ಭ್ರಮಾಲೋಕದ ಅರ್ಬನ್ ವಾಸ್ತವ: ಆರ್ಕೋಸಾಂಟಿ

ಕೆಲವರು ತಮಗನಿಸಿದ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ನಾನು ಇಪ್ಪತ್ತು ವರ್ಷಗಳ ಹಿಂದೆ ಖುದ್ದಾಗಿ ನೋಡಿದ ಪೌನಾರ್ ಆಶ್ರಮವು ಇಂಥ ಒಳ್ಳೆಯ ಉದಾಹರಣೆ. ಈಗಲೂ ಅಲ್ಲಿಗೆ ಹೋದರೆ ಆಚಾರ್ಯ ವಿನೋಬಾ ಭಾವೆಯವರ ಪ್ರಯೋಗ ಕಾಣುತ್ತದೆ. ನಾನು ಅಲ್ಲಿಗೆ ಹೋದಾಗ ನಮ್ಮ ಪ್ರಯೋಗಪ್ರಿಯ ರತ ಶ್ರೀ ವರ್ತೂರು ನಾರಾಯಣರೆಡ್ಡಿಯವರು ಬಂದಿದ್ದರು. ಪೌನಾರ್ ಪ್ರಯೋಗ ಅಲ್ಲೇ ಇದೆ. ನಾರಾಯಣರೆಡ್ಡಿಯವರು ಇತ್ತೀಚೆಗಷ್ಟೇ ಬತ್ತದ ಹೊಸ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಅಮೆರಿಕಾದಲ್ಲೂ ಇಂಥದ್ದೇ ಒಂದು ಪ್ರಯೋಗ ನಡೆದಿದೆ ; ಕ್ಷಮಿಸಿ, ನಡೆಯುತ್ತಿದೆ. ಅದೇ ಪಾಲೋ ಸೊಲೇರಿಯ ಆರ್ಕೋಸಾಂಟಿ ನಗರ. ನನ್ನ ಶಿಶುಕಾಲದಲ್ಲಿ ಆರಂಭವಾದ ಈ ಪ್ರಯೋಗ ಇನ್ನೂ ಮುಂದುವರಿಯುತ್ತಲೇ ಇದೆ. ೧೭ ವರ್ಷಗಳ ಹಿಂದೆಯೇ ನಾಗೇಶ ಹೆಗಡೆಯವರು ಆರ್ಕೋಸಾಂಟಿ ನಗರದ ಬಗ್ಗೆ ಲೇಖನ ಬರೆದಿದ್ದರಂತೆ. ಕಳೆದ ಐದು ವರ್ಷಗಳಿಂದ ಈ ನಗರವನ್ನು ಅಂತರಜಾಲದಲ್ಲಿ ಗಮನಿಸುತ್ತ ಬಂದಿರುವ ನನಗೆ ಈ ಪ್ರಯೋಗವನ್ನು ಹೊಗಳಬೇಕೋ, ಅಥವಾ ಪಾಲೋ ಸೊಲೇರಿಯವರ ಬಗ್ಗೆ ಕನಿಕರ ಪಡಬೇಕೋ ಗೊತ್ತಾಗುತ್ತಿಲ್ಲ.
ಇಟಲಿಯಿಂದ ಬಂದ ಈ ಪಾಲೋ ಸೊಲೇರಿಗೆ ವಾಸ್ತುಶಾಸ್ತ್ರ ಮತ್ತು ಪರಿಸರ ಸಂರಕ್ಷಣೆಯಲ್ಲಿ ಇನ್ನಿಲ್ಲದ ಆಸಕ್ತಿ. ಅದಕ್ಕೇ ಅವರು ಆರ್ಕಾಲಜಿ ಎಂಬ ಹೊಸ ಶಾಸ್ತ್ರವನ್ನೇ ರೂಪಿಸಿದರು. ಆರ್ಕಿಟೆಕ್ಚರ್ ಮತ್ತು ಎಕಾಲಜಿಯ ಮಿಶ್ರಣವಿದು. ಶಾಸ್ತ್ರೀಯವಾಗಿ ವಿವರಿಸಬೇಕೆಂದರೆ ಇದು ಒಂದು “ದಟ್ಟವಾದ, ಏಕೀಕೃತವಾದ, ಮೂರು ಆಯಾಮದ, ಪಾದಚಾರಿ ಮುಖಿ ನಗರಸ್ವರೂಪ." ಇದು ಮನುಕುಲಕ್ಕೇ ಖಂಡಿತವಾಗಿಯೂ ಅಗತ್ಯವಿರುವ ಪರಿಕಲ್ಪನೆ ಎಂದು ಸೊಲೇರಿ ಹೇಳುತ್ತಾರೆ; ಈಗಲೂ ಹೇಳುತ್ತಿದ್ದಾರೆ.
