`ಕಲಿ'ಯುತ್ತಿರುವ ಅಂಕಣದ ಓದುಗರಿಗೆ ಅಭಿನಂದನೆಗಳು !!

ನನ್ನ ಕಲಿಯುಗ ಅಂಕಣವನ್ನು ಕಂಪ್ಯೂಟರ್ ಕಲಿಸುವ ಅಂಕಣ ಎಂದು ಹಲವು ಓದುಗರು ತಿಳಿದುಕೊಂಡಿದ್ದಾರೆ! ಅದಕ್ಕಾಗಿ ನಾನು ಖುಷಿಪಡಬೇಕೋ, ಬೇಜಾರು ಮಾಡಿಕೊಳ್ಳಬೇಕೋ ಎಂದು ತಿಳಿಯುತ್ತಿಲ್ಲ. ಅವರೆಲ್ಲ ಕಂಪ್ಯೂಟರ್ ಬಗ್ಗೆ, ಇಂಟರ್‌ನೆಟ್ ಬಗ್ಗೆ ಪರಿಹಾರಗಳನ್ನು ಕೇಳಿ ನನಗೆ ಈ ಮೈಲ್ ಕಳಿಸಿದಾಗಲೇ ನನಗೆ ಈ ಅಂಶ ಗೊತ್ತಾಗಿದ್ದು.  ಇಲ್ಲಿ ಈ ಕೆಲವು ಪತ್ರಗಳನ್ನು ಉಲ್ಲೇಖಿಸುವ ಮೂಲಕ ಕೆಲವು 'ಕಲಿ – ಯುವ' ಮಾಹಿತಿಗಳನ್ನು ಓದುಗರಿಗೆ ದಾಟಿಸಬಯಸುವೆ.
 ಕಾರ್ಕಳದ ವಿವೇಕ್ ತಮಂಕರ್ (ಇಂಗ್ಲಿಶಿನ ಸ್ಪೆಲಿಂಗ್ ಬಳಸಿ ಬರೆದದ್ದು, ಥಮಂಕರ್, ಥಮಣ್‌ಕರ್ ಯಾವುದೂ ಇರಬಹುದು) ಕಂಪ್ಯೂಟರ್ ಗೇಮ್‌ಗಳನ್ನು ಇಂಟರ್‌ನೆಟ್‌ನಲ್ಲಿ ಪಡೆಯೋದು ಹ್ಯಾಗೆ ಎಂದು ಕೇಳಿದ್ದರು. ಅವರಿಗೆ ಕೊಟ್ಟ ಉತ್ತರವನ್ನು ನಾನು ಈ ಅಂಕಣದ ಕೊನೆಯಲ್ಲಿ ಕೊಟ್ಟಿದ್ದೇನೆ. ಇಲ್ಲಿ ಒಂದು ಮುಖ್ಯ ವಿಷಯವನ್ನು ಗಮನಿಸಬೇಕು. ಅಂತರಜಾಲದಲ್ಲಿ ಉಚಿತವಾಗಿ ಸಿಗುವ ಆಟಗಳನ್ನಷ್ಟೇ ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು. (ಡೌನ್‌ಲೋಡ್ ಎಂದರೆ ವಿಶ್ವದ ಯಾವುದೋ ಮೂಲೆಯಲ್ಲಿ ಇರುವ ಜಾಲತಾಣದಲ್ಲಿ ಇಟ್ಟಿರುವ ಕಂಪ್ಯೂಟರ್ ಕಡತ – ಫೈಲ್ – ವನ್ನು ನಿಮ್ಮ ಗಣಕಕ್ಕೆ 'ಇಳಿಸಿ'ಕೊಳ್ಳುವುದು). ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಕಂಪ್ಯೂಟರ್ ಆಟಗಳ ಡಿಸ್ಕ್‌ಗಳು ನಕಲಿ ಮಾಲುಗಳು. ಪಕ್ಕಾ ಮಾಲು ಬೇಕೆಂದರೆ ಸಾವಿರಾರು ರೂಪಾಯಿ ಬಿಚ್ಚಬೇಕು. ಆದ್ದರಿಂದ ನಾನು ಕೊಟ್ಟಿರುವ ಜಾಲತಾಣದ ವಿಳಾಸಗಳಲ್ಲಿ ಮುಕ್ತ ತಂತ್ರಾಂಶವಾಗಿ ದೊರಕುವ ಆಟಗಳ ಸಂಪರ್ಕ ಕೊಂಡಿಗಳಿವೆ.
