ಮಾಧ್ಯಮದ ಹೊಸ ಆಯಾಮಗಳು

ಮಕರ ಸಂಕ್ರಮಣದ ದಿನದಂದು ನಿಮ್ಮೆದುರು ಒಂದಷ್ಟು ಸಾಲುಗಳನ್ನು ಬರೆದಿದ್ದ ನಾನು ಮತ್ತೆ ಯುಗಾದಿ ಹಬ್ಬದ ಸಡಗರದಲ್ಲೂ ನಿಮ್ಮೆದುರು ಈ ಸಾಲುಗಳನ್ನು ಬರೆದಿಡುವ ಅವಕಾಶ ಬಂದಿದೆ. ಹೊಸ ಸಂವತ್ಸರದ ಸಂದರ್ಭದಲ್ಲಿ ನಿಮಗೆಲ್ಲ ಶುಭಾಶಯಗಳನ್ನು ಹೇಳುತ್ತ, ಮಾಧ್ಯಮದ ಹೊಸ ಆಯಾಮಗಳ ಬಗ್ಗೆ ಒಂದಷ್ಟು ಕಲಿಯುವ ಮಾತುಗಳನ್ನು ಬರೆಯುತ್ತೇನೆ.

ಫೋನ್ ಇನ್ ಕಾರ್ಯಕ್ರಮ

ಫೋನ್ ಇನ್ ಕಾರ್ಯಕ್ರಮವನ್ನು ಆರಂಭಿಸಿದ್ದು ರೇಡಿಯೋ ಕೇಂದ್ರಗಳೇ. ಸಾಮಾನ್ಯವಾಗಿ ಎಫ್ ಎಂ ಕೇಂದ್ರಗಳು ನಡೆಸುವ ಫೋನ್ ಇನ್ ಕಾರ್ಯಕ್ರಮಗಳು ಕೇಳುಗರೊಂದಿಗೆ ನಡೆಸುವ ಆತ್ಮೀಯ ಸಂವಾದವಾಗಿ ಶ್ರವ್ಯ ಮಾಧ್ಯಮದ ಆಸಕ್ತಿ ಬೆಳೆದಿದೆ. ಕೇವಲ ಮಾಹಿತಿಗಳನ್ನು ಕೇಳಲು ಮಾತ್ರವೇ ಬಳಕೆಯಾಗುತ್ತಿದ್ದ ಈ ವಿಧಾನ ಈಗ ಪ್ರವಾಚಕರ ಮತ್ತು ಕೇಳುಗರ ನಡುವೆ ಹೃತ್ಪೂರ್ವಕ ವಾರ್ತಾಲಾಪವಾಗಿ ಮಾರ್ಪಡಲು ಕಾರಣವೇನು? ಮಾಧ್ಯಮಗಳು ತಮ್ಮ ಹಾಗೂ ಶ್ರೋತೃಗಳ ನಡುವೆ ಇದ್ದ ಸಂವಹನದ ಕಂದರವನ್ನು ಮುಚ್ಚಿಹಾಕಲು ನಡೆಸಿದ ಪ್ರಾಮಾಣಿಕ ಪ್ರಯತ್ನ ಇಲ್ಲಿ ಫಲ ಕಾಣುತ್ತಿದೆ.  ಟೆಲಿವಿಜನ್ ಕಾರ್ಯಕ್ರಮಗಳಲ್ಲೂ ಫೋನ್ ಇನ್ ಕಾರ್ಯಕ್ರಮಗಳು ಹೆಚ್ಚಿವೆ. ಸ್ಥಳೀಯ ಕೇಬಲ್ ವಾಹಿನಿಗಳಲ್ಲಿ ಕೇಳುಗರ ಮೆಚ್ಚಿನ ಹಾಡುಗಳನ್ನು ಪ್ರಸಾರ ಮಾಡುವ ಜೂಕ್ ಬಾಕ್ಸ್ ಯತ್ನಗಳೂ ಯಶ ಪಡೆದಿವೆ. ಸ್ಥಳೀಯ ಕಾರ್ಯಕ್ರಮ ನಿರೂಪಕರೂ ಕಿರುತೆರೆ ತಾರೆಗಳಾಗುತ್ತಿದ್ದಾರೆ. ಒಂದು ರೀತಿಯಲ್ಲಿ ಈಗ ಕೇಳುವವರೂ ಕಾರ್ಯಕ್ರಮ ನಿರೂಪಿಸುತ್ತಿದ್ದಾರೆ. ಮೊದಲು ಒಂದೇ ದಿಕ್ಕಿನಿಂದ ಹರಿಯುತ್ತಿದ್ದ ಕಾರ್ಯಕ್ರಮ ನಿರೂಪಣೆ ಈಗ ವೈವಿಧ್ಯಮಯವಾಗಿದೆ. ಕೇಳುಗರ ದನಿಗೂ ಮೈಕ್ ಸಿಕ್ಕಿದೆ.

