ನಮ್ಮ ಜೀವನೋತ್ಸಾಹ ಎಲ್ಲಿದೆ ಎಂದು ಹುಡುಕೋಣ !
ಶಿರಸಿ ತಾಲೂಕಿನ ಬರೂರು ಬಳಿಯ ಹಳ್ಳಿ ಅರಸೀಕೇರಿಯ ನಾರಾಯಣ ಹೆಗಡೆ ಗುಂಜಿಯವರು ನಮ್ಮ ನಡುವಿನ ಸರಳ ಮನುಷ್ಯರು. ಎಷ್ಟು ಸರಳ ಎಂದರೆ ಅವರು ೮೩ರ ಈ ಹರೆಯದಲ್ಲೂ ಬೈಕ್ ಓಡಿಸುತ್ತಾರೆ!
ಅವರು ಎಷ್ಟು ನಿಧಾನವಾಗಿ ಬೈಕ್ ಓಡಿಸುತ್ತಾರೆ ಎಂದರೆ ಅವರ ಸೊಸೆಯ ತಮ್ಮ ಊರಿಗೆ ಬಂದು ಪಿಲಿಯನ್ ರೈಡರ್ ಆಗಿ ಕೂತಾಗ ನಾರಾಯಣ ಹೆಗಡೆಯವರ ಬೈಕ್ ರೈಡಿಂಗ್‌ನ ವೇಗವನ್ನು ಅನುಭವಿಸಿ ಅರ್ಧ ದಾರಿಯಲ್ಲೇ ಇಳಿದುಬಿಟ್ಟಿದ್ದರು!
ಅವರಿಗೆ ಈಗ ಕಿವಿ ಕೇಳಿಸುವುದಿಲ್ಲ. ದಶಕಗಳ ಹಿಂದೆ ಖರೀದಿಸಿದ ಹಿಯರಿಂಗ್ ಮೆಶಿನ್ ಈಗಲೂ ಸಾಕಷ್ಟು ಸೇವೆ ನೀಡುತ್ತಿದೆ. ಹಾಗಂತ ಅವರ ಮಾತಿಗೇನೂ ಕಡಿಮೆಯಿಲ್ಲ. ಎಂಟು ದಶಕಗಳ ಬದುಕಿನ ಎಲ್ಲ ಘಟ್ಟಗಳೂ ಅವರಿಗೆ ಚೆನ್ನಾಗಿ ನೆನಪಿವೆ. ಹಾಗಂತ ಅವರು ಬದುಕಿನಲ್ಲಿ ಬೈಕ್ ಸವಾರಿ ಮಾಡುವಾಗ ಎಂದೂ ಆಕ್ಸಿಡೆಂಟ್ ಮಾಡಿಲ್ಲ.
ಅರಸೀಕೇರಿಯ ಅವರ ಮನೆಗೆ ಹೋದರೆ ನೀವು ಅವರೊಬ್ಬ ಮನೆಗೆ ಹೊರೆಯಾಗಿರಬಹುದಾದ ವ್ಯಕ್ತಿಯೇ ಎಂದು ಭಾವಿಸಿದರೆ ತಪ್ಪಿಲ್ಲ. ಸಾಮಾನ್ಯ ಉಡುಗೆಯಲ್ಲಿ ನಿಟ್ಟೂರು ಶ್ರೀನಿವಾಸರಾಯರನ್ನು ಕಂಡ ಹಾಗಾಗುತ್ತದೆ ಎನ್ನಲೂಬಹುದು.
ಬದುಕಿನಲ್ಲೂ ನಾರಾಯಣಹೆಗಡೆಯವರು ಆಕ್ಸಿಡೆಂಟ್ ಮಾಡಿಲ್ಲ. ಮೊದಲಿನಿಂದಲೂ ಶ್ರಮಜೀವಿಯಾಗಿ ಬೆಳೆದ ಅವರು ಮೂರು ಗಂಡು ಮಕ್ಕಳನ್ನು ತಮ್ಮ ಗರಡಿಯಲ್ಲೇ ಬೆಳೆಸಿದರು. ಅವರಿಗಾಗಿ ಅರಸೀಕೇರಿಯಲ್ಲದೆ ಉಂಚಳ್ಳಿ ಮತ್ತು ಮೋತಿಗುಡ್ಡದಲ್ಲಿ ಜಮೀನು ಮಾಡಿದ್ದಾರೆ; ಮನೆ ಕಟ್ಟಿಸಿದ್ದಾರೆ.
