ಆ ಕಲಾವಿದ ಹೊರಟುಹೋದ ಮೇಲೆ

ಆ ಕಲಾವಿದ ಹೊರಟುಹೋದ ಮೇಲೆ
ಅನಾಥವಾಗಿ ಬಿದ್ದ ಪ್ಯಾಲೆಟ್
ಎಂಬ ತಗಡಿನ ತಾಟು,
ಸ್ಟಾ ಂಡು ಎಂಬ ಮುರುಕಲು ಜೋಡಣೆ
ಥರಥರ ನಡುಗುತ್ತಿದ್ದವು.

ಆ ಮಹಾನ್ ಕ್ಯಾನ್‌ವಾಸ್
ಬಣ್ಣಗಳನ್ನು ಹೊದ್ದುಕೊಂಡು
ಕಳಚಿಕೊಂಡ ಮೇಲೆ ಆ ಬಿಳೀ ಗೋಡೆ
ಗಾಳಿಗೆ ಒರಗಿಕೊಂಡಿತ್ತು.

ಹೊರಗೆ ಹೊಗೆ ಹರಡುತ್ತಿತ್ತು.
ಒಳಗೆ ಗರಗರ ಜನರೇಟರ್ ಸುಡುತ್ತಿತ್ತು.

ಬೃಹತ್ ವೇದಿಕೆಯಾಗಿ ಕ್ಯಾನ್‌ವಾಸ್ ಬದಲಾಗಿ
ಒಂದು ದಿನ ಮೆರೆಯಿತು.
ಜಗಮೆಚ್ಚಿದ ಕಲಾವಿದ ಹೋದೆಡೆಯೆಲ್ಲ
ಸನ್ಮಾನದ ಮಳೆ ಸುರಿಯಿತು.

ಗೋಡೆಯೂ, ಪ್ಯಾಲೆಟ್ಟೂ, ಸ್ಟಾ ಂಡೂ
ಓಹ್ ಮರೆತಿದ್ದೆ – ಮರದ ಬ್ರಶ್ಶೂ
ಚಿರಂತನ ಮೌಲ್ಯಗಳಾಗಿ
ಮೌನದ ಬೇಲಿ ಹಾಕಿಕೊಂಡು
ವೇದನೆಯನ್ನು ಭದ್ರವಾಗಿಟ್ಟುಕೊಂಡು
ಮುಲುಗುತ್ತಿದ್ದವು.

ಹೊಸಾ ಮೂತ್ರಖಾನೆ ದಾರಿ ಹಿಡಿದ
ನನಗೆ ಆಮೇಲೇನಾಯಿತೆಂದು
ಅರಿವಾಗಿಲ್ಲ – ಮನ್ನಿಸಿ
ಇತಿ.

Share.
Leave A Reply Cancel Reply
Exit mobile version