ಹೇಳತೇನ ಕೇಳ


ಡಾ ಚಂದ್ರಶೇಖರ ಕಂಬಾರರ ಮನೆ ಬದಲಾಗಿದೆ. ಹೆಸರು ಮಾತ್ರ ಸಿರಿಸಂಪಿಗೆಯೇ. ಅದೇ ನಗು, ಅದೇ ಕಣ್ಣೋಟ, ಅದೇ ಹದವಾದ ಮಾತು. ಮಧ್ಯಪ್ರದೇಶ ಸರ್ಕಾರವು ಕಾವ್ಯ ಸಾಹಿತ್ಯಕ್ಕಾಗಿ ನೀಡುವ ಪ್ರತಿಷ್ಠಿತ `ಕಬೀರ್ ಸಮ್ಮಾನ್' ಪ್ರಶಸ್ತಿ ಈ ವರ್ಷ ಅವರಿಗೆ ಬಂದಿದೆ. `ಹೇಗನ್ನಿಸಿತು?' ಎಂದು ಕೇಳಿದ ಕೂಡಲೇ ಅವರು ಪ್ರೀತಿಯಿಂದ ನೆನಪಿಸಿಕೊಂಡಿದ್ದು ಈ ಹಿಂದೆ ಅದೇ ಪ್ರಶಸ್ತಿಯನ್ನು ಪಡೆದ ಡಾ ಎಂ. ಗೋಪಾಲಕೃಷ್ಣ ಅಡಿಗರನ್ನು. `ಪ್ರಶಸ್ತಿ ಸ್ವೀಕರಿಸಲಿಕ್ಕೆ ಅಡಿಗರು ಹೋಗಿರಲಿಲ್ಲ. ಅವರ ಪರವಾಗಿ ಡಾ ಬಿ.ಸಿ.ರಾಮಚಂದ್ರ ಶರ್ಮರು ಪ್ರಶಸ್ತಿ ಸ್ವೀಕರಿಸಿದ್ದರು…' ಎಂದು ಕಂಬಾರರು ಆಪ್ತವಾಗಿ ಸ್ಮರಿಸಿಕೊಂಡ ಬಗೆಯೇ ಪರಂಪರೆಯನ್ನು ಮರೆಯದ ಅವರ ವ್ಯಕ್ತಿತ್ವಕ್ಕೆ ಪುಟ್ಟ ನಿದರ್ಶನ.
ಅಡಿಗರ ಕಾಲದಿಂದ ಈವರೆಗೆ ಹರಿದ ಕಾವ್ಯಪ್ರವಾಹದ ಬಗ್ಗೆ ಏನು ಹೇಳ್ತೀರಿ ಎಂದು ಕೇಳಿದ್ದಕ್ಕೆ `ಕಾವ್ಯಕ್ಕೆ ಒಂದು ಬಗೆಯ ಕ್ರೈಸಿಸ್ ಎದುರಾಗಿದೆ' ಎಂದೇ ಕಂಬಾರರು ಮಾತು ಆರಂಭಿಸಿದರು.