ಅಗಲಗಲವಾಗಿ ಹರಡಿಕೊಳ್ಳುವ ನಗರಗಳಿಗಿಂತ ಉದ್ದುದ್ದ, ಮೇಲೆ ಮೇಲೆ ಬೆಳೆಯುವ ನಗರಗಳೇ ನಿಜಕ್ಕೂ ಪರಿಸರ ಸ್ನೇಹಿ ಎಂಬುದು ಸೊಲೇರಿ ವಾದದ ತಿರುಳು. ಅಂದರೆ ಬೆಂಗಳೂ&
amp;#3
248;ಿನ, ಮಂಗಳೂರಿನ ಅಥವಾ ಹುಬ್ಬಳ್ಳಿಯಂಥ ನಗರಗಳ ಸುತ್ತಮುತ್ತ ಘಟಿಸುತ್ತಿರುವ ಹೊಸ ಬಡಾವಣೆಗಳ ಹಬ್ಬುವಿಕೆಯನ್ನು ಸೊಲೇರಿಯ ವಾದವು ಬೆಂಬಲಿಸುವುದಿಲ್ಲ. ಈಗಿನ ಬಡಾವಣೆ ಲೆಕ್ಕಾಚಾರದಂತೆ ನೂರು ಜನ ಬದುಕುವುದಕ್ಕೆ ಬೇಕಾದ ಜಾಗದ ಶೇಕಡಾ ಎರಡರಷ್ಟು (೨) ಜಾಗದಲ್ಲಿ ನೂರು ಜನ ಬದುಕುವ ವ್ಯವಸ್ಥೆಯನ್ನು ಮಾಡಬಹುದು ಎಂದು ಸೊಲೇರಿಯವರ ಆರ್ಕಾಲಜಿ ವಾದಿಸುತ್ತದೆ. ಅಷ್ಟೇ ಅಲ್ಲ, ಆರ್ಕೋಸಾಂಟಿ ನಗರದ ಮೂಲಕ ಈ ವಾದದ ಪ್ರತಿಪಾದನೆಯೂ ನಡೆದಿದೆ.
ಇಂದಿನ ನಗರಗಳಲ್ಲಿ ಶೇಕಡಾ ಅರವತ್ತಕ್ಕಿಂತ (೬೦) ಹೆಚ್ಚಿನ ಪ್ರದೇಶವು ಕೇವಲ ವಾಹನಗಳ ಓಡಾಟಕ್ಕೆ ಬೇಕಾಗುತ್ತದೆ. ಆದರೆ ಆರ್ಕಾಲಜಿಯ ಪ್ರಕಾರ ಕಟ್ಟಿದ ಆರ್ಕೋಸಾಂಟಿಯಲ್ಲಿ ವಾಹನಗಳ ಭರಾಟೆಯಿಲ್ಲ. ಪೆಟ್ರೋಲ್ ಬಂಕುಗಳಿಲ್ಲ. ಎಲ್ಲ ಅಂಗಡಿ ಮುಂಗಟ್ಟುಗಳೂ ಕಾಲಳತೆಯಲ್ಲೇ ಸಿಗುತ್ತವೆ. ಜನ ನಡೆಯುತ್ತ ನಡೆಯುತ್ತ ಬದುಕನ್ನು ಕಟ್ಟಿಕೊಳ್ಳುತ್ತಾರೆ. ನಾಗರಿಕತೆಗೆ ಹೊಸ ಭಾಷ್ಯೆ ಬರೆಯುತ್ತಾರೆ.
