ಬದುಕಿನ ಸೌಂದರ್ಯವರ್ಧಕ : ಬಿಳಿಜಾಜಿ ವೆಂಕಟೇಶ್, ಬೋಟ್ಸ್‌ವಾನಾ

ಕೆಲಸಕ್ಕೆ ಸೇರುವಾಗ ಬರೀ ಸೆಕೆಂಡ್ ಪಿ ಯು ಸಿ. ; ಆಮೇಲೆ ಏಕಕಾಲಿಕವಾಗಿ ಬಿ ಎಸ್ಸಿ ಮತ್ತು  ಮೆಕ್ಯಾನಿಕಲ್ ಡಿಪ್ಲೋಮಾ  ಸಂಜೆ ತರಗತಿಗಳಿಗೆ ಹಾಜರು. ಜೊತೆಗೆ ಮದುವೆ ಮಕ್ಕಳು.
ಈಗ ಬಿ.ಟಿ. ವೆಂಕಟೇಶ್, ಅಂದರೆ ಬಿಳಿಜಾಜಿ ತಿಮ್ಮರಾಯಪ್ಪನವರ ಮೊದಲ ಮಗ ವೆಂಕಟೇಶ್  ಆಫ್ರಿಕಾದ ಬೋಟ್ಸ್‌ವಾನಾದ ಅತಿಗಣ್ಯ ಉದ್ಯಮಿ. ೭೫ಕ್ಕೂ ಹೆಚ್ಚು ಬಗೆಯ ಸೌಂದರ್ಯವರ್ಧಕಗಳ  ತಯಾರಕರು. ಅವರ ಉತ್ಪನ್ನಗಳು ಈಗ ಆಫ್ರಿಕಾದಲ್ಲಿ ಮನೆಮಾತು.
ಭಾರತೀಯ ಸಸ್ಯ ಪರಂಪರೆಯ ತಿಳಿವಳಿಕೆಯನ್ನೇ ಸ್ವಂತ ಪ್ರಯೋಗಕ್ಕೆ ಒಳಪಡಿಸಿ ವಿವಿಧ ಸೌಂದರ್ಯವರ್ಧಕಗಳನ್ನು ತಯಾರಿಸಿದ  ವೆಂಕಟೇಶ್ ಕನ್ನಡದ ದೊಡ್ಡ ಹೆಮ್ಮೆ.
ಮೈಕೋ ಫ್ಯಾಕ್ಟರಿಯಲ್ಲಿ ಇಂಜಿನಿಯರ್ ಆಗಿದ್ದ  ವೆಂಕಟೇಶ್ ಹೀಗೆ  ದೊಡ್ಡ ಮನುಷ್ಯರಾಗಿದ್ದೇನೂ ರಾತ್ರೋರಾತ್ರಿಯ ಬೆಳವಣಿಗೆಯಲ್ಲ.  ಆದರೆ ಈ ಹಂತಕ್ಕೆ  ಏರಲು ವೆಂಕಟೇಶ್ ರಾತ್ರಿ – ಹಗಲುಗಳನ್ನು ಒಂದು ಮಾಡಿ ದುಡಿದ ದಿನಗಳಿಗೆ ಮಾತ್ರ ಲೆಕ್ಕವಿಲ್ಲ.
ಮೈಕೋದಲ್ಲಿ ಇದ್ದ ವೆಂಕಟೇಶ್ ಅತ್ಯಂತ ಪ್ರತಿಭಾವಂತ ಇಂಜಿನಿಯರ್ ಎಂದೇ ಹೆಸರಾಗಿದ್ದವರು. ಫ್ಯಾಕ್ಟರಿ ಕೆಲಸ ಮುಗಿಸಿ ಬಂದಮೇಲೆ  ಬೆಂಗಳೂರಿನ ವಿವಿಧ  ಫ್ಯಾಕ್ಟರಿಗಳ ಮಾಲೀಕರು, ಮುಖ್ಯಸ್ಥರು ಯಾವುದೋ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಕೋರಿ ಸಾಲು ನಿಲ್ಲುತ್ತಿದ್ದರು. 