 “ನನ್ನ ಮನೆಯ ಕಂಪ್ಯೂಟರ್ ಯಾಕೋ ಹಾಳಾಗಿಹೋಗಿದೆ. ಏನು ಮಾಡಿದರೂ ಓಪನ್ ಆಗ್ತಾ ಇಲ್ಲ'' ಎಂದು ಪುಣೆಯಿಂದ ಪ್ರಸಾದ್ ಬರೆದಿದ್ದರು. ಅವರಿಗೆ ಅಲ್ಲೇ ಸಿಗುವ ಸೇವಾ ನೀಡಿಕೆ ವ್ಯಕ್ತಿಗಳಿಂದ ಸಹಾಯ ಪಡೆಯಲು ತಿಳಿಸಿರುವೆ. ಮನೆಯ ಕಂಪ್ಯೂಟರ್ ಹಾಳಾದರೆ ಕಂಪ್ಯೂಟರ್ ಮಾರಾಟ ಮಾಡಿದವರೇ ರಿಪೇರಿ ಮಾಡಬೇಕು ಎಂದು ತಿಳಿದುಕೊಳ್ಳಬೇ&
amp;#3
233;ಿ. ನಿಮ್ಮ ಗಣಕದ ನಿರ್ದಿಷ್ಟ ಅಗತ್ಯಗಳಿಗೆ ತಕ್ಕಂತೆ ಅದನ್ನು ಗಮನಿಸಿ ದುರಸ್ತಿ ಮಾಡುವುದಕ್ಕೆ ನೀವು ಸೂಕ್ತ ವ್ಯಕ್ತಿ, ಸಂಸ್ಥೆಯನ್ನು ಹುಡುಕಲೇಬೇಕು. ಅಷ್ಟೇ ಅಲ್ಲ, ನಿಮ್ಮ ಕಂಪ್ಯೂಟರ್ ಓಪನ್ ಆಗದಿದ್ದರೆ, ಅದಕ್ಕಾಗಿ ಒಂದು ಬೂಟ್ ಫ್ಲಾಪಿ ಡಿಸ್ಕ್ ಇರಬೇಕಾಗುತ್ತದೆ.  ಅಂಥ ಒಂದು ಫ್ಲಾಪಿಯನ್ನು ವ್ಯವಸ್ಥೆ ಮಾಡಿಕೊಳ್ಳಿ. ತುರ್ತು ಸಂದರ್ಭದಲ್ಲಿ ಬಳಕೆಗೆ ಬರುತ್ತದೆ.
 ಬಜಗೋಳಿಯ ನಂದ ಅವರಿಗೆ ಮೈಕ್ರೋಸಾಫ್ಟ್ (ಎಂ ಎಸ್) ವರ್ಡ್‌ನಲ್ಲಿ ಬಳಸಬಹುದಾದ ಕೀಬೋರ್ಡ್ ಶಾರ್ಟ್‌ಕಟ್‌ಗಳ ಪಟ್ಟಿ ಬೇಕಿತ್ತಂತೆ. ಅದನ್ನು ಅವರಿಗೆ ಕಳಿಸಿದ್ದೇನೆ. ಹಾಗೆಯೇ ಅದನ್ನು ನನ್ನ ಜಾಲತಾಣದಲ್ಲೂ ಹಾಕಿದ್ದೇನೆ. ತಮಾಷೆ ಎಂದರೆ ಈ ಪಟ್ಟಿಯನ್ನು ನಾನು ವರ್ಡ್ ತಂತ್ರಾಂಶದಲ್ಲೇ ಇರುವ ಹೆಲ್ಪ್ ಮೆನ್ಯುವಿನಲ್ಲಿ ನೋಡಿ ಪ್ರತಿ ಮಾಡಿದ್ದು! ನನ್ನ ಸಲಹೆ ಇಷ್ಟೆ: ಯಾವುದೇ ತಂತ್ರಾಂಶವನ್ನು ನೀವು ಸ್ಥಾಪನೆ ಮಾಡಿದ್ದರೆ ಅದರ ಮೆನ್ಯು ಪಟ್ಟಿಯ ಕೊನೆಯಲ್ಲಿ ಹೆಲ್ಪ್ ಎಂಬ ಅಧ್ಯಾಯವೇ ಇರುತ್ತದೆ. ಅದರಲ್ಲಿ ನಿಮಗೆ ಬೇಕಾದ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಕೀಲಿಮಣೆಯನ್ನು ಬಳಸುವ ಬಗ್ಗೆಯೂ ಇದರಲ್ಲಿ ಮಾಹಿತಿ ಸಾಮಾನ್ಯವಾಗಿ ಇದ್ದೇ ಇರುತ್ತೆ. ಉದಾಹರಣೆಗೆ ಕೋರೆಲ್ ಡ್ರಾ ಸಾಫ್ಟ್‌ವೇರ್‌ನ ಹೆಲ್ಪ್ ಮೆನ್ಯುವಿನಲ್ಲಿ ಚಿತ್ರಗಳನ್ನು ಬಗೆಬಗೆಯಾಗಿ ಸಂಪಾದಿಸುವುದಕ್ಕೆ ಬೇಕಾದ ಕಿವಿಮಾತುಗಳು ಹೇರಳವಾಗಿರುತ್ತವೆ.
