ಅಧ್ಯಾಯ ೧: ಕಾಮನಬಿಲ್ಲಿನ ಕೆಳಗೆ…

ನಾನು ಕಾಮನಬಿಲ್ಲಿನ ಕೆಳಗೆ ಹುಟ್ಟಿದವನು.
ನಾನು ಹುಟ್ಟಿದ ಕಥೆಯನ್ನು ನನ್ನ ಅಜ್ಜಿ ಎಷ್ಟು ಸಲ ಹೇಳಿದ್ದಾಳೆ! ತೋರುಬೆರಳಿನಿಂದ ಆಕೆ ಆ ಗಾಳಿಯಲ್ಲೇ ಕಾಮನಬಿಲ್ಲಿನ ಕಮಾನನ್ನು ಗುರುತಿಸುತ್ತಿದ್ದಳು… ಇಡೀ ಹಳ್ಳಿಯೇ ಆ ಕಮಾನಿನಡಿ ಬಂದು, ಅದು ಹೇಗೆ ನದಿಯಿಂದ ಆರಂಭವಾಗಿ ಹೊಲಗದ್ದೆಗಳನ್ನು ತಾಗಿತ್ತು ಎಂದು ಅಜ್ಜಿ ವಿವರಿಸುತ್ತಿದ್ದಳು. ಆಮೇಲೆ ಅವಳು ನನ್ನ ಹುಟ್ಟು ಅನೇಕಾನೇಕ ಶುಭಸಂಕೇತಗಳ ಜತೆಗೇ ಆಯಿತೆಂದು ನನಗೆ ಹೇಳುತ್ತಿದ್ದಳು. `ನೋದುಪ್, ನೀನು ರಿವೋಶ್ ತ್ರೂಲ್ಕು ಆಗಬಹುದಿತ್ತು!'' ಎಂದಾಕೆ ಉಸುರುತ್ತಿದ್ದಳು. ಅದು ಅವಳ ಅಚ್ಚುಮೆಚ್ಚಿನ ಕಥೆಯಾಗಿತ್ತು. ಕೇಳಬಯಸುವ ಯಾರಿಗೇ ಆದರೂ ಅವಳು ಆ ಕಥೆಯನ್ನು ಬಣ್ಣಿಸುತ್ತಿದ್ದಳು.
ಹ್ಞಾ… ಆ ಕಥೆ ಸುಮಾರಾಗಿ ಹೀಗೆ :
ನಾನು ಹುಟ್ಟಿದ ಕೆಲವೇ ದಿನಗಳಲ್ಲಿ ಹಲವು ಉನ್ನತ ಲಾಮಾಗಳಿದ್ದ ಶೋಧನಾತಂಡವೊಂದು ನಮ್ಮ ಹಳ್ಳಿಯಿಂದ ಬರೀ ಎರಡು ದಿನಗಳ ಕಾಲ್ನಡಿಗೆ ದೂರದಲ್ಲಿರುವ ದ್ರಾಗ್ ರಿವೋಶ್ ಬೌದ್ದಾಲಯಕ್ಕೆ ಬಂದಿಳಿದಿತ್ತು. ಈ ಹಿರಿಯ ಲಾಮಾಗಳು ಒಂದು ವರ್ಷದ ಹಿಂದೆ ತೀರಿಕೊಂಡ ಒಬ್ಬ ಹಿರಿಯ ಲಾಮಾರ ಪುನರಾವತಾರದ ಅಭ್ಯರ್ಥಿಗಳಲ್ಲಿ ನಾನೂ ಒಬ್ಬ ಎಂದು ಘೋಷಿಸಿದ್ದರು. ನನ್ನ ಹುಟ್ಟು ವಿಶೇಷವಾಗಿರಬಹುದು ಎಂದು ಸೂಚಿಸುವ ಅನೇಕ ಸಂಕೇತಗಳೂ ಇದ್ದವು. ಸಾಮಾನ್ಯವಾಗಿ ಬೌದ್ಧಾಲಯಗಳ ಛಾವಣಿಯ ಮೇಲಲ ಕೂರುತ್ತಿದ್ದ ಆ ಹದ್ದಿನ ಗುಂಪಿನ ಹಕ್ಕಿಗಳು ಭಿಕ್ಷುಗಳು ಬಂದಾಗ ನಮ್ಮ ಮನೆಯ ಮೇಲೆ ಕುಳಿತಿದ್ದವು. ತೀರಿಕೊಂಡ ಲಾಮಾರವರು ಕೆಲವೇ ದಿನಗಳ ಮೊದಲು ಒಂದು ಧಾರ್ಮಿಕವಿಧಿಯನ್ನು ನಡೆಸಲು ನಮ್ಮ ಮನೆಗೆ ಭೇಟಿ ನೀಡಿದ್ದರು ಎಂದು ಅವರ ಪ್ರಮುಖ ಸಹಾಯಕನೊಬ್ಬ ನೆನಪು ಮಾಡಿಕೊಂಡಿದ್ದ. ಆಗ ಆ ಲಾಮಾಗೆ ನಮ್ಮ ಮನೆ ತುಂಬಾ ಹಿಡಿಸಿತ್ತಂತೆ. ಮನೆಯಿಂದ ಹೊರಡುವಾಗ ಅವರು ನನ್ನ ತಾಯಿಯ ಹತ್ತಿರ ಬಂದು ಅವಳ ತಲೆಯ ಮೇಲೆ ಕೈಯಿಟ್ಟು `ನಾನು ಈ ಮನೆಗೆ ಹಿಂದಿರುಗುತ್ತೇನೆ' ಎಂದು ಹೇಳಿದ್ದರಂತೆ.