ಸೌಂಡ್ ಆಫ್ : ನಿಮ್ಮದೇ ಧ್ವನಿ !

ಮುದ್ರಣ ಮಾಧ್ಯಮದಲ್ಲಿ ಕೇವಲ ವಾಚಕರ ಪತ್ರಗಳು ಮಾತ್ರವೇ ಓದುಗರ ದನಿ ಎಂಬ ಸ್ಥಿತಿ ಈಗಿಲ್ಲ. ಆಂಗ್ಲ ದಿನಪತ್ರಿಕೆಯೊಂದು ಈಗ ತನ್ನ ನಗರ ಪುರವಣಿಯಲ್ಲಿ ಓದುಗರ ಲೇಖನವನ್ನು ಅವರ ದೊಡ್ಡ ಭಾವಚಿತ್ರದೊಂದಿಗೆ ಮುಖಪುಟದಲ್ಲಿ ಪ್ರಕಟಿಸುತ್&a
mp;#32
36;ಿದೆ. ಸಂಪಾದಕೀಯ ವಿಭಾಗದಲ್ಲಿ ಬರೆಯುವವರಷ್ಟೇ ಹೊಸ ವಿಷಯಗಳು ಈ ಓದುಗರ ಬರೆಹದಲ್ಲಿ ಇರುತ್ತವೆ. ಹೊಸ ವಿದ್ಯಮಾನಗಳು, ಬೆಲೆ ಏರಿಕೆ ಮುಂತಾದ ವಿಷಯಗಳ ಬಗ್ಗೆ ಮಾತ್ರವೇ ಮೀಸಲಾಗಿದ್ದ ಓದುಗರ ಕಿರು ಸಂದರ್ಶನ ಈಗ ಸಾಮಾನ್ಯವಾಗಿ ಪ್ರತಿದಿನವೂ, ಪ್ರತೀ ವಿಷಯದ ಮೇಲೂ ನಡೆಯುತ್ತಿದೆ. ಟೆಲಿವಿಜನ್ ಚೌಕಟ್ಟಿನಲ್ಲಿ ಶ್ರೀಸಾಮಾನ್ಯರೂ ರಾಜಕಾರಣಿಗಳಂತೇ ಹೇಳಿಕೆ ಕೊಡಲು ಆರಂಭಿಸಿದ್ದಾರೆ !

