Basics of Brindavani Saarang
Brindavani Sarang is one of the most popular raaga in Hindustani Music.
ಬೃಂದಾವನಿ ಸಾರಂಗ್
`ಸಾರಂಗ್' ಮತ್ತು `ಬೃಂದಾವನಿ ಸಾರಂಗ್' – ಈ ಎರಡೂ ಹೆಸರುಗಳೂ ಒಂದೇ. ಗಾಂಧಾರ (ಗ) ಮತ್ತು ಧೈವತ (ಧ) ವರ್ಜಿತ. ಇದು ಔಡವ – ಔಡವ ಜಾತಿಗೆ ಸೇರಿದೆ. ಈ ರಾಗದಲ್ಲಿ ಋಷಭ (ರೆ) ವಾದಿ ಸ್ವರವಾಗಿದ್ದು ಪಂಚಮವು (ಪ) ಸಂವಾದಿ ಸ್ವರವಾಗಿದೆ. ಈ ರಾಗದಲ್ಲಿ ಶುದ್ಧ ಮತ್ತು ಕೋಮಲ ನಿಷಾದ (ನಿ, ನಿ ) ಎರಡೂ ಇವೆ. ಹಗಲಿನ ದ್ವಿತೀಯ ಪ್ರಹರದಲ್ಲಿ ಈ ರಾಗವನ್ನು ನುಡಿಸಬೇಕು ಎಂಬ ಮಾತು ಸರ್ವೇಸಾಮಾನ್ಯವಾಗಿ ಒಪ್ಪಿತವಾಗಿದೆ. ಈ ರಾಗವು ಕಾಫಿ ಠಾಟ್‌ಗೆ ಸೇರಿದ್ದು.
ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಕಾಫಿ ಠಾಟ್‌ನ್ನು ಖರಹರಪ್ರಿಯ ಎಂದು ಕರೆಯುತ್ತಾರೆ.
(ಇಲ್ಲಿ `ಪ' ಗಿಂತ ಮುಂಚೆ ಬರುವೆಲ್ಲ `ನಿ'ಗಳನ್ನೂ ಕೋಮಲ ಎಂದೆ ಪರಿಗಣಿಸಬೇಕು. ಈ ಫಾಂಟ್ ಸಮಸ್ಯೆಯನ್ನು ಮುಂದೆ ಸರಿಪಡಿಸಲಾಗುವುದು.
)
ಸ ರೆ ಗ ಮ ಪ ಧ ನಿ ಎಂಬ ಆರೋಹಣ ಕ್ರಮವನ್ನು ಹೊಂದಿರುವ ರಾಗಗಳು ಕಾಫಿ ಠಾಟ್‌ನಲ್ಲಿ ಬರುತ್ತವೆ. ಈ ಠಾಟ್‌ನಲ್ಲಿ ಒಟ್ಟು ೫೩ ರಾಗಗಳಿವೆ. ಹಾಗೆ ನೋಡಿದರೆ ಹತ್ತು ಠಾಟ್‌ಗಳ ಪೈಕಿ ಈ ಠಾಟ್‌ನಲ್ಲೇ ಅತಿ ಹೆಚ್ಚು ರಾಗಗಳನ್ನು ರೂಪಿಸಲಾಗಿದೆ. ಇಲ್ಲಿ ಗ ಮತ್ತು ನಿ – ಇವು ಕೋಮಲ ಸ್ವರಗಳು ಎಂಬುದನ್ನು ಗಮನಿಸಿ.
ಬೃಂದಾವನಿ ಸಾರಂಗ್‌ರಾಗದಲ್ಲಿ ಗ ಇಲ್ಲ. ಆದರೆ ಆರೋಹಕ್ರಮವು ಕಾಫಿ ಠಾಟ್‌ನ ಕ್ರಮದಲ್ಲೇ ಇದೆ. ಆದ್ದರಿಂದ ಗ ಇಲ್ಲದಿದ್ದರೂ ಇದು ಕಾಫಿ ಠಾಟ್ ಎಂದು ಗುರುತಿಸಬೇಕು.