ನನ್ನ ಅಜ್ಜಿಯ ಪ್ರಕಾರ, ನಾನ&#3265
;
ಹುಟ್ಟುವುದಕ್ಕಿಂತ ಕೆಲವು ದಿನಗಳ ಮೊದಲು ನನ್ನ ಅಮ್ಮನಿಗೊಂದು ವಿಶೇಷ ಕನಸು ಬಿದ್ದಿತ್ತು. ಅದರಲ್ಲಿ ಆಕೆ ಎಡಗೈಯಲ್ಲಿ ಕೋಲ್ಮೀಚಿನ ಸಂಕೇತವಾದ ದೋರ್ಜೆಯನ್ನು ಹಿಡಿದುಕೊಂಡು ಗಾಢವಾದ ಧ್ಯಾನದಲ್ಲಿ ತೊಡಗಿ ಕುಳಿತಿದ್ದಳಂತೆ. ಕೋಲ್ಮಿಂಚು ಎಂದರೆ ಬುದ್ಧನ ಬೋಧನೆಗಳ ಅವಿನಾಶಿತ್ವದ ಸೂಚಕಗಳು. ಇವೆಲ್ಲಾ ಸಂಕೇತಗಳೂ ಶುಭ ಸಂಕೇತಗಳೆಂದೇ ಎಲ್ಲರೂ ಭಾವಿಸಿದ್ದರು. ಏಕೆಂದರೆ ಲಾಮಾ ಅವತಾರದ ಹುಟ್ಟಿನ ಗಳಿಗೆಯಲ್ಲೇ ಈ ಬಗೆಯ ಸಂಕೇತಗಳು ಗೋಚರಿಸುತ್ತಿದ್ದವು.
ಹಿಂದಿನ ಲಾಮಾರ ಮುಖ್ಯ ಸಹಾಯಕ ಚಾಂಗ್ ಜೋ ಲಾ ಹೇಗೆ ನನ್ನ ಕಣ್ಣ ಮುಂದೆ ಎರಡು ಜಪಮಾಲೆಗಳನ್ನು ಆಡಿಸಿದರು, ಹೇಗೆ ನಾನು ಚಿಮ್ಮಿ ಒಂದು ಸರವನ್ನು ಹಿಡಿದೆ ಎಂದು ಅಜ್ಜಿ ವಿವರಿಸುತ್ತಿದ್ದಳು. ಆಮೇಲೆ ಅಭಿನಯಪೂರ್ವಕವಾಗಿ ಅಜ್ಜಿ ಹೇಳುತ್ತಿದ್ದಳು: ನಾನು ಹಿಡಿದ ಜಪಮಾಲೆ ಹಿಂದಿನ ಲಾಮಾರದ್ದೇ ಆಗಿತ್ತೆಂದು ಚಾಂಗ್ ಜೋ ಲಾ ಹೇಳಿದರಂತೆ.
ಈ ಕಥೆಯನ್ನು ನನಗೆ ಅಜ್ಜಿ ಯಾವಾಗಲೂ ಹೇಳುತ್ತಿದ್ದಳು. ಅವಳೇನೂ ಅಂಥಾ ವಿಶೇಷ ವ್ಯಕ್ತಿಯಂತೆ ಕಾಣಿಸುತ್ತಿರಲಿಲ್ಲ. ಚಿಕ್ಕ ದೇಹ, ಪುಟ್ಟ ಮುಖ. ಅವಳಿಗೆ ತಲೆಗೂದಲಿಗೆ ಬೆಣ್ಣೆ ಹಚ್ಚಿ ತಿಕ್ಕಿಕೊಳ್ಳುವುದೊಂದು ಹವ್ಯಾಸ. ಹೀಗಾಗಿ ಅವಳ ತಲೆಗೂದಲು ಮಿರಿಮಿರಿ ಮಿಂಚುತ್ತಿತ್ತು. ಬಿಗಿಯಾಗಿ ಬಾಚಿ ಕಟ್ಟಿದ ತಲೆಗೂದಲು ಅವಳ ಮುಖಕ್ಕೂ ಮೆರಗು ತಂದಿತ್ತು. ನನಗಂತೂ ಅವಳ ಮಾತುಗಳನ್ನು ಕೇಳುವುದೆಂದರೆ ತುಂಬಾ ಇಷ್ಟ. ಕೊನೆಗೆ ಲಾಸಾದಲ್ಲಿ ಅನುಮೋದನೆಗಾಗಿ ಇಟ್ಟ ಸಂಭಾವ್ಯ ಲಾಮಾ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ಲಾಸಾದಲ್ಲಿನ ಪ್ರಭಾವಿ ವ್ಯಕ್ತಿಗಳ ಜೊತೆ ನಮ್ಮ ಕುಟುಂಬಕ್ಕೆ `ಹಿಂಬಾಲಿಗಿನ ಸಂಪರ್ಕ' ಇರಲಿಲ್ಲವಾದ್ದರಿಂದಲೆ ನನ್ನ ಹೆಸರನ್ನು ಕೈಬಿಡಲಾಯಿತು ಎಂದು ಅಜ್ಜಿ ಪ್ರತಿಪಾದಿಸಿದ್ದಳು. ನಾನೇನೋ ಆಗಿನ್ನೂ ಬಾಲಕ. ಆದರೂ ಅಜ್ಜಿ ಕಥೆಯ ಈ ಭಾಗಕ್ಕೆ ಬಂದಾಗ ಅವಳ ದನಿಯಲ್ಲಿ ನಿರಾಶೆಯ ಛಾಯೆ ಇದ್ದದ್ದನ್ನು ನಾನು ಗುರುತಿಸಿದ್ದೆ.
ಆದರೆ ನಾನು ಶುಭಸಂಕೇತಗಳ ನಡುವೆ, ಭಾರೀ ನಿರೀಕ್ಷೆಗ&a
mp;#
3251; ನಡುವೆ ಹುಟ್ಟಿದ್ದಂತೂ ಹೌದಾಗಿತ್ತು. ಸ್ಥಳೀಯ ಜ್ಯೋತಿಷಿಯೊಬ್ಬ ನನ್ನ ಜಾತಕವನ್ನು ಬರೆದ. ನಾನು ನನ್ನ ಕುಟುಂಬಕ್ಕೂ, ಇತರರಿಗೂ ತುಂಬ ಒಳಿತು ಮಾಡುತ್ತೇನೆಂದು ಆತ ತನ್ನ ತಂದೆಗೆ ಹೇಳಿದ. ಬಹುಶಃ ಸಿರಿವಂತ ಜಮೀನ್ದಾರರನ್ನು ಹಳ್ಳಿಯ ಕನಿಷ್ಠ ಜ್ಯೋತಿಷಿಯೊಬ್ಬ ಹೊಗಳಿ ಉಬ್ಬಿಸುತ್ತಿದ್ದ ಬಗೆಯೇ ಇದಾಗಿರಬೇಕು. ನನ್ನ ತಂದೆಗಂತೂ ತುಂಬಾ ಖುಷಿಯಾಯಿತು. ಒಮ್ಮೆ ಆತ ನನಗೆ ಈ ಭವಿಷ್ಯವಾಣಿಯನ್ನು ನೆನಪುಮಾಡಿ ಕೊಟ್ಟದ್ದೂ ನಿಜ.
ನನಗೆ ನೋದುಪ್ ಎಂದು ಹೆಸರಿಡಲಾಗಿತ್ತು. ಟಿಬೆಟಿನಲ್ಲಿ ಸಾಮಾನ್ಯವಾಗಿ ಹಿರಿಯ ಲಾಮಾರಿಗೆ ಹೆಸರನ್ನು ಕರುಣಿಸಲು ವಿನಂತಿಸಿಕೊಳ್ಳುತ್ತಾರೆ. ನನಗೆ ಈ ಹೆಸರನ್ನು ಯಾವ ಲಾಮಾ ಕೊಟ್ಟದ್ದು ಎಂದು ಗೊತ್ತಿಲ್ಲ; ಬಹುಶಃ ಹತ್ತಿರದ ಬೌದ್ಧಾಲಯದ ಮುಖ್ಯಸ್ಥನೇ ಇರಬೇಕು.
ನಾನು ಹುಟ್ಟಿದ್ದು ೧೯೩೩ರಲ್ಲಿ. ಅದು ಪುರುಷ ಜಲವಾನರ ವರ್ಷ. ಹುಟ್ಟಿದೂರು ಲಾಸಾದಿಂದ ಪೂರ್ವಕ್ಕೆ ೧೨೫ ಮೈಲುಗಳ ದೂರದಲ್ಲಿರುವ ಪನಮ್. ಲಾಸಾ ಗೊತ್ತಲ್ಲ – ಟಿಬೆಟಿನ ರಾಜಧಾನಿ?  ನಮ್ಮ ಊರು ಮತ್ತು ಟಿಬೆಟಿನ ಎರಡನೇ ಅತಿ ದೊಡ್ಡ ನಗರವಾದ ಶಿಗಾಸೆ ನಡುವಣ ನಂತರ ೪೫ ಕಿ.ಮೀ.ಗಳು. ಶಿಗಾಸೆ ನಮ್ಮ ಊರಿನಿಂದ ಪೂರ್ವದಲ್ಲಿದೆ.