ಅಂದರೆ ಓದುಗರನ್ನು ಅರ್ಥಾತ್ ಟಾರ್ಗೆಟ್ ಆಡಿಯೆನ್ಸ್, ಅಂದ್ರೆ ಒಂದು ಮಾಧ್ಯಮವು ತನ್ನ  ಗುರಿಯಾಗಿ ಇಟ್ಟುಕೊಂಡ ಶ್ರೋತೃಗಳನ್ನು ಗಮನದಲ್ಲಿ ಇಟ್ಟುಕೊಂಡು, ಅವರ ಭಾವ, ಭೇದ, ಅಭಿಮತ ಎಲ್ಲವನ್ನೂ  ಕೇಳಿ ಕಾರ್ಯಕ್ರಮಗಳನ್ನು ನಿರೂಪಿಸೋದು ಇಂದಿನ ಹೊಸ ವಿದ್ಯಮಾನ. ಇದನ್ನು ಭಾಗೇದಾರಿ ಪತ್ರಿಕೋದ್ಯಮ ಎಂದು ಕರೆಯುತ್ತೇವೆ. ಖಾಸಗಿ ಯಜಮಾನಿಕೆ ಪತ್ರಿಕೋದ್ಯಮವೂ ಇದಕ್ಕೆ ಹೊರತಾಗಿಲ್ಲ. ಆದರೆ ನನ್ನ ದೃಷ್ಟಿಯಲ್ಲಿ ಮುದ್ರಣ ಮಾಧ್ಯಮಗಳಲ್ಲಿ ಅಂದ್ರೆ ಪತ್ರಿಕೆ ಮತ್ತು ಮ್ಯಾಗಜಿನ್‌ಗಳಲ್ಲಿ ಈ ಬಗೆಯ ಭಾಗೇದಾರಿ ಪತ್ರಿಕೋದ್ಯಮ ಇನ್ನೂ ಹೆಜ್ಜೆ ಊರಿಲ್ಲ. ಏಕಮುಖಿ ಸುದ್ದಿ ಸಂವಹನವೇ ಇಲ್ಲಿ ಮುಖ್ಯವಾಗಿದೆ.  ಇದು ತಪ್ಪಬೇಕು. ರೇಡಿಯೋ, ಟೆಲಿವಿಜನ್ ವಾಹಿನಿಗಳಲ್ಲಿ ಕಾಣಿಸಿಕೊಂಡ ಭಾಗೇದಾರಿ ಪತ್ರಿಕೋದ್ಯಮ ಮುದ್ರಣ ಮಾಧ್ಯಮದಲ್ಲೂ ಕಾಲೂರಬೇಕು. ಆಗಲೇ ಮುದ್ರಣ ಮಾಧ್ಯಮವೂ ಸುದ್ದಿಯನ್ನು ವಸ್ತುನಿಷ್ಠವಾಗಿ ನೋಡುವ ಹೊಸ ಆಯಾಮ ಕಾಣಲು ಸಾಧ್ಯ.

ಕಾನ್ವರ್ಜೆನ್ : ಕೂಡಿ ಬಾಳೋಣ್ಸ

ಮುದ್ರಣ ಮಾಧ್ಯಮದಲ್ಲಿ ಇಲ್ಲದ ಬೆಳವಣಿಗೆ ಇದು. ಕಾನ್ವರ್ಜೆನ್ಸ್ ಎಂದರೆ ಒಂದು ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳು  ಇನ್ನೊದು ಮಾಧ್ಯಮದಲ್ಲಿ ಹೊಸ ರೂಪದೊಂದಿಗೆ ಬಂದು ನಿಲ್ಲುವುದು. ಅಂದ್ರೆ ಎರಡು ಅಥವಾ ಅದಕ್ಕಿಂತ ಹೆಚ್ಚು ಮಾಧ್ಯಮಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳೋದು. ಒಂದು ವಿದ್ಯಮಾನವನ್ನು ರೇಡಿಯೋದಲ್ಲಿ ಮಾತ್ರ ಕೇಳ್ತೀರ ಅಂದುಕೊಳ್ಳಿ. ಅದನ್ನು ಮುದ್ರಣ ಮಾಧ್ಯಮವೂ ಪ್ರಕಟಿಸಬಹುದಲ್ವ? ಅಥವಾ ದಿನಪತ್ರಿಕೆಯಲ್ಲಿ
ಬಂದ ಸುದ್ದಿಯನ್ನು ಟೆಲಿವಿಜನ್ ವಾಹಿನಿಯು ಇನ್ನಷ್ಟು ದೃಶ್ಯಮಯವಾಗಿ ತೋರಿಸಬಹುದು. ಟೆಲಿವಿಜನ್‌ನಲ್ಲಿ ಬಂದ ನುಡಿಚಿತ್ರವು ಅದರ ಸ್ಥಿರಚಿತ್ರಗಳೊಂದಿಗೆ ಮ್ಯಾಗಜಿನ್‌ನಲ್ಲಿ ಪ್ರಕಟವಾಗಬಹುದು. ವಿದೇಶಗಳಲ್ಲಿ ಈ ಬಗೆಯ ಕಾನ್ವರ್ಜೆನ್ಸ್ ಸಾಮಾನ್ಯವಾಗಿದೆ. ಭಾರತದಲ್ಲಿ ಈ ಆಯಾಮಕ್ಕೆ ಇನ್ನೂ ಬೆಲೆ ಬಂದಿಲ್ಲ. 