ಹೀಗೆ ಆರ್ಕೋಸಾಂಟಿ ನಗರವು ಉದ್ದುದ್ದ ಬೆಳೆದಿರುವುದರಿಂದ ಅಲ್ಲಿ ವಾಸಿಸುವವರಿಗೆ ಹತ್ತಿರದಲ್ಲೇ ಕೃಷಿಭೂಮಿ ಸಿಗುತ್ತದೆ. ಇದರಿಂದಾಗಿ ನಗರದ ಆಹಾರ ವ್ಯವಸ್ಥೆಯನ್ನೂ ಸುತ್ತಮುತ್ತಲೇ ನೋಡಿಕೊಳ್ಳಬಹುದು. ಆಹಾರದ ಸಾಗಾಟದ ಸಮಸ್ಯೆಯೂ ತಪ್ಪುತ್ತದೆ. ವಿವಿಧ ಬಗೆಯ ಶಕ್ತಿ ಸಂಚಯದಿಂದ ಆರ್ಕೋಸಾಂಟಿ ನಗರದಲ್ಲಿ ಆಹಾರವನ್ನು ಬೇಯಿಸುವ, ತಣ್ಣಗೆ ಇಡುವ ವ್ಯವಸ್ಥೆಯನ್ನು ರೂಪಿಸಿಕೊಳ್ಳಬಹುದು.
೧೯೧೯ರಲ್ಲಿ ಹುಟ್ಟಿ, ೧೯೪೬ರಲ್ಲಿ ವಾಸ್ತುಶಾಸ್ತ್ರದಲ್ಲಿ ಪಿ ಎಚ್ ಡಿ ಪಡೆದ ಪಾಲೋ ಸೊಲೇರಿ ೧೯೫೬ರಲ್ಲಿ ಮರುಭೂಮಿ ಅರಿಝೋನಾದ ಸ್ಕಾಟ್ಸ್‌ಡೇಲ್‌ಗೆ ಬಂದು ನೆಲೆಸಿದರು. ನಂತರ ಅರಿಝೋನಾದ ಮಧ್ಯಭಾಗದಲ್ಲಿರುವ ಕೋರ್ಡಿಸ್ ಜಂಕ್ಷನ್‌ನಲ್ಲಿ ತಮ್ಮ ಪ್ರಯೋಗವನ್ನು ಆರಂಭಿಸಿದರು. ಆರ್ಕೋಸಾಂಟಿ ನಗರವನ್ನು ಕಟ್ಟಿಯೇಬಿಟ್ಟರು. ಆಗ ಫ್ಯಾಕ್ಸ್ ಮೆಶಿನ್‌ಗಳೇ ಇರಲಿಲ್ಲ; ಎಂ ಟಿ ವಿ ಕನಸೇ ಮೂಡಿರಲಿಲ್ಲ; ಕಂಪ್ಯೂಟರುಗಳು ಕಣ್ಣು ಬಿಟುತ್ತಿದ್ದವಷ್ಟೆ ಎಂದು ಸೊಲೇರಿಯ ಪ್ರಯೋ&#
3223
;ಗಳ ಬಗ್ಗೆ ಪ್ರಬಂಧ ಬರೆದಿರುವ ಐವಾನ್ ಶಾನ್‌ಫೀಲ್ಡ್ ಉಲ್ಲೇಖಿಸುತ್ತಾರೆ. ಅಂತರಜಾಲದ ಒಂದೆಳೆಯೂ ಮೂಡಿರದಿದ್ದ ಅರವತ್ತರ ದಶಕದಲ್ಲಿ ಆರಂಭವಾದ ಈ ಪ್ರಯೋಗ ಈಗಲೂ ಮುಂದುವರಿದಿದೆ; ಹಾಗಾದರೆ ಅದು ಈಗಲೂ ಪ್ರಸ್ತುತವೆ ಎಂಬ ಪ್ರಶ್ನೆ ಅವರದು ; ನನ್ನದು; ಬಹುಶಃ ಈಗ ನಿಮ್ಮದು!