ಹಾಗೆ ನೋಡಿದರೆ ಪನಮ್ ಅಂಥಾ ಪ್ರಮುಖವಾದ ಹಳ್ಳಿಯೇನಲ್ಲ. ಸಾಂಗ್ ಬಯಲಿನಲ್ಲಿರುವ ಒಂದು ಪುಟ್ಟ ಹಳ್ಳಿ. ಇಲ್ಲೇ ನ್ಯಾಂಗ್‌ಶೂ ನದಿ ಹರಿಯುತ್ತದೆ. ನದಿಯ ಇಕ್ಕೆಲಗಳಲ್ಲಿ ಪರ್ವತಗಳು ಹಬ್ಬಿಕೊಂಡಿವೆ. ನಡುವಣ ವಿಶಾಲ ಬಯಲಿನಲ್ಲಿ ಬಾರ್ಲಿ, ಬಟಾಣಿ, ಸಾಸಿವೆಗಳ ಹಸಿರು ಹೊಲಗಳಿವೆ. ಆ ನದಿ ಮಾತ್ರ ಯಾರನ್ನಾದರೂ ಮರಳು ಮಾಡುವಂಥದ್ದು. ಒಮ್ಮೆ ಅದು ಎಷ್ಟು ಕೆಳಗೆ ಹೋಗಿರುತ್ತದೆಂದರೆ ಶಿಗಾಸೆಯತ್ತ ಹರಿಯುವ ಆ ನದಿಯಲ್ಲಿ ಕೇವಲ ಜುಳುಜುಳು ನಾದವನ್ನು ಕೇಳಬಹುದು. ಶಿಗಾಸೆಯಲ್ಲೇ ನ್ಯಾಂಗ್‌ಶೂ ನದಿಯು ಟಿಬೆಟಿನ ಅತಿದೊಡ್ಡ ನದಿಯಾದ ಯಾರ್ಲುಂಗ್ ಸಾಂಗ್‌ಪೋವನ್ನು ಸೇರುತ್ತದೆ. ನ್ಯಾಂಗ್‌ಶೂ ಹೀಗೆ ತೆಳುವಾಗಿದ್ದಾಗ ನಮ್ಮವರು ನದಿಯ ಆಚೀಚೆ ಹೋಗಿ ರಾಸುಗಳನ್ನು ಮೇಯಿಸುತ್ತಾರೆ. ಸರಿಯಾದ ಸಮಯಕ್ಕೆ &amp
;#32
40;ಮ್ಮ ಕುರುಬ ವಾಪಸಾಗದಿದ್ದರೆ ನದಿಯನ್ನು ದಾಟುವುದು ಮಾತ್ರ ದುಸ್ಸಾಧ್ಯ. ಆಗ ಆತ ವಾಪಸಾಗಲು ಸುತ್ತು ಬಳಸಿ ನಡೆಯಬೇಕು; ಅದಕ್ಕೆ ಕನಿಷ್ಠ ಎರಡು ಮೂರು ದಿನ ಬೇಕು!
ಬೇಸಗೆಯಲ್ಲಿ ಮಂಜುಗಡ್ಡೆಗಳು ಕರಗಿ ನದಿಯು ಪ್ರವಾಹದ ರೂಪ ತಾಳುತ್ತದೆ. ಆಗ ಗ್ರಾಮಸ್ಥರಿಗೆ ವಿಪರೀತ ಭಯ. ನನಗಂತೂ ಆಗ ನದೀತಟದಲ್ಲಿ ಆಡಲು ಬಿಡುತ್ತಿರಲಿಲ್ಲ. ಸಾಮಾನ್ಯವಾಗಿ ಎಲ್ಲೂ ಸೋಲದ ಯಾಕ್‌ಗಳನ್ನೂ ಈ ನದಿ ತೇಲಿಸಿಬಿಡುತ್ತದೆ. ಒಂದು ಸಲ ಸತ್ತ ಯಾಕ್ ಒಂದನ್ನು ಊರಿನವರು ದಡಕ್ಕೆ ಎಳೆದುತಂದ ದೃಶ್ಯ ಈಗಲೂ ನೆನಪಿದೆ. ಅವರು ಆಮೇಲೆ ಅದನ್ನು ಕತ್ತರಿಸಿ ಮಾಂಸವನ್ನು ಹಂಚಿಕೊಂಡ ದೃಶ್ಯವನ್ನೂ ನಾನು ಮರೆಯಲಾರೆ. ಅಂದಿನಿಂದ ನನಗೆ ಆ ನದಿಯನ್ನು ಕಂಡರೆ ವಿಪರೀತ ಭಯ. ಆದರೆ ಏನು ಮಾಡುವುದು? ನಾವೆಲ್ಲರೂ ನ್ಯಾಂಗ್‌ಶೂ ಮೇಲೆ ಅವಲಂಬಿತರಾಗಿದ್ದೆವು. ಅದೇ ನಮ್ಮ ಹೊಲಗಳಿಗೆ ನೀರುಣಿಸುತ್ತದೆ. ಅದು ತಲುಪದ ನೆಲ ಬಂಜರು. ಬಿರಿದ ಬಂಜರು ನೆಲವನ್ನು ನೋಡಿದಾಗಲೆಲ್ಲ ನಾವು ಈ ನದಿಯನ್ನು ಎಷ್ಟು ಅವಲಂಬಿಸಿದ್ದೇವೆ ಎಂದು ನೆನಪಾಗುತ್ತಿತ್ತು. ಪನಮ್‌ನಲ್ಲಿ ಮಳೆ ಬಂದ ದಿನವೇ ನನಗೆ ನೆನಪಿಲ್ಲ. ನ್ಯಾಂಗ್‌ಶೂ ನದಿಯಿಂದಲೇ ನಾವು ಕುಡಿಯುವ ನೀರನ್ನೂ ತರುತ್ತಿದ್ದೆವು. ಆ ನದಿಯಿಂದ ಪುಟ್ಟ ನಾಲೆ ತೋಡಿ ಗದ್ದೆಗಳಿಗೆ ನೀರು ಹರಿಸುತ್ತಿದ್ದೆವು. ಒಬ್ಬನಂತೂ ಸದಾ ಗದ್ದೆಯಿಂದ ಗದ್ದೆಗೆ ದಾಟಿ ಈ ಕಾಲುವೆಗಳನ್ನು ಮುಚ್ಚುವ, ತೆರೆಯುವ ಕಾಯಕದಲ್ಲಿ ನಿರಂತರ ತೊಡಗಿರುತ್ತಿದ್ದ.
ಮೊದಲೇ ಹೇಳಿದೆನಲ್ಲ… ಕಣಿವೆಯ ಇಕ್ಕೆಲಗಳಲ್ಲಿ ಹಬ್ಬಿದ್ದ ಹಿಮಾಲಯ ಶ್ರೇಣಿಯ ಪರ್ವತಗಳು ನಿಚ್ಚಳ ನೀಲಾಕಾಶಕ್ಕೆ ಮೈಚಾಚಿ, ಕೈಚಾಚಿ ಕಡಿದಾಗಿ ಹಬ್ಬಿದ್ದವು. ಅವುಗಳಲ್ಲಿ ಇಳಿಜಾರಾದ ಹಸಿರು ಬಯಲುಗಳೂ ಇದ್ದವು. ಈ ಪರ್ವತಗಳ ಗೋಡೆಗಳೇ ಪನಮ್‌ಗೆ ಆಶ್ರಯ ಒದಗಿಸಿದ್ದವು. ಬೇಸಗೆ ಹೆಚ್ಚಾದಂತೆ ಗಿಡಗಳು ಮಂಜುಗಡ್ಡೆಯನ್ನು ಸೀಳಿಕೊಂಡು ಬೆಳೆಯಲು ಹವಣಿಸುತ್ತಿದ್ದವು. ಆಗ ಗ್ರಾಮಸ್ಥರು ತಮ್ಮೆಲ್ಲ ಸಾಕು ಪ್ರಾಣಿಗಳನ್ನು ಅಲ್ಲಿಗೆ ಮೇಯಿಸಲು ಒಯ್ಯುತ್ತಿದ್ದರು. ಆದರೆ ಚಳಿಗಾ&#
3250
;ದ ಮೂರು ತಿಂಗಳುಗಳಲ್ಲಿ ಕುರಿಗಳು, ಮೇಕೆಗಳು, ದನಗಳು ಮತ್ತು ಯಾಕ್‌ಗಳನ್ನೂ ಮನೆಯಲ್ಲೇ ಇಟ್ಟುಕೊಳ್ಳಬೇಕಾಗಿತ್ತು. ಅಲ್ಲಿ ನಮ್ಮ ಮನೆಗಳೆಲ್ಲ ಮಣ್ಣಿನ ಇಟ್ಟಿಗೆಗಳಿಂದ ಮಾಡಿದ ಎರಡಂತಸ್ತಿನ ಕಟ್ಟಡಗಳು. ತಳಪಾಯ ಮಾತ್ರ ಮೂರಡಿ ಅಗಲದ ಕಲ್ಲಿನಲ್ಲಿ. ಅದರ ಮೇಲೆ ದಪ್ಪ ಗೋಡೆಯನ್ನು ಏರಿಸುತ್ತಿದ್ದೆವು. ಈ ಮಣ್ಣಿನ ಮನೆಗಳಿಂದಾಗಿ ಬೇಸಗೆಯಲ್ಲಿ ತಂಪೂ, ಚಳಿಗಾಲದಲ್ಲಿ ಬೆಚ್ಚನೆಯ ವಾತಾವರಣವೂ ಸಾಧ್ಯವಾಗಿತ್ತು.
