This was the speech given to AIR (Akashavani), sometime back.
ಸಾಪ್ತಾಹಿಕ ಪುರವಣಿಗಳು ಮತ್ತು ಸಾಹಿತ್ಯದ ಕೆಲಸ
ಸಾಪ್ತಾಹಿಕ ಪುರವಣಿಗಳು ಅಂದಕೂಡ್ಲೇ ನಮಗೆ ಸಾಮಾನ್ಯವಾಗಿ ನೆನಪಾಗೋದು ಒಂದು ಒಳ್ಳೆ ಮುಖಪುಟ ಲೇಖನ, ಒಂದು ದೊಡ್ಡ ಕಥೆ ಜೊತೆಗೆ ಒಂದು ಕವನ. ಇದೊಂಥರ ಸಿದ್ಧ ಮಾದರಿ ಅನ್ನೋ ಭಾವನೆ ಬರೋದಕ್ಕೇ ಸಾಧ್ಯವಿಲ್ಲದ ಹಾಗೆ ಈ ಸಾಪ್ತಾಹಿಕ ಪುರವಣಿಗಳನ್ನು ನಾವು ನೋಡ್ತಾ ಇದೇವೆ.
ಈ ಸಾಪ್ತಾಹಿಕ ಪುರವಣಿಗಳ ಅತ್ಯಂತ ಗಂಭೀರ ವಿಷಯ ಎಂದರೆ ಸಾಹಿತ್ಯಪುಟಗಳು. ಬಹುಶಃ ಅವುಗಳನ್ನು ಓದುವ ವರ್ಗ ಎಂದರೆ ಸಾಪ್ತಾಹಿಕ ಪುರವಣಿಯಂಥ ಗಂಭೀರ ಓದುಗ ವರ್ಗದ ಉತ್ಪನ್ನಕ್ಕೆ ಇರುವ ಇನ್ನಷ್ಟು ಗಂಭೀರ ಗ್ರಾಹಕರು ಎಂದೇ ಅರ್ಥ. ಇಲ್ಲಿ ಸಾಮಾನ್ಯವಾಗಿ ಸಾಹಿತ್ಯ ಚರ್ಚೆಯೋ, ಸಂವಾದವೋ, ಸಾಹಿತ್ಯ ಸಂದರ್ಭದ ಲೇಖನವೋ ಇರುತ್ತೆ. ಜೊತೆಗೆ ಪುಸ್ತಕ ವಿಮರ್ಶೆ. ಆ ವಾರ ಬಂದ ಹೊಸ ಪುಸ್ತಕಗಳ ಪಟ್ಟಿ. ಹಾಗಾದರೆ ಈ ಸಾಮಗ್ರಿಗಳಿಂದ ಸಾಹಿತ್ಯಕ್ಕೆ ನಿಜಕ್ಕೂ ಪ್ರಯೋಜನ ಆಗುತ್ತಿದೆಯೆ?
ಪ್ರಯೋಜನ ಇರಬಹುದು ಎನ್ನಬಹುದು. ಆದರೆ ಖಂಡಿತ ಪ್ರಯೋಜನ ಇದೆ ಎಂದು ಖಚಿತವಾಗಿ ಹೇಳಲಾಗದ ಸ್ಥಿತಿ ಈಗಿದೆ. ಇದಕ್ಕೆ ಕಾರಣ ಇಷ್ಟೆ: ಮೊದಲೇ ಹೇಳಿದ ಹಾಗೆ ಈಗ ಸಾಹಿತ್ಯ ತುಂಬಾ ಅಕ್ಷರ ಸಿರಿವಂತರ ಪಾಲಾಗಿದೆ. ಸಾಮಾನ್ಯ ಅಕ್ಷರಸ್ಥರು ಈಗ ಸಾಹಿತ್ಯವನ್ನು ಅರಗಿಸಿಕೊಳ್ಳುವಷ್ಟು ಸಾಮರ್ಥ್ಯವನ್ನೂ ಹೊಂದಿಲ್ಲ. ಅವರಿಗೆ ಇಂಥ ಗಂಭೀರ ವಿಷಯಗಳಲ್ಲಿ ಆಸಕ್ತಿಯೂ ಇಲ್ಲ.
