರುವುದಿದೆ ಎದೆಗೂಡು
ದ್ವೇಷದ ಧಗೆ ಹೊತ್ತುರಿದರೆ ಗೆಳೆಯರೆ
ಸುಡಲಿದ ಪ್ರೀತಿಯ ಜಾಡು.
ಋತುಮಾನದ ಬಗೆ ಭೂಜಗತ್ತಿಗೆ
ಬರೀ ಹೊರನೋಟುವ ನೀಡುವುದು
ಒಳಗಿಣುಕಿದ ಹಸುಗೂಸಿನ ಕಣ್ಣಿಗೂ
ಭಯ ಬೀಳಿಸುತ್ತ ಕಾಡುವುದು.
ಬಿಳಿ ಹಾಳೆಯ ಬರಿಸಾಲುಗಳೀಗ
ಮಳೆ – ಚಳಿ- ಬಿಸಿಲಿನ ಮಾತುಗಳು.