ಡಿಜಿಟಲ್ ಗುಣಮಟ್ಟದ ಕ್ರೇಝ್

ಟೆಲಿವಿಜನ್ ಹಾಗೂ ರೇಡಿಯೋಗಳಲ್ಲಿ ಈಗ ಡಿಜಿಟಲ್ ಗುಣಮಟ್ಟ ಬೆಳೆದಿದೆ. ಇನ್ನೂ ಬೆಳೆಯಬೇಕಿದೆ. ಹಲವು ಟೆಲಿವಿಜನ್ ವಾಹಿನಿಗಳು ಸ್ಟೀರಿಯೋ ಗುಣಮಟ್ಟದ ಧ್ವನಿಸೇವೆನೀಡುತ್ತಿವೆ. ಎಫ್ ಎಂ ಬ್ಯಾಂಡ್‌ಗಳ ಜನಪ್ರಿಯತೆ ಉತ್ತುಂಗಕ್ಕೇರಿದೆ. ದೇಶದಲ್ಲಿ ಇನ್ನೂ ಮುನ್ನೂರು ಚಿಲ್ಲರೆ ಎಫ್ ಎಂ ಕೇಂದ್ರಗಳಿಗೆ ಪರವಾನಗಿ ಸಿಕ್ಕಿದೆ. ಇದು ಮಾತ್ರ ರೇಡಿಯೋ ಕ್ರಾಂತಿಯ ನಿಜಕಾಲ ಎನ್ನಬಹುದು. ಸ್ಫಟಿಕ ಶುದ್ಧ ಎನ್ನಬಹುದಾದ ಡಿಜಿಟಲ್ ಗುಣ ಮಟ್ಟ ಮತ್ತು ಎಂ ಪಿ ೩ ವಿಧಾನದ ಕೃಪೆಯಿಂದಾಗಿ ಅಗ್ಗ ಶಾಸ್ತ್ರೀಯದಿಂದ ಹಿಡಿದು ಫ್ಯೂಶನ್‌ವರೆಗೆ ಸಂಗೀತವು ಮತ್ತೆ  ಕೇಳಿಬರುತ್ತಿದೆ. ಮಿಶ್ರಸಂಗೀತದಿಂದಾಗಿ ಶಾಸ್ತ್ರೀಯ ಸಂಗೀತವೂ ಮರುಹುಟ್ಟು ಪಡೆದಿದೆ. ಹೀಗೆ ಸಂಗೀತಪ್ರಿಯರಿಂದಾಗಿ ಮತ್ತೆ ಬೆಲೆ ಪಡೆದಿರುವ ರೇಡಿಯೋ ಕೇಂದ್ರಗಳು ಕೇಳಿದ್ದನ್ನೇ ಕೇಳಿಸುವ ಪುನರಾವರ್ತನೆಗೂ ಮುಂದಾಗುವಂತಿಲ್ಲ. ಇದು ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಡಬಹುದೆ? ಡಿಜಿಟಲ್ ವರ್ಸೆಟೈಲ್ ಡಿಸ್ಕ್‌ಗಳು  ಅರ್ಥಾತ್ ಡಿವಿಡಿಗಳು ದೃಶ್ಯಮಾಧ್ಯಮದ ಹೊಸ ಸಾಧನವಾಗಿವೆ.  ಕಂಪ್ಯೂಟರ್ ಆಧಾರಿತ ಸಂಗೀತ ಕೇಳುವ, ಸಿನೆಮಾ ನೋಡುವ ಹವ್ಯಾಸವು ರಾಜಧಾನಿಯಿಂದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳನ್ನು ತಲುಪಿದೆ.