ಬೋಟ್ಸ್‌ವಾನಾ ದೇಶದ ಸಂಸ್ಥೆಗೆ ಒಲ್ಲದ ಮನಸ್ಸಿನಿಂದ ಅರ್ಜಿ ಸಲ್ಲಿಸಿದ ದಿನವೇ ಅವರು ನೇಮಕಾತಿ ಪತ್ರವನ್ನೂ ಪಡೆದಿದ್ದನ್ನು ವೆಂಕಟೇಶ್ ನೆನಪಿಸಿಕೊಳ್ಳುತ್ತಾರೆ.  ಆದರೆ ಒಂದೇ ವರ್ಷದಲ್ಲಿ ಅವರು ಕೆಲಸ ಬಿಟ್ಟು ಊದಿನಕಡ್ಡಿ ಮತ್ತು ಸೊಳ್ಳೆ ಬತ್ತಿಗಳ ಉದ್ಯಮವನ್ನು ಆರಂಭಿಸಿ ಉದ್ಯಮಿಯಾಗೇ  ಬಿಟ್ಟರು. ಇದರಲ್ಲಿ ಇನ್ನೇನು ಸ್ಥಿರವಾಗುವೆ  ಎಂದು ಅವರು ಭಾವಿಸಿದ ಹೊತ್ತಿನಲ್ಲೇ ದಕ್ಷಿಣ ಆಫ್ರಿಕಾದ ಖರೀದಿದಾರನೊಬ್ಬ ಇವರ ಮiಲನ್ನು ತರಿಸಿಕೊಂಡು  ತಾನು ಹಣ ಕೊಡಲಾರೆ ಎಂದು ಕೈಯೆತ್ತಿದಾಗ ವೆಂ&#3221
;&
#3231;ೇಶ್‌ಗೆ  ನೆಲ ಕುಸಿದ  ಅನುಭವ. ಪತ್ನಿ ಕಮಲಾ, ಮತ್ತು ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು  ಭಾರತಕ್ಕೆ  ಮರಳುವ  ನಿರ್ಧಾರ ಮಾಡಿದ್ದ ವಂಕಟೇಶ್‌ಗ  ಧೈರ್ಯ ನೀಡಿದ್ದು ಅಲ್ಲಿನ ಒಬ್ಬ ಫಾದರ್.
ಆ ಫಾದರ್ ಮನೆಗೆ ಬಂದು ಯಾಕೆ ಭಾರತಕ್ಕೆ ಹೋಗುತ್ತಿದ್ದೀರಿ ಎಂದು ಕೇಳಿದರು. ಹಾಗೇ ಮಾತನಾಡುತ್ತ ನಾವು ನಮ್ಮ ನಿರ್ಧಾರ ಬದಲಿಸಿದೆವು. ನಾವು ಸೌಂದರ್ಯವರ್ಧಕಗಳನ್ನು ತಯಾರಿಸೋಣ ಎಂದು ಕಮಲಾ ಹೇಳಿದಳು. ಆ ಕ್ಷಣದಲ್ಲಿ ನಾವು ತೆಗೆದುಕೊಂಡ ನಿರ್ಧಾರ ನಮ್ಮ ಬದುಕನ್ನು ಬದಲಿಸಿತು – ವೆಂಕಟೇಶ್ ಬೆಂಗಳೂರಿನಲ್ಲಿ ಕಳೆದ ವಾರದ ಒಂದು ರಾತ್ರಿ ಈ ಲೇಖಕನೆದುರು ನಿರುಮ್ಮಳವಾಗಿ ಹೇಳುತ್ತಿದ್ದರು.
ಕೈಯಲ್ಲಿ ಇದ್ದ ಐದು ಲಕ್ಷ, ಫಾದರ್ ಮತ್ತು ಇತರೆ ಗೆಳೆಯರು ಕೊಟ್ಟ ಐದು ಲಕ್ಷ – ಹೀಗೆ ಹಣ ತೊಡಗಿಸಿ ಊರಿಂದ ಮೂವತ್ತು ಕಿಮೀ. ದೂರದಲ್ಲಿ ಸೌಂದರ್ಯವರ್ಧಕಗಳ ಕಾರ್ಖಾನೆಯನ್ನು ತೆರೆದ ವೆಂಕಟೇಶ್‌ಗೆ ಪತ್ನಿಯೇ ಒತ್ತಾಸೆ. ಕಮಲಾ – ವೆಂಕಟೇಶ್ ಹೀಗೆ ಆರಂಭಿಸಿದ ಕೆಮ್‌ಟೆಕ್ ಸಂಸ್ಥೆ ಇಂದು ವಿಶ್ವದ ಒಂದು ಪ್ರಮುಖ ಸಂಸ್ಥೆಯಾಗಿದೆ. 