ಆದರೆ ಸಾಪ್ತಾಹಿಕಗಳಲ್ಲಿ ಬರುವ ಕಥೆ, ಕವನಗಳು ಮಾತ್ರ, ಆಯಾ ಪತ್ರಿಕೆಯಲ್ಲಿ ಇರುವ ಸಂಪಾದಕೀಯ ವರ್ಗವನ್ನು ಹೊಂದಿಕೊಂಡು ಸಾಹಿತ್ಯದ ವರ್ತಮಾನದ ಬೆಳವಣಿಗೆಗೆ ಅತ್ಯಂತ ಸಹಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ತಿಂಗಳಿಗೆ ಇಬ್ಬರಂತೆ ವರ್ಷಕ್ಕೆ ಕನಿಷ್ಠ ೨೪ ಹೊಸ ಪ್ರತಿಭೆಗಳನ್ನು ಗುರುತಿಸಲು ಅವಕಾಶವಿದೆ. ಇಲ್ಲಿಂದಲೇ ಮೂಡಿಬಂದ ಹಲವು ಕವಿಗಳನ್ನು ನೋಡಿದಾಗ, ಕಥೆಗಾರರನ್ನು ಕಂಡಾಗ ನನಗೆ ಈ ಒಂದೇ ಪುಟವೇ ಕನ್ನಡ ಸಾಹಿತ್ಯದ ಮಟ್ಟಿಗೆ ಚಲನಶೀಲ ಪುಟದ ಹಾಗೆ ಕಾಣುತ್ತದೆ. ಕನ್ನಡದಲ್ಲಿ ಈಗ ಆರೇಳು ಪ್ರ
&#
3246;ುಖ ದಿನಪತ್ರಿಕೆಗಳಿವೆ. ಅವೆಲ್ಲವೂ ವಾರಕ್ಕೆ ಒಂದು ಕಥೆ, ಒಂದು ಕವನ ಪ್ರಕಟಿಸಲೇಬೇಕಾದ ಚೌಕಟ್ಟನ್ನು ಹಾಕಿಕೊಂಡಿವೆ. ಇವತ್ತಿನ ಜನಸಂಖ್ಯೆಗೆ ಹೋಲಿಸಿದರೆ ಇದೇನೂ ಮಹಾ ಅಲ್ಲ ಅನ್ನಿಸಬಹುದು. ನಾಲ್ಕು ಕೋಟಿ ಜನಕ್ಕೆ ವಾರದಲ್ಲಿ ಏಳು ಕಥೆ ಸಿಗುವುದಿಲ್ಲವೆ ಎಂದು ಪ್ರಶ್ನಿಸಬಹುದು. ಆದರೆ ಸಿಗುವುದಿಲ್ಲ ಎಂಬುದೇ ನಿಜ. ಅದಕ್ಕೇ ಕೆಲವು ದಿನಪತ್ರಿಕೆಗಳು ವಾರ್ಷಿಕ ಕಥಾಸ್ಪರ್ಧೆಯನ್ನು ಏರ್ಪಡಿಸಿ ವರ್ಷದ ಅರ್ಧ ಭಾಗದಲ್ಲಿ ಒಳ್ಳೆಯ ಕಥೆಗಳನ್ನು ಸಂಚಯಿಸಿಕೊಳ್ಳಲು ಯೋಜನೆ ಹಾಕಿಕೊಂಡಿವೆ. ಬಹುಮಾನಗಳನ್ನು ಹೊರತುಪಡಿಸಿಯೂ ಬರುವ ಒಳ್ಳೆಯ ಕಥೆಗಳನ್ನು ಕ್ರಮೇಣ ಬಳಸಿಕೊಳ್ಳುವ ಪರಿಪಾಠ ಅನಿವಾರ್ಯವಾಗಿ ಸೃಷ್ಟಿಯಾಗಿದ್ದು. ಸಾಹಿತ್ಯದ ಬೆಳವಣಿಗೆಯಲ್ಲಿ ನಮ್ಮ ದಿನಪತ್ರಿಕೆಗಳು ಈ ಪ್ರಮಾಣದ ನಿಯತ್ತನ್ನು ಹೊಂದಿರುವುದನ್ನು ನಾವೆಲ್ಲರೂ ಸ್ವಾಗತಿಸಲೇಬೇಕು. ಯಾಕೆಂದರೆ ಗ್ರಾಹಕ ಪ್ರೇರಿತ ಮಾರುಕಟ್ಟೆಯೇ ಮಾಧ್ಯಮ ಸಂಸ್ಥೆಗಳನ್ನು ಅವುಗಳ ವಸ್ತುವಿಷಯಗಳನ್ನು ನಿಯಂತ್ರಿಸುತ್ತಿರುವ ಇಂದಿನ ದಿನಗಳಲ್ಲಿ ಇಂಥ ಪ್ರಯತ್ನ ವಿಶೇಷವೇ. ಕವನಗಳ ವಿಷಯದಲ್ಲಿ ಕನ್ನಡಿಗರು ಜಗತ್ತಿನ ಎಲ್ಲ ದೇಶಗಳಲ್ಲಿ ಇರುವಂತೆ ಸದಾ ಮುಂದೆ ಇರುವುದರಿಂದ ವಾರಕ್ಕೊಂದು ಕವನ ಸಿಗುವುದು ಅಂಥ ಕಷ್ಟವಾಗಿ ಪರಿಣಮಿಸಿಲ್ಲ!
