• ತಾವೀಗ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದೀರಿ. `ಈ ಪ್ರಶಸ್ತಿಯು ನನ್ನ ಸಂಘಟನೆ ಮತ್ತು ಕಾರ್ಯಕರ್ತರಿಗೆ ಸೇರಿದ್ದು ಎಂದು ಆಗಲೇ ತಿಳಿಸಿದ್ದೀರಿ. ಇಷ್ಟಾಗಿಯೂ ವೈಯಕ್ತಿಕವಾಗಿ ನಿಮಗೆ ಈ ಪ್ರಶಸ್ತಿ ಬಂದ ಕ್ಷಣ ಏನನ್ನಿಸಿತು

ನನಗೆ ಪ್ರಶಸ್ತಿ ಬರುವುದು ತಿಳಿದಾಗ ನನಗೆ ಸಂಸ್ಕೃತ ಭಾರತಿಯ ಕಾರ್ಯಕರ್ತರು ಮಾಡಿದ ಕೆಲಸ, ಅದರಲ್ಲೂ  ವಿಶೇಷವಾಗಿ ಆರಂಭದ ದಿನಗಳಲ್ಲಿ ಶ್ರೀ ಜನಾರ್ಧನ ಹೆಗಡೆ, ಶ್ರೀ ವಿಶ್ವಾಸ, ಶ್ರೀ ವಸುವಜ್‌  ಮುಂತಾದ ಕಾರ್ಯಕರ್ತರು ಕೈಗೊಂಡ ಅವಿರತ ಶ್ರಮ ನೆನಪಾಯ್ತು. ಈ ಪ್ರಶಸ್ತಿಯು ನಿಜಕ್ಕೂ ಇವರೆಲ್ಲರ ತಪಸ್ಸಿನ ಪರಿಣಾಮವೇ ಹೌದು. ಆರಂಭದಲ್ಲಿ ನನಗೆ ಈ ಪ್ರಶಸ್ತಿ ತೆಗೆದುಕೊಳ್ಳುವ ಬಗ್ಗೆ ಸಮ್ಮತಿ ಇರಲಿಲ್ಲ. ನಾನಂತೂ ಕಳೆದ ೨೦ ವರ್ಷಗಳಿಂದ ಯಾವುದೇ ಪುರಸ್ಕಾರಗಳನ್ನೂ ಪಡೆಯುತ್ತಿರಲಿಲ್ಲ. ಪದ್ಮಶ್ರೀ ಕುರಿತು  ಹಿರಿಯರ ಜೊತೆಗೆ ಮಾತನಾಡಿದಾಗ, ಒಬ್ಬೊಬ್ಬರು ಒಂದೊಂದು ರೀತಿಯ ಕಾರಣ ಕೊಟ್ಟು ಸಮ್ಮತಿ ಸೂಚಿಸಿದರು. ಇದು ಸಂಸ್ಕೃತ ಭಾರತಿ ಕಾರ್ಯಕ್ಕೆ ಉತ್ತೇಜನ ಎಂದು ಒಬ್ಬರು ಹೇಳಿದರೆ, ಇದೊಂದು ರಾಷ್ಟ್ರಗೌರವ – ನಿರಾಕರಿಸಬಾರದು ಎಂದು ಇನ್ನೊಬ್ಬ ಹಿರಿಯರು ಅಭಿಪ್ರಾಯಪಟ್ಟರು. `ನೀವು ಸಂಸ್ಕೃತದ ಪುರಸ್ಕಾರಗಳನ್ನು ನಿರಾಕರಿಸಿರಬಹುದು. ಆದರೆ ಇದು ರಾಷ್ಟ್ರೀಯ ಕಾರ್ಯಕ್ಕೆ ಸಂದ ರಾಷ್ಟ್ರೀಯ ಮನ್ನಣೆ. ಇದರಿಂದ. ಸಂಸ್ಕೃತಕ್ಕೆ ಹೆಚ್ಚಿನ ಪ್ರಚಾರಕ್ಕೆ ಅನುಕೂಲವಾಗುತ್ತದೆ’ ಎಂದು ಇನ್ನೊಬ್ಬರು ತಿಳಿಸಿದರು. `ನಾನು ಇಂಥ ಸತ್ಕಾರ್ಯಕ್ಕೆ ನಿಮಿತ್ತನಾಗುತ್ತೇನೆ’ ಎಂದು ಭಾವಿಸಿಯೇ ಈ ಪ್ರಶಸ್ತಿಯನ್ನು ಒಪ್ಪಿಕೊಂಡೆ. ಇಲ್ಲಿ ನನ್ನದೇನೂ ಇಲ್ಲ.

ಈ ಕ್ಷಣದಲ್ಲಿ ನಾನು  ರಾ ಸ್ವ ಸಂಘ ಮತ್ತು ಹಿಂದು ಸೇವಾ ಪ್ರತಿಷ್ಠಾನವನ್ನು ನೆನಪಿಸಿಕೊಳ್ಳಲೇಬೇಕು. ಸಂಸ್ಕೃತದ ಕೆಲಸವು ಆರಂಭವಾದ ಮೊದಲ ಹದಿನೈದು ವರ್ಷಗಳ ಕಾಲ ನಾವು ಹಿಂದು ಸೇವಾ ಪ್ರತಿಷ್ಠಾನದ ಭಾಗವಾಗಿದ್ದೆವು. ಆಮೇಲೆಯೇ ಅದು `ಸಂಸ್ಕೃತ ಭಾರತಿ’ ಆಗಿ ನಾಮಕರಣಗೊಂಡಿತು.

  • ಈ ಪ್ರಶಸ್ತಿಯ ಹಿನ್ನೆಲೆಯಲ್ಲಿ ಸಂಸ್ಕೃತ ಭಾಷೆಯ ಪ್ರಸರಣಕ್ಕೆ ಇನ್ನೇನಾದರೂ ಹೊಸ ಹೆಜ್ಜೆಗಳನ್ನು ಯೋಜಿಸಿದ್ದೀರಾ

ಹೌದು. ನನಗೆ ಹಿರಿಯರು ನೀಡಿದ ಹೊಸ ಜವಾಬ್ದಾರಿಯಂತೆ ಸಂಸ್ಕೃತ ಸಂವರ್ಧನ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ, ಸಂಸ್ಕೃತ ಶಿಕ್ಷಾ ಕ್ಷೇತ್ರದಲ್ಲಿ, ವಿಶೇಷವಾಗಿ ಶಾಲೆ ಕಾಲೇಜುಗಳಲ್ಲಿ ಮತ್ತು ಪಾರಂಪರಿಕ ಶಿಕ್ಷಣಗಳಲ್ಲಿ ಸಂಸ್ಕೃತ ಪಾಠಪದ್ಧತಿಯಲ್ಲಿ ಬದಲಾವಣೆ ತರುವುದಕ್ಕಾಗಿ, ಶಿಕ್ಷಣವನ್ನು ಆಕರ್ಷಕಗೊಳಿಸಲು ಕಾರ್ಯಯೋಜನೆಗಳನ್ನು ಮತ್ತು ತಂತ್ರಜ್ಞಾನದ ಮೂಲಕವೂ ಸಂಸ್ಕೃತವು ಎಲ್ಲರಿಗೂ ತಲುಪುವಂತೆ ಹಲವು ಬಗೆಯ ಯೋಜನೆಗಳನ್ನು ಮಾಡುತ್ತಿದ್ದೇವೆ.

  • ನಿಮ್ಮ ಬಾಲ್ಯದ ಪುಟ್ಟ ನೋಟ ಕೊಡುವಿರಾ?

ನನ್ನ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಚಿದಿಲ ಎನ್ನುವ ಗ್ರಾಮ. ನಾನು ಪ್ರಾಥಮಿಕ,  ಹೈಸ್ಕೂಲು ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಪಡೆಯಲೆಂದು ನಾಲ್ಕೈದು ಶಾಲಾ ಕಾಲೇಜುಗಳಲ್ಲಿ ಓದಿದ್ದೇನೆ. ಎರಡು ವರ್ಷ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಪೂರ್ಣಕಾಲಿಕವಾಗಿಯೂ ಕೆಲಸ ಮಾಡಿದ್ದೆ. ಸ್ವಲ್ಪ ಸಮಯ ಸ್ವಂತ  ವಾಣಿಜ್ಯದ ಪ್ರಯತ್ನಗಳನ್ನೂ ಮಾಡಿದ್ದೆ. ಈ ಎಲ್ಲಾ ಸಂದರ್ಭಗಳಲ್ಲಿ ನಾನು ಸೈಕಲ್‌ನಲ್ಲೇ ಓಡಾಡುತ್ತಾ ಇದ್ದೆ. ಆಗ ಸ್ನೇಹಿತರೆಲ್ಲ ನನ್ನನ್ನು `ಸೈಕಲ್‌ ಶಾಸ್ತ್ರಿ’ ಎಂದೇ ಕರೆಯುತ್ತಿದ್ದರು!

ಹೀಗೆ ನಾನು ಸೈಕಲ್‌ಗಳಲ್ಲಿ ಹೋಗುತ್ತಿದ್ದಾಗ ಮತ್ತು ಶಾಖಾ ಕಾರ್ಯ ಮಾಡುತ್ತಿದ್ದಾಗ ಸಾಮಾನ್ಯ ಜನರ ಜೊತೆಗೆ,  ಬಡವರ ಜೊತೆಗೆ ಮತ್ತು ಸಮಾಜದ ಅತ್ಯಂತ ಹಿಂದುಳಿದ ಜನರ ಜೊತೆಗೆ ಓಡಾಡುವುದು ಮಾತ್ರವಲ್ಲದೆ ಅವರ ಮನೆಗಳಲ್ಲೂ ಊಟ ಮಾಡಿದೆ; ವಾಸ ಮಾಡಿದೆ. ಇದು ನನ್ನ ಜೀವನದ ಮೇಲೆ ಬಹಳ ಪ್ರಭಾವವಾಗಿದೆ. ಅದರಿಂದ ನಾನು ಜೀವನದ ಅತ್ಯಂತ ಕಟು ದಾರಿದ್ರ್‍ಯ ಮತ್ತು ಉಪೇಕ್ಷೆಯ ಮುಖವನ್ನೂ ನೋಡಿದ್ದೇನೆ; ಸಮೃದ್ಧಿಯ ಮುಖವನ್ನೂ ನೋಡಿದ್ದೇನೆ.