ಮೊದಲನೆಯ ಮಹಡಿ ಮನೆಯವರ ವಾಸಕ್ಕಾಗಿ; ನೆಲಮಹಡಿಯಲ್ಲಿ, ಚಳಿಗಾಲದಲ್ಲಿ ನಮ್ಮ ಸಾಕು ಪ್ರಾಣಿಗಳು. ಚಳಿಗಾಲದ ಕೊನೆಯಲ್ಲಿ ಆ ಪ್ರಾಣಿಗಳನ್ನು ನಾನು ಹೊರಗಟ್ಟಲು ಯತ್ನಿಸುತ್ತಿದ್ದುದು ನನಗಿನ್ನೂ ನೆನಪಿದೆ. ಆದರೆ ಚಳಿಗೆ ಹೆದರಿ ಅವು ಹೊರಬರಲೇ ಹಿಂಜರಿಯುತ್ತಿದ್ದವು. ಒಂದೊಂದಾಗಿ ಅವು ಹೊರಬಂದು ಓಲಾಡುತ್ತಾ ಬೆಳಕನ್ನು ತಾಳದೆ ಕಣ್ಣು ಮುಚ್ಚಿಕೊಳ್ಳುತ್ತಿದ್ದವು. ಈ ರಾಸುಗಳೆಲ್ಲ ಆಲ್ಕೋಹಾಲ್ ಭಟ್ಟಿಯಿಂದ ಹೊರಬಂದ ತ್ಯಾಜ್ಯಗಳನ್ನು ತಿಂದು ಮತ್ತೇರಿವೆ ಎಂದು ಜನ ಹೇಳಿಕೊಂಡು ನಗುತ್ತಿದ್ದರು. ಅದು ಒಂದರ್ಥದಲ್ಲಿ ನಿಜವೂ ಆಗಿತ್ತು. ಚಳಿಗಾಲದಲ್ಲಿ ಟಿಬೆಟನ್ ಹೊಸವರ್ಷದ ತಯಾರಿ ನಡೆಯುತ್ತಿತ್ತಷ್ಟೆ? ಆಗ ಪ್ರತಿಯೊಂದು ಕುಟುಂಬವೂ ಭಾರೀ ಪ್ರಮಾಣದಲ್ಲಿ `ಚಾಂಗ್'ನ್ನು ಭಟ್ಟಿ ಇಳಿಸುತ್ತಿತ್ತು; ಆಗ ಹೊರಬಂದ ಮಂದ ಬಾರ್ಲಿ ತ್ಯಾಜ್ಯವನ್ನು ದನಗಳಿಗೆ ಕೊಡುತ್ತಿದ್ದೆವು.
ರಾಸುಗಳು ಕ್ರಮೇಣ ಬೆಳಕಿಗೆ ಹೊಂದಿಕೊಳ್ಳುತ್ತಿದ್ದವು. ಕೆಲವು ದೊಡ್ಡ ಹುಡುಗರು ಅವುಗಳನ್ನು ಹಸಿರು ಬಯಲಿನತ್ತ ಒಯ್ಯುತ್ತಿದ್ದರು. ಇಂಥ ದನಗಾಹಿಗಳು, ಕುರುಬರು ಆ ಬಯಲುಗಳಲ್ಲೇ ಬೇಸಗೆಯನ್ನು ಕಳೆಯುತ್ತಿದ್ದರು. ಆಗಾಗ ಅವರು ಹಳ್ಳಿಗೆ ಮರಳುವಾಗ ಗಿಣ್ಣು, ಬೆಣ್ಣೆ ಮತ್ತು ಸಗಣಿಯನ್ನು ಕತ್ತೆಗಳ ಮೇಲೆ ಹೊರಿಸಿ ತರುತ್ತಿದ್ದರು. ಆ ಸಗಣಿಯನ್ನೆಲ್ಲ ಚಳಿಗಾಲದ ಇಂಧನಮೂಲವಾಗಿ ಬಳಸಲು ಸಂಗ್ರಹಿಸಿಡುತ್ತಿದ್ದೆವು.