ಇನ್ನು ಸಾಪ್ತಾಹಿಕಗಳಲ್ಲಿ ಬರುವ ಅಂಕಣಗಳು ಮತ್ತು ಇತರೆ ಸಾಹಿತ್ಯ ಲೇಖನಗಳೂ ಈ ಕಾಯಕದಲ್ಲಿ ನೆರವಾಗಿವೆ ಎನ್ನುವುದು ನಿಜ. ವಿಮರ್ಶೆಯ ಮಟ್ಟಿಗೆ ಅದು ತೀರಾ ನಿರ್ದಿಷ್ಟ ಓದುಗರನ್ನು ತಲುಪುವ ಹಾಗೆಯೇ ಇದೆ ಎನ್ನುವುದು ವಾಸ್ತವ. ವಿಮರ್ಶೆಯ ಪರಿಭಾಷೆ ಇನ್ನಷ್ಟು ತಿಳಿಯಾಗಿ ಅದು ಸಾಮಾನ್ಯ ಓದುಗರನ್ನು ತಲುಪುವುದು ಕಷ್ಟದ ಮಾತೇ ಸರಿ. ಯಾಕೆಂದರೆ ಈಗೀಗ ಬರುತ್ತಿರುವ ಪುಸ್ತಕಗಳೇ ಸಾಮಾನ್ಯ ಜನ ಓದುವ ಸಾಮಾನ್ಯತನವನ್ನು ಹೊಂದಿರುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಕನ್ನಡ ಸಾಹಿತ್ಯವೇ ಬೇರೆ, ಇಲ್ಲಿ ವಿಮರ್ಶೆಗೆ ಸಿಕ್ಕಿಹಾಕಿಕೊಂಡ ಪುಸ್ತಕಗಳೇ ಬೇರೆ. ಆದ್ದರಿಂದ ಈ ವಿಷಯದಲ್ಲಿ ಸಾಹಿ&
#323
6;್ಯದ ಬೆಳವಣಿಗೆ ಆಗುವುದಿಲ್ಲ ಎಂಬ ಶಂಕೆ ನನ್ನದು. ಇಲ್ಲಿ ಯಾವ ಸ್ವರ್ಣಸೇತುವೆಯನ್ನು ಕಟ್ಟಿಕೊಳ್ಳಬೇಕು ಎಂಬ ಬಗ್ಗೆ ಲೇಖಕರು ಮತ್ತು ವಿಮರ್ಶಕರು ಕೂತು ಮಾತಾಡಬೇಕಿದೆ.
