ಬೆಂಗಳೂರು ದಿನಪತ್ರಿಕೆ ವಿತರಕರ ಒಕ್ಕೂಟ (ರಿ)

ಡಿ ಎನ್ ಎ ಪತ್ರಿಕೆಗೆ ೩೦೦ ರೂ. ವಾರ್ಷಿಕ ಪ್ರೀಪೈಡ್ ಚಂದಾ ಹಣ

ಪಾವತಿ ಮಾಡಿದ ಗ್ರಾಹಕರ ಗಮನಕ್ಕೆ….

ನಿಮ್ಮಿಂದ ೩೦೦ ರೂ.ಗಳ ವಾರ್ಷಿಕ ಚಂದಾ ಹಣವನ್ನು ಸಂಗ್ರಹಿಸಿದ ಡಿ ಎನ್ ಎ ಪತ್ರಿಕೆ ಆಡಳಿತವರ್ಗವು ಈಗ ಮತ್ತೆ ಇದೇ ಪತ್ರಿಕೆಯನ್ನು ಪತ್ರಿಕೆ ಹಾಕುವ ಬಡವರ್ಗದ ಕಾರ್ಮಿಕರು ಹಣಕೊಟ್ಟು ಖರೀದಿಸಬೇಕು ಎಂದು ಒತ್ತಾಯಿಸುತ್ತಿದೆ.

ನೀವು  ಹಣ ಪಾವತಿ ಮಾಡಿದ ಮೇಲೆ ಮತ್ತೆ  ಪತ್ರಿಕೆ ವಿತರಕ ಬಂಧುಗಳು ಹಣ ಪಾವತಿ ಮಾಡುವುದು ಸರಿಯೆ? ನೀವೇ ನಿರ್ಧರಿಸಿ. ಆದ್ದರಿಂದಲೇ ನಾವು ಈ ಪತ್ರಿಕೆಯನ್ನು ನಿಮ್ಮ ಮನೆಗೆ ನೀಡುವುದನ್ನು ನಿಲ್ಲಿಸಿದ್ದೇವೆ.

ಪತ್ರಿಕೆ ಹಾಕುವವರು ಹಣ ಕೊಟ್ಟಿಲ್ಲವೆಂದು ನಮಗೆ ಡಿ ಎನ್ ಎ ಪತ್ರಿಕೆಯನ್ನು ಕೊಟ್ಟಿರುವುದಿಲ್ಲ. ಇದನ್ನು ಓದುಗರಾದ ತಾವು ಗಮನಿಸಬೇಕು ಎಂದು ವಿನಂತಿಸುತ್ತೇವೆ.

ಒಂದೇ ಪತ್ರಿಕೆಗೆ ನೀವು ಮತ್ತು ಪೇಪರ್ ಹಾಕುವವರು – ಇಬ್ಬರೂ ಹಣ ಕೊಟ್ಟರೆ ಅದು ಹಣಕಾಸಿನ ಅವ್ಯವಹಾರವಾಗುತ್ತದೆ ಎಂದು ಕಾನೂನು ಹೇಳುತ್ತದೆ. ಅಲ್ಲದೆ ಈ ಬಗೆಯ ವ್ಯವಹಾರವನ್ನು ಬೇರಾವ ಪತ್ರಿಕೆಯೂ ಮಾಡಿಲ್ಲ; ಮಾಡಲುವುದು ಸರಿಯೂ ಅಲ್ಲ.

ದಯವಿಟ್ಟು ತಾವೆಲ್ಲರೂ ಡಿ ಎನ್‌ಎ ಪತ್ರಿಕೆ ಕಚೇರಿಗೆ ಫೋನ್ ಮಾಡಿ (ಸಂಖ್ಯೆ ೦೮೦ ೪೨೮೬೮೮೮೮/೨೭೮೨೬೩೨೭/೯೭೪೧೩೫೪೨೯೬) ಈ ವಿಷಯದ ಬಗ್ಗೆ ಪ್ರಶ್ನೆ ಕೇಳಿ, ಪತ್ರಿಕೆ ಹಾಕುವವರಿಂದ ಹಣ ವಸೂಲಿ ಮಾಡುವುದು ತಪ್ಪು ಎಂದು ತಿಳಿಸಿ. ಬಡ ಕಾರ್ಮಿಕರನ್ನು ಬೆಂಬಲಿಸಿ.

ದಿನವೂ ಮುಂಜಾನೆ ಎದ್ದು ಚಳಿ – ಮಳೆ ಲೆಕ್ಕಿಸದೆ ಮನೆಗೆ ಪೇಪರ್ ಹಾಕುವವರು ನಾವು ಶ್ರಮಿಜೀವಿಗಳು. ಎಲ್ಲ ಪತ್ರಿಕೆಗಳೂ ಇದುವರೆಗೂ ನಮಗೆ ಸೇವಾಶುಲ್ಕ ನೀಡಿವೆಯೇ ಹೊರತು ನಮ್ಮಿಂದ ಹಣ ವಸೂಲಿ ಮಾಡಿಲ್ಲ.

ಓದುಗರೇ, ದಿನಪತ್ರಿಕೆ ವಿತರಕ ಕಾರ್ಮಿಕರನ್ನು ಬೆಂಬಲಿಸಿ.

ಡಿ ಎನ್ ಎ ಪತ್ರಿಕೆಯ ದೌರ್ಜನ್ಯವನ್ನು ವಿರೋಧಿಸಿ !

KIND ATTENTION !!

Dear DNA subscribers and newspaper readers

  • DNA newspaper management has collected Rs. 300 from you all towards annual subscription payment.

  • Now, DNA management is insisting on paper hawkers, who are the daily wage workers, to pay in advance for the SAME paper you have bought.

  • This means, DOUBLE PAYMENT for a single subscription, which is a financial offence.

  • We, Bangalore Paper Hawkers Association members have been opposing this illegal method of DNA management. Thats is why we could not deliver the DNA newspaper to your home.

  • Please understand the plight of paper hawkers, who deliver newspapers at your door step without bothering rain and chill, in the early morning hours.

  • Support the right cause of newspaper hawkers . Please call 080 42868888/27826327/9741354296 and register your protest against this illegal demand of double payment.

Oppose the illegal measures of DNA

Please support the cause of poor ,hard earning paper hawkers

For further details please feel free to log on to:

www.mitramaadhyama.co.in

Share.
Leave A Reply Cancel Reply
Exit mobile version