S.L.Bhairappa's interview 2002
೧. ತತ್ವಶಾಸ್ತ್ರದಲ್ಲಿ ಡಿ.ಲಿಟ್ ಮಾಡಬೇಕಾದ ಸಂದರ್ಭದಲ್ಲಿ ಸಾಹಿತ್ಯದ ಸೆಳೆತ ಉಂಟಾಗುತ್ತದೆ. ಅಂದರೆ ಒಂದು ವಿಧದಲ್ಲಿ ಸಾಹಿತ್ಯಕ್ಕೆ ಹೆಚ್ಚು ಪೊಟೆನ್ಷಿಯಲ್ ಇದೆ ಅನ್ನುವ ಗ್ರಹಿಕೆ. ಇದು ನಿಮ್ಮಲ್ಲಿ ಜತನವಾಗಿ ಉಳಿದಿದೆಯೇ? ತತ್ವಶಾಸ್ತ್ರವನ್ನು ಪೂರ್ತಿ ಮರೆಸಿದೆಯೇ? ಸಾಹಿತ್ಯದ ಗುಂಪುಗಾರಿಕೆ, ಜಾತೀಯತೆ ಹೆಡೆಯೆತ್ತಿದ ಸಂದರ್ಭದಲ್ಲಿ ಈ ಕುರಿತು ಮೂಡುವ ಭಾವನೆಗಳು.
ವಾಸ್ತವವಾಗಿ ಸಾಹಿತ್ಯಕ್ಕೆ ತತ್ವಶಾಸ್ತ್ರಕ್ಕಿಂತ ಹೆಚ್ಚಿನ ಪೊಟೆನ್ಶಿಯಲ್ ಇದೆ ಎನ್ನುವುದು ನನ್ನ ಅಭಿಪ್ರಾಯವಲ್ಲ. ಇಡೀ ಒಂದು ಜನಾಂಗ/ಯುಗವನ್ನು ರೂಪಿಸುವ ಶಕ್ತಿ ತತ್ವಶಾಸ್ತ್ರಕ್ಕಿದೆ. ಆದರೆ ತತ್ವಶಾಸ್ತ್ರದಲ್ಲಿ ಸ್ವಂತದ್ದನ್ನು ಆವಿಷ್ಕರಿಸುವ ಶಕ್ತಿ ನನಗಿಲ್ಲವೆಂದು ಅರ್ಥವಾಯಿತು. ಸಾಹಿತ್ಯದಲ್ಲಿ ನನ್ನ ಸ್ವಂತದ್ದನ್ನು ಬರೆಯಬಲ್ಲೆ ಅನ್ನಿಸಿತು. ಆನಂತರದ ಸುಮಾರು ೪೦ ವರ್ಷಗಳ ನನ್ನ ಸೃಜನಶೀಲ ಅನುಭವವು ಈ ಅನಿಸಿಕೆಯನ್ನು ದೃಢೀಕರಿಸಿದೆ.
ತತ್ವಶಾಸ್ತ್ರವನ್ನು ನಾನು ಮರೆತಿಲ್ಲ. ಅದರ ಅಧ್ಯಯನವನ್ನು ಇನ್ನೂ ಇಟ್ಟುಕೊಂಡಿದ್ದೇನೆ. ಜೀವನದ ಮೂಲಭೂತ ಹಾಗೂ ಗಹನವಾದ ಸಮಸ್ಯೆಗಳು ಎದ್ದಾಗಲೆಲ್ಲಾ ತತ್ವಶಾಸ್ತ್ರವು ನನ್ನ ಮನಸ್ಸಿನ ಮೇಲೆ ಮಾಡಿರುವ ಸಂಸ್ಕಾರವು ಅದನ್ನು ಬೇಧಿಸಲು ಸಹಾಯವಾಗಿದೆ. ಸಾಹಿತ್ಯದ ಗುಂಪುಗಾರಿಕೆ, ಜಾತೀಯತೆ ಮೊದಲಾದವುಗಳೆಲ್ಲ ನಮ್ಮ ಸಮಾಜದಲ್ಲಿ ಆಗುತ್ತಿರುವ ಸ್ಥಿತ್ಯಂತರಗಳ ಒಂದು ಪರಿಣಾಮ ಮಾತ್ರ. ಇವುಗಳಿಂದ ನಾನು ಉದ್ರಿಕ್ತನಾಗುವುದಿಲ್ಲ. ಈ ಗುಣವನ್ನು ತತ್ವಶಾಸ್ತ್ರದ ಅಧ್ಯಯನವು ನನಗೆ ಕೊಟ್ಟಿದೆ.
೨. ನಿಸರ್ಗ ನಿಮ್ಮ ಕಾದಂಬರಿಗಳಲ್ಲಿ ಚಿತ್ರವತ್ತಾಗಿ, ಎಸಳು ಎಸಳಾಗಿ, ಹೊರ ವಿವರಗಳನ್ನು ಒಟ್ಟುಗೂಡಿಸಿ ಉದ್ದೀಪ್ತ ವಾಕ್ಯಗಳಲ್ಲಿ ಹರಳುಗಟ್ಟುವುದಿಲ್ಲ. ಬದಲಿಗೆ ಪಾತ್ರದ ಮನಃಸ್ಥಿತಿಗೆ ಪೂರಕವಾಗಿ, (ಸರ್ರಿಯಲಿಸ್ಟಿಕ್ ಅನ್ನಬಹುದೇ?) ಎಷ್ಟು ಬೇಕೋ ಅಷ್ಟು, ತೀರಾ ಖಚಿತ ಎಂದೇನೂ ಅಲ್ಲದ ಶಬ್ದಗಳಲ್ಲಿ ಬರುತ್ತದೆ. ಇದು ಉದ್ದೇಶಪೂರ್ವಕ&
amp;#3
253;ೇ?
ಮಾನವ ಅನುಭವವನ್ನು ಶೋಧಿಸುವುದು ಮತ್ತು ಚಿತ್ರಿಸುವುದೇ ನನ್ನ ಬರವಣಿಗೆಯ ಪ್ರಮುಖ ಲಕ್ಷಣ ಎಂದು ನನಗೆ ಈಗ ಅರ್ಥವಾಗುತ್ತಿದೆ. ನಿಸರ್ಗವು ಪಾತ್ರದ ಅನುಭವದ ಮೇಲೆ ಯಾವ ಪರಿಣಾಮ ಮಾಡಿತು ಎಂಬುದರಲ್ಲಿ ನನಗೆ ಹೆಚ್ಚಿನ ಆಸಕ್ತಿಯಿದೆ. ನಿಸರ್ಗವನ್ನೇ ವರ್ಣಿಸುವುದರಲ್ಲಿ ಇಲ್ಲ. ಒಂದು ಬೆಟ್ಟವನ್ನು ವರ್ಣಿಸುವುದಕ್ಕಿಂತ ಅದನ್ನು ಹತ್ತುತ್ತಿರುವ ಪಾತ್ರದ ಅನುಭವವನ್ನು ವರ್ಣಿಸುವುದು ಹೆಚ್ಚು ಅರ್ಥಪೂರ್ಣ. ಅವನಿಗೆ/ಅವಳಿಗೆ ಬರುವ ದಣಿವು, ಏದುಸಿರು, ಬೆವರು, ಮೇಲೆ ಏರಿದಂತೆಲ್ಲ ವಿಸ್ತಾರಗೊಳ್ಳುವ ದಿಗಂತ, ಬೆವರಿನ ಮೇಲೆ ಬೀಸುವ ಗಾಳಿ, ಅವನ ವಿಚಾರಗಳು ಮತ್ತು ಭಾವನೆಗಳು ತಿಳಿಗೊಳ್ಳುವ ಬಗೆ ಇವುಗಳನ್ನು ವರ್ಣಿಸುವುದು ಹೆಚ್ಚು ಅರ್ಥದಾಯಕ. ಗುಡ್ಡದ ಶಿಲೆಗಳನ್ನೋ, ಸುತ್ತಲ ಕಾಡನ್ನೋ, ಅದರೊಳಗಿರುವ ಸಸ್ಯ ವೈವಿಧ್ಯವನ್ನೋ ಪುಟಗಟ್ಟಲೆ ವರ್ಣಿಸ ಹೊರಟರೆ ಈ ವರ್ಣನೆಯು ಕಾದಂಬರಿಯ ಕೇಂದ್ರವ್ಯೂಹದಿಂದ ಹೊರಗೆ ಉಳಿದುಬಿಡುತ್ತದೆ.
೩. ಮೇಲಿನ ಪ್ರಶ್ನೆಗೆ ತದ್ವಿರುದ್ಧವೆನ್ನುವ ಹಾಗೆ ನೀವು ನೋಡಿದ ಪ್ರಥಮ ಗುಬ್ಬಿ ಕಂಪನಿಯ ನಾಟಕದ ವಿವರಣೆ ಶಬ್ದಗಳಲ್ಲಿ ಝಗಮಗಿಸಿ, ಎದ್ದು ನೆಟ್ಟಗೆ ಕೂತು ಓದುವಷ್ಟು ಛಾರ್ಜ್ಡ್ ಆಗಿದೆ. ಏಕೆ ಹೀಗೆ? ನಿಮ್ಮನ್ನು ಅಷ್ಟೊಂದು ಸೆಳೆದ ರಂಗಮಾಧ್ಯಮ ಒಂದು ನಾಟಕ ಬರೆಯಲು ಪ್ರರೇಪಿಸಲಿಲ್ಲವೆ?