`ಇವತ್ತಿನ ಜೀವನ ಛಿದ್ರವಾಗಿದೆ. ಎಷ್ಟು ಅಂದ್ರೆ ಈಗ ಏನನ್ನೂ ಯಾವ ಮಾಧ್ಯಮದ ಮೂಲಕಾನೂ ಹೇಳಿದ್ರೂ ತಲುಪದ ಸ್ಥಿತಿ ಉಂಟಾಗಿದೆ. ಆದ್ರೆ ಕಾವ್ಯ ನೋಡಿ, ಅದು ಶುದ್ಧಾಂಗ ಶಬ್ದವನ್ನೇ ನಂಬಿರುವ ಮಾಧ್ಯಮ. ಕಾವ್ಯರಚನೆ ಅಂದ್ರೆ…ಅಂದ್ರೆ ಒಂದು ಬಗೆಯ ತಪಸ್ಸು ಮಾಡಿದ ಹಾಗೆ. ತಪಸ್ಸು ಮಾಡಬೇಕು. ಅದರ ಮೂಲಕ ಶಬ್ದಗಳಲ್ಲಿ ಮಾಂತ್ರಿಕ ಶಕ್ತಿಯನ್ನು ತುಂಬಬೇಕು. ಮಂತ್ರಗಳಲ್ಲಿ ದೇವತೆಗಳನ್ನು ಅಡಗಿಸಿರಲಿಲ್ವೆ? ಹಾಗೆ. ಹೀಗೆ ಬರೆದದ್ದನ್ನು ಗಂಭೀರವಾಗಿ ಸ್ವೀಕರಿಸೋ ತುದೀನೂ ಆಚೆ ಕಡೆ ಇರಬೇಕು. ಬರೆಯುವವರಿಗೂ ಗಾಂಭೀರ್ಯ ಇರಬೇಕು, ಓದುವವರಿಗೂ ಗಾಂಭೀರ್ಯ ಬೇಕು. ಆದ್ರೆ ಈಗ ಇಲ್ಲಿ ಅಂಥ ಗಾಂಭೀರ್ಯ ಇಲ್ಲದ ಸ್ಥಿತಿ ಉಂಟಾಗಿದೆ….'
`ಯಾಕೆ?'
`ಯಾಕೆ ಅಂದ್ರೆ? ಯಾಕಂದ್ರೆ ನಮಗೆ ಯಾವುದರಲ್ಲೂ ಸ್ಪಷ್ಟವಾದ ನಂಬಿಕೆ ಇಲ್ಲ ನೋಡಿ. ರಾಜಕೀಯ ಉದಾಹರಣೆ ಕೊಡ್ತೇನೆ ಅಂತ ತಿಳ್ಕೋಬೇಡಿ. ಇವತ್ತು ನಿಜವಾಗಿಯೂ ಗಾಂಜಿಯನ್ನು ಬಲವಾಗಿ, ಸ್ಪಷ್ಟವಾಗಿ ನಂಬಿರೋರು
&
#3247;ಾರಿದಾರೆ? ಇದೇ ರೀತಿ ಸಾಂಸ್ಕೃತಿಕ, ಆಧ್ಯಾತ್ಮಿಕ ರಂಗದಲ್ಲೂ ಆಗಿದೆ. ಎಲ್ಲಾ ಕಡೆ ಖಾಲಿ ಜಾಗ ಕಾಣಿಸ್ತಿದೆ! ಇಂಥ ವಿಚಾರಗಳನ್ನು ನಂಬಿದವರೇ ಹತಾಶರಾಗಿದಾರೆ. ಶಬ್ದದ ಮೇಲೆ ನಂಬಿಕೆ ಹೋದಮೇಲೆ ಉಳಿಯೋದಾದ್ರೂ ಏನು? ಬರೀ ವ್ಯಂಗ್ಯ. ಪದಬಳಕೆಯಲ್ಲಿ ವಿರೋಧಾರ್ಥ ಜಾಸ್ತಿಯಾಗಿದೆ. ಹೀಗಾದ್ರೆ ಮುಂದೆ ಭಾಷೆ ಬಗ್ಗೇನೇ ನಂಬಿಕೆ ಹೋಗುತ್ತೆ.'
`ಹಾಗಂತ ಕಾವ್ಯವನ್ನು ಗಂಭೀರವಾಗಿ ಸ್ವೀಕರಿಸೋರು ಕಡಮೆ ಇದ್ರೂ ನೀವು ಬರೀತಾನೇ ಇರ್‍ತೀರ?'