ಇನ್ನು ಪ್ರಬಂಧಗಳ ವಿಷಯದಲ್ಲಿ ತುಂಬಾ ಬೇಜಾರಾಗುವ ಮಾತಿದೆ. ಕನ್ನಡದಲ್ಲಿ ಒಳ್ಳೆಯ ಕಾದಂಬರಿಗಳ ಪ್ರಮಾಣ ಕುಗ್ಗಿರುವ ಹಾಗೆಯೇ ಹಾಸ್ಯ, ಲಲಿತ, ಗಂಭೀರ ಪ್ರಬಂಧಗಳ ಪ್ರಮಾಣವೂ ತಗ್ಗಿದೆ. ಆದರೆ ಇಲ್ಲಿ ನಮ್ಮ ಹಲವು ಸಾಪ್ತಾಹಿಕ ಪುರವಣಿಗಳು ತಮ್ಮ ಚೌಕಟ್ಟಿನ ಅಂದಕ್ಕಾಗಿ ಹಾಕುವ ಪ್ರಬಂಧಗಳು ನಿಜಕ್ಕೂ ನಮ್ಮ ಹಿರಿಯರ ಪರಂಪರೆಯನ್ನು ಮುರಿಯುವ ಹಾಗೆಯೇ ಇದೆ ಎಂದು ನನಗೆ ಪ್ರಾಮಾಣಿಕವಾಗಿ ಅನ್ನಿಸುತ್ತಿದೆ.
ಸಾಪ್ತಾಹಿಕಗಳೇ ಸಾಹಿತಿಗಳ ಮೊದಲ ಮೆಟ್ಟಿಲೂ ಅಲ್ಲ. ಆಥವಾ ಕೊನೆಯ ಮೆಟ್ಟಿಲೂ ಅಲ್ಲ. ಆದರೆ ಪುಸ್ತಕರೂಪದಲ್ಲಿ ಬಂದ ಅನೇಕ ಕೃತಿಗಳು ಸಾಪ್ತಾಹಿಕಗಳಲ್ಲಿ ಬಂದವೇನಲ್ಲ. ಸಾಪ್ತಾಹಿಕಗಳು ಸಾಹಿತ್ಯದ ಬೆಳವಣಿಗೆಯನ್ನು ವರ್ತಮಾನದಲ್ಲೇ ಕಾಣಿಸಿಕೊಡಬಲ್ಲ ಮಾಧ್ಯಮಗಳಷ್ಟೆ. ಅವುಗಳನ್ನು ನಾಡಿಮಿಡಿತದ ಹಾಗೆಯೂ ಬಳಸಬಹುದು.
ಸಾಪ್ತಾಹಿಕಗಳಲ್ಲಿ ಅನೇಕ ಸಾಹಿತ್ಯ ಚರ್ಚೆಯಾಗುವುದನ್ನೂ ನಾವು ಕಂಡಿದ್ದೇವೆ. ಇದು ಒಳ್ಳೆಯ ಲಕ್ಷಣ ಎಂಬ ಭ್ರಮೆ ನಮ್ಮನ್ನು ಆವರಿಸುವ ಸಾಧ್ಯತೆ ಇದೆ. ಇದನ್ನು ಭ್ರಮೆ ಎನ್ನದೆ ವಿಯಿಲ್ಲ. ಯಾಕೆಂದರೆ ಈ ಚರ್ಚೆ ನಡೆಯುವುದು ಮತ್ತು ಇದನ್ನು ಗಮನಿಸುವುದು ಒಂದು ಸೀಮಿತ ವರ್ಗ. ಇಲ್ಲಿ ಹಲವು ಬಾರಿ ಖಾಸಗಿ ಸಂಬಂಧಗಳೇ ಮುಖ್ಯ ಹಿನ್ನೆಲೆಯಾಗಿ ಸಾಹಿತ್ಯದ ಬೆಳವಣಿಗೆ ಗೌಣವಾಗುತ್ತದೆ. ಅದಾಗದಂತೆ ನಡೆಯುವ ಚರ್ಚೆಗಳನ್ನು ನಾವು ಖಂಡಿತ ಸ್ವಾಗತಿಸಬಹುದು.