ನಾನು ಮೊಟ್ಟಮೊದಲು ನೋಡಿದ ಗುಬ್ಬಿ ಕಂಪನಿಯ ನಾಟಕಕ ವಿವರಣೆಯನ್ನು ಕೂಡ ನನ್ನ ಅನುಭವವಾಗಿ ಕೊಟ್ಟಿದ್ದೇನೆಯೇ ಹೊರತು ನಾಟಕದ ವರ್ಣನೆಯಾಗಿ ಕೊಟ್ಟಿಲ್ಲ. ನಾನು ಒಂದು ನಾಟಕವನ್ನೂ ಬರೆದಿದ್ದೆ. ಆನಂತರ ಅದು ರಂಗದ ಮೇಲೆ ತಂದಾಗ ಏನೂ ಶಕ್ತಿಯಿಲ್ಲದ ಕೃತಿ ಎಂಬುವುದು ಅರ್ಥವಾಯಿತು. ರಂಗದ ಅನುಭವವಿದ್ದು ಅದರ ಸಾಧ್ಯತೆಗಳು ಕರತಲಾಮಲಕವಾಗದೆ ಉತ್ತಮ ನಾಟಕ ಬರೆಯುವುದು ಸಾಧ್ಯವಿಲ್ಲವೆಂದು ನನಗೆ ಅನ್ನಿಸಿತು. ಆ ನಾಟಕದ ವಸ್ತುವನ್ನೇ ಅನಂತರ `ಗ್ರಹಣ' ಕಾದಂಬರಿಯಾಗಿ ಬರೆದೆ. ಆದರೆ ಶುರುವಿನಲ್ಲಿ ನಾಟಕವಾಗಿ ರೂಪು ತಳೆದ ರೂಪಾನುಕ್ರಮವು ಕಾದಂಬರಿಯ ರೂಪದಲ್ಲೂ ಉಳ
ಿದುಕೊಂಡು ಕಾದಂಬರಿಯನ್ನು ಹಾಳು ಮಾಡಿತು. ಹೀಗಾಗಿ `ಗ್ರಹಣ'ವು ಉತ್ತಮ ಕಾದಂಬರಿಯಾಗಲಿಲ್ಲ. ಆನಂತರ ನಾನು ನಾಟಕಗಳನ್ನು, ಗಂಭೀರವಾಗಿ ಅಧ್ಯಯನ ಮಾಡತೊಡಗಿದೆ. ಅದರಲ್ಲೂ ಆಧುನಿಕ ನಾಟಕಗಳನ್ನು ಪಿರಾಂಡೆಲೊ, ಪಿಂಟರ್, ಮಿಲರ್, ಸಾರ್ತ್ರ, ಕಾಮು ಮೊದಲಾಗಿ ಇನ್ನೂ ಅನೇಕರ ನಾಟಕಗಳನ್ನು ಓದಿದೆ. ಕಾದಂಬರಿಯ ಸಂಭಾಷಣೆಯ ರಚನೆಯಲ್ಲಿ, ಸನ್ನಿವೇಶ ನಿರ್ವಹಣೆಯಲ್ಲಿ ಸೂಕ್ಷ?ತೆ ಮತ್ತು ತೀವ್ರತೆಗಳನ್ನು ತರಲು ಈ ಅಧ್ಯಯನ ಸಹಾಯ ಮಾಡಿತು. ಆದರೆ ನಾಟಕ ನಾಟಕವೇ. ಕಾದಂಬರಿ ಕಾದಂಬರಿಯೇ. ಅವೆರಡರ ಸಾಧ್ಯತೆ ಮತ್ತು ವಿಧಾನಗಳು ಬೇರೆ ಬೇರೆ.
೪. ಗಂಡು-ಹೆಣ್ಣಿನ ಸಂಬಂಧದಲ್ಲಿ ಬೌದ್ಧಿಕ ಸಾಹಚರ್ಯದ ಕುರಿತು ಬಹಳ ಮುಂಚೆಯೇ ಪ್ರಸ್ತಾಪಿಸಿದ್ದೀರಿ. ಆದರೆ ಪ್ರeವಂತ ಹೆಣ್ಣು ಪಾತ್ರಗಳು ಊಟ್ಚ್ಠoಗೆ ಎಲ್ಲೂ ಬಂದಿಲ್ಲ. `ಜಲಪಾತ'ದ ವಸು, `ಅಂಚು'ವಿನ ಅಮೃತಾ – ತಾವು ಸ್ತ್ರೀಯರೆನ್ನುವ ಗ್ರಹಿಕೆಯನ್ನು, ಅದರಿಂದಾಗುವ, ಆಗಬಹುದಾದ ಸಮಸ್ಯೆಗಳನ್ನು ಲಂಬಿಸಿ, ವಿಶ್ಲೇಷಣೆಗೆ ಒಳಪಡಿಸುವುದಿಲ್ಲ. `ಜೀವನದ ಪ್ರವಾಹ'ದಲ್ಲಿ ಸುಮ್ಮನೇ ಇರುತ್ತಾರೆ. ನಿಮ್ಮ ಪ್ರತಿಕ್ರಿಯೆ?
ನನ್ನ ಸ್ತ್ರೀ ಪಾತ್ರಗಳು ನನ್ನ ಬರವಣಿಗೆಯ ಆರಂಭಕಾಲದಿಂದಲೂ ಗಟ್ಟಿಯಾದ ವ್ಯಕ್ತಿತ್ವವುಳ್ಳವುಗಳೇ. `ಗೃಹಭಂಗ'ದ ನಂಜಮ್ಮ, `ದಾಟು'ವಿನ ಸತ್ಯ, `ಅನ್ವೇಷಣೆ'ಯ ನಾಯಕಿ, `ಪರ್ವ'ದ ಕುಂತಿ ಮತ್ತು ದ್ರೌಪದಿಯರು, `ಸಾರ್ಥ'ದ ಚಂದ್ರಿಕಾ, `ಮಂದ್ರ'ದ ಮಧು – ಈ ಎಲ್ಲ ಪಾತ್ರಗಳು ಅವರ ಎದುರು ನಿಲ್ಲುವ ಪುರುಷ ಪಾತ್ರಗಳಿಗಿಂತ ಗಟ್ಟಿಯಾದವುಗಳೇ. ಇವರಾರೂ ಸ್ತ್ರೀವಾದ, ಸ್ತ್ರೀವಿಮೋಚನೆ ಮೊದಲಾದ ಸ್ತ್ರೀಗೆ ಮಾತ್ರ ಅನ್ವಯಿಸುವ ಘೋಷಣೆಗಳನ್ನು ಹಾಕುವುದಿಲ್ಲ. ಘೋಷಣೆಗಳು ಒಂದೆರಡು ದಶಕಗಳು ಮಾತ್ರ ಇದ್ದು, ನಿಶ್ಶಬ್ದವಾಗುತ್ತವೆ. ಗಟ್ಟಿಪಾತ್ರದ ಮೂಲಕ ವ್ಯಕ್ತವಾಗುವ ಅಂತಃಶಕ್ತಿ ಮಾತ್ರ ಉಳಿಯುತ್ತದೆ.
`ಅಂಚು'ವಿನ ಅಮೃತಾ ಮೋಸಕ್ಕೆ ಒಳಗಾಗಿದ್ದಾಳೆ. ಅವಳ ಮದುವೆ ಮತ್ತು ಆಸ್ತಿ ವಿಷಯಗಳಲ್ಲಿ ಚಿಕ್ಕಮ್ಮ ಮೋಸ ಮಾಡಿದ್ದಾಳೆ. ಅವಳ ಗಂಡ ಅವಳ ಅಂತಃಶಕ್ತಿಗೆ ಸಾಲದವನು. ಅವಳ ತಳಮ&
amp;
#3251; ಹುಟ್ಟುವುದೇ ಈ ಸನ್ನಿವೇಶದಲ್ಲಿ. ಅವಳ ಚಿಕ್ಕಮ್ಮ ಮತ್ತು ತಂದೆಯ ಊನವು ತಿಳಿದು ಚಿಕ್ಕಮ್ಮಳ ಬಣ್ಣವನ್ನು ಬಯಲು ಮಾಡಿದ ಮೇಲೆ ಅವಳ ತಳಮಳ ತಣ್ಣಗಾಗುತ್ತದೆ. ತನ್ನ ಮಕ್ಕಳಿಂದಲೂ ಅವಳು ಬಿಡುಗಡೆ ಪಡೆದು ಅವರಿಗೆ ತನ್ನ ಕರ್ತವ್ಯವನ್ನಷ್ಟೇ ಮಾಡುವ ನಿರ್ಣಯಕ್ಕೆ ಬರುತ್ತಾಳೆ. ತನ್ನ ತಂದೆಯಿಂದ ಬಂದ ಆಸ್ತಿಯನ್ನೆಲ್ಲಾ ಸ್ವಯಂ ಇಚ್ಛೆಯಿಂದ ಬಿಟ್ಟು ತನ್ನ ಕಾಲ ಮೇಲೆ ನಿಲ್ಲುವ ನಿರ್ಧಾರ ಮಾಡುತ್ತಾಳೆ. ಈ ಸ್ಥಿತಿಯಲ್ಲಿ ಮಾತ್ರ ಅವಳ ಮತ್ತು ಅವಳ ಪ್ರೇಮಿ ಸೋಮಶೇಖರನ ಸ್ನೇಹವು ಅರ್ಥಪೂರ್ಣವಾಗುತ್ತದೆ. ಸ್ತ್ರೀವಾದಿಗಳು ಹೇಳುವ ವಿಮೋಚನೆಯು ಅಂತರ್ದ್ರವ್ಯದಲ್ಲಿ ಇದಕ್ಕಿಂತ ಭಿನ್ನವಿಲ್ಲ. ಆದರೆ ಅಮೃತಳು ಎಲ್ಲೂ ಸ್ತ್ರೀವಾದದ `ಭಾಷೆ'ಯನ್ನು ಬಳಸುವುದಿಲ್ಲ; ಘೋಷಣೆ ಕೂಗುವುದಿಲ್ಲ.
೫. `ವಂಶವೃಕ್ಷ'ದಲ್ಲಿ ಆರ್ಷ ನಂಬಿಕೆಗಳನ್ನು ಶ್ರೋತ್ರಿಯರ ಬಾಯಿಂದ ಪ?ಸ್ತಾಪಿಸಿ, ಆಧುನಿಕತೆಯನ್ನು ರಾಜಾರಾವ್ – ಕಾತ್ಯಾಯನಿಯರಿಗೆ ಬಿಟ್ಟು, ಕಡೆಗೆ `ವಂಶವೃಕ್ಷ'ದ ಪರಿಕಲ್ಪನೆಯನ್ನು ಸುಳ್ಳಾಗಿಸಿ (ಶ್ರೋತ್ರಿಯರಿಗೆ ತಿಳಿದುಬರುವ ಜನ್ಮರಹಸ್ಯ) ಕಾತ್ಯಾಯನಿಗೆ ಆದ ಗರ್ಭಪಾತಗಳು ಆಕಸ್ಮಿಕಗಳಿರಬಹುದು ಎಂಬ ಸೂಚನೆ ತೇಲಿಬಿಟ್ಟು ಓದುಗನನ್ನು ಇಬ್ಬಂದಿಗೆ ಸಿಗಿಸಿದಂತಾಗುತ್ತದೆ. ಇಲ್ಲೆಲ್ಲಾ ಲೇಖಕನ ತಾತ್ವಿಕತೆ, ನಂಬಿಕೆ ಸ್ಫುಟವಾಗಿ ಬಯಲಾಗಬೇಕಲ್ಲವೆ? ಇದನ್ನು `ತಬ್ಬಲಿ', `ದಾಟು', `ಜಲಪಾತ'ಗಳಿಗೂ ಅನ್ವಯಿಸಬಹುದು.