ಯಾಕೆಂದರೆ ಆರ್ಕೋಸಾಂಟಿ ನಗರದ ನಿರ್ಮಾಣ ಈಗಲೂ ಮುಂದುವರೆದಿದೆ. ಇಪ್ಪತ್ತೊಂದನೇ ಶತಮಾನದ ಎಲ್ಲ ಆಧುನಿಕ ಬೆಳವಣಿಗೆಗಳನ್ನು ಗಮನಿಸಿಯೂ ಸೊಲೇರಿ ಘೋಷಿಸುತ್ತಿದ್ದಾರೆ: “ಕುಬ್ಜೀಕರಣದ ಬದುಕಿಗೆ ಮೊರೆಹೋಗಿ ಇಲ್ಲವೇ ನಾಶವಾಗಿ!; ಅತಿ ಕೊಳ್ಳುಬಾಕತನ ನಮ್ಮೆಲ್ಲರನ್ನೂ ಕೊಂದುಹಾಕುತ್ತೆ!!"
ಆದರೆ ಐದು ಸಾವಿರ ಜನರಿಗಾಗಿ ರೂಪಿಸುತ್ತಿರುವ ಆರ್ಕೊಸಾಂಟಿ ನಗರದಲ್ಲಿ ಈಗ ಇರುವವರ ಸಂಖ್ಯೆ ಎಪ್ಪತ್ತು ದಾಟುವುದಿಲ್ಲ. ಕ್ಯಾಲಿಫೋರ್ನಿಯಾದಿಂದ ಕೆಲವರು ರಜಾಕಾಲದಲ್ಲಿ ಬಂದು ಕೆಲವು ಡಾಲರ್‌ಗಳನ್ನು ಕೊಟ್ಟು ಉಳಿಯುತ್ತಾರೆ. ಯಾವುದೋ ಮಧ್ಯಾಹ್ನ ಅವರೆಲ್ಲ ಗ್ರಾಂಡ್ ಕ್ಯಾನ್ಯನ್ ನೋಡುವಾ ಎಂದು ಹೊರಟೇ ಹೋಗುತ್ತಾರೆ. ಸೊಲೇರಿಗೆ ಬೇಜಾರಾಗುವುದಿಲ್ಲ. ಎಂಬತ್ತೊಂಬತ್ತು ವರ್ಷಗಳ ಈ ಹರೆಯದಲ್ಲೂ ಸೊಲೇರಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ‘ನೋಡಿ, ಐನೂರು ಜನ ಬಂದ್ರೆ ಸಾಕು, ಹ್ಯಾಗೆ ಈ ಯೋಜನೆಗೆ ವೇಗ ಸಿಗುತ್ತೆ’ ಎಂದು ಈಗಲೂ ಪತ್ರಿಕಾಹೇಳಿಕೆ ಕೊಡುತ್ತಲೇ ಇದ್ದಾರೆ.