ಹಾಗಂತೆ ಮಕ್ಕಳು ಪ್ರತ್ಯೇಕವಾಗಿ ಇದ್ದಾರೆ ಎಂದು ನೀವು ತರ್ಕಿಸಿದರೆ ಅಲ್ಲೇ ಇರೋದು ನೋಡಿ…. ಮೂವರೂ ಮಕ್ಕಳು ತಂತಮ್ಮ ಮನೆಯಲ್ಲದೆ ಉಳಿದೆಡೆ ಇರುವ ಜಮೀನು ಕೃಷಿಗೆ ಆಗಾಗ ವಲಸೆ ಹೋಗುತ್ತಾರೆ. ಮಾಬ್ಲೇಶ್ವರ ಹೆಗಡೆಯವರು ಗದ್ದೆ ಕೃಷಿಯಲ್ಲಿ ನುರಿತವರು. ರಾಘವ ಹೆಗಡೆಯವರು ಅಡಕೆ ತೋಟದಲ್ಲಿ ಪಳಗಿದ್ದಾರೆ. ಕಿರಿಯವರಾದ ನರಸಿಂಹ ಹೆಗಡೆಯವರಿಗೆ ಸರಿಸುಮಾರು ಎಲ್ಲಾ ಕೃಷಿ ಕೆಲಸಗಳೂ ಕರಗತ. ಹೀಗಾಗಿ ಒಬ್&am
p;#324
4;ರ ನೈಪುಣ್ಯವನ್ನು ಇನ್ನೊಬ್ಬರಿಗಾಗಿ ಹಂಚಿಕೊಳ್ಳುವ ಕಾರ್ಯಪದ್ಧತಿ ಈ ಮನೆಯಲ್ಲಿದೆ.
ನಾವು ನಾರಾಯಣಹೆಗಡೆಯವರ ಜೊತೆ ಉಪಾಹಾರ ಮಾಡುತ್ತಿದ್ದಾಗ ಅವರ ಬಗ್ಗೆ ಇನ್ನಷ್ಟು ಕಥೆಗಳು ಗೊತ್ತಾದವು. ಅವರು ಊರಿನಲ್ಲಿ ಅತ್ಯಂತ ಜನಪ್ರಿಯ ಹಾಸ್ಯ ಪಾತ್ರಧಾರಿ. ಕೊಳಗೀಬೀಸ್ ನಾಟಕಗಳಲ್ಲಿ ಅವರ ಹಾಸ್ಯಪಾತ್ರಗಳು ಪ್ರಸಿದ್ಧ. ಟುವೀಲರ್ ಜೊತೆಗೆ ಫೋರ್‌ವೀಲರ್ ಚಾಲನೆಯನ್ನೂ ಅವರು ನೋಡಿಯೇ ಕಲಿತಿದ್ದಾರೆ. ಇಂದಿಗೂ ಮನೆಯ ಬಹುತೇಕ ಕೃಷಿ ಕೆಲಸಗಳಲ್ಲಿ ನಿರತರಾಗುವ ನಾರಾಯಣ ಹೆಗಡೆಯವರು ಮನೆಗಾಗಿ ಒಂದು ರೂಪಾಯಿ ಸಾಲವನ್ನೂ ಮಾಡಿಲ್ಲ. ಬದಲಿಗೆ ಉಳಿತಾಯದ ಪಾಠವನ್ನು ಕಲಿಸಿಕೊಟ್ಟಿದ್ದಾರೆ. ಅತಿಥಿಗಳು ಬರಲೇಬೇಕು; ಆತಿಥ್ಯ ಸ್ವೀಕರಿಸಲೇಬೇಕು; ಮನೆಯಲ್ಲಿ ಸದಾವೈವಿಧ್ಯಮಯ ಆಹಾರ ತಯಾರಾಗಬೇಕು, ಎಲ್ಲರೂ ಬೆಳಗ್ಗೆಯಿಂದ ಹಿಡಿದು ರಾತ್ರಿವರೆಗೆ ಹೊತ್ತುಹೊತ್ತಿಗೆ ತಾಜಾ ಊಟೋಪಚಾರ ಸ್ವೀಕರಿಸಲೇಬೇಕು.. – ಹೀಗೆ ಜೀವನಪ್ರಿಯರೂ ಹೌದು.