  • ನಿಮ್ಮ ತಂದೆ – ತಾಯಂದಿರು ನಿಮ್ಮ ಮೇಲೆ ಯಾವ ಪ್ರಮಾಣದ ಪರಿಣಾಮ ಉಂಟು ಮಾಡಿದ್ದಾರೆ

ನಮ್ಮ ತಂದೆಯವರು ಗುಜರಾತಿನಲ್ಲಿ ಆಗ ಐವತ್ತರ ದಶಕದಲ್ಲಿ ಸ್ವಾಧ್ಯಾಯ ಮಂಡಲದ ಮೂಲಕ ಸರಳ ಸಂಸ್ಕೃತ ಪರೀಕ್ಷೆಗಳನ್ನು ನಡೆಸುತ್ತಿದ್ದರು. ಅದರ ಒಂದು ಪರೀಕ್ಷಾ ಕೇಂದ್ರವನ್ನು ನಮ್ಮ ಊರಿನಲ್ಲಿಯೂ ನಡೆಸುತ್ತಿದ್ದರು. ನಾನು ಚಿಕ್ಕವನಿದ್ದಾಗ ಅಲ್ಲಿಯು ಸ್ವಯಂಸೇವಕನಾಗಿ ಕೆಲಸ ಮಾಡಿದ್ದೆ. ಕೆಲವು ಸರಳ ಸಂಸ್ಕೃತ ಪರೀಕ್ಷೆಗಳಿಗೂ ಕುಳಿತಿದ್ದೆ. ಹೀಗೆ ಬಾಲ್ಯದಲ್ಲಿ ನನ್ನೊಳಗೆ ಸಂಸ್ಕೃತದ ಬೀಜಾಂಕುರವಾಯಿತು. ಆಮೇಲೆ ತುರ್ತುಪರಿಸ್ಥಿತಿಯಲ್ಲಿ ನಾನು ಭೂಗತನಾಗಿ ಕೆಲಸ ಮಾಡುತ್ತಿದ್ದಾಗ, ನಾನು ನನ್ನ ಜೀವನದಲ್ಲಿ ಏನು ಮಾಡಬೇಕು ಎಂದು ಗಂಭೀರವಾಗಿ ಯೋಚಿಸುತ್ತಿದ್ದೆ. ಸ್ವಾಮಿ ವಿವೇಕಾನಂದ, ಬಾಲಗಂಗಾಧರ ತಿಲಕ್‌,  ವಿನಾಯಕ ದಾಮೋದರ ಸಾವರ್‌ಕರ್‍, ಮುಂತಾದವರ ಬಗ್ಗೆ ಓದಿದಾಗ ಕೊನೆಗೆ ನನಗೆ ಅನ್ನಿಸಿದ್ದು: ಭಾರತದ ಎಷ್ಟೋ ಸಮಸ್ಯೆಗಳಿಗೆ ಸಂಸ್ಕೃತದ ಉಪೇಕ್ಷೆಯೂ ಕಾರಣ. ಸಾಂಸ್ಕೃತಿಕ ಭಾರತದ ಸಂಸ್ಕೃತದ ಉತ್ಥಾನವಾಗದೆ ಈ ದೇಶದ ಉನ್ನತಿಯಾಗದು. ಆದ್ದರಿಂಧ ಸಂಸ್ಕೃತದ ಪ್ರಚಾರ ಮಾಡಬೇಕು. ಇದೇ ನನ್ನ ಕಾರ್ಯ ಎಂದು ನಾನು ಆ ಹೊತ್ತಿನಲ್ಲಿ ತೀರ್ಮಾನಿಸಿದೆ. ಹಾಗಂತ ನನಗೆ ಸಂಸ್ಕೃತ ಪೂರ್ಣವಾಗಿ ಗೊತ್ತಿರಲಿಲ್ಲ. ಆದ್ದರಿಂದ ಸಂಸ್ಕೃತ ಕಲಿಯುವುದಕ್ಕಾಗಿ ತಿರುಪತಿಗೆ ಹೋದೆ. ಅಲ್ಲಿ ನಾಲ್ಕು ವರ್ಷಗಳ ಕಾಲ ಸಂಸ್ಕೃತ ಕಲಿತೆ. ೧೯೮೧ರಿಂದ ಸಂಸ್ಕೃತ ಪ್ರಚಾರಕನಾಗಿ ಕೆಲಸ ಆರಂಭಿಸಿದೆ.

ನನ್ನ ಆ ಜೀವನದ ಚಂಚಲತೆಯ ಮತ್ತು ಕಠಿಣ ದಿನಗಳಲ್ಲಿ ನನಗೆ ಎಲ್ಲ ರೀತಿಯ ಪ್ರೇರಣೆ ನೀಡಿದವರು ನನ್ನ ತಾಯಿ. ಅವರೂ  ಆರನೇ ತರಗತಿಯವರೆಗೆ ಸಂಸ್ಕೃತ ಪಾಠಶಾಲೆಯಲ್ಲೇ ಓದಿದವರು.

  • ನೀವು ಸಂಸ್ಕೃತ ಕಲಿತಿದ್ದರಿಂದ ಸಂಸ್ಕೃತ ಸಂಘಟನೆ ಕಟ್ಟುವ ಯೋಚನೆ ಬಂತೋ, ಅಥವಾ ಆರೆಸೆಸ್‌ನ ಯೋಜನೆಗಳು ರೂಪುಗೊಳ್ಳುತ್ತಿದ್ದಾಗ ನೀವು ಸಂಘಟನೆಯನ್ನು ಪ್ರವೇಶಿಸಿದಿರೋ, ಕೊಂಚ ವಿವರ ನೀಡಿರಿ.  ಸಂಸ್ಕೃತವು ನಿಮ್ಮ ಬದುಕನ್ನು ಆವರಿಸಿದ ಮತ್ತು ನೀವು ಸಂಸ್ಕೃತದ ಕೆಲಸವನ್ನೇ ಪೂರ್ಣಕಾಲಿಕವಾಗಿ ಮಾಡಬೇಕೆಂದು ನಿರ್ಣಯ ತಳೆದ ಕ್ಷಣಗಳಲ್ಲಿ ಇದ್ದ ಹಿರಿಯ ಕಾರ್ಯಕರ್ತರು ಮತ್ತು ನಿರ್ಣಯ ಪ್ರಕ್ರಿಯೆಯ ಬಗ್ಗೆ ಕೊಂಚ ಬೆಳಕು ಚೆಲ್ಲಿರಿ.

ತಿರುಪತಿಯಲ್ಲಿ ನಾನು ಓದುತ್ತಿದ್ದಾಗ, ನಾನು, ಜನಾರ್ಧನ ಹೆಗಡೆ ಇತ್ಯಾದಿಯಾಗಿ ಕೆಲವು ಸ್ನೇಹಿತರು ಸಂಸ್ಕೃತ ಪ್ರಚಾರ ಮಾಡುವ ಸಂಕಲ್ಪ ಮಾಡಿದೆವು. ನಮ್ಮ ನಿರ್ಣಯವನ್ನು ಆಗಿನ ಪ್ರಾಂತ ಪ್ರಚಾರಕರಾದ ಶ್ರೀ ನ ಕೃಷ್ಣಪ್ಪನವರಿಗೆ ಪತ್ರ ಬರೆದು ತಿಳಿಸಿದಾಗ `ಬೆಂಗಳೂರಿಗೆ ಬನ್ನಿ, ಹಿಂದು ಸೇವಾ ಪ್ರತಿಷ್ಠಾನವು ನೆರವು ನೀಡುತ್ತದೆ’ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ನ ಕೃಷ್ಣಪ್ಪನವರೊಂದಿಗೆ ಮಾನ್ಯ ಶ್ರೀ ಯಾದವರಾವ್‌ ಜೋಶಿ, ಶ್ರೀ ಅಜಿತ್‌ಕುಮಾರ್‌ ಮುಂತಾದ ಹಿರಿಯ ಪ್ರಚಾರಕರು ನಮ್ಮ ಯೋಚನೆಗೆ ಸೂಕ್ತವಾದ ಲಂಗರು ಹಾಕಿದರು ಎಂದೇ ಹೇಳಬೇಕು.  ಹಾರ್ಲೆ ಎಸ್ಟೇಟ್‌ ಮಾಲೀಕರಾಗಿದ್ದ ಶ್ರೀ  ರವೀಂದ್ರನಾಥರ ಆರ್ಥಿಕ ಸಹಯೋಗದಿಂದ ಸ್ವಂತ ಮುದ್ರಣಾಲಯವನ್ನು ಸ್ಥಾಪಿಸಿ ಅದರ ಮೂಲಕ ಸಂಸ್ಕೃತ ಪತ್ರಿಕೆಯೊಂದನ್ನು ನಡೆಸುವ ಯೋಜನೆ ಮಾಡಿ ಜನಾರ್ಧನ ಹೆಗಡೆಯವರೊಂದಿಗೆ ನಾವು ಬೆಂಗಳೂರಿಗೆ ಬಂದೆವು.