ಕಾತ್ಯಾಯನಿಗೆ ಆದ ಗರ್ಭಪಾತಗಳು ಅವಳ ಆಂತರ್ಯವನ್ನು ಕಡೆದ ದ್ವಂದ್ವಗಳ ಪರಿಣಾಮ ಎಂಬ ಅಂಶವು ಕಾದಂಬರಿಯಲ್ಲಿ ಸ್ಪಷ್ಟವಾಗಿ ಬಂದಿದೆ. ಆದುದರಿಂದ ಅವು ಆಕಸ್ಮಿಕಗಳಿರಬಹುದೆಂಬ ಸೂಚನೆ ತೇಲಿಬಿಡುವ ಪ್ರಶ್ನೆಯೇ ಇಲ್ಲ. ನನ್ನ ಕಾದಂಬರಿಯಲ್ಲಿ ನಾನು ಸಾಧ್ಯವಾದಷ್ಟು ಮರೆಯಲ್ಲಿ ಉಳಿಯಲು ಪ್ರಯತ್ನಿಸುತ್ತೇನೆ. ಸಮಸ್ಯೆಗಳು ಆಯಾ ಪಾತ್ರಕ್ಕೆ ಸೇರಿದವುಗಳು. ಆದರೆ ಇಡೀ ಕಾದಂಬರಿ ತನ್ನ ಬಂಧದಲ್ಲಿ ವಿಶಿಷ್ಟ ಅರ್ಥವನ್ನು ಧ್ವನಿಸಬೇಕೆಂಬುದು ನನ್ನ ಪ್ರಯತ್ನವಾಗಿರುತ್ತದೆ. ಒಂದು ಕಾದಂಬರ&am
p;#3
263;ಯ ನಂಬಿಕೆ ಮತ್ತು ತಾತ್ವಿಕತೆಗೂ, ಇನ್ನೊಂದು ಕಾದಂಬರಿಯ ನಂಬಿಕೆ ಮತ್ತು ತಾತ್ವಿಕತೆಗೂ ವಿರೋಧ ಕಂಡರೆ ಅದನ್ನು ನಾನು ಕಲಾತ್ಮಕ ಅನರ್ಹತೆ ಎಂದು ಭಾವಿಸುವುದಿಲ್ಲ. ಆಯಾ ಕಾದಂಬರಿಯ ಬಂಧದಲ್ಲಿ ಧ್ವನಿಸುವ ಅರ್ಥ ಅದಕ್ಕೆ ಸೇರಿದುದು.
ಕಲಾವಿದನು ಎಂದೂ ಸಿದ್ಧಾಂತಿಯಾಗಬಾರದು. ಸಂಗೀತಗಾರನು ಆರ್ದ್ರತೆ, ವಾತ್ಸಲ್ಯ, ಕಾರುಣ್ಯ, ಪ್ರಣಯ, ಭಕ್ತಿ ಮೊದಲಾದವುಗಳನ್ನು ಒಳಗೊಂಡ ಭೈರವಿಯಂಥ ಕೋಮಲ ರಾಗವನ್ನೂ ಮನಸಿಗೆ ತಟ್ಟುವಂತೆ ಹಾಡುತ್ತಾನೆ. ಅದೇ ಕಲಾವಿದ ಮರುದಿನ ವೀರ, ಉತ್ಸಾಹ ಮೊದಲಾದ ತೀವ್ರಗುಣಗಳುಳ್ಳ ಬೇರೊಂದು ರಾಗ ಹಾಡುತ್ತಾನೆ. ನೀನು ನಿನ್ನೆ ಹಾಡಿದ್ದಕ್ಕೂ, ಇವತ್ತು ಹಾಡಿದ್ದಕ್ಕೂ ವಿರೋಧವಿದೆ ಎಂದು ಯಾರೂ ಗಾಯಕನನ್ನು ಕೇಳುವುದಿಲ್ಲ. ಸಾಹಿತಿಯನ್ನು ಮಾತ್ರ ಇಂಥ ಪ್ರಶ್ನೆಗೆ ಸಿಕ್ಕಿಸುವ ಪ್ರಯತ್ನವನ್ನು ಸಿದ್ಧಾಂತಿಗಳು ಮಾಡುತ್ತಾರೆ. `ಇಡೀ ವಿಶ್ವವನ್ನು, ವಿಶ್ವದ ಜನತೆಯನ್ನು ಒಂದೇ ಎಂದು ಪ್ರೀತಿಸು' ಎಂಬ ಒಂದು ಉತ್ಕೃಷ್ಟ ಕವಿತೆಯನ್ನು ಒಬ್ಬ ಕವಿ ಬರೆಯಬಹುದು. `ನಿನ್ನ ರಾಷ್ಟ್ರಕ್ಕಾಗಿ ರಕ್ತವನ್ನು ಚೆಲ್ಲು' ಎಂಬ ರಾಷ್ಟ್ರಭಕ್ತಿಯ ಕವನವನ್ನೂ ಅವನು ಬರೆಯಬಹುದು. ಇವೆರಡರ ನಡುವೆ ಸೈದ್ಧಾಂತಿಕ ವಿರೋಧವನ್ನು ಹುಡುಕಿ ಆ ಕವಿಯನ್ನು ಹಿಗ್ಗಾಮುಗ್ಗಾ ಎಳೆದಾಡುವುದು ಕಾವ್ಯಾಸ್ವಾದನೆಯ ರೀತಿಯಲ್ಲ.
೬. ನಿಮ್ಮ ಬಾಲ್ಯವೆಂದರೆ ಧೈರ್ಯ-ಸಾಹಸಗಳ ಊಟೆ. ಪ್ರಕೃತಿ, ಕಾಡುಪ್ರಾಣಿಗಳು ಒಡ್ಡುವ ಭೀತಿಗಿಂತ ಮನುಷ್ಯನಲ್ಲಿ ಮೊಳೆಯುವ ವಿಕೃತಿ (ಸೈಕೊಪ್ಯಾತ್ ಉಮೇಶ್ ರೆಡ್ಡಿ ಇರಬಹುದು ಇಲ್ಲವೇ ಇನ್ಯಾವನೋ ತಲೆತಿರುಕ ಕ್ರೂರಿಯಿರಬಹುದು… ಇಂತಹವರು) ಉಂಟುಮಾಡುವ ತಲ್ಲಣವನ್ನು ಹೇಗೆ ಎದುರಿಸಬಹುದು ಎನ್ನುವ ಯೋಚನೆಗಳು ಬಂದಿವೆಯೇ? ಒಂದಷ್ಟು ಟಿಪ್ಸ್?
ವಾಸ್ತವವಾಗಿ ಪ್ರಕೃತಿ ಮತ್ತು ಕಾಡುಪ್ರಾಣಿಗಳು ಉಂಟುಮಾಡುವ ಭೀತಿ ಮತ್ತು ಸಂಕಟಗಳಿಗಿಂತ ಮನುಷ್ಯನಿರ್ಮಿತ ಭೀತಿ, ಸಂಕಟಗಳು ಹೆಚ್ಚು ಭಯಾನಕವೂ, ವ್ಯಾಪಕವೂ ಆಗಿರುತ್ತವೆ. ಇದು ನನ್ನ ಅನುಭವ.
೭. ರಾಗವಿಸ್ತಾರ ಮಾಡುವ `ಆಲಾಪ'ದ ಕ್&
;#32
48;ಮದಲ್ಲೇ ಕಾದಂಬರಿಯ ಬೆಳವಣಿಗೆ ಸಾಗುತ್ತದೆನ್ನುವ ನಿಮ್ಮ ವಿಶಿಷ್ಟ ಗ್ರಹಿಕೆ ಸಂತಸದೊಂದಿಗೆ ಒಂದು ತಗಾದೆಯನ್ನೂ ಎಬ್ಬಿಸುತ್ತದೆ. ಬಾಗಿಲು ಮುಚ್ಚಿದ ಆಡಿಟೋರಿಯಂನಲ್ಲಿ ಹರಿಯುವ ಸಂಗೀತ, ಬಾಗಿಲು ದಾಟಿ ಕರ್ಕಶ ಟ್ರಾಫಿಕ್ಕಿಗೆ ಮುಖಾಮುಖಿಯಾದೊಡನೆ ಯಾವ ಲೋಕದ್ದೋ ಅನಿಸಿ ಮರೆತುಹೋಗುವ ಹಾಗೆ, ಗಟ್ಟಿ ಕಟ್ಟಡದ ಮೇಲೆ ವಿಸ್ತೃತವಾಗಿ ನಮ್ಮನ್ನು ಅಲೆದಾಡಿಸಿ ಒಳಗೊಳ್ಳುವ ನಿಮ್ಮ ಕೃತಿಗಳು ಜಾಗೃತಾವಸ್ಥೆಗೆ ಬಂದೊಡನೆ ಎಲ್ಲಿಯದೋ ಅನ್ನಿಸಿಬಿಡುತ್ತವೆ.
ಸಾಹಿತ್ಯಕೃತಿಯನ್ನು ಓದುವಾಗ ಪ್ರೌಢ ವಾಚಕನು ಒಂದೊಂದು ವಾಕ್ಯವನ್ನು ದಾಟುವಾಗಲೂ ಅದನ್ನು ತನ್ನ ಅರಿವಿನ ವಿಮರ್ಶೆಗೆ ಒಳಪಡಿಸಿ ಮುಂದೆ ಹೋಗುತ್ತಾನೆ. ಸಾಹಿತ್ಯ ಕೃತಿಯ ಗಟ್ಟಿತನವು ಹೀಗೆ ಒಂದೊಂದು ಹೆಜ್ಜೆಯಲ್ಲಿಯೂ ಪರೀಕ್ಷೆಗೆ ಒಳಪಟ್ಟಿರುತ್ತದೆ. ಜಾಗ್ರತಾವಸ್ಥೆಗೆ ಬಂದ ನಂತರ ಒಳ್ಳೆಯ ಸಾಹಿತ್ಯಕೃತಿಯು ನಾಲ್ಕಾರು ದಿವಸ ಅಥವಾ ನಾಲ್ಕಾರು ವಾರ ವಾಚಕನನ್ನು ಕಾಡಬಹುದು. ಆನಂತರ ಕೂಡ ಅವನು ಜೀವನದಲ್ಲಿ ಯಾವುದಾದರು ಭಾವನಾತ್ಮಕ ಅಥವಾ ದುರ್ಧರ ಸನ್ನಿವೇಶವನ್ನು ಕಂಡಾಗ ಅಥವಾ ಎದುರಿಸಿದಾಗ ತಾನು ಓದಿದ ಸಾಹಿತ್ಯಕೃತಿ, ಸನ್ನಿವೇಶ ಅಥವಾ ಪಾತ್ರದ ನೆನಪಾದರೆ ಆ ಕೃತಿಯ ಗಟ್ಟಿತನವು ಇನ್ನೊಮ್ಮೆ ಪ್ರತಿಷ್ಠಾಪಿತವಾಗುತ್ತದೆ. ಹೀಗೆ ಸಾಹಿತ್ಯಕೃತಿಯು ಅವನ ಪ್ರeವಿಸ್ತಾರದ ಒಂದು ಅಂಶವೇ ಆಗಿರುತ್ತದೆ.
೮. ನಿಮ್ಮ ಕಾದಂಬರಿಗಳು ಚಲನಚಿತ್ರಗಳಾಗಿ ತಯಾರಾದಾಗ ಏನೆನ್ನಿಸಿದೆ? ಇತ್ತೀಚಿನ `ಮತದಾನ' ಹೇಗನ್ನಿಸಿತು? ಯಶಸ್ವಿ ಚಿತ್ರ ನಿರ್ಮಾಪಕರ (ಉದಾ: ಮಣಿರತ್ನಂ) ಸಿನಿಮಾಗಳನ್ನು ನೋಡಿದ್ದೀರಾ?
ಚಲನಚಿತ್ರವು ಕಾದಂಬರಿಯ ಪ್ರತಿಕೃತಿಯಾಗಬೇಕೆಂದು ನಾನು ಎಂದೂ ನಿರೀಕ್ಷಿಸುವುದಿಲ್ಲ. ಅದರ ಮಾಧ್ಯಮವೇ ಬೇರೆ. ಸಲಕರಣೆ ಮತ್ತು ನಿರ್ದೇಶಕ, ನಟ-ನಟಿಯರು, ಸಂಕಲನಕಾರ, ಕೆಮೆರಾಮನ್ ಮೊದಲಾದವರ ಪ್ರತಿಭೆಗಳೇ ಬೇರೆ. ಹೀಗಾಗಿ ಚಲನಚಿತ್ರವನ್ನು ಒಂದು ಸ್ವತಂತ್ರ ಕಲಾಕೃತಿಯನ್ನಾಗಿ ನಾವು ನೋಡಬೇಕು. `ಮತದಾನ' ಒಳ್ಳೆಯ ಚಲನಚಿತ್ರ ಎನಿಸಿತ&a
mp;#
3265;. ಮಣಿರತ್ನಂ ಅವರ ಚಿತ್ರಗಳನ್ನು ನಾನು ನೋಡಿಲ್ಲ.
೯. `ಮಂದ್ರ'ದ ಬಗ್ಗೆ ಹೇಳಿ? `ಮಂದ್ರ'ದ ನಂತರದ ಕಾದಂಬರಿಯ ಬಗ್ಗೆ ಯೋಚಿಸಿದ್ದೀರಾ?
ಒಂದು ಕಾದಂಬರಿಯು ಪ್ರಕಟವಾಗುವ ಮೊದಲೇ ಅದರ ಬಗೆಗೆ ಕಲಾವಿದನು ಹೇಳುವುದು ಸರಿಯಲ್ಲ. ನನ್ನ ಕಾದಂಬರಿಯನ್ನು ಈ ದೃಷ್ಟಿಯಿಂದಲೇ ಓದಬೇಕು. ಅದರ ಧ್ವನ್ಯಾರ್ಥವು ಇಂಥದೇ ಆಗಿದೆ ಎಂದು ಮುಂತಾಗಿ ಓದುಗನ ಮನಸ್ಸನ್ನು ನಿಶ್ಚಿತ ದಿಕ್ಕಿಗೆ ತಿರುಗಿಸಿ ಕಟ್ಟಿಹಾಕಬಾರದು. ಆದರೂ `ಮಂದ್ರ'ದ ಬಗೆಗೆ ಎರಡು ವಾಕ್ಯ ಹೇಳಬಹುದು. ಅದರಲ್ಲಿ ಬರುವ ಒಂದು ಪಾತ್ರವು `ಕಲಾಕೃತಿಯನ್ನು ಅನುಭವಿಸುವಾಗ ಸ್ವರ್ಗದರ್ಶನವಾದಂತಾಗುತ್ತದೆ. ಆದರೆ ಕಲಾವಿದನ ಜೀವನವನ್ನು ಕಂಡಾಗ ವ್ಯತಿರಿಕ್ತ ಭಾವ ಉಂಟಾಗುತ್ತದೆ. ಯಾಕೆ ಈ ಕಾಂಟ್ರಡಿಕ್ಷನ್?' ಎಂದು ಕೇಳುತ್ತದೆ. ಇದು ಈ ಕಾದಂಬರಿಯ ವಸ್ತು. ಒಬ್ಬ ಸಂಗೀತಗಾರನ ಜೀವನವಾಗಿ ಈ ವಸ್ತುವು ಅರಳುತ್ತದೆ.
೧೦. ನಿಮ್ಮೆಲ್ಲಾ ಕಾದಂಬರಿಗಳನ್ನು ಒಂದು ಗುಂಪಿಗೆ ಸೇರಿಸಬಹುದಾದರೆ `ಅಂಚು' ಮಾತ್ರ ಬೇರೆಯದೇ ಗುಂಪಿಗೆ (ವಸ್ತು, ನಿರೂಪಣೆ) ಸೇರುತ್ತದೆ ಅನಿಸುತ್ತೆ. ನಿಮಗೆ `ಅಂಚು' ಏನನ್ನಿಸಿದೆ? ಎಂಥ ತೃಪ್ತಿ ಕೊಟ್ಟಿದೆ?
ಅಂಚು ಎರಡೇ ಮುಖ್ಯ ಪಾತ್ರಗಳ ಮೇಲೆ ನಿಂತಿರುವ ಕಾದಂಬರಿ. ಕೈ ತೋರಿಸಿ ವಿಂಗಡಿಸಬಹುದಾದ ಘಟನೆಗಳು ಈ ಕಾದಂಬರಿಯ ರಚನೆಯಲ್ಲಿ ಬರುವುದಿಲ್ಲ. ಪಾತ್ರಗಳ ಅಂತರಂಗದ ಭಾವನೆಗಳು ಮತ್ತು ಒಳತೋಟಿಯಲ್ಲೇ ಕಾದಂಬರಿ ಬೆಳೆಯುತ್ತದೆ. ಆದ್ದರಿಂದ ಇದೊಂದು ವಿಶಿಷ್ಟ ಬಗೆಯ ಬರವಣಿಗೆ ಎಂದು ನನಗೂ ಅನ್ನಿಸುತ್ತದೆ. ತೃಪ್ತಿಯನ್ನೂ ಕೊಟ್ಟಿದೆ.
೧೧. `ದೂರ ಸರಿದರು' ಕಾದಂಬರಿಯ ಸರಿಸುಮಾರು ಎಲ್ಲಾ ಪಾತ್ರಗಳೂ ಬುದ್ಧಿಜೀವಿಗಳದ್ದೇ ಎನ್ನಿಸುತ್ತದೆ. ಇದು ಒಂದು ಬಗೆಯ ಆಭಾಸವಲ್ಲವೆ?
ಇಲ್ಲಿ ಒಂದು ಜೋಡಿ ಪಾತ್ರಗಳು ಮಾತ್ರ ಬುದ್ಧಿಜೀವಿಗಳು. ಉಳಿದವು ಅಲ್ಲ.
೧೨. ಆತ್ಮಕಥೆ ಎಂದರೆ ಆತ್ಮವಂಚನೆಯೂ ಹೌದು ಎಂಬ ಮಾತಿದೆ. `ಭಿತ್ತಿ'ಯ ಹಿನ್ನೆಲೆಯಲ್ಲಿ ನೀವು ಈ ಮಾತನ್ನು ಎಷ್ಟರಮಟ್ಟಿಗೆ ಒಪ್ಪುವುದಿಲ್ಲ?
`ಭಿತ್ತಿ'ಯಲ್ಲಿ ಬಂದಿರುವ ಪ್ರ&#
3236
;ಿಯೊಂದು ಘಟನೆ ಮತ್ತು ವಿವರವೂ ಸತ್ಯವಾದವು. ಯಾವುದನ್ನೂ ಉತ್ಪ್ರೇಕ್ಷಿಸದೆ ಶಾಂತ ಮತ್ತು ಖಚಿತವಾದ ಶಬ್ದಗಳಲ್ಲಿ ನಾನು ವ್ಯಕ್ತಪಡಿಸಿದ್ದೇನೆ. ಓದುಗರ ದೃಷ್ಟಿಯಲ್ಲಿ ನನ್ನನ್ನು ಸುಳ್ಳು ಇಮೇಜಿನಲ್ಲಿ ತೋರಿಸಿಕೊಳ್ಳುವ ಪ್ರಯತ್ನವನ್ನು ಒಂದು ಸಾಸಿವೆಯಷ್ಟೂ ನಾನು ಮಾಡಿಲ್ಲ. ಆದ್ದರಿಂದ ಆತ್ಮಕತೆಯು ಆತ್ಮವಂಚನೆಯೂ ಹೌದು ಎಂಬ ಮಾತು `ಭಿತ್ತಿ'ಗೆ ಅನ್ವಯವಾಗುವುದಿಲ್ಲ. ಭಿತ್ತಿ ಓದಿದ ಒಬ್ಬ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ನನಗೆ ಹೇಳಿದ ಮಾತುಗಳಿವು: `ಹಲವು ವರ್ಷ ವಕೀಲನಾಗಿ ಅನುಭವ ಪಡೆದಿದ್ದೇನೆ. ಇನ್ನು ಹಲವು ವರ್ಷ ಹೈಕೋರ್ಟ್ ನ್ಯಾಯಾಧೀಶನಾಗಿ ಅನುಭವ ಪಡೆದಿದ್ದೇನೆ. ಈ ಅನುಭವದ ಹಿನ್ನೆಲೆಯಲ್ಲಿ ಹೇಳುತ್ತೇನೆ, ಭಿತ್ತಿಯಲ್ಲಿ ಬರುವ ಒಂದೊಂದು ಘಟನೆಯೂ ಸತ್ಯವಾದದ್ದು; ಇಲ್ಲಿ ಒಂದು ರವೆಯಷ್ಟೂ ಸುಳ್ಳು ಇಲ್ಲ. ಇನ್ನು ಮುಂದೆ ಆತ್ಮಕತೆಯನ್ನು ಬರೆಯುವವರು ಭಿತ್ತಿಯ ಈ ಗುಣವನ್ನು ಅಲಕ್ಷಿಸಿ ಬರೆಯುವುದು ಕಷ್ಟ'.