`ಖಂಡಿತ. ನಾನಂತೂ ಪ್ರತಿಕ್ರಿಯೆ ಎಷ್ಟೇ ಕ್ಷೀಣಿಸಲಿ, ನನ್ನ ಬಲವಾದ ನಂಬಿಕೆಯ ಆಧಾರದ ಮೇಲೆಯೇ ಕಾವ್ಯ ಬರೀತೀನಿ. ನಮ್ಮ ಪ್ರಯತ್ನದಲ್ಲಿ ನಮಗೆ ಒಂಥರ ಬಲವಾದ ನಂಬಿಕೆ ಇದೆ. ಹೀಗೆ ಮಾಡಬಾರದು ಅಂದ್ರೆ ಖಂಡಿತ ಮಾಡಲ್ಲ. ನೀವು ಗಮನಿಸಿದೀರೋ ಇಲ್ವೋ, ನನ್ನ ಕವನಗಳಲ್ಲಿ ಎಂದೂ ಪದಗಳನ್ನು ವ್ಯಂಗ್ಯಾರ್ಥದಲ್ಲಿ ಬಳಸಿಲ್ಲ. ಈಗಲೂ ಅದೇ ಪ್ರಯತ್ನಾನ ಮಾಡ್ತೀನಿ. ನಾವು ಕಾವ್ಯವನ್ನು ಬರೀತೀವಿ. ಹಾಗೇನೇ ಅದರ ಪದಗಳ ಒಂದಂಚಿನಿಂದ ಇನ್ನೊಂದಂಚಿನವರೆಗೆ ಭಾವ ತುಂಬುವ ಪ್ರತಿಭೆಯೂ ತುಂಬಾ ಮುಖ್ಯ. ಅದನ್ನೇ ಕಾರ್ಯೈತ್ರೀ ಪ್ರತಿಭೆ, ಭಾವೈತ್ರೀ ಪ್ರತಿಭೆ ಅಂತಾರೆ'
ಎಂದ ಕಂಬಾರರು ಸೀದಾ ಎತ್ತಿಕೊಂಡಿದ್ದು ತಮ್ಮ `ಈವರೆಗಿನ ಹೇಳತೇನ ಕೇಳ' ಕವನಸಂಗ್ರಹವನ್ನು. `ದಿನಪತ್ರಿಕೆಯ ಸುದ್ದಿ' ಕವನದ ಪುಟ ತೆರೆದರೆ ಅದನ್ನು ಮಥಿಸಿದ ಗುರುತುಗಳಿವೆ. `ನೋಡಿ, ಈ ಕವನದಲ್ಲಿ ಈ ಸಾಲುಗಳು ಬರುತ್ತವೆ' ಎಂದು ಓದಿದವರು ಮತ್ತೆ ಕಾವ್ಯದ ರಚನೆಯ ಸೂತ್ರಗಳತ್ತ ಮಾತು ತಿರುಗಿಸಿದರು`ಈ ಕಾವ್ಯದ ಕೆಲವು ಸಾಲುಗಳು ಹಾಗೇನೇ ಉಳೀತವೆ. ಆದ್ರೆ ಅವುಗಳ ನಡುವೆ ಇರೋ ಭಾವವನ್ನು ಓದುಗರು ತಮ್ಮ ಅನುಭವಕ್ಕೆ ತಕ್ಕಂತೆ ಬೆಳೆಸಿಕೊಳ್ಳಬಹುದು.'