ಬೆಂಗಳೂರಿನಲ್ಲಿ ಸಂಘದ ಹಿರಿಯರು `ಪತ್ರಿಕೆ ನಡೆಸುವುದು ಸರಿಯೇ. ಆದರೆ ಓದುವವರು ಯಾರು? ಮೊದಲು ಓದುವವರನ್ನು ತಯಾರು ಮಾಡಬೇಕು; ಆಮೇಲೆ ಪತ್ರಿಕೆ ಶುರು ಮಾಡಬೇಕು’ ಎಂದು ಸಲಹೆ ನೀಡಿದರು. ಆಗ, ಜನಾರ್ಧನ ಹೆಗಡೆಯವರು, ಸೋ ತಿ ನಾಗರಾಜರು, ಜಿ ಮಹಾಬಲೇಶ್ವರ ಭಟ್ಟರು ಮತ್ತು ನಾನು ಎಲ್ಲ ಸೇರಿಕೊಂಡು ಸಂಭಾಷಣಾ ಶಿಬಿರದ ಕಲ್ಪನೆಯನ್ನು ಮಾಡಿದೆವು. ನ ಕೃಷ್ಣಪ್ಪನವರ ಮಾರ್ಗದರ್ಶನದಂತೆ. ಅದಕ್ಕೆ ಮುಂಚಿತವಾಗಿ ಸೋ ತಿ ನಾಗರಾಜರು, ಮಹಾಬಲೇಶ್ವರ ಭಟ್ಟರು ಅದಾಗಲೇ ಒಂದೆರಡು ಸಂಸ್ಕೃತ ವ್ಯವಹಾರದ ಶಿಬಿರಗಳ ಪ್ರಯೋಗಗಳನ್ನೂ ನಡೆಸಿದ್ದರು. ಹೀಗೆ ಸಂಸ್ಕೃತ ಕಾರ್ಯಕರ್ತರ ಚಿಂತನೆ, ಕಾರ್ಯತತ್ಪರತೆ,  ಸಂಘದ ಹಿರಿಯರ ಆಶ್ರಯ ಮತ್ತು ಮಾರ್ಗದರ್ಶನಗಳಿಂದ ಈ ಆಂದೋಳನ ಶುರುವಾಯಿತು.

  • ಸಾವಿರಾರು ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸಲಾಗಿದೆ. ಇದರ ಅರ್ಥ ಶಿಬಿರಕ್ಕೆ ಬಂದವರೆಲ್ಲರೂ ಸಂಸ್ಕೃತವನ್ನು ಕಲಿತರು ಎಂದೆ? ಮುಂದಿನ ದಿನಗಳಲ್ಲಿ ಈ ನವ ಸಂಸ್ಕೃತ ಸಾಕ್ಷರರ ಹೊಣೆಗಾರಿಕೆಗಳೇನು

೩೫ ವರ್ಷಗಳಲ್ಲಿ ಸಂಭಾಷಣಾ ಶಿಬಿರಗಳ ಮೂಲಕ ಒಂದು ಕೋಟಿಗೂ ಹೆಚ್ಚು ಜನ ಸಂಸ್ಕೃತ ಸಂಭಾಷಣೆಯ ಪರಿಚಯ ಪಡೆದಿದ್ದಾರೆ. ಅವರಿಗೆ `ಸಂಸ್ಕೃತ ಸರಳ, ಸಂಸ್ಕೃತದಲ್ಲಿ ಮಾತನಾಡಬಹುದು, ನಾನೂ ಸಂಸ್ಕೃತ ಕಲಿಯಬಲ್ಲೆ ಮತ್ತು ಈ ದೇಶದ ಪ್ರಗತಿಗೆ ಸಂಸ್ಕೃತ ಬೇಕು, ಸಂಸ್ಕೃತ ಎಲ್ಲರ ಭಾಷೆ, ಸಂಸ್ಕೃತದಲ್ಲಿರುವ ಜ್ಞಾನ  ಜಾತಿ ಮತ, ಪಂಥ ಲಿಂಗ, ಭೇದಗಳಿಲ್ಲದೆ ಎಲ್ಲರಿಗೂ ಸಿಗುವಂತೆ ಆಗಬೇಕು;  ಈ ಭಾಷೆಯು ಸಾಮರಸ್ಯದ ಮತ್ತು ಭಾವೈಕ್ಯದ ಸಾಧನವಾಗಬೇಕು’ ಇತ್ಯಾದಿ ವಿಚಾರಗಳ ಮನವರಿಕೆ ಆಗಿದೆ.  ಇವರಲ್ಲಿ ಹಲವರು ಸಂಸ್ಕೃತವನ್ನು ಚೆನ್ನಾಗಿ ಕಲಿತಿದ್ದಾರೆ ಮತ್ತು ನಿತ್ಯಜೀವನದಲ್ಲಿ ಬಳಸುತ್ತಿದ್ದಾರೆ, ಹೆಚ್ಚಿನ ಅಧ್ಯಯನವನ್ನೂ ಮಾಡುತ್ತಿದ್ದಾರೆ. ಊರೂರುಗಳಲ್ಲಿ ತರಗತಿಗಳನ್ನು ನಡೆಸುತ್ತಿದ್ದಾರೆ.

  • ಭಾರತದ ಇತಿಹಾಸದ ಕಾಲಘಟ್ಟದಲ್ಲಿ ಎಂದಾದರೂ ಸಂಸ್ಕೃತ  ದೀರ್ಘಕಾಲದವರೆಗೆ ಮೃತ ಭಾಷೆಯಾಗಿತ್ತೆ? ಏಕೆ? ಹಾಗೆಯೇ ಸಂಸ್ಕೃತವು ಕೇವಲ ಮೇಲ್ವರ್ಗದವರ, ಅದರಲ್ಲೂ ಬ್ರಾಹ್ಮಣರ ಭಾಷೆಯಾಗಿತ್ತೆ? ಈ ಬಗ್ಗೆ ಕೊಂಚ ಇತಿಹಾಸದ ಉದಾಹರಣೆಗಳನ್ನು ಕೊಡಿರಿ.

ಸಂಸ್ಕೃತವು ಸಾಮಾನ್ಯ ಜನರ ಆಡುಭಾಷೆಯಾಗಿತ್ತು. ಪಾಣಿನಿಯ ಅಷ್ಟಾಧ್ಯಾಯೀಗೆ ಪತಂಜಲ ಮಹರ್ಷಿಯು ಬರೆದ ವ್ಯಾಕರಣ ಮಹಾಭಾಷ್ಯದಲ್ಲಿ ಸಾಮಾನ್ಯ ಜನರ ನಿತ್ಯಜೀವನದ ಪ್ರಯೋಗದ ಉದಾಹರಣ ವಾಕ್ಯಗಳನ್ನೇ ತೆಗೆದುಕೊಳ್ಳುತ್ತಾರೆಯೇ ಹೊರತು ಕಾವ್ಯವನ್ನು ಪ್ರಯೋಗಿಸಿಲ್ಲ. ಹೀಗೆ ಆಡುಭಾಷೆಯಾಗಿದ್ದ ಸಂಸ್ಕೃತವು ಐತಿಹಾಸಿಕ, ಸಾಮಾಜಿಕ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಉಚ್ಛ್ರಾಯವಾಗಿಯೂ ಇತ್ತು; ಹ್ರಾಸವಾಗಿಯೂ ಇತ್ತು. ಆದರೆ ಎಂದೂ ಸಂಸ್ಕೃತ ವ್ಯವಹಾರ ಪರಂಪರೆಯು ಲುಪ್ತವಾಗಿ ಇರಲಿಲ್ಲ. ಪ್ರಾದೇಶಿಕ ಭಾಷೆಗಳ ಬೆಳವಣಿಗೆಗಳಿಂದಾಗಿ ಸಂಸ್ಕೃತದ ವ್ಯವಹಾರ ಕಡಿಮೆಯಾಗಿರಬಹುದು. ಆದಿಕವಿ ವಾಲ್ಮೀಕಿ ಬೇಡರ ಜಾತಿಯವರು; ಕವಿಕುಲಗುರು ಕಾಳಿದಾಸ ಕುರುಬ ಜಾತಿಯವರು; ಶ್ರೀಹರ್ಷ ಕ್ಷತ್ರಿಯರು; `ಮೃಚ್ಛಕಟಿಕ’ ನಾಟಕದ ಲೇಖಕರು ಶೂದ್ರಕರು. ಹೀಗೆ ಸಂಸ್ಕೃತವು ಎಲ್ಲರ ಭಾಷೆಯಾಗಿತ್ತು. ಇವತ್ತಿಗೂ ಅದು ಎಲ್ಲರ ಭಾಷೆಯಾಗಿದೆ. ಈಗಲೂ ಕರ್ನಾಟಕದಲ್ಲಿ ನಡೆಯುವ ಸಂಸ್ಕೃತ, ಶಾಲೆಗಳನ್ನು ನಡೆಸುವವರು, ಆ ಶಾಲೆಗಳಳ್ಲಿ ಇರುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ, ದಲಿತರಾದಿಯಾಗಿ ಹಿಂದು ಸಮಾಜದ ಎಲ್ಲ ಜಾತಿ ವರ್ಗದವರೂ ಇದ್ದಾರೆ. ಸಂಸ್ಕೃತ ಭಾಷೆಯು ಎಲ್ಲರ ಭಾಷೆಯೇ ಹೌದು.

  • ಸಂಸ್ಕೃತದಲ್ಲಿ ಕೇವಲ ಮತಾಚರಣೆಯ ಮಂತ್ರಗಳನ್ನು ಮಾತ್ರ ಹೊಂದಿರುವ ಗ್ರಂಥಗಳಿವೆಯೆ? ಎಂತೆಂಥ ವಿವಿಧ ಬಗೆಯ ಶಾಸ್ತ್ರಗಳನ್ನು (ಈಗ ವಿಜ್ಞಾನ ಎನ್ನುವ ಶಾಸ್ತ್ರಗಳು) ಸಂಸ್ಕೃತದಲ್ಲಿ ಮೂಡಿಸಲಾಗಿದೆ

