ಇಸವಿಯಾದ ಇಹ

ಬೀಡಿಗೊಂದು ಚಾಡಿ
ಬದಲಾಗಿದೆ ನೋಡಿ

ಅತಿಮಾನುಷ ಬದುಕು
ಅಳತೆಯಿಲ್ಲ ಎದಕು.

ಪ್ರೀತಿ ಮರೆತ ಹುಡುಗಿ
ಚಳಿಗೆ ಮತ್ತೆ ನಡುಗಿ

ತುಟಿಗಳಲ್ಲಿ ತೇಪೆ
ತೂತುಬಿದ್ದ ಚಾಪೆ

ಗುಡಿಸಲಿಗಿದೆ ಸೋಗೆ
ಸೂರಿಗೊಂದು ಕಾಗೆ

ಹರಟೆಯಾದ ಹಾದರ
ನೆನಪಾಗಿದೆ ಚಾದರ

ಸಾಲು ಕೊರೆವ ಕವಿ
ಮಾಲು ಕದಿವ ಭವಿ

ದಗಲ್ಬಾಜೀ ಲೆಕ್ಕ
ಇಸ್ಪೀಟಿನ ಯೆಕ್ಕ

ಮುಷ್ಕರಗಳ ಮೋಹ
ವೇತನಗಳ ದಾಹ

ಸುಡುಗಾಡಿನ ಸೂರ್ಯ
ಕೊನೆಯರಿಯದ ಕಾರ್ಯ

ಕದತಟ್ಟಿದ ಬೆರಳು
ವಿಕರಾಳದ ನೆರಳು

ಭವಿಷ್ಯತ್ತು ಭವ್ಯ
ಬಯಕೆಗಳು ನವ್ಯ

ಆದರೇನು ಮಾಡಲಿ ?
ಅಳುತ್ತಿರುವ ಬಾವಲಿ

ದಿನಾ ರಾತ್ರಿಯಾಗಲಿ
ಕಡಲು ತೂಕಡಿಸಲಿ

ಚಪಲವಾದ ಚಹ
ಇಸವಿಯಾದ ಇಹ

Share.
Leave A Reply Cancel Reply
Exit mobile version