ಬೃಂದಾವನಿ ಸಾರಂಗ್ ರಾಗದ ಸಾಮಾನ್ಯ ಸ್ವರೂಪ ಹೀಗಿದೆ:
ನಿ ಸ ರೆ ಮ ರೆ, ರೆ ಮ ಪ ನಿ ಪ ಮ ರೆ, ಮ ಪ ನಿ ಸ, ಸ . ನಿ ಪ, ನಿ ಪ ಮ ರೆ, ರೆ ಮ ಪ ನಿ ಮ ಪ , ಪ ಮ ರೆ ಮ ರೆ, ಮ ರೆ ನಿ ಸ
ಈ ರಾಗದಲ್ಲಿ ಬೇರೆ ಯಾವುದೇ ರಾಗದ ಮಿಶ್ರಣವಿಲ್ಲ ಎಂಬುದು ಈ ಸ್ವರ ಸಂಚಾರದಿಂದ ಸ್ಪಷ್ಟವಾಗುತ್ತದೆ. ಕೇವಲ ಗಾಂಧಾರ ಮತ್ತು ಧೈವತಗಳನ್ನು ವರ್ಜನೆ ಮಾಡಿದ್ದರಿಂದಲೇ ಹೀಗಾಗಿದೆ, ಅಷ್ಟೆ.
(ಅಂದರೆ ಕಾಫಿ ರಾಗವು ರಾಗಾಂಗ ರಾಗವಾಗಿದ್ದು ಇದರಲ್ಲಿ ಠಾಟ್ ವಿವರಣೆಗೆ ಬಳಸಿದ ಎಲ್ಲ ಸ್ವರಗಳೂ ಅದೇ ಕ್ರಮದಲ್ಲಿ ಬಳಕೆಯಾಗುತ್ತವೆ ಎಂಬುದನ್ನು ಗಮನಿಸಿ).
ಆರೋಹ ಮತ್ತು ಅವರೋಹಣ ಕ್ರಮ
;&
#3223;ಳು
ಆರೋಹಣ: ಸ ರೆ ಮ ಪ, ನಿ ಸ.
ಅವರೋಹಣ : ಸ. ನಿ ಪ ಮ ರೆ ಸ
ಮುಖ್ಯ ಸ್ವರ ಸಮೂಹ : ರೆ ಮ ಪ ಮರೆ, ನಿ, ಸ
ಕೆಲವೊಮ್ಮೆ ಒಂದು ಠಾಟ್‌ನ ಕೆಲವು ಸ್ವರಗಳನ್ನು ವರ್ಜಿಸಿಬಿಟ್ಟರೆ ಅದು ಬೇರೆಯದೇ ಠಾಟ್‌ನ ಹಾಗೆ ಕೇಳಿಸುವ ನಿದರ್ಶನಗಳೂ ಇವೆ. ಸ್ವರ ವರ್ಜನೆಯ ಜೊತೆಗೇ ವಿಶ್ರಾಂತಿ ಸ್ವರದ ಸ್ಥಾನವನ್ನೂ ಬದಲಿಸಿಬಿಟ್ಟರೆ ಹೀಗಾಗುತ್ತದೆ. ಹೀಗೆ ಮಾಡಿದಾಗ ಬೃಂದಾವನಿ ಸಾರಂಗ್ ರಾಗವು ಕಾಫಿ ರಾಗದ ಅಂಗವಾಗುವ ಬದಲಿಗೆ ಸಾರಂಗ್ ರಾಗದ ಅಂಗ ರಾಗವಾಗುತ್ತದೆ (ಹೇಗೆ?)ಸಾರಂಗ್ ರಾಗವು ಕಾಫಿ ರಾಗದಲ್ಲೇ ಅಡಕವಾಗಿದೆ. ಅಂದರೆ ಇಲ್ಲಿ ಒಂದು ಮಾತನ್ನು ನೆನಪಿಡಬೇಕು: ಠಾಟ್‌ನ್ನು ನಿರ್ಧರಿಸುವಾಗ ನ್ಯಾಸ ಸ್ಥಾನ ಮತ್ತು ರಾಗಾಂಗವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
