ನನ್ನ ಕನಸಿನ ಗೆಳೆಯ

ನನ್ನ ಕನಸಿನ ಗೆಳೆಯ
ಇಲ್ಲೆ ಇದ್ದಾನೆ
ಇಲ್ಲೆಲ್ಲೊ ಇದ್ದಾನೆ
– ಅನ್ನಿಸುತ್ತಿರುವಂತೆಯೇ
ಅನಿಸಿಕೆಯ ಅವಾಸ್ತವಿಕತೆಗೆ,
ಭ್ರಮೆಗೆ, ಅಳುಕುತ್ತ
ವಿಷಾದಿಸಿದ್ದೇನೆ ;
ಗೆಳೆಯ ಬರಲಿಲ್ಲ….

ನನಗಾಗಿ ಚುಕ್ಕಿ ಚಂದ್ರರ ಹಾರಪದಕವ ತೊಡಿಸಿ,
ರಾಗಗಳ ಉಡಿಸಿ, ಬದುಕಿ ಬರಬಲ್ಲ
ಒಂಟಿದನಿಗೊಂದಾಗಿ
ನನ್ನೆಲ್ಲ ನಗ್ನ ಬದುಕನ್ನು, ತನ್ನ
ಬಯಲ ಬದುಕಿನ ಬೋಳು ಮರದಡಿಯಲ್ಲಿ ಅಪ್ಪಿ
ಘಟನೆಗಳ ಹೊಸೆದು
ಹೊಸಬದುಕ  ತರಬಲ್ಲ
ಗೆಳೆಯ,
ಬರಲಿಲ್ಲ……………

Share.
Leave A Reply Cancel Reply
Exit mobile version