ಈ ಕೆಳಗಿನ ಮಾತುಗಳನ್ನು  ಯಾರು ಹೇಳಿರಬಹುದು ಎಂದು ಊಹಿಸುತ್ತ ಓದಿಕೊಳ್ಳಿ.

`ಮೊದಲೇನೋ ಈ ಕ್ರಾಂತಿಯು ಭಾರೀ ಯಶ ಸಾಧಿಸಿದಂತೆ ಕಂಡಿತು. ಜನಸಂಖ್ಯೆ ಬೆಳೆದಂತೆ ಮತ್ತು ಆಹಾರದ ಬೇಡಿಕೆ ಹೆಚ್ಚಿದಂತೆ ಆಹಾರದ ಬೆಲೆ ಇಳಿಯಲಿಲ್ಲ. ೯೦ರ ದಶಕದಲ್ಲಂತೂ ಈ ಹಸಿರು ಕ್ರಾಂತಿಗೆ ನಾವೆಂಥ ದುಬಾರಿ ಬೆಲೆ ತೆತ್ತಿದ್ದೇವೆ ಎಂಬುದು ಅರಿವಾಯಿತು.

`ನಮ್ಮ ಕೃಷಿ ಜೀವವೈವಿಧ್ಯದ ಬಹುಭಾಗವನ್ನು ನಾವು ಕಳೆದುಕೊಂಡೆವು. ರೈತರು ಹೊಸ ಹೊಸ ತಳಿಗಳನ್ನು ಬಳಸಿದ ಹಾಗೆಯೇ ಹಲವಾರು ಸಾಂಪ್ರದಾಯಿಕ, ಸ್ಥಳೀಯ ತಳಿಗಳು ಅಲಕ್ಷಿಸಿದರು; ಅವೆಲ್ಲವೂ ವಿನಾಶವಾದವು. ಹಲವು ದೇಶಗಳಲ್ಲಿ ಕೀಟನಾಶಕಗಳ ಅತಿ ಬಳಕೆಯಿಂದಾಗಿ ತೀವ್ರ ಪ್ರಮಾಣದ ಪಾರಿಸರಿಕ ದುಷ್ಪರಿಣಾಮಗಳಾದವು. ಸಾರ್ವಜನಿಕ ಆರೋಗ್ಯ  ಹದಗೆಟ್ಟಿತು. ಹಸಿರು ಕ್ರಾಂತಿಯು ಭಾರೀ ಪ್ರಮಾಣದ ನೀರಾವರಿಯನ್ನೂ ಬೇಡಿತು. ಇದರಿಂದಾಗಿ ಜಗತ್ತಿನ ಜಲಸಂಪನ್ಮೂಲದ ಮೇಲಿನ ಒತ್ತಡ ಹೆಚ್ಚಾಯಿತು.

`ಇಷ್ಟೇ ಅಲ್ಲ, ಹಸಿರುಕ್ರಾಂತಿಯ ಅತ್ಯಧಿಕ ಉತ್ಪಾದನೆಯ ನಡುವೆಯೂ ಹಸಿವು ಮಾತ್ರ ಇನ್ನೂ ಹಾಗೆಯೇ ಇದೆ. ಹಸಿರು ಕ್ರಾಂತಿಯ ಲಾಭವು ರೈತನಿಗೆ ಸಿಗಬೇಕಾದರೆ ಆತನಿಗೆ ಭೂಮಿ ಬೇಕು; ನೀರೂ ಬೇಕು. ಇವೆರಡೂ ಇರದ ರೈತರು ಹಸಿರುಕ್ರಾಂತಿಯಿಂದ ದೂರವೇ ಉಳಿದರು. ನಿಜ ಹೇಳಬೇಕೆಂದರೆ ಅವರು ಮತ್ತಷ್ಟು ಬಡವರಾದರು.’

ನಮ್ಮ ಪತ್ರಕರ್ತರು ಭಾವಿಸಿದಂತೆ ಯಾವುದೋ ಪರಿಸರವಾದಿಯೇ ಇದನ್ನೆಲ್ಲ ಗಳಹಿರಬೇಕೆಂದು ನೀವು ಸಹಜವಾಗೇ ಊಹಿಸುತ್ತೀರಿ. ನಿಜ ಬೇರೆ.

ಈ ಮಾತುಗಳನ್ನು ಉಸುರಿದ್ದು ವಿಶ್ವಸಂಸ್ಥೆಯ ಸಂಸ್ಥೆಯಾದ ಫುಡ್ ಎಂಡ್ ಅಗ್ರಿಕಲ್ಚರಲ್ ಆರ್ಗನೈಸೇಶನ್ (ಎಫ್ ಎ ಓ) ನಿಮಗೆ ಖಚಿತವಾಗಬೇಕೆಂದರೆ ಈ ಲಿಂಕ್ ಕ್ಲಿಕ್ ಮಾಡಿ.

Costs of the revolution

What have been the costs of the Green Revolution?

Well for one thing, we’ve lost a lot of our agricultural biodiversity. When farmers opted to plant new improved crop varieties and raise new breeds of livestock, many traditional, local varieties were abandoned and became extinct. Find out more about biodiversity.