ಸಂಸ್ಕೃತದಲ್ಲಿ ೧೮ ವಿದ್ಯಾಸ್ಥಾನಗಳಿವೆ; ೬೪ ಕಲೆಗಳಿವೆ; ವಿಜ್ಞಾನ, ಅರ್ಥಶಾಸ್ತ್ರ, ಕೃಷಿಶಾಸ್ತ್ರ, ಶಿಲ್ಪ, ನಾಟ್ಯ, ಗಣಿತ, ಖಗೋಳ, ವೈದ್ಯಕೀಯ ಹೀಗೆ ಎಲ್ಲ ವಿಷಯಗಳಿಗೆ ಸಂಬಂಧಪಟ್ಟ ಗ್ರಂಥಗಳಿವೆ. ಉದಾಹರಣೆಗೆ, ಸಿದ್ಧಾಂತ ಶಿರೋಮಣಿ ಗ್ರಂಥದಲ್ಲಿ ಬೇರೆ ಬೇರೆ ತರಹದ ಯಂತ್ರಗಳ ವರ್ಣನೆಯಿದೆ. ಮಯಮತಂ ಎನ್ನುವ ಗ್ರಂಥದಲ್ಲಿ ಆರ್ಕಿಟೆಕ್ಚರ್‌ಗೆ ಸಂಬಂಧಪಟ್ಟ ವಿಚಾರಗಳಿವೆ. ಹೀಗೆ ಉಲ್ಲೇಖ ಮಾಡುತ್ತ ಹೋದರೆ ಸಾವಿರಾರು ಗ್ರಂಥಗಳನ್ನು ಉಲ್ಲೇಖಿಸಬಹುದು. ಹಿಂದಿನ ಜ್ಞಾನಪರಂಪರೆಗೂ, ಇವತ್ತಿನ ಜ್ಞಾನಪರಂಪರೆಗೂ ಇರುವ ಮುಖ್ಯ ವ್ಯತ್ಯಾಸ ಎಂದರೆ ಇವತ್ತು ಎಲ್ಲವೂ ಎಲ್ಲವೂ ಬೋಗಿ (ಕಂಪಾಟ್‌ಮೆಂಟಲ್‌) ಚಿಂತನೆಯಾಗಿದ್ದು ಪ್ರತಿಯೊಂದೂ ವಿಜ್ಞಾನದ ಕ್ಷೇತ್ರವೂ ಶಾಖೋಪಶಾಖೆಗಳಾಗಿ ಕವಲೊಡೆದಿವೆ. ಹಿಂದೆ ಸಮಗ್ರ ಚಿಂತನೆ ಇದ್ದುದರಿಂದ ಎಲ್ಲಾ ಶಾಸ್ತ್ರಗ್ರಂಥಗಳಲ್ಲೂ ವಿಜ್ಞಾನಕ್ಕೆ ಸಂಬಂಧಪಟ್ಟ ಅಂಶಗಳು ಬೇರೆ ಬೇರೆ ಕಡೆ ಉಲ್ಲೇಖವಾಗಿರುತ್ತಿದ್ದವು. ಉದಾಹರಣೆಗೆ, ವೈಶೇಷಿಕ ಎನ್ನುವ ದರ್ಶನ ಶಾಸ್ತ್ರದಲ್ಲಿ ಗುರುತ್ವಾಕರ್ಷಣ ಶಕ್ತಿಯ ವಿವರಣೆ ಇದೆ.

  • `ಭಾರತ ಸರ್ಕಾರವು ಎಂದಿನಿಂದಲೂ ಹಿಂದಿಯನ್ನು ಹೇರುತ್ತಿತ್ತು, ಈಗ ಸಂಸ್ಕೃತವನ್ನು ಹೇರುತ್ತಿದೆ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಏನು ಹೇಳ್ತೀರಿ

ಇದೆಲ್ಲ ಪೂವಾಗ್ರಹ ಪೀಡಿತ ಜನರು ತಮ್ಮ ನಿಹಿತ ಸ್ವಾರ್ಥ ಸಾಧನೆಗೆ ಮಾಡುವ ಅಪಪ್ರಚಾರ. ಸಮಾಜವನ್ನು ಮತ್ತು ದೇಶವನ್ನು ಒಡೆಯುವ ವಿದೇಶಿ ಶಕ್ತಿಗಳಿಂದ ಪ್ರೇರಿತರಾಗಿ ಈ ರೀತಿಯ ಅಪಪ್ರಚಾರಗಳನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ್ದಿಲ್ಲ.  ಈಗಿನ ಸರ್ಕಾರವಂತೂ ಸಂಸ್ಕೃತವನ್ನು ಹೇರುವ ಯಾವುದೇ ಚಿಂತನೆಯನ್ನೂ ಮಾಡಿಲ್ಲ. ಬದಲಾಗಿ ಸಂಸ್ಕೃತ ಕಲಿಕೆಯನ್ನು ಅನಿವಾರ್ಯ ಮಾಡಬಾರದು ಎನ್ನುವ  ಧೋರಣೆಯನ್ನೇ ತಳೆದಿದೆ. ಇಲ್ಲಿ ಸಂತೋಷಪಡಬೇಕಾದ ವಿಷಯವೆಂದರೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿಯೊಬ್ಬರು ಸಂಸ್ಕೃತ ವಾಕ್ಯಗಳನ್ನು ಉದ್ಧರಿಸುತ್ತಾ `ಮೈ ಐಡಿಯಾ ಆಫ್‌ ಇಂಡಿಯಾ’ ಎನ್ನುವುದನ್ನು ವಿವರಿಸಿದರು. ಅದಲ್ಲದೆ ಅವರು ಇಂದು (ಫೆ ೭, ೨೦೧೭) ೨೦೧೭-೧೮ರ ಬಜೆಟ್‌ ಚರ್ಚೆಯಲ್ಲಿ ಭಾಗವಹಿಸುತ್ತ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿ ಭಾಷಣ ಮಾಡಿದರು. ಈ ಪದ್ಮಶ್ರೀ ಪುರಸ್ಕಾರಕ್ಕೂ ಸಂಸ್ಕೃತ ಕ್ಷೇತ್ರವನ್ನು ಪರಿಗಣಿಸಿದರು. ಇದೆಲ್ಲವೂ ಈ ಸರ್ಕಾರಕ್ಕೆ ಸಂಸ್ಕೃತಕ್ಕೆ ಇರುವ ಒಲವನ್ನು ತೋರಿಸುತ್ತದೆ. ಇದನ್ನು ಎಲ್ಲರೂ ಮೆಚ್ಚಬೇಕೇ ಹೊರತು ಸಂಸ್ಕೃತವನ್ನು ಹೇರುತ್ತಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಬಾರದು.

  • ಸಂಸ್ಕೃತವನ್ನು ಕಂಪ್ಯೂಟರಿಗೆ ಅಳವಡಿಸುವುದು ಸುಲಭ ಎಂಬುದೇನೋ ಹಲವು ವರ್ಷಗಳ ಹಿಂಧೆಯೇ ಸಾಬೀತಾಗಿದೆ. ಆದರೆ ಇಂಥ ಕಂಪ್ಯೂಟರ್‌ ಸ್ನೇಹಿ ಭಾಷೆಯು ಕಂಪ್ಯೂಟರಿನಿಂದ ಎಷ್ಟರ ಪ್ರಮಾಣದಲ್ಲಿ ಬೆಳೆದಿದೆ?

ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಇವೆಲ್ಲವೂ ಒಂದು ಹಂತ ತಲುಪಲು ಕೊಂಚ ಸಮಯ ಬೇಕಾಗಬಹುದು.

  • ಭಾರತದಲ್ಲಿ ಸಂಸ್ಕೃತವೂ ಸೇರಿದಂತೆ  ಲಕ್ಷಗಟ್ಟಳೆ  ಭಾರತೀಯ ಭಾಷೆಗಳ ತಾಳೆಯೋಲೆ ಕೃತಿಗಳು ಇನ್ನೂ ಪಟ್ಟೀಕರಣವಾಗುತ್ತಿವೆಯೇ ಹೊರತು, ಅವುಗಳಲ್ಲಿ ಇರುವ ವಸ್ತುವಿಷಯಗಳನ್ನು ಸಂಪೂರ್ಣವಾಗಿ ದಾಖಲೀಕರಿಸಿಲ್ಲ. ಈ ಕೆಲಸವಾದರೆ ಸಂಸ್ಕೃತ ಮತ್ತು ಭಾರತೀಯ ಭಾಷೆಗಳ ನಡುವಣ ಕೊಡುಕೊಳ್ಳುವಿಕೆಯ ಅಧ್ಯಯನಕ್ಕೂ ನೆರವಾಗುತ್ತದೆ ಎನ್ನುವಿರಾ

ಹೌದು. ಹದಿನಾಲ್ಕು ಲಿಪಿಗಳಲ್ಲಿ ಸುಮಾರು ಒಂದು ಕೋಟಿ ತಾಳೆಯೋಲೆ ಕೃತಿಗಳಿವೆ. ಇವತ್ತು ಅವುಗಳನ್ನು ಓದುವವರೂ ಇಲ್ಲ ಎನ್ನುವ ಸ್ಥಿತಿ ಇದೆ. ಈ ತಾಳೆಗರಿ ಗ್ರಂಥಗಳ ಸಂಪಾದನೆ ಮತ್ತು ಪ್ರಕಾಶನ ಆಗಬೇಕು. ಅದರಲ್ಲಿರುವ ಜ್ಞಾನವನ್ನು ಹೊರತೆ ತರಬೇಕು ಮತ್ತು ಎಲ್ಲರಿಗೂ ತಲುಪಿಸಬೇಕು. ಇದರಿಂದ ಇವತ್ತಿನ ಜ್ಞಾನಯುಗದಲ್ಲಿ ಭಾರತವು ಜ್ಞಾನದ ದೃಷ್ಟಿಯಿಂದ ಮುಂದಾಳತ್ವದ ಹೊಂದಿ ಮತ್ತೆ ವಿಶ್ವಗುರು ಆಗಬಹುದು.

  • ಮುಂದೆಂದಾದರೂ ಸಂಸ್ಕೃತವೂ ಕನ್ನಡ, ತೆಲುಗಿನಿಂತೆ ಸಂಭಾಷಣಾ ಮಾಧ್ಯಮವಾಗಿ ಹರಡುತ್ತದೆ ಎಂಬ ವಿಶ್ವಾಸ ನಿಮಗಿದೆಯೆ?