ನಾರಾಯಣ ಹೆಗಡೆಯವರ ಹಾಗೆ ಉತ್ತರ ಕನ್ನಡದಲ್ಲಿ ಎಷ್ಟೋ ಜೀವಗಳು ತಮ್ಮ ಪಾಡಿಗೆ ಎಂಬಂತೆ ಎಲ್ಲೋ ಮೂಲೆ ಮೂಲೆಯ ಮನೆಗಳಲ್ಲಿ ಬದುಕಿನ ಕ್ಷಣಗಳನ್ನು ರಚನಾತ್ಮಕವಾಗಿ ಬಳಸಿಕೊಂಡಿವೆ. ಆದರೆ ನಮ್ಮ ಮಾಧ್ಯಮಗಳಲ್ಲಿ, ಅದರಲ್ಲೂ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಇಂಥದ್ದೆಲ್ಲ ಒಂದು ಗ್ರಾಮೀಣ ಸುದ್ದಿಯಾಗುತ್ತದೆ, ಅಷ್ಟೆ.
ನಾರಾಯಣ ಹೆಗಡೆಯವರ ಅಪಘಾತರಹಿತ, ಸುರಕ್ಷಿತ ಬದುಕು, ಜೀವನಪ್ರೀತಿ ಎಲ್ಲೆಲ್ಲೂ ಹಬ್ಬಲಿ; ಅವರ ಕಾರ್ಯಸಂಸ್ಕೃತಿ ನಮಗೂ ಬರಲಿ ಎಂದಷ್ಟೆ ನಿರೀಕ್ಷಿಸಬಹುದು.
ಒಮ್ಮೆ ಒಬ್ಬ ಬ್ಯಾಂಕರ್ ಬಂದು `ಹೆಗಡೆಯವರೆ, ನಮ್ಮಲ್ಲಿ ಡಿಪಾಸಿಟ್ ಇಡಿ' ಎಂದರಂತೆ. `ಆಗ್ಲಿ ಮಾರಾಯ, ನಿಂಗೆ ಎಷ್ಟು ಬೇಕಾದ್ರೂ ಡಿಪಾಸಿಟ್ ಕೊಡ್ತಿ, ಬಡ್ಡಿ ಗಿಡ್ಡಿ ಎಂತುದೂ ಬ್ಯಾಡ. ಎಂಗೆ ಇನ್ನು ಹತ್ತು ವರ್ಷ ಆಯುಸ್ಸು ಕೊಡ್ಸು ಅಷ್ಟೆ' ಎಂದಿದ್ದರಂತೆ ನಮ್ಮ ನಾರಾಯಣ ಹೆಗಡೆಯವರು!
ಯಾಕಂದರೆ ಅವರಿಗೆ ಇನ್ನೂ ಎರಡು ಕನಸುಗಳಿವೆ: ಒಂದು – ಮನೆಗೆ ಒಂದು ಫೋರ್‌ವೀಲರ್ ತಂದು ಓಡಿಸುವುದು. ಎರಡು – &
#320
5;ದೇನೋ ಕಲ್ಕತ್ತಾದಲ್ಲಿ ತುಂಬಾ ಜನ ಇದ್ವಡ, ಆ ಊರು ಹ್ಯಾಂಗಿದ್ದು ಅಂತ ನೋಡದು!
ಅಂದಮೇಲೆ ನಮ್ಮ ಜೀವನೋತ್ಸಾಹ ಎಲ್ಲಿದೆ ಎಂದು ಹುಡುಕುವುದು ವಾಸಿ!
ಈ ಅಜ್ಜನಿಗೆ ಶುಭಾಶಯ ಹೇಳಬೇಕೆಂದಿದ್ದರೆ ಕರೆ ಮಾಡಿ: ೦೮೩೮೪ – ೨೪೭೨೧೫