ಪನಮ್ ಸಂಪೂರ್ಣವಾಗಿ ಕೃಷಿಯನ್ನೇ ಅವಲಂಬಿಸಿದ ಗ್ರಾಮ. ರಾಸುಗಳು ಸಿರಿವಂತರ ವಸ್ತುಗಳೆಂದ&
amp;
#3271; ಹೇಳಬಹುದಾದ ಮಾಂಸ, ಬೆಣ್ಣೆ ಮತ್ತು ಗಿಣ್ಣನ್ನು ಒದಗಿಸುತ್ತವೆ.  ನನ್ನ ಕುಟುಂಬದಲ್ಲಿ ೬೦೦ಕ್ಕಿಂತ ಹೆಚ್ಚು ಕುರಿ- ಮೇಕೆಗಳಿದ್ದವು. ಟಿಬೆಟನ್ ಸ್ಥಾನಮಾನದ ಪ್ರಕಾರದಲ್ಲಿ ನಮ್ಮದು ಸಿರಿವಂತ ಕುಟುಂಬ ಎಂದೇ ಹೇಳಬಹುದು. ನನ್ನ ತಂದೆ ಸರ್ಕಾರದಿಂದ ಭಾರೀ ಭೂಪ್ರದೇಶವನ್ನು ಭೋಗ್ಯಕ್ಕೆ ಪಡೆದು ಅದನ್ನು ಇತರೆ ಕೃಷಿಕರಿಗೆ ಮರು ಭೋಗ್ಯಕ್ಕೆ ನೀಡಿದ್ದರು. ನಮ್ಮನ್ನು `ಸರ್ಕಾರಿ ತೆರಿಗೆದಾರರು' (ಗೆರ್ಪಾ) ಎಂದು ಕರೆಯುತ್ತಿದ್ದರು. ಇತರೆ ಕೃಷಿಕರು ತಂತಮ್ಮ ಭೂ ಒಡೆಯನಿಗೋ ಅಥವಾ ಬೌದ್ಧಾಲಯಕ್ಕೋ ತೆರಿಗೆ ಕೊಡುತ್ತಿದ್ದರು, ಅವರ ಕರ್ತವ್ಯಗಳು ಏನಾಗಿದ್ದವು ಎಂದು ನನಗೆ ಎಂದೂ ಸಂಪೂರ್ಣವಾಗಿ ಅರ್ಥವಾಗಿರಲಿಲ್ಲ. ಒಂದು ಸಂಗತಿ ಮಾತ್ರ ನನಗೆ ನೆನಪಿದೆ: ನನ್ನ ಕುಟುಂಬವು ಟಿಬೆಟನ್ ಸೇನೆಗೆ ಐವರನ್ನು ಸರಬರಾಜು ಮಾಡಬೇಕೀತ್ತು. ನನ್ನ ಅರಿವಿಗೆ ತಿಳಿದದ್ದಿಷ್ಟು : ಈ ಹೊಣೆಗಾರಿಕೆಯನ್ನು ನನ್ನ ತಂದೆಯವರು ಅವರ ಕೆಳಗಿನ ಕೃಷಿಕರಿಗೆ ದಾಟಿಸಿದ್ದರು. ನಮ್ಮ ಕೃಷಿಕರ ನಡುವಣ ಒಪ್ಪಂದ ಏನೇ ಇರಲಿ, ಸರ್ಕಾರ ಮಾತ್ರ ಈ ಸೇನಾಭರ್ತಿ ಪೂರೈಸಿದರೆ ಯಾವುದೇ ತಕರಾರನ್ನೂ ಮಾಡುತ್ತಿರಲಿಲ್ಲ.
ನನ್ನ ತಂದೆ ಗ್ರಾಮದ ಮುಖ್ಯಸ್ಥನ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದರು. ಹಳ್ಳಿಗರ ನಡುವಣ ವಿವಾದಗಳನ್ನು ಬಗೆಹರಿಸಲು ಅವರನ್ನು ಪದೇ ಪದೇ ಕರೆಯಲಾಗುತ್ತಿತ್ತು. ಅಪ್ಪನನ್ನು ಒಳ್ಳೆಯ ನ್ಯಾಯತಜ್ಞ ಎಂದೇ ಪರಿಗಣಿಸಲಾಗಿತ್ತು. ಹಳ್ಳಿಯವರೆಲ್ಲ ತಂದೆಯನ್ನು `ಬಾರಿ ಝೋ ಲಾ' ಎಂದು ಕರೆಯುತ್ತಿದ್ದರು. ಅದರ ಅರ್ಥ : ಪ್ರೀತಿಪೂರ್ವಕ, ಗೌರವಪೂರ್ವಕ. ಶಿಗಾಸೆ ಮತ್ತು ಲಾಸಾದಲ್ಲೇ ಇದ್ದುಕೊಂಡು ವಿಪರೀತ ತೆರಿಗೆ ಎಳೆಯುತ್ತಿದ್ದ ಜಮೀನ್ದಾರರಿಂದ ಹಳ್ಳಿಯ ರೈತರನ್ನು ರಕ್ಷಿಸಲು ನನ್ನ ತಂದೆ ನೆರವಾಗುತ್ತಿದ್ದರು. ನನ್ನ ಕುಟುಂಬದ ಹೆಸರೇ ಬಾರಿ ಲೋಪಾ ಎಂದು. ಅದರ ಅರ್ಥ : `ದಕ್ಷಿಣದ ಬಾರಿ'. ಅದೇ ಕಣಿವೆಯ ಉತ್ತರ ಭಾಗದಲ್ಲಿದ್ದ ಇನ್ನೊಂದು ಕುಟುಂಬಕ್ಕೆ `ಉತ್ತರದ ಬಾರಿ' ಎಂದು (ಬಾರಿ ಜಾಂಗ್) ಕರೆಯುತ್ತಿದ್ದರು. ಬಹುಶಃ ಈ ಎರಡೂ ಕುಟ&
amp;
#3265;ಂಬಗಳು ಎಂದೋ ಎಲ್ಲೇ ಸಂಬಂಧಿಸಿರಬೇಕು.