ಈಗಾಗಲೇ ಈ ರೀತಿ ಮಾಧ್ಯಮವಾಗಿ ಸಂಸ್ಕೃತವು ಬೆಳೆಯುತ್ತಿದೆ. ಪ್ರತಿಯೊಂದೂ ಭಾಷೆಯ ವಿಕಾಸಕ್ಕೆ ಏಳು ಅವಶ್ಯಕತೆಗಳಿವೆ: ೧) ಆ ಭಾಷೆಯಲ್ಲಿ ಮಾತನಾಡುವ ಜನ, ೨) ಶಿಕ್ಷಣ, ವಿಜ್ಞಾನ, ಮನೋರಂಜನೆ, ಸಂವಹನ, ಇತ್ಯಾದಿಗಳ ಮಾಧ್ಯಮವಾಗಿ ಉಪಯೋಗ, ೩) ಸಮಕಾಲೀನ ಸಾಹಿತ್ಯ ೪) ಆಧುನಿಕ ಶಬ್ದಗಳ ನಿರಂತರ ರಚನೆ, ೫) ತಂತ್ರಜ್ಞಾನದ ಅಳವಡಿಕೆ, ೬)  ಸಮಾಜದ ಸಾಮೂಹಿಕ ಇಚ್ಛಾಶಕ್ತಿ ಮತ್ತು ೭) ಆಶ್ರಯ.  ಈ ಎಲ್ಲಾ ದೃಷ್ಟಿಯಿಂದಲೂ ಸಂಸ್ಕೃತಕ್ಕೆ ಈಗ ಅನುಕೂಲ ವಾತಾವರಣ ಕಾಣುತ್ತಿದೆ. ಜಗತ್ತಿನಾದ್ಯಂತ ಯೋಗ, ಆಯುರ್ವೇದ, ವೇದಾಂತ, ಭಗವದ್ಗೀತೆ ಇತ್ಯಾದಿ ಭಾರತೀಯ ವಿದ್ಯೆಗಳ ಪ್ರಚಾರದಿಂದ ಆಯಾಯ ವಿಷಯಗಳ ವಿದ್ಯಾರ್ಥಿಗಳು ಅನುವಾದಿತ ಗ್ರಂಥಗಳಿಂದ ತೃಪ್ತರಾಗದೇ ಮೂಲ ಗ್ರಂಥಗಳನ್ನು ಓದುವುದಕ್ಕಾಗಿ ಸಂಸ್ಕೃತವನ್ನು ಕಲಿಯಲು ಪ್ರಾರಂಭಿಸಿದ್ದಾರೆ. ಆದ್ದರಿಂದ ಸಂಸ್ಕೃತವು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾಷೆಯಾಗಿದೆ.

  • ಸಂಸ್ಕೃತದಲ್ಲಿ ಇತ್ತೀಚೆಗೆ ನಡೆದ ಪ್ರಮುಖ ವಿದ್ಯಮಾನಗಳ ಬಗ್ಗೆ ಕೊಂಚ ಬೆಳಕು ಚೆಲ್ಲಿರಿ.

ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯು ಮುಂದಿನ ಹತ್ತು ವರ್ಷಗಳಲ್ಲಿ ಸಂಸ್ಕೃತದ ಕುರಿತು ಏನು ಮಾಡಬೇಕು ಎಂಬುದನ್ನು ತಿಳಿಸಲು ಮಾಜಿ ಮುಖ್ಯ ಚುನಾವಣಾಧಿಕಾರಿ ಶ್ರೀ ಎನ್‌ ಗೋಪಾಲಸ್ವಾಮಿ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು ನೀಡಿದ ವರದಿಯಲ್ಲಿ ಸಂಸ್ಕೃತದಲ್ಲಿ ಮತ್ತು ಭಾರತದಲ್ಲಿ ಭಾರೀ ದೊಡ್ಡ ಬದಲಾವಣೆಗಳನ್ನು ತರುವಂತಹ ಸಲಹೆಗಳಿವೆ. ಇದೊಂದು ತುಂಬಾ ದೊಡ್ಡ ಮತ್ತು ಐತಿಹಾಸಿಕ ಬೆಳವಣಿಗೆ.

  • ನಿಮ್ಮ ಇತರೆ ಹವ್ಯಾಸಗಳ ಬಗ್ಗೆ ಒಂದಷ್ಟು ಮಾಹಿತಿ ಕೊಡಿ.

ನನಗೆ ಶಾಖಗೆ ಹೋಗುವುದಲ್ಲದೆ, ಸಂಘದ ಹಾಡುಗಳನ್ನು ಹಾಡುವುದಲ್ಲದೆ, ದೇಶಭಕ್ತರ ಜೀವನವನ್ನು ಓದುವುದಲ್ಲದೆ ಇದ್ದ ಒಂದೇ ಒಂದು ಹವ್ಯಾಸವೆಂದರೆ ಸೈಕಲ್‌ನಲ್ಲಿ ಸುತ್ತಾಡುವಂಥದ್ದು! ಆದರೆ ಈಗ ನನ್ನ ಎಲ್ಲ ಹವ್ಯಾಸಗಳೂ ಸಂಸ್ಕೃತ ಪ್ರಚಾರದಲ್ಲೇ ಕೊನೆಗೊಂಡಿವೆ. ಓದು –  ಬರಹ ಎಲ್ಲವೂ ಸಂಸ್ಕೃತ. `ಸರ್ವಂ ಖಲ್ವಿದಂ ಸಂಸ್ಕೃತಂ!’

 

=======================================================================================

 

 

೨೦೧೭ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ  ಶ್ರೀ ಚ ಮೂ  ಕೃಷ್ಣಶಾಸ್ತ್ರಿ: ಒಂದು ಕಿರು ಪರಿಚಯ
——————————————————————————————–
ನನಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯು ನಿಜಕ್ಕೂ ಸಂಸ್ಕೃತ ಭಾರತಿಗೆ ಸಲ್ಲುತ್ತದೆ; ಅದರ ೩೫ ವರ್ಷಗಳ ತಪಸ್ಸಿಗೆ, ಭಾರತದ ಮತ್ತು ವಿಶ್ವದಾದ್ಯಂತ ಇರುವ ನಿಷ್ಠಾವಂತ ಕಾರ್ಯಕರ್ತರಿಗೆ ಸಲ್ಲುತ್ತದೆ – ಚ ಮೂ  ಕೃಷ್ಣಶಾಸ್ತ್ರಿ

The Padmashri honour bestowed on me is in fact an award given to Samskrita Bharati, it’s 35 years’ Tapasya and the dedicated Karyakartas in India and all over the world – Chamu Krishna Shastry
——————————————————————————————–
ಶ್ರೀ ಚ ಮೂ  ಕೃಷ್ಣಶಾಸ್ತ್ರಿಯವರು ಸಂಸ್ಕೃತ ಭಾಷೆಯ ಬಳಕೆ ಮತ್ತು ಪ್ರಚಾರಕ್ಕಾಗಿ ಹೊಸ ಹಾದಿಯನ್ನೇ ಹಿಡಿದು ಕೈಗೊಂಡು ವಿಶ್ವದ ಇತರೆ ದೇಶಗಳ ಸಾಲಿನಲ್ಲಿ  ಭಾರತದ ನಾಗರಿಕತೆಯ ಸ್ಥಾನಮಾನವನ್ನು ಮರಳಿ ಸ್ಥಾಪಿಸಿದ ಶಿಕ್ಷಣತಜ್ಞರು. ಸಂಸ್ಕೃತವೇ ಸಮಾಜದಲ್ಲಿ ಸೌಹಾರ್ದತೆಯನ್ನು ಮೂಡಿಸುವ ಅತಿವಿಶಿಷ್ಟ ಬಂಧ ಎಂದು ಅವರು ನಂಬಿದ್ದಾರೆ. ಹಿಂದೆ ಕಲಿಸುತ್ತಿದ್ದ ವ್ಯಾಕರಣಾತ್ಮಕ ಮಾದರಿಯಲ್ಲಿ ಸಂಸ್ಕೃತವನ್ನು ಕಲಿಸುವುದರ ಬದಲಿಯಾಗಿ ಕ್ರಿಯಾರೂಪದಲ್ಲಿ ಸಂಭಾಷಣೆಯ ಭಾಷೆಯಾಗಿ ಕಲಿಸುವ ಅಭಿಯಾನವನ್ನು ಶ್ರೀ ಚ ಮೂ ಕೃಷ್ಣಶಾಸ್ತ್ರಿಯವರು ಯಶಸ್ವಿಯಾಗಿ ರೂಪಿಸಿ ಮುನ್ನಡೆಸಿದರು. ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉತ್ತೇಜಿಸುವುದಕ್ಕೆಂದು ಮೂರು ದಶಕಗಳ ಹಿಂದೆ ಅವರು ಮತ್ತು ಅವರ ಮಿತ್ರರು ಸೇರಿ `ಸಂಸ್ಕೃತ ಭಾರತಿ’ ಸಂಘಟನೆಯನ್ನು ಆರಂಭಿಸಿದರು. ಈಗ ಸಂಸ್ಕೃತ ಭಾರತಿಯು ಭಾರತದ ಮೂಲೆ ಮೂಲೆಗಳಲ್ಲಿ ಹರಡಿದೆ; ಅಮೆರಿಕಾ, ಕೆನಡಾ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಮತ್ತು ಪಶ್ಚಿಮ ಏಶ್ಯಾ ದೇಶಗಳಲ್ಲಿ ಈ ಸಂಘಟನೆಯು ಪ್ರಬಲ ಅಸ್ತಿತ್ವವನ್ನು ಹೊಂದಿದೆ.

ಶ್ರೀ ಚ ಮೂ  ಕೃಷ್ಣಶಾಸ್ತ್ರಿಯವರ ಪ್ರಯತ್ನಗಳಿಂದ ೧೦ ದಿನಗಳಲ್ಲಿ ಸಂಸ್ಕೃತವನ್ನು ಸಂಭಾಷಣಾ ಭಾಷೆಯಾಗಿ ಕಲಿಸುವ ಶಿಬಿರಗಳು ರೂಪುಗೊಂಡವು. ಈ ಶಿಬಿರಗಳಿಂದ ಈವರೆಗೆ ೯೦ ಲಕ್ಷಕ್ಕೂ ಹೆಚ್ಚು ಜನರಿಗೆ ಸಂಭಾಷಣಾ ಸಂಸ್ಕೃತವನ್ನು ಕಲಿಸಲಾಗಿದೆ. ಅವರ ಪ್ರಯತ್ನಗಳಿಂದ ಹಲವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಂಸ್ಕೃತಕ್ಕಾಗಿ ಸಂವಹನಾ  ಶಿಕ್ಷಣ ವಿಧಾನಗಳನ್ನು ರೂಪಿಸಲಾಗಿದೆ. `ಸಂಸ್ಕೃತ ಮನೆಗಳು’, `ಸಂಸ್ಕೃತ ಮಾತೃಭಾಷಾ ಮಕ್ಕಳು’ – ಈ ಪ್ರಯೋಗಗಳೂ ಅಪಾರ ಯಶಸ್ಸನ್ನು ಕಂಡಿವೆ. ಅವರು ಸಂಸ್ಕೃತಪ್ರಚಾರಕ್ಕಾಗಿ ಒಂದು ದೊಡ್ಡ ಕಾರ್ಯಪಡೆಗೇ ಸ್ಫೂರ್ತಿಯಾಗಿದ್ದಾರೆ; ಈ ಕಾರ್ಯಕರ್ತರು ಈಗ ಹಲವು ರಾಜ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಸಂಸ್ಕೃತ ಭಾರತಿಯು ನೀಡುತ್ತಿರುವ ಹಲವು ಸಂಸ್ಕೃತ ಭಾಷಾ ಕಲಿಕೆ ಕೋರ್ಸುಗಳನ್ನು ಸಾವಿರಾರು ಜನರು ಕಲಿಯುತ್ತಿದ್ದಾರೆ. ಅಮೆರಿಕಾದಲ್ಲಿ ಎಸ್‌ಎಎಫ್‌ಎಲ್‌ (SAFL: Samskrit as a Foreign Language ) ಎಂಬುದು ಅಲ್ಲಿನ ಭಾರತೀಯ ಮೂಲದ ಮಕ್ಕಳಲಿ ತುಂಬಾ ಜನಪ್ರಿಯವಾಗಿರುವ  ಕೋರ್ಸ್‌.