ಭಿತ್ತಿಯ ಪಾತ್ರಗಳನ್ನು ಚಿತ್ರಿಸಿದಾಗಲೂ ನನ್ನ ವೈಯಕ್ತಿಕ ಪ್ರೀತಿ ಮತ್ತು ಬೇಸರಗಳು ಬರವಣಿಗೆಯನ್ನು ಪ್ರಭಾವಿಸಿದಂತೆ ಎಚ್ಚರ ವಹಿಸಿದ್ದೇನೆ. ಸಾಧ್ಯವಾದಷ್ಟೂ ಆ ವ್ಯಕ್ತಿಗಳ ಗುಣ ಸ್ವಭಾವಗಳು ಸಮಗ್ರವಾಗಿ ಮೂಡುವಂತೆ ಪ್ರಯತ್ನಿಸಿದ್ದೇನೆ. ಉದಾ: ಸ್ವಾಮಿ ಮೇಷ್ಟ್ರರ ನೆನಪೆಂದರೆ ಇವತ್ತಿಗೂ ಪ್ರೀತಿಯಿದೆ. ಆದರೆ ಅವರ ವ್ಯಕ್ತಿತ್ವದ ಗುಣಾವಗುಣಗಳೆಲ್ಲವನ್ನೂ ಘಟನೆಗಳ ಮೂಲಕ ಸಂಯಮಪೂರ್ಣ ಭಾಷೆಯಲ್ಲಿ ನಿರೂಪಿಸಿದ್ದೇನೆ.
೧೩. ಫ್ಯಾಂಟಸಿಯನ್ನು ವಾಸ್ತವದ ಹತ್ತಿರ ತರುವ ಬಗೆಯನ್ನು (`ನಾಯಿನೆರಳು', `ಸಾರ್ಥ'ದ ಕೆಲವು ಸನ್ನಿವೇಶಗಳು) ನಾವು ನಿಮ್ಮ ಅನೇಕ ಕಾದಂಬರಿಗಳಲ್ಲಿ ಕಾಣ್ತೇವೆ. ಕೆಲವೊಮ್ಮೆ ವಾಸ್ತವವೇ ಫ್ಯಾಂಟಸಿಯಾಗಿ ನಮಗೆ ಖುಷಿ ಕೊಡುತ್ತೆ (`ಅನ್ವೇಷಣ'ದ ಕುರದ ನೋವಿನ ವಿವರ). ಈ ಮಿಶ್ರಣದ ಫಾರ್ಮುಲಾ ಏನು?
ಫ್ಯಾಂಟಸಿ ಮತ್ತು ವಾಸ್ತವ ಎಂಬ ವಿಂಗಡಣೆಯು ಆಧುನಿಕ ಪಾಶ್ಚಿಮಾತ್ಯ ಸಂಸ್ಕೃತಿಯ ಭೌತಿಕ ವಿeನ ಮತ್ತು ಮನೋವಿeನಗಳಿಂದ ಮೂಡಿದ ಕಲ್ಪನೆಗಳ&a
mp;#
3265;. ಭೌತಿಕವಾಗಿ ನಿಜವಲ್ಲದವುಗಳೆಲ್ಲ ಫ್ಯಾಂಟಸಿಗಳು ಎಂಬುದು ಅವರ ಕಲ್ಪನೆ. ಆದರೆ ಫ್ಯಾಂಟಸಿಯಲ್ಲದ ಎಷ್ಟೋ ಕಲ್ಪನೆಗಳು ನಮ್ಮ ಪರಂಪರೆಯಲ್ಲಿವೆ. ಪುರಾಣ ಕಲ್ಪನೆಗಳು ಮತ್ತು ಯೋಗದ ಶಕ್ತಿಗಳನ್ನು ನಾವು ಫ್ಯಾಂಟಸಿ ಎಂಬ ಶಬ್ದವನ್ನು ಅನ್ವಯಿಸಿ ತಳ್ಳಿಬಿಡಬಹುದೆ? ದೇವುಡು ಅವರ `ಮಹಾಬ್ರಾಹ್ಮಣ' ಮತ್ತು `ಮಹಾಕ್ಷತ್ರಿಯ' ಕಾದಂಬರಿಗಳನ್ನು ಫ್ಯಾಂಟಸಿ ನಾವೆಲ್ಸ್ ಎಂದು ಕರೆಯಬಹುದೆ? ವಾಸ್ತವವಾದಿ ಕಾದಂಬರಿಯ ಮಿತಿಯ ಅರಿವಾದ ನಂತರ ಪಶ್ಚಿಮದಲ್ಲಿ ಕೂಡ ಫ್ಯಾಂಟಸಿ ಕಾದಂಬರಿಗಳನ್ನು ಬರೆಯತೊಡಗಿದರು. ದಕ್ಷಿಣ ಅಮೆರಿಕದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಮತ್ತು ಜರ್ಮನಿಯ ಗುಂಟರ್‌ಗ್ರಾಸ್ ಇವರು ಈ ಮಾರ್ಗದ ಪ್ರಮುಖರು.
ಆದರೆ ನಮ್ಮಲ್ಲಿ ಈ ವಿಧಾನವು ಮೊದಲಿನಿಂದಲೂ ಇದೆ. ಪ್ರಾಣಿಗಳು ಮಾತನಾಡುವುದು, ಪಾತ್ರವು ಬೇರೆ ಬೇರೆ ಜನ್ಮಗಳನ್ನೆತ್ತಿ ಅನುಭವ ಪಡೆವುದು ಮೊದಲಾದವು ರಾಮಾಯಣ, ಮಹಾಭಾರತಗಳಲ್ಲೂ ಇವೆ. ಇತರ ಕಥಾ ಪ್ರಕಾರಗಳಲ್ಲೂ ಇವೆ.
`ಸಾರ್ಥ'ವನ್ನು ಬರೆಯುವಾಗ ನಾನು ಈ ಕಲ್ಪನೆಗಳನ್ನು ಬಳಸಿಕೊಂಡೆ. ವಾಸ್ತವವಾಗಿ `ಸಾರ್ಥ'ದಲ್ಲಿ ಬಳಸಿಕೊಂಡಿರುವುದು ಪುರಾಣ ಕಲ್ಪನೆಗಳಿಗಿಂತ ಹೆಚ್ಚಾಗಿ ಯೋಗದ ಶಕ್ತಿಗಳನ್ನು. ಆ ಪಾತ್ರಗಳು ಕೂಡ ಯೋಗ, ತಂತ್ರ ಮೊದಲಾದ ಸಾಧನೆಗಳಲ್ಲಿ ತೊಡಗಿದವುಗಳಾದುದರಿಂದ ಹೀಗೆ ಬಳಸಿಕೊಳ್ಳುವುದು ಸಹಜವೂ ಆಯಿತು.
೧೪. ಪ್ರಪಂಚ ಇಡೀ ತಿರುಗಿದ್ದೀರಿ. ಆಧುನಿಕ ವಿದ್ಯಮಾನಗಳಿಂದ – ಉದಾರೀಕರಣ, ಜಾಗತೀಕರಣ, ಸ್ತ್ರೀ ಸ್ವಾತಂತ್ರ/ವಾದ ಇತ್ಯಾದಿ ಗಂಡು-ಹೆಣ್ಣಿನ ಸಂಬಂಧಗಳನ್ನು ಸೂಕ್ಷ್ಮವಾಗಿಸುವ, ವಿವಾಹಕ್ಕೆ ಬೆದರಿಕೆಯೊಡ್ಡುವ ಸಂಗತಿಗಳು ನಿಮ್ಮನ್ನು ಕಾಡಿಲ್ಲವೇಕೆ?
ಈಬಗೆಗೆ ನಾನು ಸಾಕಷ್ಟು ಚಿಂತಿಸಿದ್ದೇನೆ. ಈ ಸಂದರ್ಭದ ಕೆಲವು ಹೊಳಹುಗಳು `ತಂತು' ಮತ್ತು `ಅಂಚು'ವಿನಲ್ಲಿ ಕಾಣಿಸಿಕೊಂಡಿವೆ. ಆದರೆ ಇದೇ ಪ್ರಮುಖ ವಸ್ತುವಾಗುಳ್ಳ ಕಾದಂಬರಿ ನನ್ನ ಮನಸ್ಸಿನಲ್ಲಿನ್ನೂ ರೂಪುಗೊಂಡಿಲ್ಲ. ಮುಂದೆ ಎಂದಾದರೂ ರೂಪುಗೊಳ್ಳಬಹುದು.
೧೫. ಸುಪ್ರಸಿದ್ಧ ಕಾದಂಬರ&
#326
3;ಕಾರರು ಬಳಲುವ ಹಾಗೆ ತಾವೆಂದಾದರೂ female adulation ನಿಂದ ಬಳಲಿದ್ದಿದೆಯೇ?
