ಪದರ

ಹಳೆಯ ಮರಗಳ ನೆರಳಾಟ, ತಿಕ್ಕಾಟದಿಂದ
ಹೊಚ್ಚ ಹೊಸ ಬೀಜಗಳು ಮೊಳೆಯವು
ಮೊಳೆತರೂ ಅಲ್ಲಿಲ್ಲೊಂದು ಮಾತ್ರ
ಈ `ವಟ ವಟ' ವೃದ್ಧ ವೃಕ್ಷಗಳ ಬಗ್ಗು ಬಡಿದಾಡಿ
ನುಗ್ಗು ನುರಿಮಾಡಿ, ಪದರಪದರಗಳ ಹರಿದು
ಮೇಲೆ ಮೇಲೇರಿ ತುತ್ತ ತುದಿಗೇರಿ
ಯಾವಾಗಲೂ ಎಲ್ಲವನು ಎಲ್ಲೊ ಬಚ್ಚಿಟ್ಟು
ಹುಚ್ಚಾಗಿ ಕಾಣುವೀ ಸತ್ಯವ,
ಸೂರ್ಯವ, ಚಂದ್ರ – ನಕ್ಷತ್ರವ
ಬಾಯ್ತೆರೆದು ಬೊಬ್ಬಿರಿದು, ಕಣ್ಣು ಪಿಳಿಪಿಳಿಬಿಟ್ಟು
ಕೊನೆಗೊಮ್ಮೆ ಆ ಸತ್ಯದಾಳಕ್ಕೆ ತಲುಪ್ಯಾವು.

ಆದರೂ
ಇರುವ ಸತ್ಯವು ಒಂದೆ
ಸತ್ಯನಿತ್ಯವೂ ಒಂದೆ
ಸತ್ಯದಾಳವು ಒಂದೆ
ಎಂಬೆಲ್ಲ ದೃಶ್ಯಗಳ ಮರೆತಾವು.
ಅದೃಶ್ಯ ಎಂದು ಹೊರಟಾವು.

Share.
Leave A Reply Cancel Reply
Exit mobile version