ಶ್ರೀ ಚ ಮೂ  ಕೃಷ್ಣಶಾಸ್ತ್ರಿಯವರು ಸಂಸ್ಕೃತದಲ್ಲಿ 13 ಪುಸ್ತಕಗಳನ್ನು ಬರೆದಿದ್ದಾರೆ. `ಸರಸ್ವತಿ ಸೇವಾ’ ಎಂಬ ಯೋಜನೆಯ ಮೂಲಕ ನೂರಾರು ಭಾರತೀಯ ಮತ್ತು ವಿದೇಶಿ ಭಾಷೆಗಳ ಗ್ರಂಥಗಳನ್ನು ಸಂಸ್ಕೃತಕ್ಕೆ ಅನುವಾದಿಸಲಾಗುತ್ತಿದೆ. ಸಂಸ್ಕೃತದಲ್ಲಿ ಆಧುನಿಕ ವಿಷಯಗಳ ಪುಸ್ತಕಗಳನ್ನು ಬರೆಯಲು ಮತ್ತು ಯುವ ಲೇಖಕರನ್ನು ಪ್ರೋತ್ಸಾಹಿಸಲು ಅವರು `ಸಂಸ್ಕೃತ ಪುಸ್ತಕ ಮೇಳ’ ಮತ್ತು `ಸಾಹಿತ್ಯೋತ್ಸವ’ಗಳನ್ನು ಸಂಘಟಿಸಿದ್ದಾರೆ.

ಶಿಕ್ಷಣ ಮತ್ತು ಕಲಿಕಾ ವಿಧಾನದಲ್ಲಿ ವ್ಯಾಪಕ ಅನುಭವವನ್ನು ಹೊಂದಿರುವ ಹಿನ್ನೆಲೆಯಲ್ಲಿ ಶ್ರೀ ಚ ಮೂ ಕೃಷ್ಣಶಾಸ್ತ್ರಿಯವರು ರಾಷ್ಟ್ರೀಯ ಸಂಸ್ಕೃತ ಪ್ರತಿಷ್ಠಾನ ಮತ್ತು ಹಲವು ವಿಶ್ವವಿದ್ಯಾಲಯಗಳ ಮಂಡಳಿಗಳಲ್ಲಿ ಸದಸ್ಯರಾಗಿದ್ದಾರೆ. `ಸಂಸ್ಕೃತದ ಅಭಿವೃದ್ಧಿಗಾಗಿ ಒಂದು ಮಾರ್ಗಸೂಚಿ – ಹತ್ತು ವರ್ಷಗಳ ದೃಷ್ಟಿಕೋನ ಯೋಜನೆ’ ವರದಿಯನ್ನು ೨೦೧೬ರಲ್ಲಿ ಸಲ್ಲಿಸಿದ ಕೇಂದ್ರ ಸರ್ಕಾರವು ರಚಿಸಿದ್ದ ಸಂಸ್ಕೃತ ಸಮಿತಿಯಲ್ಲಿ ಅವರೂ ಒಬ್ಬ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಶ್ರೀ ಚ ಮೂ  ಕೃಷ್ಣಶಾಸ್ತ್ರಿಯವರು ತುಂಬಾ ಬೇಡಿಕೆಯಲ್ಲಿರುವ ಜನಪ್ರಿಯ ಭಾಷಣಕಾರರು. ಅವರು ಸಂಸ್ಕೃತದಲ್ಲಿ ಎಲ್ಲರಿಗೂ ತಿಳಿಯುವಂತಹ ಮನೋರಂಜನಾತ್ಮಕ, ಶಿಕ್ಷಣಾತ್ಮಕ ಶೈಲಿಯಲ್ಲಿ ನಿರರ್ಗಳವಾಗಿ, ಪ್ರಖರವಾಗಿ ಮಾತನಾಡಬಲ್ಲ ಪರಿಣತರು. ಯಾವುದೇ ಫಲಾಪೇಕ್ಷೆಯಿಲ್ಲದೆ ಕಾರ್ಯ ನಿರ್ವಹಿಸಬೇಕೆಂಬ ಭಗವದ್ಗೀತೆಯ ನೀತಿಯಂತೆಯೇ ನಡೆದುಕೊಳ್ಳುತ್ತಿರುವ ಶ್ರೀ ಚ ಮೂ  ಕೃಷ್ಣಶಾಸ್ತ್ರಿಯವರು ಇಂದು ಭಾರತದಲ್ಲಿ ಸಂಸ್ಕೃತ ಭಾಷೆಯನ್ನು ಜನರತ್ತ ಒಯ್ದ ಭಾಷಾ ಕಾರ್ಯಕರ್ತರಾಗಿದ್ದಾರೆ.

೧೯೫೬ರ ಜನವರಿ ೨೩ರಂದು ಜನಿಸಿದ ಶ್ರೀ ಚ ಮೂ ಕೃಷ್ಣಶಾಸ್ತ್ರಿಯವರು ಮೂಲತಃ ಕರ್ನಾಟಕದ ದಕ್ಷಿಣಕನ್ನಡದವರು. ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲಿಶ್‌, ತುಳು ಮತ್ತು ತೆಲುಗು ಮುಂತಾದ ಹಲವು ಭಾಷೆಗಳನ್ನು ಬಲ್ಲ ಶ್ರೀಯತರು ಇತ್ತೀಚಿನವರೆಗೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಭಾಷಾ ರಂಗದ ಹಿರಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.

ಶ್ರೀ ಚ ಮೂ  ಕೃಷ್ಣಶಾಸ್ತ್ರಿಯವರ ಈಗಿನ ಹೊಣೆಗಾರಿಕೆಗಳು

  • ರಾಷ್ಟ್ರೀಯ ಮ್ಯಾನುಸ್ಕ್ರಿಪ್ಟ್ಸ್‌ ಮಿಶನ್‌ನ ಕಾರ್ಯಕಾರಿ ಸಮಿತಿಯ ಸದಸ್ಯರು
  • ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಸಂಸ್ಕೃತ ಪರಿಷತ್ತಿನ ವಿಶೇಷ ಆಹ್ವಾನಿತ ಸದಸ್ಯರು
  • ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಆಡಳಿತ ಮಂಡಳಿ ಸದಸ್ಯರು
  • ಗುಜರಾತ್ ಸರ್ಕಾರದ ವೇರವಲ್‌ನ ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿಯ ಸದಸ್ಯರು
  • ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೊಸದಿಲ್ಲಿಯ ಎಸ್‌ಎಲ್‌ಬಿಎಸ್‌ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು
  • ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ತಿರುಪತಿಯ ರಾಷ್ಟ್ರೀಯ ಸಂಸ್ಕೃತಿ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು

 ಹಿಂದೆ ಸೇವೆ ಸಲ್ಲಿಸಿದ ವಿವರಗಳು

  • ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಂಸ್ಕೃತ ಭಾಷೆಯ ಜಿಐಎಸಿಯ ಮಾಜಿ ಸದಸ್ಯರು
  • ಭಾರತ ಸರ್ಕಾರದ ಸಂಸ್ಕೃತ ವರ್ಷ ಆಚರಣಾ ಕೇಂದ್ರೀಯ ಸಮಿತಿಯ ಮಾಜಿ ಸದಸ್ಯರು
  • ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ವಿವಿಧ ಸಮಿತಿಗಳ ಮಾಜಿ ಸದಸ್ಯರು
  • ಸಿಬಿಎಸ್‌ಇ ಯ ಸಂಸ್ಕೃತ ಪಠ್ಯಪುಸ್ತಕ ಸಮಿತಿಯ ಮಾಜಿ ಸದಸ್ಯರು
  • ಎನ್‌ಸಿಇಆರ್‌ಟಿಯ ಸಂಸ್ಕೃತದ ಮೂಲಕ ಸಂಸ್ಕೃತ ಸಮಿತಿಯ ಮಾಜಿಸದಸ್ಯರು
  • ಯುಜಿಸಿಯ ಸರಲ ಸಂಸ್ಕೃತ ಶಿಕ್ಷಣ ಕೇಂದ್ರಸಮಿತಿಯ ಮಾಜಿ ಸದಸ್ಯರು
  • ಭಾರತ ಸರ್ಕಾರದ ಕೇಂದ್ರೀಯ ಸಂಸ್ಕೃತ ಮಂಡಳಿಯ ಮಾಜಿ ಸದಸ್ಯರು
  • ವಿವಿಧ ರಾಜ್ಯ ಸರ್ಕಾರಗಳ ಸಂಸ್ಕೃತ ಪಠ್ಯಪುಸ್ತಕ ಮತ್ತು ಶಿಕ್ಷಕ ತರಬೇತಿ ಕಾರ್ಯಕ್ರಮಗಳ ಮಾಜಿ ಸಲಹೆಗಾರರು
  • `ಸಂಸ್ಕೃತ ಮತ್ತು ಕಂಪ್ಯೂಟರ್‌’ ಕುರಿತು ೧೯೮೬ರಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಸಮ್ಮೇಳನದ ಸಂಘಟನಾ ಸಮಿತಿಯ ಸದಸ್ಯರು
  • ೧೫ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಸಂಸ್ಕೃತದ ಮೂಲಕ ಸಂಸ್ಕೃತ ಶಿಕ್ಷಣ ತಂಡದ ಸಂಚಾಲಕರು