ಪ್ರತಿಭಾವಂತ ಕಲಾವಿದರಿಗೆ ಅಭಿಮಾನಿಗಳು ಇದ್ದೇ ಇರುತ್ತಾರೆ. ಕಲಾವಿದನಿಗೆ ಸ್ತ್ರೀ ಅಭಿಮಾನಿಗಳು, ಕಲಾವಿದೆಗೆ ಪುರುಷ ಅಭಿಮಾನಿಗಳು ಇದ್ದಾಗ, ಅಭಿಮಾನವು ಸೆಳೆತಕ್ಕೆ ಒಳಗಾಗುವುದು ಸುಲಭವೇ. ಶಕ್ತಿವಂತ ಕಲಾವಿದನು ಇಂಥ ಭಾವನೆಗಳನ್ನು ಆತ್ಮಾವಲೋಕನಕ್ಕೆ ಒಳಪಡಿಸಿ, ಅವನ್ನೇ ತನ್ನ ಕಲಾಕೃತಿಯ ವಸ್ತುವನ್ನಾಗಿಸಿಕೊಂಡು ಮೇಲೇರುತ್ತಾನೆ. ಇಂಥ ಭಾವನೆಗಳಲ್ಲೆ ಮುಳುಗಿ ಆನಂದಿಸತೊಡಗುವ ಕಲಾವಿದನು ಕೆಳಗೆ ಬಿದ್ದುಹೋಗುತ್ತಾನೆ.
೧೬. ಕಾರಂತರು ಕಾದಂಬರಿಗಳನ್ನು ಬರೆದ ಪ್ರಮಾಣದಲ್ಲಿಯೇ ಮಾಹಿತಿ ಸಾಹಿತ್ಯವನ್ನೂ ಬರೆದರು. ಆದರೆ ಕಾದಂಬರಿ ವಿಷಯಕ್ಕೆ ಬಂದಾಗ ಕಾರಂತರ ಜೊತೆಗೆ ಗುರುತಿಸಲ್ಪಡುವ ನೀವು ಮಾಹಿತಿ ಸಾಹಿತ್ಯವನ್ನು ಬರೆದಿಲ್ಲ. ಕೇವಲ ಸೃಜನಶೀಲ ಸಾಹಿತ್ಯ ರಚನೆಯ ಕೇಂದ್ರೀಕೃತ ಗಮನವೊಂದೇ ಇದಕ್ಕೆ ಕಾರಣವೆ ಅಥವಾ ಬೇರೆ ಕಾರಣಗಳೂ ಇವೆಯೆ?
ನಾನು ಮಾಹಿತಿ ಸಾಹಿತ್ಯವನ್ನು ಮಾತ್ರವಲ್ಲ, ಸಿದ್ಧಾಂತ ಸಾಹಿತ್ಯ ಅಥವಾ ವಿಚಾರ ಸಾಹಿತ್ಯವನ್ನು ಕೂಡ ಬರೆದಿಲ್ಲ. ಹಾಗೆ ಬರೆದರೆ ನನ್ನ ಬುದ್ಧಿಯು ಆ ಸಿದ್ಧಾಂತ ಅಥವಾ ವಿಚಾರಗಳಿಗೆ ಬಂಧಿಸಿಕೊಳ್ಳುತ್ತದೆ. ಸೃಜನಶೀಲತೆಯ ಸ್ವಾತಂತ್ರ ಹೊರಟುಹೋಗುತ್ತದೆ. ವಿಚಾರವೇನಿದ್ದರೂ ಕಾದಂಬರಿಯ ಸನ್ನಿವೇಶ ಮತ್ತು ಪಾತ್ರದ ಅನುಭವಗಳ ಸಂದರ್ಭದಲ್ಲಿ ಮೂಡಬೇಕಾದವುಗಳು.
ವಾಸ್ತವವಾಗಿ ಬೇರೆ ಬೇರೆ ದೇಶ ಸಂಚಾರ ಹೊರಡುವ ಮುನ್ನ ಕೆಲವು ಮಿತ್ರರು ಸಂಚಾರದ ಟಿಪ್ಪಣಿಗಳನ್ನು ಮಾಡಿಕೊಂಡು ಪ್ರವಾಸ ಕಥನ ಬರೆಯುವಂತೆ ಸೂಚಿಸಿದ್ದುಂಟು. ಆದರೆ ನನ್ನ ಜಾಯಮಾನಕ್ಕೆ ಅದು ಸಾಧ್ಯವಾಗುವುದಿಲ್ಲ. ನೋಡಿದ್ದನ್ನು ಆ ಕ್ಷಣವೇ ಟಿಪ್ಪಣಿ, ದಾಖಲೆ ಮಾಡುವುದು, ಫೋಟೋ ತೆಗೆಯುವುದರಲ್ಲಿ ಒಬ್ಬ ಪತ್ರಕರ್ತನಿಗೆ ನನಗಿಂತ ಹೆಚ್ಚು ತರಬೇತಿ ಮತ್ತು ಪರಿಣತಿ ಇರುತ್ತದೆ. ನನ್ನದಲ್ಲದ ಕೆಲಸವನ್ನು ನಾನೇಕೆ ಮಾಡಬೇಕು? ದೇಶ ಸಂಚಾರ ಮಾಡಿ ಅದರ ಅನುಭವವನ್ನು ಅಂತರ್ಗತ ಮಾಡಿಕೊಳ್ಳುವುದರಲ್ಲ&
amp;
#3270; ನನಗೆ ಸಂತೋಷವಿದೆ. ಮುಂದೆ ಎಂದಾದರೂ ಯಾವುದಾದರೂ ಕಾದಂಬರಿಯ ಅಂಗವಾಗಿ ಮೂಡಿ ಬಂದರೆ ಆಕಸ್ಮಿಕವೇ ಹೊರತು ಉದ್ದೇಶಪೂರ್ವಕವಾದುದಲ್ಲ.
೧೭. ಇವತ್ತು ಅನೇಕ ಯುವ ಲೇಖಕರ ಪುಸ್ತಕಗಳಿಗೆ ಹಿರಿಯರು ಮುನ್ನುಡಿ ಬರೆಯುವಾಗ ಅತಿಯಾಗಿ ಹೊಗಳಿರುತ್ತಾರೆ. ಆದರೆ ಸಾಹಿತ್ಯದ ಗುಣಮಟ್ಟ ತೀರಾ ಕಳಪೆಯಾಗಿರುತ್ತದೆ. ಈ ಬಗೆಯ ಮಾರ್ಗದರ್ಶನವನ್ನು ನೀವು ಸಮರ್ಥಿಸುತ್ತೀರಾ?
ಇವೆಲ್ಲ ಪೋತ್ಸಾಹ ಮಾತುಗಳು. ಇವುಗಳಿಂದ ಯುವ ಲೇಖಕರ ಬೆಳವಣಿಗೆಗೆ ಸಹಾಯವಾಗುವುದಿದ್ದರೆ ಆಗಲಿ.
೧೮. ನಿಮಗೆ ಇಷ್ಟವಾದ ಮೂರು ಕನ್ನಡ ಕಾದಂಬರಿಗಳು? ಇತ್ತೀಚೆಗೆ ಕನ್ನಡ ಕಾದಂಬರಿಗಳನ್ನು ಬರೆಯುವವರು ಕಡಿಮೆಯಾಗಿರುವ ಬಗ್ಗೆ? ಈ ಎರಡು ದಶಕಗಳಲ್ಲಿ ಬಂದ ಹೊಸಬರ ಒಳ್ಳೆಯ ಕಾದಂಬರಿಗಳನ್ನು ಹೆಸರಿಸಬಹುದೆ? ಯಾಕೆ ಅವು ನಿಮಗೆ ಇಷ್ಟವಾದವು?
`ಮಹಾಕ್ಷತ್ರಿಯ', `ಚಿಕ್ಕವೀರ ರಾಜೇಂದ್ರ', `ಬಂಡಾಯ', `ಗ್ರಾಮಾಯಣ' ಇನ್ನೂ ಕೆಲವು ಇವೆ.
ಕುಂವೀಯವರ `ಶಾಮಣ್ಣ' ಶಕ್ತ ಕಾದಂಬರಿ. ಭಾಷೆ, ವಿಧಾನ ಎಲ್ಲವೂ. ಆದರೆ ಕೊಂಚ (ಬೇರೊಬ್ಬ ಸಮರ್ಥರಿಂದ ಮಾಡಿಸಬೇಕಿತ್ತು) ಎಡಿಟ್ ಮಾಡಬೇಕಿತ್ತು. ಇನ್ನೂ ಒಳ್ಳೆ ಬಂಧ ಬರುತ್ತಿತ್ತು. ಸಮಕಾಲೀನ ಪಾತ್ರಗಳು, ಘಟನೆಗಳು, ಪುನರಾವರ್ತನೆಗಳನ್ನೆಲ್ಲ ಕಿತ್ತು ಹಾಕಿ ಕಾದಂಬರಿಯ ಕೇಂದ್ರವಸ್ತುವಿನ ಮೇಲೆ ಗಮನವಿಟ್ಟು ಕಾದಂಬರಿಗೆ ಒಂದು ಬಂಧವನ್ನು ತಂದುಕೊಡಬೇಕಿತ್ತು. ಈ ಸೂಚನೆಯನ್ನು ನಾನು `ಶಾಮಣ್ಣ' ಕಾದಂಬರಿಗೆ ಮಾತ್ರ ಅನ್ವಯಿಸಿ ಹೇಳುತ್ತಿಲ್ಲ. ಲೇಖಕ ಎಷ್ಟೇ ಅನುಭವಿಯಾಗಿರಲಿ, ಹೊಸ ಕಾದಂಬರಿ ಬರೆದ ಮೇಲೆ ಅದನ್ನು ಒಬ್ಬ ಸಹೃದಯನಾದ ಸಮರ್ಥ ವಿಮರ್ಶಕ ಮಿತ್ರನಿಗೆ ಒಪ್ಪಿಸಬೇಕು. ಆ ಮಿತ್ರನು ಅದನ್ನು ಎಳೆ ಎಳೆಯಾಗಿ ಬಿಡಿಸಿ ವಿಮರ್ಶಿಸಿ ಕಾದಂಬರಿಯ ಕೇಂದ್ರಬಿಂದು, ಕೇಂದ್ರವೃತ್ತಗಳ್ಯಾವುವು, ಅವುಗಳ ದೃಷ್ಟಿಯಿಂದ ಯಾವುವು ಸಂಬದ್ಧ, ಅಸಂಬದ್ಧ ಎಂದು ಬಿಡಿಸಿ ಹೇಳಬೇಕು. ಕಾದಂಬರಿಕಾರ ಈ ವಿಮರ್ಶೆ ಆಲಿಸಿದ ನಂತರ ಕೃತಿಯನ್ನು ತಿದ್ದಿ ಬರೆಯಬೇಕು. ಈ ಶಿಸ್ತು ಪ್ರತಿಯೊಬ್ಬ ಕಾದಂಬರಿಕಾರನಿಗೂ, ಪ್ರತಿಯೊಂದು ಕಾ&
#323
8;ಂಬರಿಯ ಬರವಣಿಗೆಯಲ್ಲೂ ಇರಬೇಕು.
