ಕೆಲವು ವಿಳಾಸಗಳು
೧೯೮೪ 
ಬೆಂಗಳೂರು

ಅವನಾ?
ಈ ಬಡಾವಣೆಯ ಇಷ್ಟನೇ ಹಂತದ
ಅಷ್ಟನೇ ಅಡ್ಡರಸ್ತೆಯಲ್ಲಿ
ಅಷ್ಟಷ್ಟು ದೂರ ನಡೆದರೆ ಇಂಥ ಬಣ್ಮದ
ಒಂದು ಮನೆ ಸಿಗುತ್ತೆ. ಅದರಲ್ಲಿ
ಅವನೇ ಇರಬಹುದು
ಅಥವಾ ಇನ್ಯಾರಾದ್ರೂ…
ಛೇ
ವಿಳಾಸದಲ್ಲಿ ತಪ್ಪಿರಲ್ಲ, ಮಾರಾಯ್ರೆ
ಮನುಷ್ಯರಲ್ಲಿ

*

ನಿಮ್ಮ ಪತ್ರ ತಲುಪಿತು.
ನನ್ನ ಒಳ್ಳೆಯತನ ನೋಡಿ
ಬರೆದಿದ್ದೀರ. ಧನ್ಯವಾದಗಳು. ನನ್ನ
ದುಷ್ಟತನದ ವಿಳಾಸ ನಿಮಗೆ
ಸಿಗಲಿಲ್ಲವಾಗಿ ಬಚಾವಾಗಿದ್ದೇನೆ.
ಇತಿ ತಮ್ಮ ವಿಶ್ವಾಸಿ,

*

ಪ್ರೀತಿಯ ಅಪ್ಪಾ?
ನನ್ನ ಹೊಸ ವಿಳಾಸ ತಲುಪಿತೆ?
ಅಮ್ಮ ಹ್ಯಾಗಿದ್ದಾರೆ? ಪರೀಕ್ಷೆ ಮುಂದೆ ಹೋಗಿದೆ
ನಿನ್ನ ಬೋನಸ್ಸು ಬಂದಿತೆ?
ಇವತ್ತು ಭಾರತಕ್ಕೆ ಜಯವಾಯಿತು.
ಕೂಡಲೇ ಹಣ ಕಳಿಸುತ್ತೀಯಾ?

*

ಈ ಪತ್ರ ತಲುಪಿದ ತಕ್ಷಣ
ಹೊರಟು ಬಾ ಹುಡುಗ,
ವಿಳಾಸವನ್ನು ಅಪ್ಪಿಕೊಂಡರೆ
ದುಃಖವೇ.

Share.
Leave A Reply Cancel Reply
Exit mobile version