` ಈ ಜಗತ್ತಿನಲ್ಲಿ ಎಷ್ಟೋ ವಿವರಿಸಲಾಗದ ವಸ್ತು-ವಿಷಯ ಇರುತ್ತೆ. ಅವನ್ನು ಶಬ್ದಗಳಿಂದ ಹಿಡಿದಿಡೋ ಕೆಲಸಾನ ನಾವು ಮಾಡ್ತೇವೆ. ಒಂದು ರೀತಿಲಿ ಅದು ಎರಡುಗ್ರಹಗಳ ನಡುವಣ ಅಂತರಾನ ತುಂಬೋ ಹಾಗೆ. ಆದ್ರೆ ಅದರ ಅಗತ್ಯ ಇರೋರು ಕಡಮೆ ಆಗ್ತಿದಾರೆ. ಆದ್ರೂ ನಾವು ಅವರಿಗಾಗಿ ಬರೀತೀವಿ.' ಹೀಗ&
amp;
#3240;್ನುತ್ತ ಕಂಬಾರರು ಎಷ್ಟು ದೃಢವಾದರೆಂದರೆ ಅಂತ ಗ್ರಹಿಕೆ ಇರೋರಿಗಾಗಿ ನಾವು ಬರೆಯದೇ ಇರೋದಕ್ಕೆ ಸಾಧ್ಯವೇ ಇಲ್ಲ, ಈ ಕಾಂಟ್ ಹೆಲ್ಪ್ ಎಂದುಬಿಟ್ಟರು.`ನೋಡ್ರಿ, ನಾವು ಶಬ್ದಕ್ಕೆ ಎಷ್ಟು ಕಮಿಟ್ ಆಗಿರ್‍ತೀವಿ ಅಂದ್ರೆ, ಇಷ್ಟು ವರ್ಷಗಳ ನಂತರ ನಮಗೆ ಅದರ ಮೇಲೆ ಹಿಡಿತ, ಲಯಗಾರಿಕೆ ಸಿಗ್ತಾ ಇರುತ್ತೆ. ಒಂಥರದ ಪ್ರಬುದ್ಧತೆ ಬಂದಿರುತ್ತೆ. ಈಗ ನನಗೆ ಗ್ರಹಿಕೆಯಾದ ಕಾಣ್ಕೆಗಳನ್ನೇ ನಾನು ಬರೀತೀನೇ ಹೊರತು ನಿಮಗೆ ಬೇಕಾದ್ದನ್ನಲ್ಲ' ಎಂದರು ಕಂಬಾರರು.
`ಆದ್ರೆ ಈಗ ಕಾವ್ಯ ಬರೆಯೋದೂ ಒಂದು ಬಗೆಯ ಸ್ವಚ್ಛಂದ ಕ್ರಿಯೆಯಾಗಿದೆಯಲ್ಲ?' ಕನ್ನಡದಲ್ಲಿ ಗುಣಮಟ್ಟ ನಿಯಂತ್ರಣವೇ ಇಲ್ಲದೆ ಪ್ರಕಟವಾಗುತ್ತಿರುವ ಕವನ ಸಂಕಲನಗಳ ಹಿನ್ನೆಲೆಯಲ್ಲಿ ಪ್ರಶ್ನಿಸಿದಾಗ ಕಂಬಾರರು ಇವತ್ತಿನ ಸಂಕೀರ್ಣತೆಯೇ ಇದಕ್ಕೆ ಕಾರಣ ಎಂದು ವಿವರಿಸಿದ್ದು ಇಷ್ಟು:` ಇವತ್ತು ಇತಿಹಾಸದ ಜೊತೆಗೆ ಕಾಲವೂ ಸೇರಿಕೊಂಡಿದೆ. ಎಲ್ಲರ ಮೇಲೂ ಸಮಯದ ಭಾರ. ಹೀಗಾಗಿ ಅವಸರ. ಮಿನಿ ಸಾಹಿತ್ಯ ಹುಟ್ಟುತ್ತೆ. ಮೂರು ಗಂಟೆಯ ಯಕ್ಷಗಾನ ಬರುತ್ತೆ. ಆಲಾಪ, ಆರೋಹಣವೇ ಇಲ್ಲದೆ ಸಂಗೀತಶಿಖರ ಮುಟ್ಟೋ ಬಯಕೆ ಹುಟ್ಟುತ್ತೆ. ನಮ್ಮಲ್ಲಿ ಉದ್ವೇಗ ಹೆಚ್ಚಾಗಿದೆ. ಪ್ರಾಸೆಸ್ ಬಿಟ್ಟು ಕೇವಲ ರಿಸಲ್ಟಿಗೆ ಹಾತೊರಿತೀವಿ. ನಮ್ಮ ರಿದಮ್‌ಗೆ ಕಲೆ ಕುಣೀಬೇಕು ಅಂತೀವಿ! ಈ ಒತ್ತಡಕ್ಕೆ ಸಿಕ್ಕಿ ಇದೆಲ್ಲವನ್ನೂ ಕಳಕೊಂಡಿದೀವಿ ಅಂತ ಗೊತ್ತಾದರೆ ಈ ಬಗ್ಗೆ ಯೋಚಿಸಬಹುದು ಅಲ್ವೆ? ಗಂಭೀರವಾದ ಕಲೆ, ಅಷ್ಟೇ ಗಂಭೀರವಾದ ಸಾಹಿತ್ಯಸ್ಪಂದನದ ತಿಳಿವಳಿಕೆ ಇದ್ರೇನೇ ಇತಿಹಾಸ ಮೀರಿದ ಸ್ಥಿತಿ ಉಂಟಾಗುತ್ತೆ. ಹಾಗೆ ಆದಾಗಲೇ ಬರೆದವ ಮತ್ತು ಓದುಗನ ನಡುವೆ ಒಂದು ಸಂವಾದ ಹುಟ್ಟುತ್ತೆ.' ಕಂಬಾರರ ಪ್ರತಿಪಾದನೆಯಲ್ಲಿ ಗೊಂದಲವಿಲ್ಲ.
ಮಾತು ಕಾವ್ಯದಿಂದ ನಾಟಕದ ಕಡೆಗೆ ಹರಿದಾಗ ನಾಟಕಕಾರ ಕಂಬಾರರು `ಹೊಸ ನಾಟಕ'ದ ಬಗ್ಗೆ ತಮ್ಮ ಹಳೇ ಆಕ್ರೋಶವನ್ನೇ ತೋರಿದರು. `ನಾಟಕಾನ ಸಮಷ್ಟಿ ಕಲೆ ಅಂತ ನಾವಿನ್ನೂ ಅರಿತಿಲ್ಲ. ಇಲ್ಲಿ ಪ್ರೇಕ್ಷಕ, ನಿರ್ದೇಶಕ, ಚಾ ತರೋ ಹುಡುಗ, ಪ್ರವೇಶಕ್ಕೆ ಮುನ್ನ ಪಾತ್ರಧಾರಿ ಸೇದೋ ಗಣ&am
p;#3
271;ಶ ಬೀಡಿ – ಎಲ್ಲದಕ್ಕೂ ಒಂದೊಂದು ರೋಲ್ ಇರುತ್ತೆ. ಯಕ್ಷಗಾನ ಪ್ರಸಂಗ ನಡೆಯುತ್ತಲ್ಲ, ಅದು ಇಂಥ ಸಮಷ್ಟಿ ಕಲೆಗೆ ಒಂದು ಅತ್ಯುತ್ತಮ ಉದಾಹರಣೆ. ಆದ್ರೆ ಹೊಸ ನಾಟಕಗಳು ಬಂದ ಮೇಲೆ ನಿರ್ದೇಶಕನಿಗೆ ಎಲ್ಲಿಲ್ಲದ ಬೆಲೆ ಕೊಟ್ಟೆವು. ಅವನಿದ್ರೆ ನಾಟಕ ಉಂಟು, ಇಲ್ಲದಿದ್ರೆ ಇಲ್ಲ.ಎಲ್ಲರೂ ಆತನಿಗೆ ಅನರು! ಹೀಗಾಗಿ ನಾಟಕ ಇಂಬ್ಯಾಲೆನ್ಸ್ ಆಯ್ತು. ಒಬ್ಬನದೇ ಕಲೆ ಅಂತಾಯ್ತು. ನಿರ್ದೇಶಕ ಕೇವಲ ದೃಶ್ಯದ ಬಗ್ಗೇನೇ ಗಮನ ಕೊಟ್ಟ. ನಾಟಕ ಅಂದ್ರೆ ಅದನ್ನು ನೋಡಿ ನಮ್ಮೆಲ್ಲ ಭಾವನೆಗಳು ಹೊರಗೆ ಬಂದು ಸಮಾಜದ ನೆಮ್ಮದಿಗೆ ಕಾರಣವಾಗಬೇಕು. ನಿರ್ದೇಶಕ ವಿವೇಕಿ ಆಗಿದ್ರೆ ಸರಿ. ಇಲ್ಲಾಂದ್ರೆ ಯೋಚಿಸಿ' ಎಂದು ಕಂಬಾರರು ತಾವು ಬಯಲಾಟ ಬರೆಯಬೇಕಾದ ಪ್ರಸಂಗವನ್ನು ನೆನಪಿಸಿಕೊಂಡರು.