೧೯. ಸಾಹಿತ್ಯ ಕೃತಿಯೊಂದನ್ನು ಕಲೆಯ ಅಭಿವ್ಯಕ್ತಿಯಾಗಿಯಷ್ಟೇ ನೋಡಬೇಕೇ, ಲೇಖಕನ ಆದರ್ಶ, ಅಭಿಪ್ರಾಯಗಳೂ ಮುಖ್ಯವೇ?
ಹೌದು. ಕಲೆಯ ಅಭಿವ್ಯಕ್ತಿಯಾಗಿಯಷ್ಟೆ ನೋಡಬೇಕು. ಕಾದಂಬರಿ ಹೊರಗೆ ಪ್ರಕಟವಾಗುವ ಲೇಖಕನ ಆದರ್ಶ ಮತ್ತು ಅಭಿಪ್ರಾಯಗಳು ಅಸಂಬದ್ಧ.
೨೦. ಭಾಷಾ ವೈವಿಧ್ಯ ನಮ್ಮ ದೇಶದ ಗರಿಮೆ. ಆದರೆ ತ್ರಿಭಾಷಾ ಸೂತ್ರ ಇತ್ಯಾದಿ ರಗಳೆಗಳಲ್ಲಿ ನಾವು ವಿವಿಧ ಭಾಷೆಗಳಲ್ಲಿ ಬರ್‍ತಾ ಇರೋ ಸಾಹಿತ್ಯಾನ ಗಮನಿಸುತ್ತಿಲ್ಲ ಅಂತ ಅನ್ನಿಸುತ್ತೆ. ಈ ಕೊರತೆ ತುಂಬಲಿಕ್ಕೆ ಏನು ಮಾಡಬಹುದು? ಈಗ ಕಾಣ್ತಾ ಇರೋ ಸರಕಾರಿ ಯತ್ನಗಳು, ಖಾಸಗಿ ಯತ್ನಗಳು ಸಾಕೆ?
ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್ ಮೊದಲಾದ ಸಂಸ್ಥೆಗಳ ಪ್ರಯತ್ನದ ಫಲವಾಗಿ ಭಾರತದ ಬೇರೆ ಬೇರೆ ಭಾಷೆಗಳ ಸಾಹಿತ್ಯ ಪ್ರತಿಭೆಗಳು ಇತರ ಎಲ್ಲ ಭಾಷೆಗಳಲ್ಲಿ ಅನುವಾದಗೊಳ್ಳುತ್ತಿವೆ. ಈ ದಿಕ್ಕಿನಲ್ಲಿ ತಕ್ಕಮಟ್ಟಿನ ಕೆಲಸ ಆಗಿದೆ. ಆಗಬೇಕಾದ ಕೆಲಸ ತುಂಬ ಇದೆ. ಖಾಸಗಿ ಪ್ರಕಾಶಕರು ಈ ದಿಕ್ಕಿನಲ್ಲಿ ತುಂಬ ಕೆಲಸ ಮಾಡಬೇಕು. ವ್ಯಾಪಾರವನ್ನೂ ಬೆಳೆಸಿಕೊಳ್ಳಬಹುದು. ಬೇರೆ ಬೇರೆ ಭಾಷೆಗಳಿಂದ ನೇರವಾಗಿ ತಮ್ಮ ಭಾಷೆಗೆ ಅನುವಾದ ಮಾಡಬಲ್ಲ ಸಮರ್ಥರ ಕೊರತೆ ಎಲ್ಲ ಭಾಷೆಗಳಲ್ಲೂ ಇದೆ. ಇದನ್ನು ತುಂಬಲು ಏನಾದರೂ ಪ್ರಯತ್ನ ನಡೆಯಬೇಕು.
೨೧. ಕನ್ನಡಕ್ಕಾಗಿ ಇಷ್ಟೆಲ್ಲ ಸರಕಾರಿ ಸಂಸ್ಥೆಗಳಿವೆ (ಅಕಾಡೆಮಿ, ಸರಕಾರಿ ಅನುದಾನದ ಪರಿಷತ್ತು, ಪುಸ್ತಕ ಪ್ರಾಧಿಕಾರ, ಅಭಿವೃದ್ಧಿ ಪ್ರಾಧಿಕಾರ). ಇವೆಲ್ಲ ಒಂದು ಕೇಂದ್ರೀಕೃತ ವ್ಯವಸ್ಥೆಯಡಿ ಬಂದ್ರೆ ಅಥವಾ ಇವುಗಳ ನಡುವೆ ಸಮನ್ವಯ ಇದ್ರೆ ಕೆಲಸ ಹೆಚ್ಚಾಗುತ್ತೆ ಅನ್ನಿಸಲ್ವೆ? ಅಥವಾ ಈಗಿರೋ ವ್ಯವಸ್ಥೇಲಿ ಯಾವ ಬಗೆಯ ಬದಲಾವಣೆಯನ್ನು ನೀವು ಬಯಸ್ತೀರಿ?
ಕೇಂದ್ರೀಕೃತ ವ್ಯವಸ್ಥೆಯಾಗುವುದು ಬೇಡ. ಭಾರ ಹೆಚ್ಚಾದಷ್ಟು ನಡಿಗೆ ಮಂದಗತಿಯಾಗುತ್ತದೆ. ಒಂದು ಹಂತದಲ್ಲಿ ಮಲಗಿಯೇ ಬಿಡುತ್ತದೆ. ಇವುಗಳ ನಡುವೆ ಸಮನ್ವಯ ಇರಲೇಬೇಕು. ಕೆಲಸದ ಪುನರಾವರ್ತನೆಯಾಗದಂತೆ ನೋಡಿಕೊಳ್ಳು
ವ ಸಮನ್ವಯದ ವ್ಯವಸ್ಥೆ ಈಗಲೂ ಇದೆ ಎಂದು ನನ್ನ ಗ್ರಹಿಕೆ. ವಿವರ ನನಗೆ ಗೊತ್ತಿಲ್ಲ. ಈಗಿರುವ ವ್ಯವಸ್ಥೆಯಲ್ಲಿ ಬದಲಾವಣೆ ಸೂಚಿಸುವ ಮಟ್ಟಿಗೆ ವಿವರಗಳು ನನಗೆ ಗೊತ್ತಿಲ್ಲ.
೨೨. ಬಂಡಾಯ, ದಲಿತ ಸಾಹಿತ್ಯದ ಬಿಸಿ ಆರುತ್ತಿದೆಯೆ? ಹಾಗಾಗಲಿಕ್ಕೆ ಜಾಗತೀಕರಣ, ಬಂಡವಾಳಶಾಹಿ ವ್ಯವಸ್ಥೆಯ ಮೇಲುಗೈ ಕಾರಣವೆ? ಅಥವಾ ಈ ಸಂಘಟನೆಗಳ ದೌರ್ಬಲ್ಯವೆ? ಅಥವಾ ಇವೆಲ್ಲ ಕಾಲಮಾನದ ತಿರುವುಗಳು ಎಂದುಕೊಂಡು ಸುಮ್ಮನಾಗಬೇಕೆ?
ಬಂಡಾಯ, ದಲಿತ ಮೊದಲಾದವುಗಳನ್ನು ಸಾಮಾಜಿಕ ಹಾಗೂ ರಾಜಕೀಯ ಚಳವಳಿ ಎಂದು ಭಾವಿಸಬಹುದು. ಇವು ಶುದ್ಧ ಅರ್ಥದಲ್ಲಿ ಸಾಹಿತ್ಯ ಚಳವಳಿಗಳಲ್ಲ. ಈ ಬಗೆಗೆ ಕನಕಪುರ ಸಾಹಿತ್ಯ ಸಮ್ಮೇಳನದ ನನ್ನ ಅಧ್ಯಕ್ಷ ಭಾಷಣವನ್ನು ನೋಡಿ.
೨೩. ನಮ್ಮ ಕನ್ನಡ ಸಾಹಿತ್ಯ ಚಲನಶೀಲವಾಗಿದೆ ಅಂತ ಹೇಳ್ತೀರ? ಹೇಗೆ?
ಚಲನಶೀಲತೆ ಇದೆ.
೨೪. ನಿಮ್ಮ ಥರದ ಕಥನಶೈಲಿಯನ್ನು ಹೊಂದಿದ್ದಾರೆ ಎನ್ನಬಹುದಾದ ಬೇರೆ ಭಾಷೆಯ ಲೇಖಕರು, ಕಾದಂಬರಿಕಾರರು ಇದ್ದಾರ? ಪರಿಚಯಿಸಿ.
ನನಗೆ ಗೊತ್ತಿಲ್ಲ.
೨೫. ಸಾಹಿತಿಗಳ ನಡುವಣ ಜಗಳಕ್ಕೆ ಪತ್ರಿಕೆಗಳು ಜಾಗ ಮಾಡಿಕೊಡುವುದು ಸರಿ ಅಂತೀರ, ತಪ್ಪು ಅಂತೀರ? ಯಾಕೆ?
ಸಾಹಿತಿಗಳು ಮತ್ತು ಕಲಾವಿದರು ಸಾಮಾನ್ಯ ಮನುಷ್ಯರೇ. ಅವರಲ್ಲೂ ಆಸೆ, ನಿರಾಸೆ, ಮತ್ಸರಗಳು ಇರುತ್ತವೆ. ಆದರೆ ಇವೇನಿದ್ದರೂ ಖಾಸಗಿ ಮಟ್ಟದಲ್ಲೇ ಇದ್ದು, ಅಲ್ಲೇ ಮಸಗಿ ಹೋಗಿಬಿಡಬೇಕು. ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಬಹುದಾದ ವಿಷಯಗಳಲ್ಲ. ಇವು ಮಾಧ್ಯಮಗಳ ಸರಕಾದರೆ ಸಾಮಾನ್ಯ ಓದುಗರು ಈ ಗಾಸಿಪ್‌ಗಳನ್ನೇ ಕಲೆಯ ತಿರುಳೆಂದು ಭಾವಿಸಿ ಕಲಾಕೃತಿಗಳ ಪ್ರವೇಶವನ್ನೇ ಮಾಡದಿರಬಹುದು. ಪ್ರಸಿದ್ಧ ವಿeನಿಗಳ ನಡುವೆಯೂ ಇಂಥ ಮತ್ಸರಗಳು ಇದ್ದವು, ಇವೆ. ಅದಕ್ಕೆ ಪ್ರಾಧಾನ್ಯ ಕೊಟ್ಟು ಸುದ್ದಿ ಮಾಡಿದರೆ ಅವರು ಕಂಡುಹಿಡಿದ ಮಹತ್ತರ ಸೂತ್ರ ಸಿದ್ಧಾಂತಗಳ ಸ್ಥಾನ ಏನಾಗಬೇಕು? ಆದ್ದರಿಂದ ಪತ್ರಿಕೆಗಳಲ್ಲಿ ಗಾಳಿಸುದ್ದಿಯಾಗಲಿ ಅಥವಾ ಗಾಳಿಸುದ್ದಿ ಪತ್ರಿಕೆಗಳನ್ನಾಗಲಿ ಪೋತ್ಸಾಹಿಸಬಾರದು.