 ಆದರೆ ಎಂ ಎಸ್ ಆಫೀಸ್‌ಗಿಂತ ಉತ್ತಮವಾದ ಮತ್ತು ಉಚಿತವಾಗಿ ದೊರೆಯುವ ಓಪನ್ ಆಫೀಸ್ ಬಗ್ಗೆ ನಿಮಗೆ ಗೊತ್ತೆ? www.openoffice.org  ಈ ಜಾಲತಾಣಕ್ಕೆ ಹೋದರೆ ನೀವು ಓಪನ್ ಆಫೀಸ್ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ವರ್ಡ್ ಫಾರ್ಮಾಟ್‌ನಲ್ಲೂ ಸೇವ್ ಮಾಡುವ ಅನುಕೂಲವಿರೋದ್ರಿಂದ ಬೇರೆ ಕಡೆ ಕಡತವನ್ನು ಕಳಿಸುವಾಗ ಸಮಸ್ಯೆ ಆಗುವುದೂ ಇಲ್ಲ. ಸುಮ್ಮನೆ ಯಾಕೆ ವರ್ಡ್ ತಂತ್ರಾಂಶವನ್ನು ಕದಿಯುತ್ತೀರ / ಬಿಲ್ ಗೇಟ್ಸ್‌ಗೆ ಕಾಸು ಕೊಡುತ್ತೀರ
?
 ಪುತ್ತೂರಿನ  ರೋಹಿತ್‌ಗೆ ತ್ರಿ – ಆಯಾಮದ ಚಿತ್ರಗಳನ್ನು ಬರೆಯಲು ಕಂಪ್ಯೂಟರ್‌ಗೆ ಇರಬೇಕಾದ ಸಾಮರ್ಥ್ಯವೇನು ಎಂಬ ಪ್ರಶ್ನೆ ಕಾಡುತ್ತಿತ್ತು. ಒಂದು ಗೈಗಾಬೈಟ್ ರ್‍ಯಾಮ್ (ರ್‍ಯಾಂಡಮ್ ಆಕ್ಸೆಸ್ ಮೆಮೊರಿ) ಸಾಕೆ? ಎಂದು ಕೇಳಿದ್ದರು. ಇಂಥ ೩ಡಿ ಮಾಡೆಲಿಂಗ್‌ಗೆ ಒಂದು ಜಿಬಿ ರ್‍ಯಾಮ್ ಏನೂ ಸಾಕಾಗುವುದಿಲ್ಲ. ಸುಮ್ಮನೆ ಕೆಲವು ಸರಳ ಮಾದರಿಗಳನ್ನು ರೂಪಿಸಬಹುದಷ್ಟೆ. ಚಿತ್ರ, ವಿನ್ಯಾಸ, ನೀಲನಕಾಶೆ ಮುಂತಾದ ಬಳಕೆಗೆ ಇನ್ನೂ ಹೆಚ್ಚಿನ ಸಾಮರ್ಥ್ಯದ ಗಣಕ ಬೇಕು.