Also, in many countries, the widespread use of pesticides and other agro-chemicals has caused severe environmental degradation and endangered public health. Find out more about pesticides.

Green Revolution farming systems also required substantial irrigation. This has put a real strain on the world’s water resources. Find out more about agriculture and water.

Finally, despite higher agricultural productivity, hunger still persists. To take advantage of Green Revolution breakthroughs, farmers needed to have some money and access to resources like land and water. Poor farmers who didn’t have either were left out of the Green Revolution. In fact, many even became poorer.

ಇಷ್ಟು ಹೇಳಿದ ಎಫ್ ಎ ಓ, ಈಗ ನಮಗೆ ಬೇಕಾಗಿರುವುದು ಸುಸ್ಥಿರ ಕ್ರಾಂತಿ ಎಂದು ಒಪ್ಪಿಕೊಂಡಿದೆ. `ಕೇವಲ ಉತ್ಪಾದಕತೆಯ ಮೇಲೇ ಗಮನ ಕೇಂದ್ರೀಕರಿಸುವುದು ಸರಿಯಲ್ಲ ಎಂಬುದನ್ನು ಹಸಿರು ಕ್ರಾಂತಿ ತೋರಿಸಿಕೊಟ್ಟಿದೆ ಎಂದಿರುವ ಈ ವಿಶ್ವಸಂಸ್ಥೆಯ ಅಂಗಸಂಸ್ಥೆಯ ಪ್ರಮುಖ ಆದ್ಯತೆ ಸುಸ್ಥಿರ ಆಹಾರ ಉತ್ಪಾದನೆ. ಈ ಉತ್ಪಾದನೆಯ ಪಟ್ಟಿಯ ಹಒರಗೆ ಯಾರೂ ಇರಕೂಡದು, ಮುಂದಿನ ಪೀಳಿಗೆಗಳು ಹಸಿವಿನಿಂದ ನರಳಕೂಡದು ಎಂಬುದು ಎಫ್ ಎ ಓನ ಘೋಷಣೆ.

ಎಫ್ ಎ ಓ ತನ್ನ ವೆಬ್‌ಸೈಟಿನಲ್ಲಿ ಪುಟ್ಟ ಮಕ್ಕಳಿಗಾಗಿ ಈ ವಿವರಣೆಯನ್ನು ನೀಡಿದೆ. ದೊಡ್ಡವರಾದ ನಾವೂ ಒಮ್ಮೆ ಓದಿಕೊಳ್ಳಬೇಕು.

ರಾಜಕುಮಾರ ಚಾರ್ಲ್ಸ್ ಹೇಳಿದ್ದೇನು ಗೊತ್ತೆ?

ಕುಲಾಂತರಿ ತಳಿಗಳ (ಜೆನೆಟಿಕಲಿ ಮೋಡಿಫೈಡ್, ಜಿ ಎಂ) ವಿರೋಧದ ಅಭಿಯಾನದಲ್ಲಿ ಗುರುತಿಸಿಕೊಂಡಿರುವ ಇಂಗ್ಲೆಂಡಿನ ರಾಜಕುಮಾರ ಚಾರ್ಲ್ಸ್ ಕಳೆದ ವರ್ಷ ದಿ ಟೆಲಿಗ್ರಾಫ್ ಪತ್ರಿಕೆಗೆ ಸಂದರ್ಶನ ನೀಡಿ ಹಸಿರುಕ್ರಾಂತಿಯು ಅತಿ ಕ್ಷಿಪ್ರಕಾಲಾವಧಿಯಲ್ಲಷ್ಟೆ ಕೆಲಸ ಮಾಡಿತು; ಈಗ ಅದು ಬೃಹತ್ ದುರಂತಗಳಿಗೆ ಕಾರಣವಾಗಿದೆ ಎಂದಿದ್ದರು. ಹಸಿರುಕ್ರಾಂತಿಯ ದುಷ್ಪರಿಣಾಮಗಳಿಗೆ ಬಲಿಯಾದ ಪಂಜಾಭನ್ನು ತಾನು ನೋಡಿದ್ದೇನೆ ಎಂದಿದ್ದ ಚಾರ್ಲ್ಸ್ `ಜಲಮಟ್ಟ ಕುಸಿದು, ಕೀಟನಾಶಕಗಳ ದುರಂತ ಎದುರಾಗಿದೆ’ ಎಂದು ವಿಷಾದಿಸಿದ್ದರು. `ಪಶ್ಚಿಮ ಆಸ್ಟ್ರೇಲಿಯಾಗೂ ಭೇಟಿ ನೀಡಿದ್ದೇನೆ. ಅಲ್ಲಿ ಆಧುನಿಕ ಕೃಷಿವಿಧಾನದ ಪರಿಣಾಮವಾಗಿ ಭೂಮಿ ಜವುಳಾಗಿದೆ’ ಎಂದೂ ಉದಾಹರಿಸಿದ್ದರು.

ಅವರ ಈ ಸಂದರ್ಶನವನ್ನು ನೀವು ಈ ಲಿಂಕ್‌ನಲ್ಲಿ ಪೂರ್ತಿಯಾಗಿ ಓದಬಹುದು.

Share.
Leave A Reply Cancel Reply
Exit mobile version