ನಿ ಸ ರೆ ಮ ಪ ಮ ರೆ, ರೆ ಮ ಪ ಮರೆ – ಈ ಸ್ವರ ಸಮೂಹವು ಈ ರಾಗದಲ್ಲಿ ತುಂಬಾ ಮಹತ್ವದ್ದು. ಇದು ಪೂರ್ವಾಂಗದ ವಿಷಯ. ಇನ್ನು ಉತ್ತರಾಂಗದಲ್ಲಿ ಮ ಪ ನಿ ಸ. ನಿ ಪ – ಈ ಸಮೂಹವು ಮುಖ್ಯವಾಗಿದೆ. ಇಲ್ಲಿ ಬೇರೆ ಬೇರೆ ರಾಗಗಳನ್ನು ಸೇರಿಸಿ ಸಾರಂಗ ಪ್ರಕಾರದ ವಿವಿಧ ರಾಗಗಳನ್ನು ರೂಪಿಸಲಾಗಿದೆ. ಉದಾಹರಣೆಗೆ : ಇಲ್ಲಿ ಕಲ್ಯಾಣ ರಾಗವನ್ನು ಸೇರಿಸಿದರೆ ಶುದ್ಧ ಸಾರಂಗ್ ರಾಗವೂ, ಮಿಯಾ ಮಲ್ಹಾರ್ ರಾಗದ ಕೆಲವು ಭಾಗಗಳನ್ನು ಸೇರಿಸಿದರೆ ಮಿಯಾ ಕಾ ಸಾಂರಂಗ್ ರಾಗವೂ, ದೇಶ್ ರಾಗವನ್ನು ಮಿಶ್ರಣ ಮಾಡಿದರೆ ಸಾಮಂತ್ ರಾಗವೂ, ಬಿಲಾವಲ್ ರಾಗವನ್ನು ಮಿಶ್ರಣ ಮಾಡಿದರೆ ಬಡಹಂಸ್ ಸಾರಂಗ್ ರಾಗವೂ ರೂಪುಗೊಳ್ಳುತ್ತದೆ. ಇದಲ್ಲದೆ ಸ್ವರ ವರ್ಜನೆಯ ಆಧಾರದಲ್ಲಿ ಕೇವಲ ಕೋಮಲ ನಿಷಾದವನ್ನು ಬಳಸಿದರೆ ಮಧ್‌ಮತ್ ಸಾರಂಗ್‌ರಾಗವು ಹುಟ್ಟಿಕೊಳ್ಳುತ್ತದೆ.
ಬೃಂದಾವನದ ಮಂದಿರಗಳಲ್ಲಿ ಸಂತರು, ಸಂಗೀತಗಾರರು ಈ ರಾಗವನ್ನೇ ಬಳಸಿ ಹಾಡುಗಳನ್ನು ಹಾಡುತ್ತಿದ್ದರಂತೆ. ಅದಕ್ಕೇ ಈ ರಾಗಕ್ಕೆ ಬೃಂದಾವನಿ ಸಾರಂಗ್‌ಎಂಬ ಹೆಸರು ಬಂದಿದೆ. ಆದರೆ ಕೆಲವು ಪುಸ್ತಕಗಳಲ್ಲಿ ಬೃಂದಾಬನಿ ಸಾರಂಗ್, ಬಿಂದ್ರಾಬನಿ ಸಾರಂಗ್ ಇತ್ಯಾದಿ ಹೆಸರುಗಳನ್ನು ಈ ರಾಗಕ್ಕೆ ನೀಡಲಾಗಿದೆ. ಇವುಗಳನ್ನು ಉಚ್ಚಾರಣೆಯ ವ್ಯತ್ಯಾಸದಿಂದ ಉಂಟಾದ ಅ&am
p;#3
242;ಭ್ರಂಶಗಳೆಂದು ಪರಿಗಣಿಸಬಹುದು.