 ಉಚಿತ ಪುಸ್ತಕಗಳು ಎಲ್ಲಿ ಸಿಗುತ್ತವೆ ಎಂದು ಪ್ರಕಾಶ್ ಭಂಡಾರಿ ಕೇಳಿದ್ದಾರೆ.  www.promo.net/pg    ಈ ಜಾಲತಾಣದಲ್ಲಿ ಉಚಿತವಾಗಿ, ಹಕ್ಕು ಸ್ವಾಮ್ಯದ ಸಮಸ್ಯೆ ಇಲ್ಲದ ಪುಸ್ತಕಗಳು ದೊರೆಯುತ್ತವೆ. ನೀವು ಯಾವುದೇ ಹುಡುಕಾಟ ನಡೆಸಿದರೂ, ಕೊನೆಗೆ ಈ ಜಾಲತಾಣದ್ದೇ ಪುಸ್ತಕಗಳು ದೊರೆಯುತ್ತವೆ. ಇನ್ನು ವಿವಿಧ ಬಗೆಯ ಪುಸ್ತಕಗಳು ದೊರಕುವ ಹತ್ತಾರು ಕೊಂಡಿ (ಲಿಂಕ್) ಗಳನ್ನು ನಾನು ನನ್ನ ಜಾಲತಾಣದಲ್ಲಿ ಪ್ರಕಟಿಸಿದ್ದೇನೆ. ಯಾಕಂತಂದ್ರೆ ಪಟ್ಟಿ ದೊಡ್ಡದು ಮಾರಾಯ್ರೆ!!
 ಇನ್ನೂ ಕೆಲವರು ಅಂಕಣ ಚೆನ್ನಾಗಿದೆ ಎಂದು ತಿಳಿಸಿದ್ದಾರೆ. ವಂದನೆಗಳು. ಆದರೆ ನಿಂದಕರಿರಬೇಕು ॒ರಚನಾತ್ಮಕ ಟೀಕಾಕಾರರಿಗಿಂತ ಒಳ್ಳೆಯ ಅಭಿಮಾನಿಗಳಿಲ್ಲ!
ಅಂಕಣಗಳಿಗೆ ಬರುವ ಇಂಥ ಫ್ಯಾನ್  ಮೈಲುಗಳನ್ನೇ ಯಾವಾಗಲೂ ಪ್ರಕಟಿಸುವ ಇರಾದೆ ನನಗಿಲ್ಲ. ಆದರೆ ಇಂಥ ಉತ್ತರಗಳು ಇನ್ನೂ ಹಲವು ಓದುಗರಿಗೆ ಉಪಯೋಗವಾದರೆ ಒಳ್ಳೆಯದಲ್ಲವೆ?
ಇನ್ನೊಂದು ಸಂಗತಿಯನ್ನು ನಾನಿಲ್ಲಿ ವಿವರಿಸುವ ಅಗತ್ಯವಿದೆ. ಹಲವು ಬಾರಿ ನನ್ನ ಜಾಲತಾಣವನ್ನು ನೋಡಿ ಎಂದು ಬರೆದಿದ್ದೇನೆ ; ಬರೆಯುತ್ತೇನೆ. ಇದೇನು ನನ್ನ ಜಾಲತಾಣವನ್ನು ಪ್ರಚಾರ ಮಾಡುವ ಸ್ಥಳವೆ ಎಂದು ಕೇಳಬಹುದು.
ನನ್ನ ಜಾಲತಾಣದಲ್ಲಿ ನನ್ನ ಬರಹಗಳೇ ಇದ್ದವು. ಈಗ “ಕಲಿ – ಯುಗ'' ಅಂಕಣಕ್ಕಾಗಿ ನಾನು ಅಂಕಣದಲ್ಲಿ ಉಲ್ಲೇಖಿಸಿದ ಸಂಗತಿಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವ ಮಾಹಿತಿಗಳ ಫೈಲುಗಳನ್ನು ಹಾಕಿದ್ದೇನೆ. ಇದಕ್ಕಾಗಿ ನನ್ನ ಜಾಲ&#3
236;ಾಣವಷ್ಟೇ ಅಲ್ಲದೆ, ಗೂಗಲ್ ಸಂಸ್ಥೆಯ ಸಹಕಾರವನ್ನೂ ಪಡೆದಿದ್ದೇನೆ. ನನ್ನ ಅಂಕಣಗಳ ಮೂಲ ಮಾಹಿತಿಯ ಹಲವು ಕಡತಗಳನ್ನು  ನೀವು ಖುದ್ದಾಗಿ ಓದಬಹುದು ; ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಿಕೊಳ್ಳಬಹುದು. ಹಲವಾರು ತಂತ್ರಾಂಶಗಳನ್ನು ಕೂಡಾ ನಾನು ಈ ಜಾಲತಾಣದಲ್ಲಿ ಹಾಕಿದ್ದೇನೆ. ನಿಮ್ಮ ಹಾಡುಗಳ ಸಂಪಾದನೆಯ ಕೆಲಸಕ್ಕೋ, ಡಿಟಿಪಿ ಮಾಡುವುದಕ್ಕೋ, ಇವೆಲ್ಲವನ್ನು ಬಳಸಬಹುದು.