೨೬. ಪ್ರಕೃತಿ ಆಸ್ವಾದನೆಗೆಂದೇ &
#324
0;ೀವು ಪ್ರವಾಸ ಮಾಡಿದ ಇತ್ತೀಚಿನ ವರದಿ ಕೊಡ್ತೀರ?
೨೦೦೦ನೇ ಫೆಬ್ರವರಿ ತಿಂಗಳಿನಲ್ಲಿ ನಾನು ಯಾವುದೋ ಕೆಲಸಕ್ಕೆ ಡೆಹ್ರಾಡೂನ್‌ಗೆ ಹೋಗಿದ್ದೆ. ಅದು ಚಳಿಗಾಲ. ಹಿಮಾಲಯಕ್ಕೆ ಯಾವ ಯಾತ್ರಿಗಳೂ ಹೋಗದಿರುವ ಕಾಲ. ನಾನು ಗಂಗೋತ್ರಿ, ಯಮುನೋತ್ರಿ, ಬದರಿ, ಕೇದಾರ ಮೊದಲಾದ ಪ್ರದೇಶಗಳನ್ನು ಆ ಹಿಂದೆ ಮೂರು ಬಾರಿ ನೋಡಿದ್ದೆ. ಆದರೆ ಅವೆಲ್ಲ ಹಿಮ ಕರಗಿ ಯಾತ್ರಿಗಳು ಹೋಗುವ ತಿಂಗಳುಗಳಲ್ಲಿ. ಆದರೆ ಈ ಫೆಬ್ರವರಿಯಲ್ಲಿ ಈ ಪ್ರದೇಶಗಳಿಗೆ ಹೋಗಬೇಕೆಂಬ ಆಶೆಯಾಯಿತು.
ಡೆಹ್ರಾಡೂನಿನಲ್ಲಿಯೇ ಒಂದು ಟ್ಯಾಕ್ಸಿ ಮಾಡಿಕೊಂಡೆ. ಅಲ್ಲಿಂದ ಟೆಹ್ರಿ, ಉತ್ತರ ಕಾಶಿ, ಗಂಗೋತ್ರಿ, ಹಿಂತಿರುಗಿ ಶ್ರೀನಗರ (ಗಡವಾಲ್), ರುದ್ರಪ್ರಯೋಗ, ಗುಪ್ತಗಾಶಿ, ಹಿಂತಿರುಗಿ ಜೋಷಿಮಠ, ಬದರಿ ಈ ಕಡೆಗಳಲ್ಲಿ ಹತ್ತು ದಿನ ಸಂಚಾರ ಮಾಡಿಸಬೇಕೆಂದು ಟ್ಯಾಕ್ಸಿಯವನಿಗೆ ಹೇಳಿದೆ. ಹಿಮಾಲಯದ ಇಡೀ ಪ್ರದೇಶದಲ್ಲಿ ಯಾವ ಸಂಚಾರವೂ ಇರಲಿಲ್ಲ. ಯಾತ್ರಿಕರೂ ಇರಲಿಲ್ಲ. ಸ್ಥಳೀಕರು ಮಾತ್ರ ಇದ್ದರು. ಹಲವು ಕಡೆಗಳಲ್ಲಿ ಹಿಮ ತುಂಬಿ ಹೋಗಿತ್ತು. ಇಡೀ ರಸ್ತೆಯಲ್ಲಿ ಟ್ಯಾಕ್ಸಿಯಲ್ಲಿ ನಾನೊಬ್ಬನೇ. ಪಕ್ಕದಲ್ಲಿ ಡ್ರೈವರ್. ನಡುನಡುವೆ ಟ್ಯಾಕ್ಸಿಯಿಂದ ಇಳಿಯುವುದು, ತುಸು ಎತ್ತರ ಹತ್ತುವುದು, ಇಳಿದು ಮತ್ತೆ ಟ್ಯಾಕ್ಸಿಯಲ್ಲಿ ಕೂರುವುದು. ಇನ್ನು ಹಿಮಾಲಯಕ್ಕೆ ಬಂದರೆ ಈ ಅವಧಿಯಲ್ಲೇ ಬರಬೇಕು. ಹಿಮಾಲಯವು ಹಿಮಾಲಯವಾಗಿರುವುದು ಈ ಅವಧಿಯಲ್ಲಿ ಮಾತ್ರವೆನಿಸಿತು.
ಎರಡು ಕಾದಂಬರಿಗಳ ಬರವಣಿಗೆಯ ನಡುವೆ ಏನು ಮಾಡುತ್ತೀರಿ? ಮುಂದಿನ ಕಾದಂಬರಿ ಸಿದ್ಧತೆಗೂ ಮೊದಲು?
ಓದುತ್ತೇನೆ. ತತ್ವಶಾಸ್ತ್ರ, ಅಸ್ಟ್ರೋಫಿಸಿಕ್ಸ್, ಇತಿಹಾಸ ನನಗೆ ಇಷ್ಟ. ಹಿಂದೂಸ್ತಾನಿ ಸಂಗೀತ ಕಛೇರಿಗಳಿಗೆ ಹೋಗುತ್ತೇನೆ. ಅದಕ್ಕಾಗಿ ಪೂನಾ, ದಿಲ್ಲಿ, ಗ್ವಾಲಿಯರ್‌ಗಳಿಗೆ ಹೋಗಿ ಸಂಚಾರ ಮಾಡ್ತೀನಿ.
ಈಗಲೂ ಸೌಂದರ್ಯ ಮೀಮಾಂಸೆಯ ಆಸಕ್ತಿಯಿದೆಯೆ?
ಮೊದಲು, ಎಂದರೆ ಸಂಪೂರ್ಣವಾಗಿ ಸಾಹಿತ್ಯ ರಚನೆಯಲ್ಲಿ ತೊಡಗುವ ಮೊದಲು ಬೇರೆ ಬೇರೆ ಸೌಂದರ್ಯ ಮೀಮಾಂಸಕರ ಸಿದ್ಧಾಂತಗಳನ್ನು ಬಹಳ ಶ್ರದ್ಧೆಯಿಂದ ಓದುತ
್ತಿದ್ದೆ. ಈಗ ಅಷ್ಟು ಶ್ರದ್ಧೆಯಿಂದ ಓದುವುದಿಲ್ಲ. ಸಾಹಿತ್ಯ ಸೃಷ್ಟಿಯ ನನ್ನ ಅನುಭವಗಳನ್ನೇ ಅವಲೋಕಿಸಿಕೊಂಡು ಆಗಾಗ್ಗೆ ಆಲೋಚಿಸುವುದುಂಟು.
ಇತ್ತೀಚೆಗೆ ಓದಿದ ಪುಸ್ತಕ?
ಇತ್ತೀಚೆಗೆ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಇತಿಹಾಸ ಮತ್ತು ಸಿದ್ಧಾಂತಗಳನ್ನು, ಅವುಗಳ ಮೂಲಗ್ರಂಥಗಳನ್ನು ಕ್ರಮವಾಗಿ ಅಧ್ಯಯನ ಮಾಡುತ್ತಿದ್ದೀನಿ.
ನಿಮ್ಮ ಓದುಗರು ಬರೆಯುವ ಪತ್ರಗಳಿಗೆ ನೀವು ಎಷ್ಟರ ಮಟ್ಟಿಗೆ ಸ್ಪಂದಿಸುತ್ತೀರಿ? ಬಂದ ಎಲ್ಲಾ ಪತ್ರಗಳಿಗೂ ಉತ್ತರಿಸುತ್ತೀರಾ? ಹಾಗೆ ಪರಿಚಯವಾದ ಒಬ್ಬ ಸಾಮಾನ್ಯ ಓದುಗ ಇದ್ದಾರಾ?
ಉತ್ತರಿಸಬೇಕು ಎಂಬ ಮನಸ್ಸೇನೊ ಇದೆ. ಆದರೆ ಎಷ್ಟೋ ಬಾರಿ ಬರೆಯುವ ಲಹರಿ ಬರುವುದಿಲ್ಲ. ವಾಸ್ತವವಾಗಿ ನನಗೆ ಅತ್ಯಂತ ಕಷ್ಟದ ಸಂಗತಿಯೆಂದರೆ ಬರವಣಿಗೆಯೆ. ಕಾದಂಬರಿಯೊಂದನ್ನು ಆರಂಭಿಸುವ ಮುಂಚೆ ತುಂಬಾ ಒದ್ದಾಡುತ್ತೇನೆ. ಬರವಣಿಗೆಗೆ ತೊಡಗಿದ ಮೇಲೆ ಮುಂದೆ ಸಾಗುವುದು ಕಷ್ಟವಲ್ಲ. ಪತ್ರವನ್ನೊ, ಲೇಖನವನ್ನೊ ಬರೆಯುವುದು ನಿಜವಾಗಿಯೂ ನನಗೆ ಕಷ್ಟದ ಕೆಲಸ. ಹೀಗಾಗಿ ನಾನು ಎಷ್ಟೋ ಪತ್ರಗಳಿಗೆ ಉತ್ತರ ಬರೆದಿಲ್ಲ. ಅಂಥ ಪತ್ರ ಲೇಖಕರಿಗೆಲ್ಲ ನಾನು ಈ ಮೂಲಕ ಕ್ಷಮೆ ಬೇಡುತ್ತೇನೆ.
(ಮುಗಿಯಿತು)
Courtesy : Vijaya Karnataka.