ನಮ್ಮ ರಾಜ್ಯದಲ್ಲಿ ಸ್ಥಳೀಯ ಪತ್ರಿಕೆಗಳು ಸಾಕಷ್ಟಿವೆ. ಅವುಗಳಲ್ಲಿಯೂ ಸಾಪ್ತಾಹಿಕಗಳಿವೆ. ಅಲ್ಲಿ ಗುಣಮಟ್ಟದ ವ್ಯಾಖ್ಯೆ ಬದಲಾಗುತ್ತದೆ. ಸ್ಥಳೀಯ ಯುವಪ್ರತಿಭೆ ಎಂಬುದೇ ದೊಡ್ಡ ಅರ್ಹತೆಯಾಗುತ್ತದೆ. ಅಲ್ಲದೆ ಪತ್ರಿಕೆಗಳಲ್ಲೂ ಸಾಹಿತ್ಯವನ್ನು ಅಳೆಯುವವರೇ ತಮ್ಮ ಮಾನದಂಡಗಳನ್ನು ತಗ್ಗಿಸಿಕೊಂಡಿರುತ್ತಾರೆ. ಇದು ತಪ್ಪೇ ಸರಿಯೇ ಎಂಬು&#
3238
;ನ್ನು ಸಾಹಿತಿಗಳೇ ನಿರ್ಧರಿಸಬೇಕು.
ಯಾಕೆಂದರೆ ಯಾರು ಬರೆದ ಸಾಹಿತ್ಯಕ್ಕೂ ಖಚಿತ, ನಿರಪೇಕ್ಷವಾದ ಮಾನದಂಡ ಇಲ್ಲ. ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಹಿರಿಯ ಸಂಗೀತಗಾರ ರಾಜೀವ ತಾರಾನಾಥರು ಹೇಳಿದ್ದರು: ಸಾಹಿತ್ಯಕ್ಕೆ ಪ್ರಮಾಣ ಇಲ್ಲ. ಸಂಗೀತಕ್ಕೆ ಇದೆ. ಈ ಮಾತನ್ನು ಸಾಪ್ತಾಹಿಕಗಳಿಗೂ ಅನ್ವಯಿಸಬಹುದು ಎಂದು ನನಗನ್ನಿಸುತ್ತದೆ. ಸಾಪ್ತಾಹಿಕಗಳಿಗೆ ಸಮಾನ ಪ್ರಮಾಣ ಎನ್ನುವುದು ಇಲ್ಲ. ಹಾಗೆ ಲೇಖಕರು ಪ್ರಮಾಣವನ್ನು ಹುಡುಕುವುದು ಸರಿಯೂ ಅಲ್ಲ. ಸಾಪ್ತಾಹಿಕಗಳು ವಾರದ ಒತ್ತಡದಲ್ಲಿ ಹುಟ್ಟುವ ಉತ್ಪನ್ನವಾದ್ದರಿಂದ ಅಲ್ಲಿ ಹೊರಗಿನವರಿಗೆ ಗೊತ್ತಾಗದ ಕಾರಣಗಳೂ ಕೆಲಸ ಮಾಡುತ್ತಿರಬಹುದು.
ನಮ್ಮ ಸಾಪ್ತಾಹಿಕಗಳು ಸಾಹಿತ್ಯದ ಕಾಯಕಕ್ಕೆ ನೀಡಿರುವ ಸಹಕಾರವನ್ನು ಹೇಗೆ ವಿಸ್ತರಿಸಬಹುದು ಎಂದೂ ನಾವು ಯೋಚಿಸಬೇಕಿದೆ.
ನಮ್ಮ ಸಾಪ್ತಾಹಿಕಗಳಲ್ಲಿ ಬರುವ ಎಲ್ಲ ಕಥೆ, ಕವನ, ಲೇಖನಗಳನ್ನೂ ಸಂಗ್ರಹಿಸಿ ಒಟ್ಟಾರೆಯಾಗಿ ಇಡೀ ರಾಜ್ಯಕ್ಕೆ ಅನ್ವಯಿಸುವ ಸ್ಪರ್ಧೆ ಮಾಡಿ ಬಹುಮಾನ ಕೊಟ್ಟರೆ ಅದೇ ನಿಜಕ್ಕೂ ಒಳ್ಳೆ ಸಾಹಿತ್ಯದ ಹುಡುಕಾಟ ಆಗುವುದಲ್ಲವೆ ಎಂದು ಗೆಳೆಯರೊಬ್ಬರು ಪ್ರಶ್ನಿಸಿದ್ದರು. ಈ ಸಲಹೆಯಲ್ಲಿ ಸಾಹಿತ್ಯದ ಬೆಳವಣಿಗೆಯನ್ನು ಕನ್ನಡ ಪತ್ರಿಕೆಗಳ ಮಟ್ಟಿಗೆ ಗುರುತಿಸುವ ಉಪಾಯ ಇದೆ. ಈ ಯೋಜನೆಯನ್ನು ಸಂಘಟಿಸಿದ್ದೇ ಆದರೆ ಕನ್ನಡ ಸಾಹಿತ್ಯದ ಸೃಷ್ಟಿಗೊಂದು ಹೊಣೆಗಾರಿಕೆ ಬರುತ್ತದೆ ಎನ್ನುವುದಂತೂ ನಿಜ.