ನಾನು ಅಮೆರಿಕಾದಲ್ಲಿದ್ದಾಗ ಅಲ್ಲಿ ರಿಯಲಿಸ್ಟಿಕ್ ರಂಗ ಬೋರ್ ಹೊಡೆಸಿತ್ತು. ಲಿವಿಂಗ್ ಥಿಯೇಟರ್ ಅನ್ನೋ ಪ್ರಯೋಗ ಆರಂಭವಾಗಿತ್ತು. ನಾನು ಅದೇ ಕಾಲದಲ್ಲಿ `ಋಷ್ಯಶೃಂಗ' ಬರೆದಿದ್ದೆ. ಆಮೇಲೆ `ತೆರೆಗಳು' ಅನ್ನೋ ನಾಟಕಾನ ನಾನು ಕಾರಂತರು ರಂಗಕ್ಕೆ ತಂದು ಅದು ಫೇಲ್ ಆಯ್ತು. ಕೊನೆಗೆ ಲಂಕೇಶ್ ಮೂರು ನಾಟಕಗಳ ಒಂದು ಪ್ರಯೋಗ ಮಾಡೋಣ ಅಂದಾಗ ನಾನು ಹಟ ಹಿಡಿದು ಬರೆದದ್ದು ಜೋಕುಮಾರಸ್ವಾಮಿ. ಎರಡು ಗಂಟೆ ನಾಟಕಾನ ಜನ ಎಂಟು ಗಂಟೆಯ ಬಯಲಾಟವಾಗಿ ಮಾಡ್ತಾರೆ ಅಂದ್ರೆ ಅವರ ಭಾವ ತುಂಬೋ ಬಗೆಯನ್ನು ನೀವು ಗಮನಿಸಿ.'
`ನಾಟಕ ಅಂದ್ರೆ ಹೀಗೆ ಎಲ್ಲರ ಪಾತ್ರಾನೂ ಇರಬೇಕು. ಮುಂದೇನೂ ಇದೇ ಉಳಿಯೋದು. ಉಳೀಬೇಕು. ಅಕಸ್ಮಾತ್ ಉಳಿಯೋದಿಲ್ಲ ಅಂದ್ರೆ ಉಳಿಸ್ಕೋಬೇಕು' ಎಂಬುದು ಕಂಬಾರರ ಖಚಿತ ನುಡಿ.