ಬಳಕೆ – ಬದುಕು

ನಮ್ಮ ಮಾಧ್ಯಮಗಳು ಕಂಡುಕೊಂಡ ಇನ್ನೊಂದು ಬಹುಮುಖ್ಯ ಆಯಾಮ ಎಂದರೆ ಬಳಕೆದಾರರಿಗೆ ಬೇಕಾದ ಮಾಹಿತಿಯನ್ನು ನೀಡುವುದು. ದಿನಪತ್ರಿಕೆಯ ಪುರವಣಿಗಳಲ್ಲಿ, ರೇಡಿಯೋ ನಿರೂಪಣೆಯಲ್ಲಿ,  ಮಧ್ಯಾಹ್ನದ ಟೆಲಿವಿಜನ್ ಕಾರ್ಯಕ್ರಮಗಳಲ್ಲಿ  ಬಳಕೆದಾರರೇ ಪ್ರಭುಗಳಾಗಿದ&
amp;
#3277;ದಾರೆ. ಸದಾ ಅವರಿಗೆ ಬೇಕಾದ ಮಾಹಿತಿಯೇ ಸಿಗುತ್ತಿರುತ್ತದೆ. ಇಲ್ಲೂ ಪುನರಾವರ್ತನೆಯ ಅಪಾಯವನ್ನು ಕಾಣಬಹುದು. ಆದರೆ ಈ ಬಗೆಯ ಬಳಕೆ ಅಂದರೆ ಯುಟಿಲಿಟಿ ಲೇಖನಗಳಿಗೆ ಓದುಗರ ಕೊರತೆ ಇಲ್ಲ. ಇಂಥ ಬೆಳವಣಿಗೆಯಿಂದ ಸಾಮಾಜಿಕವಾಗಿ ಅಗತ್ಯವಾದ, ಸಮಾಜದ ವಿವಿಧ ರಂಗಗಳಲ್ಲಿ ನಡೆಯುವ ವಿದ್ಯಮಾನಗಳ ಕುರಿತ ವರದಿಗಾರಿಕೆಗೆ ಪೆಟ್ಟು ಬಿದ್ದಿರುವುದೂ ನಿಜ.

ಬಳಕೆದಾರರ ಜೊತೆಗೇ ಸಂಬಂಧ ಹೊಂದಿ ಕಂಡುಬಂದಿರುವ ಇನ್ನೊಂದು ಬೆಳವಣಿಗೆ ಎಂದರೆ ವಿಷಯಗಳ ವಾಣಿಜ್ಯೀಕರಣ. ಸುದ್ದಿ, ಕಾರ್ಯಕ್ರಮ ಯಾವುದೇ ಇರಲಿ, ಅದಕ್ಕೆ ಜಾಹೀರಾತು ಸಿಗುವ ಸಾಧ್ಯತೆ ಹೆಚ್ಚಿದ್ದರೆ ಅದರ ಪ್ರಕಟಣೆಯ ಸಾಧ್ಯತೆಯೂ ಹೆಚ್ಚು. ಹೀಗಾಗಿ ನಿಜವಾದ ಸುದ್ದಿಗಳ ನಡುವೆಯೇ ಜಾಹೀರಾತಿಗೆ ಸಂಬಂಧಿಸಿದ ಸುದ್ದಿಗಳು ಬೆರಕೆಯಾಗಿ ಓದುಗ ಕಕ್ಕಾಬಿಕ್ಕಿಯಾಗಿರುವುದಂತೂ ಹೌದು. ಈ ಜಾಹೀರಾತುಗಳ ಬಗ್ಗೆ ಯಾವುದೇ ನೈತಿಕ ನಿಗಾ ಇಲ್ಲ. ಕೊಳ್ಳುಬಾಕ ಸಂಸ್ಕೃತಿಯ ಓದುಗರೇ ಇದಕ್ಕೆ ಕಾರಣ ಎನ್ನಬಹುದೆ? ನನಗಂತೂ ಹಾಗೇ ಕಾಣಿಸುತ್ತದೆ. ಜನರ ಅಭಿರುಚಿಗಳಿಗೆ ತಕ್ಕಂತೆ ಮಾಧ್ಯಮಗಳು ಇರಬೇಕೆ ಅಥವಾ ಮಾಧ್ಯಮಗಳೇ ಸಮಾಜಕ್ಕೆ ಹಿತವಾಗುವ ಅಭಿರುಚಿಗಳನ್ನು ಬೆಳೆಸಲು ಮುಂದಾಗಬೇಕೆ ಎಂಬ ಚರ್ಚೆ ಈಗಲೂ ಪ್ರಸ್ತುತ.

ಇಂಟರ್‌ನೆಟ್ : ಇನ್ನೂ ಇದೆ !