ಸಾಮಾಜಿಕ ಕೊಡುಗೆಗಳು

  • ೧೯೮೧ರಿಂದ ಸಂಸ್ಕೃತದ ರಂಗದಲ್ಲಿ ಶಿಕ್ಷಣಕ್ಕಾಗಿ ಸಂಪೂರ್ಣ ಸಮಯವನ್ನು ನೀಡಿ ಸ್ವಯಂಸೇವಾ ಕಾರ್ಯಕರ್ತರಾಗಿದ್ದಾರೆ; ತನ್ಮೂಲಕ ಸಂಸ್ಕೃತವನ್ನೇ ತಮ್ಮ ಜೀವನಧ್ಯೇಯವನ್ನಾಗಿ ಮಾಡಿಕೊಳ್ಳಲು ಸಾವಿರಾರು ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ.
  • `ಸರಳ ಸಂಸ್ಕೃತ ಸಂಭಾಷಣಾ ಪದ್ಧತಿ’ ಎಂಬ ಹೊಸ ಸಂಸ್ಕೃತ ಭಾಷಾ ಕಲಿಕಾ ವಿಧಾನವನ್ನು ರೂಪಿಸಿದ್ದಾರೆ.
  • `ಸಂಸ್ಕೃತ ಸಂಭಾಷಣೆ ಚಳವಳಿ’ಯನ್ನು ೧೯೮೧ರಲ್ಲೇ ಆರಂಭಿಸಿ ೧೦ ದಿನಗಳ ಸಂಭಾಷಣಾ ಸಂಸ್ಕೃತ ಶಿಬಿರಗಳ ಮೂಲಕ ಸುಮಾರು ೯೦ ಲಕ್ಷಕ್ಕೂ ಹೆಚ್ಚು ಜನರಿಗೆ ಸಂಭಾಷಣಾ ಸಂಸ್ಕೃತದಲ್ಲಿ ತರಬೇತಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
  • ೧೯೮೩ರಲ್ಲಿ ಸಂಸತ್‌ ಸದಸ್ಯರಿಗೆ ಸಂಸತ್‌ ಭವನದಲ್ಲಿ ಹಿರಿಯ ಸಂಸದರಾದ ಶ್ರೀ ಎಲ್‌ ಕೆ ಆಡ್ವಾಣಿ, ಡಾ|| ಬಲರಾಂ ಜಾಖಡ್‌, ಡಾ|| ಕರಣ್‌ ಸಿಂಗ್‌ ಮುಂತಾದವರು ಭಾಗವಹಿಸಿದ್ದ ೧೦ ದಿನಗಳ ಸಂಸ್ಕೃತ ಸಂಭಾಷಣಾ ತರಗತಿಗಳನ್ನು ನಡೆಸಿ ಕೊಟ್ಟಿದ್ದಾರೆ.
  • ಸಂಭಾಷಣಾ ಸಂಸ್ಕೃತದಲ್ಲಿ ಪರಿಣತರಾಗುವಂತೆ ಒಂದು ಲಕ್ಷಕ್ಕೂ ಹೆಚ್ಚು ಸಂಸ್ಕೃತ ಶಿಕ್ಷಕರಿಗೆ ತ ರಬೇತಿ ನೀಡುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
  • ೧೩ ಪುಸ್ತಕಗಳನ್ನು ಬರೆದಿದ್ದಾರಲ್ಲದೆ ಸಮಕಾಲೀನ ಸಂಗತಿಗಳ ಕುರಿತು ನೂರಾರು ಲೇಖನಗಳನ್ನು ಬರೆದಿದ್ದಾರೆ.
  • ಸಂಸ್ಕೃತದ ಹಳ್ಳಿಗಳನ್ನು, ಸಂಸ್ಕೃತದ ಮನೆಗಳನ್ನು ರೂಪಿಸುವಲ್ಲಿ ಮತ್ತು ದೇಶದೆಲ್ಲೆಡೆಯ ಸಂಸ್ಕೃತ ಸಂಸ್ಥೆಗಳಲ್ಲಿ ಸಂಸ್ಕೃತದ ವಾತಾವರಣವನ್ನು ಮೂಡಿಸುವಲ್ಲಿ  ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
  • ಅಮೆರಿಕಾದಲ್ಲಿ ಎಸ್‌ಎಎಫ್‌ಎಲ್‌ (ವಿದೇಶಿ ಭಾಷೆಯಾಗಿ ಸಂಸ್ಕೃತ) ಆರಂಭಿಸುವಲ್ಲಿ ಕೊಡುಗೆ ನೀಡಿದ್ದಾರೆ.
  • ಬೆಂಗಳೂರಿನಲ್ಲಿ ನಡೆದ ವಿಶ್ವ ಸಂಸ್ಕೃತ ಪುಸ್ತಕ ಮೇಳ ಮತ್ತು ಉಜ್ಜಯಿನಿಯಲ್ಲಿ ನಡೆದ ಸಂಸ್ಕೃತ ಸಾಹಿತ್ಯೋತ್ಸವದ ಪ್ರಮುಖ ಸಂಘಟಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
  • ಸಂಸ್ಕೃತದಲ್ಲಿ `ಸಂಭಾಷಣಾ ಸಂದೇಶ’ ಎಂಬ ಬಹುವರ್ಣದ ಮ್ಯಾಗಜಿನ್‌ನ್ನು ಆರಂಭಿಸಿದ್ದಾರೆ; ಚಂದಮಾಮ ಸಂಚಿಕೆಗಳ ಸಂಸ್ಕೃತ ಆವೃತ್ತಿ ಪ್ರಕಟಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.
  • ವಿವಿಧ ಭಾಷೆಗಳಿಂದ ಸುಮಾರು ೧೦೦೦ಕ್ಕೂ ಹೆಚ್ಚು ಸಮಕಾಲೀನ ಸಾಹಿತ್ಯ ಕೃತಿಗಳನ್ನು ಸಂಸ್ಕೃತಕ್ಕೆ ಅನುವಾದ   ಮಾಡುವ `ಸರಸ್ವತೀ ಸೇವಾ ಯೋಜನೆ’ಯನ್ನು ಆರಂಭಿಸಿದ್ದಾರೆ.
  • ಸಂಸ್ಕೃತ ವಿಕಿಪೀಡಿಯ ಆರಂಭಿಸಲು ನೆರವಾಗಿ ಇಂಟರ್‌ನೆಟ್‌ನಲ್ಲಿ ಸಂಸ್ಕೃತದ ಪ್ರಮಾಣ ಹೆಚ್ಚುವಲ್ಲಿ ಶ್ರಮಿಸಿದ್ದಾರೆ.
  • ೧೦ ಭಾರತೀಯ ಭಾಷೆಗಳಲ್ಲಿ ಸಂಸ್ಕೃತ ಸಂಭಾಷಣಾ ಕೋರ್ಸ್‌‌ಗಳನ್ನು ಆರಂಭಿಸುವಲ್ಲಿ ಮುಖ್ಯ ಭೂಮಿಕೆ ವಹಿಸಿದ್ದಾರೆ.
  • ಸಂಸ್ಕೃತದಲ್ಲಿ ಸೃಜನಶೀಲ ಬರವಣಿಗೆ ಮತ್ತು ಅನುವಾದಗಳನ್ನು ಕೈಗೊಳ್ಳುವುದಕ್ಕಾಗಿ ಸುಮಾರು ೨೦ ಕಾರ್ಯಾಗಾರಗಳನ್ನು ನಡೆಸುವಲ್ಲಿ ಶ್ರಮಿಸಿದ್ದಾರೆ.
  • ಅಮೆರಿಕಾ, ಕೆನಡಾ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ನೇಪಾಳ, ಯುಎಇ, ನೆದರ್‌ಲ್ಯಾಂಡ್‌, ಬೆಲ್ಜಿಯಂ, ಥೈಲ್ಯಾಂಡ್‌ ದೇಶಗಳಲ್ಲಿ ಸರ್ಕಾರದ ನೆರವಿಲ್ಲದೆಯೇ ಸಂಸ್ಕೃತ ಕಲಿಕೆ ಕುರಿತಂತೆ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಈ ದೇಶಗಳಲ್ಲಿ ಸಂಸ್ಕೃತ ಕಲಿಸುವ ಸ್ವಯಂಸೇವಾ ಗುಂಪುಗಳನ್ನು ಸ್ಥಾಪಿಸಿದ್ದಾರೆ.