ಆದರೆ ವೆಂಕಟೇಶ್ ಮಾತ್ರ ತಾವು ದಿನಾಲೂ ಕಾರ್ಖಾನೆಗೆ ಮಧ್ಯಾಹ್ನದ ಬುತ್ತಿ ತೆಗೆದುಕೊಂಡು ಹೋಗುತ್ತಿದ್ದ  ಹೆಣೆದ ಪ್ಲಾಸ್ಟಿಕ್  ಕೈಚೀಲವನ್ನು ಮರೆತಿಲ್ಲ. `ಅರಶಿನ ಹಾಗೂ ಕಪ್ಪು ಬಣ್ಣದ ಆ ಚೀಲ ಈಗಲೂ ನನ್ನ ಹತ್ತಿರ ಇದೆ' ಎಂದು ಅವರು ಹೇಳುವಾಗ ಬದಿಯಲ್ಲಿ ದೈತ್ಯಗಾತ್ರದ ಸೂಟ್‌ಕೇಸ್ ಕುಳಿತಿತ್ತು.
`ನಾನೇ ಜವಾನ. ನಾನೇ ದಿವಾನ – ಈ ಥರ ಎಷ್ಟೋ ದಿನಗಳನ್ನು ಕಳೆದಿದೇನೆ. ಕಾರ್ಖಾನೆಯಲ್ಲಿ  ಉತ್ಪನ್ನಗಳನ್ನು ಸಿದ್ಧಪಡಿಸಿ,ಪ್ಯಾಕ್ ಮಾಡಿ, ಜೀಪಿಗೆ  ಏರಿಸಿ ಸ್ವತಃ ಡ್ರೈವ್ ಮಾಡಿಕೊಂಡು ಅಂಗಡಿಗಳಿಗೆ ಹೋಗಿ ಅವನ್ನು ಇಳಿಸಿ  ಅಂಗಡಿಗಳಿಗೆ ಕೊಟ್ಟು ಹಣ ಸಂಗ್ರಹಿಸಿ ಮನೆಗ ಬರುವ ಕಾಯಕವನ್ನು ಎಷ್ಟೋ ತಿಂಗಳುಗಳ ಕಲ  ಒಬ್ಬನೇ ಮಾಡಿದ್ದೇನೆ. ಈಗಲೂ ಎಲ್ಲ ಪ್ರವಾಸಗಳಲ್ಲೂ ನಾನೇ ಡ್ರೈವ್ ಮಾಡುತ್ತೇನೆ' ಎಂದು ವೆಂಕಟೇಶ್ ಹೇಳುತ್ತಾರೆ.
`ಈಗ ನನ್ನ ಮನೆಯ ಎರಡು ಕಪಾಟುಗಳ ತುಂಬ ಆಯುರ್ವೇದ  ಸಂಬ&#
3202
;ತ ಪುಸ್ತಕಗಳಿವೆ. ನಮ್ಮ ಎಲ್ಲ ಉತ್ಪಾದನೆಗಳೂ ಭಾರತದ ಪರಂಪರಾಗತ eನವನ್ನೇ ಆಧರಿಸಿವೆ. ಅಲ್ಲದೆ ನಮ್ಮ ಎಲ್ಲ ಉತ್ಪನ್ನಗಳನ್ನೂ ನಾವು ಪುಸ್ತಕದ eನದಿಂದಲೇ ರೂಪಿಸಿದ್ದು. ಓದಿನ ಬೆಲೆ ಏನೆಂಬುದು ಈಗ ಗೊತ್ತಾಗುತ್ತಲ್ಲ…' ಎಂದು ಅವರು ಕಣ್ಣರಳಿಸುತ್ತಾರೆ.
`ಇವರು ಯಾಕೆ ಆಫ್ರಿಕಗೆ ಹೋಗಬೇಕು? ನನ್ನ ಜೊತೆ ಇರಲಿ. ನಾನು ಹೇಳಿದ ಕಡೆಗೆ ಹೋಗಿ ಮೆಶಿನ್ ರಿಪೇರಿ ಮಾಡಲಿ. ಅವರಿಗೆ ನಾನು ದಿನಾ ೧೦೦೦ ರೂ. ಕೊಡ್ತೇನ ಎಂದು ನಮ್ಮ ಗೆಳೆಯನೊಬ್ಬ ಹೇಳಿದ್ದ. ಅದು ಎರಡು ದಶಕಗಳ ಹಿಂದಿನ ಆಫರ್!' ಎಂದು ವೆಂಕಟೇಶ್‌ರ ಬಾಲ್ಯದ ಗೆಳೆಯ  ಪ್ರಸಾದ್ ನನಪಿಸಿಕೊಳ್ಳುತ್ತಾರೆ.