ವಿಶ್ವದ ಯಾವುದೋ ಮೂಲೆಯಲ್ಲಿರುವ ಒಂದು ಕಂಪ್ಯೂಟರಿನಿಂದ  ಇನ್ನೊಂದು ಮೂಲೆಯಲ್ಲಿರುವ ನೀವು ಮಾಹಿತಿ, ಚಿತ್ರ, ಸಂಗೀತ, ಸಿನೆಮಾ, ದಾಖಲೆ, ಪುಸ್ತಕ ಹೀಗೆ ವಿವಿಧ ಮಾಧ್ಯಮಗಳ ಉತ್ಪನ್ನಗಳನ್ನು ಪಡೆಯಲು ಈ ವಿಶ್ವವ್ಯಾಪಿ ಕಂಪ್ಯೂಟರ್ ಜಾಲ ಅನುಕೂಲ ಮಾಡಿಕೊಟ್ಟಿದೆ. ಭಾರತದ ಜಿಲ್ಲಾ ಕೇಂದ್ರಗಳಲ್ಲಿ ಈಗಷ್ಟೇ ಕಾಲೂರಿರುವ ಇಂಟರ್‌ನೆಟ್‌ನ ಸಾಧ್ಯತೆಗಳು ಹಲವು.  ಇಂಟರ್‌ನೆಟ್‌ನ್ನು ಮಾಧ್ಯಮದ  ಪರಿಭಾಷೆಯಲ್ಲಿ ನವಮಾಧ್ಯಮ ಅಥವಾ ನ್ಯೂ ಮೀಡಿಯಾ ಎಂದು ಕರೆಯುತ್ತಾರೆ.

ಇಂಟರ್‌ನೆಟ್ ತಂತ್ರeನವಲ್ಲ ; ಅದು ನಮ್ಮ ಈ ಶತಮಾನದ ಸುವರ್ಣ ಮಾಧ್ಯಮ ಎಂದೂ ಹೇಳಬಹುದು. ಇಂಟರ್‌ನೆಟ್ ಬಳಕೆಗೆ ಗ್ರಾಹಕರ ಖರೀದಿ ಸಾಮರ್ಥ್ಯ  ಕೊಂಚ ಹೆಚ್ಚಾ&amp
;#32
23;ಿರಬೇಕು ಎಂಬುದು ವಾಸ್ತವ. ಆದರೆ ಜಾಗತಿಕ ಬೆಳವಣಿಗೆಗಳನ್ನು ದಾಖಲೆಸಮೇತ ನಿಮ್ಮ ಕಂಪ್ಯೂಟರಿಗೆ ತಂದಿಡುವ ಇನ್ನೊಂದು ಮಾಧ್ಯಮ ಸದ್ಯಕ್ಕಂತೂ ಇಲ್ಲ.ಜಗತ್ತಿನ ಯಾವುದೇ ಗಣ್ಯರಿಗೆ ನೇರವಾಗಿ  ಪತ್ರ ಬರೆದು ಉತ್ತರ ಪಡೆಯುವ ಸಾಧ್ಯತೆ ಇರೋದು ಈ ಮಾಧ್ಯಮಕ್ಕೆ ಮಾತ್ರ.

ಇಂಟರ್‌ನೆಟ್‌ನಲ್ಲಿ  ಸಾಮಾನ್ಯವಾಗಿ ಕಾಣೋದು ನಿರ್ದಿಷ್ಟ ವಿಷಯವೊಂದರ ಮೇಲಿ ಜಾಲತಾಣಗಳು, ಅರ್ಥಾತ್ ವೆಬ್‌ಸೈಟುಗಳು. ಈಗ ಇಂಟರ್‌ನೆಟ್ ಬಳಕೆದಾರರೇ ತಮ್ಮ ಅಭಿಪ್ರಾಯಗಳನ್ನು ಜಗತ್ತಿಗೆ ಸಾರಲು ಖಾಸಗಿ ವೆಬ್‌ಸೈಟ್‌ಗಳನ್ನು ಹೊಂದಿದ್ದಾರೆ. ಓದುಗರೇ ಪ್ರಭುಗಳು ಎಂಬುದು ಈ ವ್ಯಕ್ತಿಗಳ ಅಭಿವ್ಯಕ್ತಿಯಿಂದ ಸಾಬೀತಾಗಿದೆ. ವಿದೇಶಗಳಲ್ಲಿ ಇಂಥ ಖಾಸಗಿ ಅಭಿಪ್ರಾಯಗಳೇ ಕೊನೆಗೆ  ಸಮಾಜದ ಅಭಿಪ್ರಾಯವೂ  ಆಗಿರುವ ಸಂದರ್ಭಗಳೇ ಹೆಚ್ಚಾಗಿವೆ. ದಿನಪತ್ರಿಕೆಗಳು ಮೂಡಿಸದ ಜನಾಭಿಪ್ರಾಯ ಇಲ್ಲಿ ಸ್ಫೋಟವಾಗುತ್ತದೆ. ಬ್ಲಾಗಿಂಗ್ ಎಂದು ಕರೆಯುವ ಇಂಥ ವೆಬ್‌ಸೈಟ್‌ಗಳು ದಿನಪತ್ರಿಕೆಗಳಿಗಿಂತ, ರೇಡಿಯೋ, ಟೆಲಿವಿಜನ್‌ಗಳಿಗಿಂತ ಪ್ರಭಾವಿಯಾಗಿವೆ.  ನ್ಯೂ ಮೀಡಿಯಾ ಆಗಿರೋ ಇಂಟರ್‌ನೆಟ್‌ನಲ್ಲಿ ಈ ಬಗೆಯ ಭಾಗೇದಾರಿ ಪತ್ರಿಕೋದ್ಯಮ ಹುಲುಸಾಗಿ ಬೆಳೆದಿದೆ. ಈ ಆಂದೋಳನವನ್ನು ವಿ ಮೀಡಿಯಾ ಅಂದರೆ ನಾವೇ ಮಾಧ್ಯಮ ಎಂದೂ ಕರೆಯುತ್ತಾರೆ. ಬಹುಶಃ ಮಾಧ್ಯಮದ ಅತಿ ಪ್ರಭಾವಿ ಆಯಾಮಗಳಲ್ಲಿ  ಬ್ಲಾಗಿಂಗ್ ಒಂದಾಗಿದೆ. (ಬ್ಲಾಗಿಂಗ್ ಬಗ್ಗೆ ಈ ಹಿಂದೆ ಬರೆದಿದ್ದ ಅಂಕಣವು ಅದರ ಅಪಾಯಗಳನ್ನು ತಿಳಿಸಿತ್ತು ಎಂಬುದು ನೆನಪಿದೆ ತಾನೆ?)