——————————————————————————————-
(೧೯೮೭ರವರೆಗೆ ಶ್ರೀ  ಮೂ ಕೃಷ್ಣಶಾಸ್ತ್ರಿಯವರಿಗೆ ಕಾಶಿ ಪಂಡಿತ ಪರಿಷತ್ನಿಂದ `ಸಾರಸ್ವತ ಸುಧಾಕರ’ (೧೯೮೪ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಅಂತಾರಾಷ್ಟ್ರೀಯ ಯುವ ವರ್ಷಾಚರಣೆ ಸಮಿತಿಯಿಂದ `ರಾಷ್ಟ್ರೀಯ ಯುವ ಪುರಸ್ಕಾರ’ (೧೯೮೫)  ದೊರಕಿದ್ದವುಆನಂತರ ಅವರು ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಬಾರದುಎಂಬ ನಿಲುವನ್ನು ತಾಳಿದ್ದು ಈವರೆಗೆ ಇನ್ನಾವುದೇ ಪ್ರಶಸ್ತಿಗಳನ್ನೂ ಸ್ವೀಕರಿಸಿರಲಿಲ್ಲ.) 
——————————————————————————————-
ಕೃತಿಗಳು

ಕ್ರಮಸಂಖ್ಯೆ ಶೀರ್ಷಿಕೆ ವಿಷಯವಸ್ತು
1. ಜಾನೇ ಧರ್ಮಃ ಉತ ಪ್ರಯೋಗೇ? ಸಂಭಾಷಣಾ ಸಂಸ್ಕೃತ : ಏಕೆ?
2. ಲಾಭಃ ಉತ ಹಾನಿಃ ಚಿಂತನಾಪ್ರದ ಲೇಖನಗಳು
3. ನಿಮಿತ್ತಮಾತ್ರಂ ವಿಶ್ವ ಸಂಸ್ಕೃತ ಪುಸ್ತಕ ಮೇಳ ಕುರಿತು
4. ನಿಮಿತ್ತಮಾತ್ರಂ (ಹಿಂದಿ) ವಿಶ್ವ ಸಂಸ್ಕೃತ ಪುಸ್ತಕ ಮೇಳ ಕುರಿತು
5. ಪರಿಷ್ಕಾರಃ ವ್ಯಕ್ತಿವ ವಿಕಸನ ಕುರಿತ ಪುಸ್ತಕ
6. ಪರಿವರ್ತನಂ ತಂಡ ನಾಯಕರಿಗೆ ಕೈದೀವಿಗೆ
7. ಸಾವಧಾನಃ ಸ್ಯಾಮ ಇಂದಿನ ಸಂಸ್ಕೃತ ಕುರಿತ ಪ್ರಬಂಧಗಳು
8. ಸಂಸ್ಕೃತಭಾರತೀ ಸಂಸ್ಕೃತ ಭಾರತೀ ಕುರಿತು ಪರಿಚಯ
9. ಸಂಸ್ಕೃತಂ: ಸ್ವಾಟ್‌ ವಿಶ್ಲೇಷಣೆ ಸಂಸ್ಕೃತದ ಶಕ್ತಿ ಸಾಮರ್ಥ್ಯ ವಿಶ್ಲೇಷಣೆ
10. ಸಂಸ್ಕರಣಂ ಸಂಸ್ಕೃತ ಪ್ರಚಾರದ ಬಗ್ಗೆ ಲೇಖನಗಳು
11. ಸಪ್ತಾದಶೀ ಸಂಸ್ಕೃತ ಅಭಿವೃದ್ಧಿ ಕುರಿತ ಪ್ರಬಂಧಗಳು
12. ಉತ್ತಿಷ್ಠಃ! ಮಾ ಸ್ವಪ್ತ!! ಸಂಸ್ಕೃತ ವಿದ್ವಾಂಸರಿಗೆ ಕರೆ
13. ವೈಚಾರಿಕಮ್ ವೈಚಾರಿಕ ಲೇಖನಗಳು

A brief profile of Shri Chamu Krishna Shastry, Padmashree Awardee, 2017

Sri. Chamu Krishna Shastry is an ardent educationist with a unique and path-breaking mission to practice and propagate Sanskrit as a language to restore India’s civilizational status in the comity of nations. He believes that Sanskrit is also the unique glue for social harmony in the society. Chamu Krishna Shastry is a trailblazer in teaching Sanskrit as an active conversational language rather than a grammatical language of the past. Chamu Krishna Shastry and friends started an organization more than three decades ago to promote Samskrit as a spoken language and now “Samskrita Bharati” spans all corners of the country and has presence in many major countries such as the USA, Canada, UK, Australia and West Asia.

Chamu Krishna Shastry’s efforts led to the development of the very popular 10 day Spoken Sanskrit Camps of Samskrita Bharati. These camps have now trained more than 90 lakhs of people in Conversational Sanskrit.  His efforts have also led many universities and colleges to adopt the communicative teaching method for Sanskrit.  Few unique experiments like “Samskrit Homes” and “Samskrit mother tongue Children” are popular. He has inspired a dedicated work force for Samskrit across the country which is leading the propagation work at various states. Thousands of people learn Samskrit through various courses offered through Samskrita Bharati.  In USA, SAFL(Samskrit as a Foreign Language) is a popular course among the children of Indian origin.

He has authored 13 books in Samskrit. “Saraswati Seva” is project through which hundreds of books from other Indian & foreign Languages are translated in to Samskrit. To promote young authors and modern books in Samskrit he had conceived events like “Samskrit Book Fair”, & “Sahityotsava”.

His extensive experience in education and teaching methods has led to his being on the Board of Rashtriya Sanskrit Sansthan and many other universities. He was also a member of the Central Government constituted Sanskrit Committee that developed the “Road Map for the Development of Sanskrit – Ten Year Perspective Plan” document in 2016.

Chamu Krishna Shastry is a sought-after speaker and he is very well known for his impressive and fiery oratory in Samskrit. He believes in the dictum of the Bhagavadgita to work towards a goal without expectations and has taken a personal vow of not accepting honors and awards.  He is a prolific writer and has written a dozen books and numerous articles in Samskritam.

Bio-data

Name :   Chamu Krishna Shastry
Date of Birth : 23-01-1956
Address : 1st  Floor, “Kamala Nilaya”, Behind Post Office, Sharada Nagar,
Sringeri-577139 KarnatakaTelephone:08265-251152
Qualification : “Shastry” from RahstriyaSanskrit Vidyapeet,Tirupati
Mobile number : 9868113005
Email : chamuks56@gmail.com
Languages known : Sanskrit, Kannada, Hindi, English, Tulu, Telugu

An ‘Educationist’ by mission, proficient multi-linguist, he has modernized the Sanskrit Pedagogy through his three decades of consistent efforts, which has built a network of Sanskrit Volunteers across the globe, projecting Indian soft-power abroad. He is an exponent of Bhagavadgita and Practicing Vedanta, expert in Teacher Traiing and Trainers’ Training, immensely contributed for the Document “Vision and Road Map for the Development of Sanskrit – Ten Year Perspective Plan”. He was Senior Consultant Languages in MHRD GoI till December 2016.

Responsibilities and Positions held: 

  1. Former Senior Consultant – Languages , Ministry of HRD
  2. Member – Executive Committee, National Manuscript Mission, Ministry of Culture
  3. Special Invitee Member – Rashtriya Sanskrit Parishad MHRD
  4. Member, BoM, Rashtriya Sanskrit Sansthan, New Delhi MHRD
  5. Member, EC, Somanath Sanskrit University Veraval Govt of Gujarat
  6. Member BoM, SLBS Rashtriya Sanskrit Vidyapeeth New Delhi MHRD
  7. Member – BoM, Rashtriya Sanskrit Vidyapeeth, Tirupati, MHRD
  8. Former Member – GIAC for Sanskrit, MHRD
  9. Former Member – Central Committee for Sanskrit Year Celebrations, Government of India
  10. Former Member of various committees of Rashtriya Sanskrit Sansthan
  11. Former Member -Sanskrit Text Book Committee, CBSE
  12. Former Member – Committee for Sanskrit Through Sanskrit, NCERT
  13. Former Member – Committee for SaralaSanskritaShikshanaKendram, UGC
  14. Former Member – Central Sanskrit Board, Government of India
  15. Former Consultant for Sanskrit Text Books and Teacher Training Programs of different institutions of various State Governments.
  16. Member of organizing committee of First International Conference on “Samskrit and Computers” in 1986
  17. Convener – Panel on Teaching Samskrit through Samskrit at 15th World Sanskrit Conference.

 

Contributions:

 

  1. Full time dedicated volunteer for Education in the field of Samskrit, since 1981 and inspired thousands of youth to take Samskrit as their life mission.
  2. Innovateda new method to teach Samskrit called “SaralaSambhashanaPaddhati”
  3. Launched “Speak Samskrit Movement” in 1981 and was instrumental in teaching Spoken Samskrit to more than 9 million people through 10 Days’ Speak Samskrit Classes.
  4. Conducted “Speak Samskrit Class” for 10 days in Parliament House exclusively for MPs in 1983 where in veterans like ShriL.K.Advani , Dr. BalramJhakar, Dr. Karan Singh etc., were participants of ‘Samskrit SambhashanaShibir’.
  5. Trained and instrumental in training more than 1 lakh Samskrit Teachers in Conversational Samskrit.
  6. Authored many books and hundreds of articles on contemporary issues.
  7. Instrumental in creating Samskrit Villages, Samskrit Homes and Samskrit environment in Samskrit Institutions across the country.
  8. Contributed in launching SAFL course (Sanskrit As Foreign Language) successfully in USA.
  9. Principal organizer of World Samskrit Book Fair at Bangalore and Samskrita Sahityotsava at Ujjain.
  10. Launched “SambhashanaSandesha” a multi-color monthly magazine in Samskrit and was instrumental in publishing of popular magazine Chandamama in Samskrit.
  11. Launched ‘SarasvatiSevaYojana’ to translate and publish 1000 books of contemporary literature-  from other languages to Samskrit
  12. Helped in launching Samskrit Wikipedia to improve the Internet content in Samskrit.
  13. Instrumental in launching Samskrit Correspondence Course through 10 Indian Languages
  14. Conducted about 20 workshops and training programs in creative writing and translation skills in Samskrit.
  15. Conducted seminars and workshops on Sanskrit learning in USA, Canada, UK, Australia, Nepal, UAE, Netherland, Belgium, Thailand- without any Governmental assistance. Has setup active Sanskrit volunteers group in these countries to teach Sanskrit.

(After initially accepting 2 awards, “Saaraswata-sudhakara”- a title awarded by Kashi PanditaParishad in 1984 and “National YuvaPuraskar”- awarded by International Youth Year Celebration Committee of AkhilaBharatiyaVidyartiParishad in the year 1987; as a policy decision not to accept any honors and awards,he has declined allsuch offers, since 1987)

  1. Publications:

 

Name   Description
Jnaane Dharmah Uta Prayoge? : Why Spoken Samskrit
Laabhah Uta Haanih : Thought provoking articles
Nimittamaatram : On organizing WSBF
Nimittamaatram (Hindi) : On organizing WSBF
Parishkaarah : Book for Self Development
Parivartanam : Handbook for Team leaders
Saavadhaanaah Syaama : Essays on Samskrit today
Samskritabhaaratee : Introduction to Samskrita Bharati
Samskritam – SWOT Assessment : SWOT assessment of Samskritam
Sankramanam : Articles on Samskrit Prachar
Saptadashee : Essays on development of Samskrit
Uttishthata! Maa Swapta!! : Call for Samskrit Scholars

 

 

Share.
Leave A Reply Cancel Reply
Exit mobile version