ಆರ್ಕೋಸಾಂಟಿಯ ದಕ್ಷಿಣಕ್ಕೆ ಇನ್ನೂರು ಮೈಲುಗಳ ದೂರದ ಟಕ್ಸನ್ ನಗರದಲ್ಲಿ ಸಿವಾನೋ ಎಂಬ ಇನ್ನೊಂದು ನಗರಯೋಜನೆ ಬಂದಿದೆ. ಇದೂ ಭವಿಷ್ಯದ ನಗರದ ಕಲ್ಪನೆ, ಕನಸು ಹೊಂದಿದೆ. ಆರ್ಕೋಸಾಂಟಿಯ ಕಲ್ಪನೆಯನ್ನೇ ಹೋಲುವ ಇನ್ನೊಂದು ನಗರಕಲ್ಪನೆಯನ್ನು ಅರ್ಥ್ ವಿಜನ್ ಫೌಂಡೇಶನ್ ವರದಿಯಲ್ಲಿ ಜಿಮ್ ಫ್ರೀಮನ್ ಮುಂದಿಟ್ಟಿದ್ದಾರಂತೆ. ಸೊಲೇರಿಯೂ ಒಬ್ಬ ಸದಸ್ಯರಾಗಿರುವ ಜಪಾನಿನ ಹೈಪರ್ ಬಿಲ್ಡಿಂಗ್ ರಿಸರ್ಚ್ ಕಮಿಟಿಯು ಒಂದು ಕಿಲೋಮೀಟರ್ ಎತ್ತರದ, ೧೦೦೦ ಹೆಕ್ಟೇರ್‌ನಷ್ಟು ವಸತಿ ಪ್ರದೇಶದ, ಎರಡು ಗರ್ಭಕೋಶದಂಥ ಕಟ್ಟಡಗಳನ್ನು ಹೊಂದಿರುವ, ಚಿತ್ರವಿಚಿತ್ರ ಸುರುಳಿ&
#322
3;ಳ ಎಲೆವೇಟರ್‌ಗಳನ್ನು ಅಳವಡಿಸಿರುವ ಒಂದು ಲಕ್ಷ ಜನ ವಾಸಿಸಬಹುದಾದ ಹೈಪರ್ ಬಿಲ್ಡಿಂಗ್ ಯೋಜನೆಯನ್ನು ಆರಂಭಿಸಿದೆಯಂತೆ.
ಪಾಲೋ ಸೊಲೇರಿಯ ಕನಸನ್ನು ಗೌರವಿಸೋಣ; ಅವರ ಯೋಜನೆಯ ಹಿಂದಿನ ಕಾಳಜಿಯನ್ನು ಪ್ರೀತಿಸೋಣ. ಅವರು ಈ ನಾಲ್ಕು ದಶಕಗಳಲ್ಲಿ ಕಲಿತದ್ದೇನು, ಕಲಿಸಿದ್ದೇನು ಎಂಬುದನ್ನೂ ಅರಿಯೋಣ. ನಗರಗಳ ಬಗ್ಗೆ ಕವನ ಬರೆಯುವುದಕ್ಕಿಂತ ನಾಗರಿಕತೆಯ ಬಗ್ಗೆ ನೂರಾರು ಉಪದೇಶಗಳನ್ನು ಕೊಡುವುದಕ್ಕಿಂತ, ಹಳ್ಳಿ – ನಗರ ಎಂಬ ವಿಭಜನಾ ವಿಮರ್ಶೆಯಿಂದ ನಮ್ಮ ಸಾಹಿತ್ಯವನ್ನು ಕೊಯ್ಯುವುದಕ್ಕಿಂತ ಮುಖ್ಯ ಇಂಥ ಚಿಂತನೆಗಳು ಎಂಬುದನ್ನು ಮರೆಯದಿರೋಣ.

ಪತ್ರಿಕೆಯಲ್ಲಿ ಓದಿ ತಿಳಿಯಿರಿ ; ಅಂತರಜಾಲಾಡಿ ಹೆಚ್ಚು ಅರಿಯಿರಿ !
ಆರ್ಕೋಸಾಂಟಿ ನಗರದ ಬಗ್ಗೆ ಮಾಹಿತಿ ಪಡೆಯಲು www.arcosanti.org ಈ ಜಾಲತಾಣಕ್ಕೆ ಭೇಟಿ ಕೊಡಿ.
ಆರ್ಕೋಸಾಂಟಿ ನಗರದ ಬಗ್ಗೆ ಐವಾನ್ ಶಾನ್ ಫೀಲ್ಡ್ ಬರೆದಿರುವ ಪ್ರಬಂಧವನ್ನು ಓದಲು ಮತ್ತು ಸೊಲೇರಿಯವರ ಒಂದು ಸಂದರ್ಶನವನ್ನು ಓದಲು ನನ್ನ ಜಾಲತಾಣದ ಡೌನ್‌ಲೋಡ್ ವಿಭಾಗವಾದ beluru.googlepages.com/mitramaadhyama ಇಲ್ಲಿಗೆ ಭೇಟಿ ನೀಡಿ.

Share.
Leave A Reply Cancel Reply
Exit mobile version