ಹದಿನೆಂಟನೆಯ ಶತಮಾನದಲ್ಲಿ ಟಿಬೆಟಿನ ಎರಡನೆಯ ಅತಿಮುಖ್ಯ ಧಾರ್ಮಿಕ ವ್ಯಕ್ತಿಯಾದ ಪಾಂಚೆನ್ ಲಾಮಾರ (ಏಳನೆಯವರು) ಜನ್ಮಸ್ಥಾನವಾಗಿ ಪನಮ್ ಹೆಸರು ಗಳಿದ್ದೂ ಇದೆ. ಆರನೆಯ ಪಾಂಚೆನ್ ಲಾಮಾ ತೀರಿಕೊಂಡಾಗ ಸಂಕೇತ ಸೂಚಕಗಳ ಮೂಲಕ ಮುಂದಿನ ಲಾಮಾ ಸೂರ್ಯನ ತೊಡೆಯ ಮೇಲೆ ಖುಷಿಯಿಂದ ಕುಳಿತಿರುತ್ತಾನೆ ಎಂಬ ವರ್ತಮಾನ ಸಿಕ್ಕಿತ್ತಂತೆ. ಆಗ ಟಿಬೆಟಿನ ಎಲ್ಲಾ ದಿಕ್ಕುಗಳಿಗೂ ಲಾಮಾಗಳನ್ನು ಕಳಿಸಿ ಪಾಂಚೆನ್ ಲಾಮಾರ ಹೊಸ ಅವತಾರಕ್ಕಾಗಿ ಶೋಧ ನಡೆಸಲಾಯಿತಂತೆ. ಅಂಥ ಶೋಧ ತಂಡವೊಂದು ಪನಮ್‌ಗೆ ಬಂದಿತಂತೆ. ಅವರೆಲ್ಲ ಪನಮ್ ಪ್ರವೇಶಿಸುವಾಗಲೇ, ಮೊದಲನೆಯ ಮನೆಯಲ್ಲೇ ತಾಯಿಯೊಬ್ಬಳು ನವಜಾತ ಮಗುವೊಂದನ್ನು ತನ್ನ ತೋಳುಗಳ ಮೇಲೆ ಕೂರಿಸಿ ಕೊಂಡಿದ್ದಳಂತೆ. ತಂಡವು ಆಕೆಯ ಹೆಸರನ್ನು ಕೇಳಿದಾಗ ಆಕೆ `ನಿಯಾಮ' ಎಂದಳಂತೆ. ನಿಯಾಮ ಎಂದರೆ ಸೂರ್ಯ. ಇನ್ನು ಶೋಧಿಸುವುದೇನಿದೆ? ಆ ಮಗುವೇ ಏಳನೆಯ ಪಾಂಚೆನ್ ಲಾಮಾ ಎಂದು ಘೋಷಿಸಲಾಯಿತು.
ಆ ಪಾಂಚೆನ್ ಲಾಮಾ ಹುಟ್ಟಿದ ಪಕ್ಕದ ಮನೆಯೇ ನಮ್ಮದು. ಆ ಮನೆ ಇಡೀ ಹಳ್ಳಿಯಲ್ಲೇ ಅತಿ ಶ್ರೀಮಂತ. ಈ ಮನೆಯನ್ನು ಊರಿನವರೆಲ್ಲ ತ್ರುಂಗ್‌ಶಿ ಎಂದು ಕರೆಯುತ್ತಿದ್ದರು. ತ್ರುಂಗ್‌ಶಿ ಎಂದರೆ `ಜನನದ ನಾಡು' ನಾನು ಹುಟ್ಟಿದಾಗ ಊರಿನವರ ಭಾವೋದ್ವೇಗ ಹೆಚ್ಚಿತು. ಎಲ್ಲರೂ ಇನ್ನೊಬ್ಬ ಲಾಮಾನನ್ನು ಕೊಡಲಿರುವ ಪನಮ್ ನಿಜಕ್ಕೂ ಅದೃಷ್ಟದ ಹಳ್ಳಿ ಎಂದು ತಿಳಿದರು. ಆದರೆ ಅವರ ಈ ಉದ್ವೇಗ ಬಹಳ ದಿನ ಉಳಿಯಲಿಲ್ಲ.

Share.
Leave A Reply Cancel Reply
Exit mobile version