ಮತ್ತೆ ನಾವು ನಮ್ಮ ಸಾಪ್ತಾಹಿಕಗಳ ಚೌಕಟ್ಟನ್ನೇ ನೋಡೋಣ. ಸಾಮಾನ್ಯವಾಗಿ ಅವೆಲ್ಲವೂ ರಾಜ್ಯಮಟ್ಟದವು. ರಾಜ್ಯ ಮಟ್ಟದ ಪತ್ರಿಕೆಯೊಂದು ಸ್ಥಳೀಯ ಮಟ್ಟದ ಸಾಪ್ತಾಹಿಕವನ್ನು ತಂದಿರುವ ನಿದರ್ಶನ ನಮಗಿನ್ನೂ ಸಿಕ್ಕಿಲ್ಲ. ಸಾಪ್ತಾಹಿಕವೇ ಒಂದು ಹಣಕಾಸಿನ ಹೊರೆಯಾಗಿರುವಾಗ ಇದು ಬೇರೆ ತಾಪತ್ರಯ ಎಂದು ಪತ್ರಿಕೆಗಳ ಯಜಮಾನರು ಹೇಳಿದರೆ ತಪ್ಪಿಲ್ಲ. ಆದರೆ ಪತ್ರಿಕೋದ್ಯಮವು ಸಾಮಾಜಿಕ ಮುಖ ಹೊಂದಿರುವ ಉದ್ದಿಮೆ ಎಂಬುದು ಸ್ಪಷ್ಟ. ಅಂದಮೇಲೆ ಸಾಹಿತ್ಯದ, ಅದರಲ್ಲೂ ಪ್ರಾದೇಶಿಕ ಪ್ರತಿ&
;#32
45;ೆಗಳ, ಸಂಗತಿಗಳ, ಪುಸ್ತಕಗಳ ಚರ್ಚೆಗೆ, ಯುವ ಸಾಹಿತಿಗಳ ಪ್ರೋತ್ಸಾಹಕ್ಕೆ ಇಂಥ ಯತ್ನ ಮಾಡಿದರೆ ತಪ್ಪಿಲ್ಲ ಎಂಬುದು ನನ್ನ ವಿನಮ್ರ ಚಿಂತನೆ. ಗ್ರಾಮೀಣ ಪ್ರದೇಶಗಳಲ್ಲಿನ ಸಾವಿರಾರು ಕನ್ನಡಪ್ರಿಯ ಕಾಲೇಜು ವಿದ್ಯಾರ್ಥಿಗಳು ಸಾಪ್ತಾಹಿಕವನ್ನು ಓದುವುದಂತೂ ನಿಜ.
ಸಾಪ್ತಾಹಿಕಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಆದರೆ ಅವೂ ಗುಣಮಟ್ಟ ನಿಯಂತ್ರಣಕ್ಕೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಕಥೆ, ಕವನಗಳ ಆಯ್ಕೆಯ ಹಂತದಲ್ಲೇ ಹತ್ತಿರದಲ್ಲೇ ಸಿಗುವ ಸಾಹಿತಿಗಳ ಪುಟ್ಟ ತಂಡವೊಂದನ್ನು ಇಟ್ಟುಕೊಳ್ಳಬಹುದು. ಆದಷ್ಟೂ ಈ ತಂಡದ ಜೊತೆಗೆ ಸಂಯೋಜಿತವಾಗಿ ಕೆಲಸ ಮಾಡಿದಲ್ಲಿ ಪ್ರಕಟಣೆಯ ಹಂತದಲ್ಲೇ ಗುಣಮಟ್ಟ ಸಾಸಬಹುದು. ಇದರರ್ಥ ಪತ್ರಿಕೆಗಳಲ್ಲಿ ಇರುವವರು ಆಯ್ಕೆ ಮಾಡಲು ಅಸಮರ್ಥರು ಎಂದಲ್ಲ. ಅವರು ದೈನಂದಿನ ಒತ್ತಡದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಈ ತಂಡದಿಂದ ಇನ್ನಷ್ಟು ನಿಖರವಾಗುತ್ತವೆ.