ಕಥೆ,ಕವನ,ಕಾದಂಬರಿ,ನಾಟಕ – ಎಲ್ಲದರಲ್ಲೂ ಸೈ ಎನ್ನಿಸಿಕೊಂಡಿರುವ ಕಂಬಾರರು ಈಗ `ಚಕೋರಿ'ಯ ಎರಡನೆಯ ಭಾಗದ ರಚನೆಯಲ್ಲಿ ತೊಡಗಿದ್ದಾರೆ. `ಚಕೋರಿ'ಯ ಮೊದಲ ಭಾಗದಲ್ಲಿ ಚಂದ್ರನ ವಕ್ಕಲಿನ ಕಥೆ ಬಂದರೆ ಇಲ್ಲಿ ಸೂರ್ಯನ ವಕ್ಕಲಿನ ಕಥೆ ಇದೆ. ಹಾಗೇನೇ ವಿಶಿಷ್ಟವಾಗಿ, ಕಾವ್ಯದ ರೂಪದಲ್ಲಿ ಆತ್ಮಕಥೆಯ ದೃಶ್ಯಗಳನ್ನು ಬಿಂಬಿಸುವ ಕೆಲಸದಲ್ಲೂ ಅವರು ಮಗ್ನರು.
ಆದರೆ ಕಂಬಾರರು ಇತ್ತೀಚೆಗೆ ಸಿ&am
p;#3
240;ಿಮಾ ನೋಡುತ್ತಿಲ್ಲ!
ಯಾಕೆ?
`ಸಿನಿಮಾ ಈಗ ಸೀದಾ ಸಿಟಿ ಮಾರ್ಕೆಟ್ಟಿಗೆ ಬಂದುಬಿಟ್ಟಿದೆ' ಇದು ಇಂದಿನ ಸಿನಿಮಾಗಳ ಬಗ್ಗೆ ಕಂಬಾರರ ನೇರ ವ್ಯಾಖ್ಯಾನ. ಸಿನಿಮಾ ಈಗ ಕಲೆಯಾಗಿಲ್ಲ, ಒಂದು ಮಾಧ್ಯಮವಾಗಿದೆ ಅಷ್ಟೆ ಎಂದ ಕಂಬಾರರು ನೆನಪಿಸಿಕೊಂಡಿದ್ದು ಹಿಂದೆ ನೋಡಿದ `ಬ್ಲೋ ಅಪ್' ಎಂಬ ಸಿನಿಮಾವನ್ನು. ಪಾರ್ಕಿನಲ್ಲಿ ಸುಮ್ಮನೇ ಕ್ಲಿಕ್ಕಿಸಿದ ದೃಶ್ಯಗಳಲ್ಲಿ ತಾನು ಕಾಣದ ಕೊಲೆಯ ಸನ್ನಿವೇಶಗಳನ್ನು ಕಂಡು ಬೆಚ್ಚಿದ ವ್ಯಕ್ತಿಯ ಸತ್ಯ-ಸುಳ್ಳಿನ ಹುಡುಕಾಟದ ಕಥೆಯನ್ನು ಕಂಬಾರರು ಈಗಷ್ಟೇ ನೋಡಿದಂತೆ ವಿವರಿಸುತ್ತಾರೆ. `ಒಳ್ಳೆ ಸಿನಿಮಾ ತೆಗೆಯೋ ಪುಣ್ಯಾತ್ಮರೂ ಇದ್ದಾರೆ' ಎನ್ನಲು ಕಂಬಾರರು ಮರೆಯಲಿಲ್ಲ.
ಕಥೆ, ಕಾದಂಬರಿಗಳು ಇತಿಹಾಸದ ಸಾಕ್ಷ್ಯವಾದರೆ ಕಾವ್ಯ ಅವೆಲ್ಲಕ್ಕಿಂತ ಆಳವಾದ, ಇತಿಹಾಸದಾಚೆಯ ಮಾತನ್ನು , ಸತ್ಯವನ್ನು ದಾಖಲಿಸುತ್ತದೆ ಎಂದು ಕಂಬಾರರು ಮತ್ತೆ ಮತ್ತೆ ಹೇಳಿದ ರೀತಿಯಲ್ಲೇ ಅವರ ಗಂಭೀರ ನಂಬಿಕೆ ವ್ಯಕ್ತವಾಗುತ್ತದೆ.

Share.
Leave A Reply Cancel Reply
Exit mobile version