ದಿನಚರಿ
೨೯-೩-೮೬
ಸಾಗರ

ಸೂಳೆಗೊಂದು ಚಪ್ಪಲಿ
ಅವಳ ಕಾಟ ತಪ್ಪಲಿ

ಮಗನಿಗೊಂದು ಮಾರುತಿ
ಮಾರಲಿ ಅವ ಕೀರುತಿ

ಮಗಳು ಡಾಕ್ಟರಾದಳು
ನನ್ನ ಹೊಟ್ಟೆ ಕೊಯ್ದಳು

ಹೆಂಡತಿಗೋ ಬರೆದಿದೇನೆ
ತೋಟ – ಗದ್ದೆ – ಮನೆಗಳು

ತಮ್ಮ ದಂಧೆ ಮಾಡಿದ
ಹಿಸೆಯ ಕೊಡಲು ಕೇಳಿದ

ಅತ್ತೆಗೊಂದು ರವಿಕೆ ಹೊಲಿಸಿ
ಪುಟಪರ್ತಿಗೆ ಕಳಿಸಿದೆ

ಮೊಮ್ಮಗನಿಗೆ ಮುತ್ತುಕೊಟ್ಟು
ಚೆಕ್ಕೂ ಕೊಟ್ಟು ಹರಸಿದೆ

ಗೆಳೆಯರೆಲ್ಲ ಕೂಡಿ ಬಂದು
ಕುಡಿದು- ಕೊಂಡು ಹೋದರು

ಗೆಳತಿಯರೋ ಪತ್ರದಲ್ಲೆ
ಬಿಚ್ಚಿ ಬೆಚ್ಚಗಾದರು

ವ್ಯವಹಾರದ ಪಾಲುದಾರ
ಸಾಲ ಮಾಡಿ ಓಡಿಹೋದ

…………………
…………………

ಎಷ್ಟು ಹೀಗೆ ಹೇಳಲಿ?
ಯಾವ ರೀತಿ ಬದುಕಲಿ?

ಮತ್ತೆ ಸೂರ್ಯ ಹುಟ್ಟಿದ
ಹಲ್ಲುಜ್ಜಲು ಹೇಳಿದ

Share.
Leave A Reply Cancel Reply
Exit mobile version