ಒಂಬತ್ತು ಮಕ್ಕಳಲ್ಲಿ ಹಿರಿಯವನಾಗಿ ವೆಂಕಟೇಶ್‌ಗೆ ತಂದೆ ಹೇಳಿ ಕೊಟ್ಟಿದ್ದು ಸೆಕೆಂಡ್ ಪಿಯುಸಿವರೆಗಿನ ಶಿಕ್ಷಣ ಮಾತ್ರ. `ನಾನು ನಿನಗೇನೂ ಆಸ್ತಿ ನೀಡಲಾರೆ. ಇಷ್ಟು ಓದಿಸಿದ್ದೇನೆ , ಅಷ್ಟೆ…' ಎಂದು ತಂದೆ ಹೇಳಿದ್ದನ್ನು ವೆಂಕಟೇಶ್ ಇನ್ನೂ ಮರೆತಿಲ್ಲ. ವೆಂಕಟೇಶ್‌ರ ಹಿರಿಯ ಮಗ ಜಗದೀಶ್ ಈಗಷ್ಟೇ ಬೆಳೆಯುತ್ತಿರುವ ನ್ಯಾನೋಟೆಕ್ನಾಲಜಿಯಲ್ಲಿ ಎರಡು  ಎಂ ಎಸ್ ಮಾಡಿದ್ದಾರೆ. ಕಿರಿಯ ಮಗ ನಿರಂಜನ ಫಾರ್ಮಸಿಯಲ್ಲೇ ತನ್ನ ಶಿಕ್ಷಣ ಮುಂದುವರೆಸಿದ್ದಾರೆ. ಶಿಕ್ಷಣ ಎಂಥ ಆಸ್ತಿ ಎಂಬುದನ್ನು ವೆಂಕಟೇಶ್ ಮರೆಯುವ ಹಾಗೆಯೇ ಇಲ್ಲ!
ಈಗ ಕೆಮ್‌ಟೆಕ್ ಸಂಸ್ಥೆಯಿಂದ ಬಾಣಂತಿ ಹೊಟ್ಟೆ ನೆರಿಗೆಗಳನ್ನು ಸಂಪೂರ್ಣವಾಗಿ ತೆಗೆಯುವ ಹೊಸ ಉತ್ಪನ್ನ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ತಾಂಜಾನಿಯಾ ದೇಶಕ್ಕೂ ಕೆಮ್‌ಟೆಕ್ ತನ್ನ ಉತ್ಪನ್ನಗಳನ್ನು ರಫ್ತು ಮಾಡಲಿದೆ.
ಮಾತುಕತೆ ಮುಗಿಸುವ ಹೊತ್ತಿಗೆ ಕಮಲಾರಿಂದ ಕರೆ ಬಂತು. ದಿನಾಲೂ ವೆಂಕಟೇಶ್ ಎಲ್ಲೇ ಇರಲಿ, ಸಂಜೆ ಅವರೊಂದಿಗೆ ಕಮಲಾ ದೈನಂದಿನ ಕೆಲಸಕಾರ್ಯಗಳ ಬಗ್ಗೆ ವರದಿ ಒಪ್ಪಿಸುತ್ತಾರೆ. `ನಿಮ್ಮ ಕಥೆ ಕೇಳಿದ್ವಿ' ಎಂದರೆ ಕಮಲಾ ದೂರದಿಂದ ನಗುತ್ತ ಹೇಳುತ್ತಾರೆ: ಮತ್ತೇನ್ ಮಾಡೋದು ಹೇಳಿ….
ಬದುಕನ್ನು ನಮ್ಮ ನಿರೀಕ್ಷೆಯ ದಿಕ್ಕುದೆಸೆಗಳಿಗೆ ತಕ್ಕಂತೆ ಬದಲಿಸುವುದಕ್ಕೂ ಸಾಧ್ಯವಿದೆ ಎಂದು ವೆಂಕಟೇಶ್ – ಕಮಲಾ ತೋರಿಸ&#
3263
;ಕೊಟ್ಟ  ಪರಿ ಅಚ್ಚರಿ ಹುಟ್ಟಿಸುತ್ತದೆ. ಅವರು ತಯಾರಿಸುತ್ತಿರುವುದು ಕೇವಲ ಸೌಂದರ್ಯವರ್ಧಕಗಳಲ್ಲ; ಬದುಕಿನ ಸೌಂದರ್ಯವರ್ಧಕಗಳನ್ನು ಎಂದರೆ ಉತ್ಪ್ರೇಕ್ಷೆಯಿಲ್ಲ.
ಬಿಳಿಜಾಜಿಗೆ ಇನ್ನೇನು ಖ್ಯಾತಿ ಬೇಕು ಹೇಳಿ?

 

Share.
Leave A Reply Cancel Reply
Exit mobile version