ಮುಂಬಯಿ ದಾಳಿಯ ಬಗ್ಗೆನೋ, ನಕ್ಸಲರು ಯಾರನ್ನೋ ಹೊಡೆದು ಹಾಕಿದ ಬಗ್ಗೆನೋ ತಲೆ ಕೆಡಿಸ್ಕೊಂಡು ಕೊಂಚ ಚಿಂತನ-ಮಂಥನ ನಡೆಸೋಣ ಅಂತ ಎಲ್ಲ ಗ್ಲಾಸ್‌ಮೇಟ್‌ಗಳು ಪಬ್‌ಗೆ ಹೋಗಿ ಕೂತಿದ್ದರೆ ಹಾಗೆ ಫಕ್ಕನೆ ಹೋಗಿ ಹೊಡೆದುಬಿಡೋದೆ? 

ವ್ಯವಸ್ಥೆ ಕೆಟ್ಟು ಹೋಗಿದೆ…. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ನಿರ್ಮಲಾ ವೆಂಕಟೇಶ್ ಪಬ್‌ನ ಬೌನ್ಸರ್‌ಗಳಿಗೆ ಛೀಮಾರಿ ಹಾಕಲಿಲ್ವೆ? ಅಲ್ರಿ, ಹುಡುಗೀರಿಗೆ ರಾಮಸೇನೆಯವ್ರು ಹೊಡೆಯೋವಾಗ ನೀವು ಬೌನ್ಸರ್‌ಗಳು ಏನು ಮಾಡ್ತಿದ್ರಿ ಅಂತ ಬೈಲಿಲ್ವೆ? ಬೌನ್ಸರ್‌ಗಳು ಅಂದ್ರೆ ಪಬ್‌ಗಳಲ್ಲಿ ಗಲಾಟೆ ಮಾಡೋರನ್ನು ಹೊರಗೆ ದಬ್ಬೋದಕ್ಕೆ ಇರೋ ದಢೂತಿಗಳು. ಪಬ್ ಇದ್ದಲ್ಲಿ ಬೌನ್ರ್ ಇರ್‍ಲೇಬೇಕು. ಇದೊಂದು ಪಕ್ಕಾ ವ್ಯವಸ್ಥೆ. ಹಾಗಿದ್ದ ಮೇಲೆ ಇಂಥ ವ್ಯವಸ್ಥೆ ಕೆಟ್ಟು ಹೋಯ್ತು ಎಂದು ನಿರ್ಮಲಾರವ್ರು  ಖೇದಿಸಿದ್ದು ಎಷ್ಟು  ಪ್ರಸ್ತುತ ನೋಡಿ! 

ಪಾಪ, ಉತ್ತರ ಭಾರತಕ್ಕೇ ಸೇರಿದೋರಂತೆ, ಈ ಹುಡುಗೀರು; ಯಾಕೋ, ಅಪ್ಪ – ಅಮ್ಮನ್ನ ದೂರ ಬಿಟ್ಟು ಬಂದಿರೋದಕ್ಕೆ ಬೇಜಾರಾಗಿ ಹಾಗೇ ಹೋಗಿಬರೋಣ ಅಂತ ಬಂದಿದ್ರಂತೆ… ಅಂಥವ್ರಿಗೆ ರಾಮಸೇನೆಯವರು ಹೊಡೆದುಬಿಡೋದೆ? ಎಂಥ ಡಿಪ್ರೆಶನ್‌ನಲ್ಲಿ ಇದ್ರೋ ಏನೋ…. 

ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು…. ಬಂದೂಕನ್ನು ತೆಗೆದುಕೊಳ್ಳಬಹುದು ಅನ್ನೋ ಮಹಿಳಾ ಸಂಘಟನೆಗಳ ವಾದಾನಾದ್ರೂ ನೀವು ಕೇಳಬೇಡ್ವೆ? ರಾಮಸೇನೆಯವರು ಲಾತ ಕೊಟ್ಟಿದ್ದು ತಪ್ಪು; ಆದ್ರೆ ಪಕ್ಕದಲ್ಲೇ ಇರೋ ನಕ್ಸಲೀಯರು ಬಂದೂಕನ್ನೇ ಹಿಡಿದು ನಿಶ್ಶಸ್ತ್ರ ರೈತರನ್ನು ಕೊಂದು ಅಥ್ವಾ ನಿನ್ನೆ (ಫೆಬ್ರುವರಿ ೧) ನಡೆದ ಹಾಗೆ ಮಹಾರಾಷ್ಟ್ರದ ಬಡಪಾಯಿ ಪೇದೆಗಳನ್ನು  ಅಥ್ವಾ ನಿನ್ನೆ (ಫೆಬ್ರುವರಿ ೧) ನಡೆದ ಹಾಗೆ ಮಹಾರಾಷ್ಟ್ರದ ಬಡಪಾಯಿ ಪೇದೆಗಳನ್ನು ಕೊಂದು ಪರಾರಿ ಆದ್ರೆ ತಪ್ಪಾಗುತ್ತ? ಅಲ್ಲ ಅನ್ಸುತ್ತೆ; ಯಾಕಂದ್ರೆ ಈ ‘ಪ್ರಗತಿಪರ’ ಮಹಿಳಾ ಸಂಘಟನೆಗಳು ಎಂದೂ ನಕ್ಸಲರ ಜೀವಹರಣದ ವಿರುದ್ಧ ದನಿಯೆತ್ತಿದ ಉದಾಹರಣೆ ಇಲ್ಲ. ನಕ್ಸಲೀಯರ ಉಸಾಬರಿ ಯಾಕೆ ಅಂತ…. ಎಲ್ಲಾದ್ರೂ ನಕ್ಸಲರ ಬಂದೂಕು ನಮ್ಮ ಕಡೆಗೇ ತಿರುಗಿದ್ರೆ ಅಂತ…… ! 

ಇನ್ನು ಸೋಶಿಯಲ್ ಪೊಲೀಸಿಂಗ್ ಅನ್ನೋದು ಪ್ರಜಾಪ್ರಭುತ್ವದಲ್ಲಿ ತಪ್ಪು…… ಮೊನ್ನೆ ದೂರದೂರಿನ ಗೆಳೆಯರೊಬ್ರು ಹೇಳ್ತಾ ಇದ್ರು… ಅಲ್ರಿ….. ಕಾನೂನಿನ ಪ್ರಕಾರ ನ್ಯಾಯ ಸಿಗಲ್ಲ; ನ್ಯಾಯ ಸಿಗೋದಕ್ಕೆ ಹೋರಾಟ ಮಾಡೋದಕ್ಕೆ ಹೋದ್ರೆ, ಜಿಂದಾಬಾದ್ ಅಂದ್ರೆ ಬಿಡಲ್ಲ, ಜೈಲಿಗೇ ತಳ್ತಾರೆ…. ಅಂದ್ರೆ ನಾವು ಏನು ಮಾಡಬೇಕ್ರಿ… ಈ ಗೆಳೆಯರ ರೋದನಕ್ಕೆ ನನ್ನ ಹತ್ರ ಉತ್ರ ಇರ್‍ಲಿಲ್ಲ….. ಯಾಕಂದ್ರೆ ಸೋಶಿಯಲ್ ಪೊಲೀಸಿಂಗ್ ಮಾಡಬಾರ್‍ದಲ್ವ…. 

ಜನ ಲಂಚ ಕೊಡಬಹುದು, ಗುಂಡು ಹಾಕಿಸಿ ಬೇಕಾದ್ದು ಮಾಡಿಸಿಕೊಳ್ಳಬಹುದು, ಪೊಲೀಸ್ ಠಾಣೆಗಳಲ್ಲಿ ದೂರುಗಳೇ ದಾಖಲಾಗದೇ ಹೋಗಬಹುದು, – ನಕ್ಸಲರ ಬಗ್ಗೆಯಂತೂ ಹೇಳೇಬಿಟ್ಟಿದೀನಿ…. ಅವರು ನ್ಯಾಯದ, ಕ್ರಾಂತಿಯ ಹೆಸರಿನಲ್ಲಿ ಯಾರಿಗಾದ್ರೂ ಪಾಯಿಂಟ್‌ಬ್ಲಾಂಕ್ ಮಾಡಿ ಹೊಡೆದು ಹಾಕಬಹುದು ….. ರಾಮಸೇನೆಯವರು ಮಾತ್ರ ಹುಡುಗೀರ್‍ಗೆ ಹೊಡೀಬಾರ್‍ದು… ಇದು ನಮ್ಮ ಪ್ರಜಾತಂತ್ರದ ನೀತಿ ನಿಯಮ, ಕಾನೂನು, ಕಟ್ಟಳೆ…. 

 

 

Share.
Leave A Reply Cancel Reply
Exit mobile version