ಇದಲ್ಲದೆ ಇಂಟರ್‌ನೆಟ್ ಬಳಕೆದಾರರು ವೆಬ್‌ಸೈಟ್‌ಗಳನ್ನೂಮೀರಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವ ಹಾದಿ ಹಿಡಿದಿದ್ದಾರೆ. ಇಲ್ಲಿ ಇವರು ತಮ್ಮ ಕಂಪ್ಯೂಟರಿನಲ್ಲಿ ಇರೋ ಮಾಹಿತಿಯನ್ನು, ಅದು ಚಿತ್ರ, ಸಿನೆಮಾ, ಸಂಗೀತ, ಸಾಫ್ಟ್‌ವೇರ್, ಪುಸ್ತಕ ಯಾವುದೇ ಆಗಿರಬಹುದು, ಇನ್ನೊಂದು ಕಂಪ್ಯೂಟರಿನ ಬಳಕೆದಾರ ಪಡೆಯೋದಕ್ಕೆ ಅನುಮತಿ ನೀಡುತ್ತಾರೆ. ಇದನ್ನು ಪೀರ್ ಟು ಪೀರ್ (ಪಿ೨ಪಿ) ನೆಟ್‌ವರ್ಕಿಂಗ್ ಎಂದು ಕರೆಯುತ್ತಾರೆ. ಒಂ&a
mp;#
3238;ು ರೀತಿಯಲ್ಲಿ ಇದು ವಿಶ್ವವ್ಯಾಪಿ ಕಂಪ್ಯೂಟರ್ – ಇಂಟರ್‌ನೆಟ್ ಬಳಕೆದಾರರು ರೂಪಿಸಿಕೊಂಡ ಮಾಹಿತಿ ಹಂಚಿಕೆಯ ಹೊಸ ಆಯಾಮದ ಮಾಧ್ಯಮ. ಇಂಟರ್‌ನೆಟ್ ಹೇಗೆ ಖಾಸಗಿ ಸಂಗತಿಯಾಗುತ್ತದೆ, ಜಗತ್ತಿನ ನಾಗರಿಕರನ್ನು ಒಗ್ಗೂಡಿಸುತ್ತದೆ ಎನ್ನುವುದಕ್ಕೆ ಇದೊಂದು ಮುನ್ಸೂಚನೆ.

ಬದಲಾವಣೆಯ ಗಾಳಿಗೆ ನಾವು ತೆರೆದುಕೊಳ್ಳುತ್ತಿದ್ದೇವೆ ಅಲ್ಲವೆ?

 

Share.
Leave A Reply Cancel Reply
Exit mobile version