ಕೇವಲ ಸಾಪ್ತಾಹಿಕಗಳಿಗಷ್ಟೇ ನಮ್ಮ ಪತ್ರಿಕೆಗಳ ಸಾಹಿತ್ಯದ ಕೆಲಸ ನಿಂತುಹೋಗಿದೆ. ತಮ್ಮ ಪತ್ರಿಕೆಯಲ್ಲಿ ಅವಕಾಶ ಪಡೆದ ಲೇಖಕರ ಸಮ್ಮೇಳನಗಳನ್ನು ಮಾಡಬಹುದು. ಲೇಖಕರ ಸಮ್ಮೇಳನ ಎಂದ ಕೂಡಲೇ ಅದು ಕೇವಲ ಸರ್ಕಾರದ ಕೆಲಸ ಎಂಬ ಭಾವನೆ ಬಂದುಬಿಟ್ಟಿರುವ ಇಂದಿನ ದಿನಗಳಲ್ಲಿ ಇಂಥ ಸಾರ್ವಜನಿಕ ಯತ್ನಗಳಿಗೆ ಬೆಲೆ ಇದೆ. ಎಲ್ಲ ಪ್ರಮುಖ ಪತ್ರಿಕೆಗಳು ಸಂಯುಕ್ತವಾಗಿಯೂ ಈ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಬಹುದು.
ನಿಜಕ್ಕೂ ನಮ್ಮ ಪತ್ರಿಕೆಗಳು ಯಾವ ಆರ್ಥಿಕ ಲಾಭವೂ ಇಲ್ಲದೆ ಸಾಪ್ತಾಹಿಕಗಳನ್ನು ನಡೆಸುತ್ತಿವೆ. ಯಾವ ಪತ್ರಿಕೆಯೂ ಈ ಪುರವಣಿಗಳನ್ನು ಮುಚ್ಚಲು ಮುಂದಾಗಿಲ್ಲ. ಅದರಲ್ಲೂ ಹೆಚ್ಚು ಜನ ಓದುವ ಭಾನುವಾರವೇ ಸಾಪ್ತಾಹಿಕಗಳು ಪ್ರಕಟವಾಗುತ್ತವೆ. ಅಕಸ್ಮಾತ್ ಈ ಪುರವಣಿಗಳು ನಿಂತರೆ ಏನಾಗುತ್ತದೆ ಎಂದು ಯೋಚಿಸಿ. ಆದ್ದರಿಂದ ಸದ್ಯದಲ್ಲಿ ಈ ಸಾಪ್ತಾಹಿಕಗಳು ಮಾಡುತ್ತಿರುವ ಕೆಲಸ ನಿಜಕ್ಕೂ ಸ್ವಾಗತಾರ್ಹ. ತಮ್ಮ ಚಹರೆಯನ್ನು ಎತ್ತರಿಸಿಕೊಳ್ಳಲು ಸಾಪ್ತಾಹಿಕಗಳು ತುಂಬಾ ಸಹಕ&#
3262
;ರಿ ಎಂದು ಈ ಪತ್ರಿಕೆಗಳು ಭಾವಿಸಿವೆ. ಇದು ನಿಜವೂ ಹೌದು.