ಮುಖ್ಯವಾಗಿ ನನ್ನ ಅಂಕಣವು “ಕಾನ್ವರ್ಜೆಂಟ್'' ಅಂಕಣವಾಗಬೇಕೆಂಬುದು ಈ ಯತ್ನಗಳ ಹಿಂದಿನ ದುರುದ್ದೇಶ! ಕನ್ನಡ ಮಾಧ್ಯಮದಲ್ಲಿ ಹೀಗೆ ಕಾನ್ವರ್ಜೆಂಟ್ ಅಂಕಣ ಮೂಡುತ್ತಿರುವುದು ಈ “ಕಲಿ – ಯುಗ''ದ ಮೂಲಕವೇ ಎಂಬುದು ನನ್ನ ಅಂಬೋಣ. ಕಾನ್ವರ್ಜೆಂಟ್ ಎಂದರೆ ಒಗ್ಗೂಡುವುದು ; ನದಿಗಳ ಸಂಗಮದ ಹಾಗೆ. ತಿಳಿವಳಿಕೆಯ ಹಂದರವನ್ನು ಹಬ್ಬಿಸುವ ವಿವಿಧ ಮಾಧ್ಯಮಗಳ ಸಂಗಮವಾದರೆ (ಇಲ್ಲಿ ನಾನು ಮುದ್ರಣ ಮತ್ತು ಇಂಟರ್‌ನೆಟ್ ಮಾಧ್ಯಮಗಳ ಪೂರಕ ಸಂಗಮಕ್ಕೆ ಯತ್ನಿಸಿದ್ದೇನೆ) ಅದರಿಂದ ಎಲ್ಲರಿಗೂ ಪ್ರಯೋಜನವಿದೆ. ನನ್ನ ಅಂಕಣಗಳನ್ನು ಓದಿದ ಮೇಲೆ ಹೆಚ್ಚಿನ ಮಾಹಿತಿಯನ್ನು ಪಡೆಯುವುದಕ್ಕೆ ನಿಮಗೆ ಇರುವ ಹಕ್ಕನ್ನು ನಾನು ಮೊಟಕು ಮಾಡದೇ ನೀಡುತ್ತಿದ್ದೇನೆ.
ಈ ಅಂಕಣದಲ್ಲಿ “ನಾನು'' ಪದವನ್ನು ಹೆಚ್ಚಾಗಿ ಬಳಸಿದ್ದಕ್ಕೆ ದಯಮಾಡಿ ಮನ್ನಿಸಿ. ಇದು ನನ್ನ ಅಂಕಣ ನೀತಿಗೆ ವಿರುದ್ಧವಾದದ್ದು. ಆದರೆ ನಿಮಗಾಗಿ ಈ ಉಲ್ಲಂಘನೆ ಮಾಡಿದ್ದೇನೆ.
ಕಂಪ್ಯೂಟರ್ ಆಟಗಳು ಉಚಿತವಾಗಿ ಸಿಗುವ ಬಗ್ಗೆ ಮಾಹಿತಿ ಇರುವ ಜಾಲತಾಣದ ಕೊಂಡಿಗಳು :

http://en.wikipedia.org/wiki/List_of_open_source_games

http://osswin.sourceforge.net/games.html

ನಾನು ಹೆಚ್ಚಿನ ಮಾಹಿತಿಗಳನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಲು ಇಟ್ಟಿರುವ ಜಾಲತಾಣ:
beluru.googlepages.com/mitramaadhyama  

————————————-

Share.
Leave A Reply Cancel Reply
Exit mobile version