ಸ್ವರಗಳ ಬಳಕೆ
ಈ ರಾಗದಲ್ಲಿ ರೆ ಬಳಕೆ ತುಂಬಾ ಮಹತ್ವದ್ದು. ಇದನ್ನಿ ಸಾಮಾನ್ಯವಾಗಿ ಈ ರೀತಿಯಾಗಿ ಬಳಸುತ್ತಾರೆ:
ನಿ ಸ ರೆ ಮ ರೆ, ಪ ಮ ರೆ, ರೆ ಮ ಪ ಮರೆ, ನಿ ಪ ಮ ರೆ,
ಹಾಗೆಯೇ ಈ ರಾಗದಲ್ಲಿ ಪಂಚಮವನ್ನು ಬಳಸುವ ಬಗೆ ಇಂತಿದೆ:
ರೆ ಮ ಪ, ಪ ಮರೆ ಮರೆ ಮ ಪ, ನಿ ಪ ಮ ಪ, ಸ. ನಿ ಪ,
ಕೋಮಲ ನಿಷಾದವನ್ನು ಅನಾಭ್ಯಾಸದ ರೀತಿಯಲ್ಲಿ (ಹೇಗೆ?) ಬಳಸುತ್ತಾರೆ.
ಶುದ್ಧ ನಿಷಾದವನ್ನು ರಾಗ ವಿಸ್ತಾರಕ್ಕೆ ಬಳಸುತ್ತಾರೆ.
ಮ ರೆ ಮ ಪ ನಿ, ನಿ ಪ ಮ ಪ ಮ ಪ ನಿ, ನಿ ಸ ರೆ ಮ ಪ ನಿ, ಸ. ನಿ ಪ ಮ ಪ ಮ ಪ ನಿ,
ಆಲಾಪದ ಸಾಮಾನ್ಯ ಸ್ವರೂಪ ಹೀಗಿದೆ
ನಿ ಸ ರೆ, ಮ ರೆ ಸಾ, ನಿ. ಸ ನಿ. ಪ. ಮ. ಪ. ನಿ. ಸಾ, ಪ. ನಿ. ಸ ರೆ,ಮ ರೆ, ರೆ ಮ ಪ ಮ ರೆ, ಮ ರೆ ನಿ. ಸಾ
ರೆ, ರೆ ಸಾ, ನಿ. ಸ ರೆ ಸಾ, ನಿ. ಸ ರೆ ಮ ರೆ, ರೆ ಮ ಸ ರೆ ನಿ. ಸ ನಿ. ಪ. ಮ. ಪ. ನಿ. ನಿ. ಸಾ ಪ ನಿ ಸ ರೆ, ರೆ ರೆ ನಿ.ನಿ. ಸಾ
ಮ ರೆ ಸ ನಿ. ಸಾ ರೆ ಮ ರೆ, ರೆ ಮ ರೆ ಮ ಪ, ರೆ ಮ ಪ ಮ ರೆ, ಮ ರೆ ಮ ಪ, ಮ ಪ ನಿ ಪ, ನಿ ಪ ಮ ಪ, ಪ ಮರೆ ಮ ರೆ, ನಿ. ಸ ರೆ ಮ ಪ ನಿ ಪ ಮ ಪ ರೆ ಮ ರೆ, ನಿ ಪ ಮ ರೆ, ಪ ಮ ರೆ, ಮ ರೆ ಸನಿ. ನಿ. ಸಾ
ರೆ ಮ ಪ ನಿ ಪ, ನಿ ನಿ ಪ ಮ ಪ ರೆ ಮ ರೆ ಮ ಪ, ಮ ಪ ನಿ ನಿ, ನಿ. ಸ ರೆ ಮ ಪ ನಿ ಪ ಮ ನಿ ನಿ ಸಾ.,ಪ ನಿ ಸ. ರೆ. ನಿ ಸಾ.ರೆ .ನಿ ಸಾ. ನಿ ಸಾ.ರೆ., ರೆ. ಸಾ. ನಿ ಪ, ಪ ನಿ ಸ ರೆ. ಮ. ರೆ. ಸಾ., ನಿ ಸ. ರೆ. ಸಾ. ನಿ ಪ, ನಿ ನಿ ಪ ಮ ಪ ನಿ ನಿ ಸಾ., ಸಾ. ನಿ ಪ ಮ ಪ ಮ ರೆ, ನಿ ಪ ಮ ಪ ರೆ ಮ ಪ ಮ ರೆ, ಮ ರೆ, ರೆ ನಿ. ನಿ. ಸಾ