ಮುಂದಿನ ದಿನಗಳಲ್ಲಿ ಸಾಪ್ತಾಹಿಕಗಳ ಚಹರೆ ಬದಲಾಗಬಹುದು. ಈಗಾಗಲೇ ಕಂಡಿರುವಂತೆ ಪ್ರಾಯೋಜಿತ ಲೇಖನಗಳ ಸಂಖ್ಯೆ ಹೆಚ್ಚಾಗಬಹುದು. ಆದರೆ ಸಾಂಸ್ಥಿಕ ಪ್ರಾಯೋಜಕರ ಕತೆ, ಕವನಗಳೂ ಬರುತ್ತವೆಯೆ? ನನಗಂತೂ ಗೊತ್ತಿಲ್ಲ. ಆದರೆ ಸದ್ಯಕ್ಕಂತೂ ಈ ಅಪಾಯ ಇಲ್ಲ. ಪ್ರಾಯೋಜಿತ ಲೇಖನಗಳ ನೆರಳಿನಲ್ಲಿ ಸಾಹಿತ್ಯ ಬೆಳೆದರೆ ತಪ್ಪಾಗುತ್ತದೆಯೆ ಎಂದೂ ನಾನು ಯೋಚಿಸಲಾರೆ.
ಕನ್ನಡದ ನೆಲದಲ್ಲಿ ಅಸಂಖ್ಯ ಸಾಹಿತ್ಯ ಹೂಗಳು ಅರಳುತ್ತಿವೆ. ಅವಕ್ಕೆಲ್ಲ ಕೊಂಚ ಬೆಳಕು ನೀಡುವ ಕೆಲಸದಲ್ಲಿ ಸಾಪ್ತಾಹಿಕಗಳು ತೊಡಗಿಕೊಂಡಿರೋದು ನಿಜಕ್ಕೂ ಖುಷಿಯ ಸಂಗತಿ. ಅವಸರದ ಸಾಹಿತ್ಯ ಎಂದೇ ಕರೆಯೋ ಈ ಪತ್ರಿಕೆಗಳು ಸಾಪ್ತಾಹಿಕದ ವಿಷಯದಲ್ಲಿ ತೋರುತ್ತಿರುವ ಸಹನೆ ಮತ್ತು ಕಾಳಜಿ ಅಚ್ಚರಿ ತರುತ್ತದೆ. ನಮ್ಮ ನಾಡಿನ ಸಾಹಿತ್ಯಪ್ರಿಯ ಯುವಕರು ಇಲ್ಲಿ ಪ್ರಕಟವಾಗೋ ಸಾಹಿತ್ಯವನ್ನೂ ದಿಕ್ಸೂಚಿಯಾಗಿ ಪರಿಗಣಿಸಿದರೆ ಅದರಿಂದಲೂ ಸಾಹಿತ್ಯ ಬೆಳೆಯುತ್ತೆ. ಹಾಗೇ ಹಿರಿಯ ಸಾಹಿತಿಗಳೂ ಈ ಸಾಪ್ತಾಹಿಕಗಳಲ್ಲಿ ಮಾರ್ಗದರ್ಶಿ ಪಾತ್ರವನ್ನು ನಿರ್ವಹಿಸಿದರೆ ಅದಕ್ಕಿಂತ ಒಳ್ಳೆಯ ಬೆಳವಣಿಗೆ ಇನ್ನೊಂದಿಲ್ಲ.
ಸಾಪ್ತಾಹಿಕಗಳಲ್ಲಿ ಸಾಹಿತ್ಯವೂ ಒಂದು ವಿಭಾಗವಷ್ಟೆ. ವಾಸ್ತವದಲ್ಲಿ ಸಾಪ್ತಾಹಿಕಗಳು ನಾಡಿನ ಸಂಸ್ಕೃತಿಯ ಎಲ್ಲ ಮುಖಗಳನ್ನು, ಸಮಕಾಲೀನ ಸಂಗತಿಗಳನ್ನು ಬಿಂಬಿಸುವ ಹೊಣೆಗಾರಿಕೆ ಹೊಂದಿವೆ. ಈ ಹೊಣೆಗಾರಿಕೆ ಕೇವಲ ಸಾಂದರ್ಭಿಕ ಲೇಖನಗಳಿಗಷ್ಟೇ ಸೀಮಿತವಾಗದಿರಲಿ. ಸಾಹಿತ್ಯವೂ ಇಂದಿನ ಸವಾಲುಗಳನ್ನು ಎದುರಿಸಲು ಸಾಪ್ತಾಹಿಕವೂ ಇನ್ನಷ್ಟು ತೊಡಗಿಕೊಳ್ಳಲಿ ಎಂದು ಹಾರೈಸೋಣ.