ಹಂಪಿ ವಿಶ್ವವಿದ್ಯಾಲಯದ ೮೦ ಎಕರೆ ಭೂಮಿಯನ್ನು ವಿಜಯನಗರ ರಿವೈವಲ್ ಸ್ಟ್‌ಗೆ ಹಸ್ತಾಂತರಿಸುವುದರ ಪರವಾಗಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಮನೋಹರ ಮಸ್ಕಿ ೨೦೦೬ರಲ್ಲಿ ಮೇಲ್ಮನೆ ಚುನಾವಣೆಗೆ ನಿಂತಾಗ ಕೊಟ್ಟ ಚುನಾವಣಾ ಪ್ರಣಾಳಿಕೆ ಮತ್ತು ಭರವಸೆ ಏನು? ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನ! ಅದು ಈ ಥರ ವಿಶ್ವವಿದ್ಯಾಲಯದ ಭೂಮಿಯನ್ನು ಕಸಿದುಕೊಳ್ಳುವ ರೂಪದಲ್ಲಿ ಇರುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಕನಸು ಕಂಡಿರಲಿಲ್ಲ. ಬಿಡಿ, ಈತ ಚುನಾವಣೆ ಸಂದರ್ಭದಲ್ಲಿ ನೀಡಿದ ಇತರೆ ಎಲ್ಲಾ ಭರವಸೆಗಳೂ ಹೂತುಹೋಗಿವೆ ಎಂದಮೇಲೆ ಇದೇನು? ಬಹುಶಃ ಇದೊಂದೇ ಈತ ಪೂರೈಸಿದ ಭರವಸೆ ಎನ್ನಬಹುದೇನೋ, ನೆಗಟಿವ್ ಅರ್ಥದಲ್ಲಿ! ವಿಶ್ವವಿದ್ಯಾಲಯದ ಭೂಮಿಯನ್ನು ಇನ್ನೊಂದು ಟ್ರಸ್ಟ್‌ಗೆ ವಹಿಸಿಕೊಡುವುದು ಎಂದರೆ ಸರ್ಕಾರದ್ದೇ ಇನ್ನೊಂದು ಭಾಗವಲ್ಲವೆ ಎಂದು ಹಲವರು ವಾದಿಸಿದ್ದಾರೆ. ಪ್ರಶ್ನೆ ಇರುವುದು ಸರ್ಕಾರ ಏನು ಮಾಡುತ್ತದೆ ಎಂದಲ್ಲ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನಸನ್ನು ನನಸು ಮಾಡಿದ ಡಾ. ಚಂದ್ರಶೇಖರ ಕಂಬಾರರನ್ನೇ ಕೇಳಿ ನೋಡಿ, ಈ ಭೂಮಿಯನ್ನು ಯಾಕೆ ಪಡೆಯಲಾಗಿತ್ತು ಎಂಬ ವಾಸ್ತವದ ಅರಿವಾಗುತ್ತದೆ. ನಾನು ನಿನ್ನೆ ತಾನೇ ಅವರನ್ನು ಭೇಟಿ ಮಾಡಿದಾಗ ಈ ವಿಚಾರಗಳನ್ನೆಲ್ಲ ಅವರು ಸಂಕ್ಷಿಪ್ತವಾಗಿ ತಿಳಿಸಿದರು. ವಿಶ್ವವಿದ್ಯಾಲಯದ ಭೂಮಿಯನ್ನು ಬೇರೆ ಚಟುವಟಿಕೆಗೆ ಹಸ್ತಾಂತರಿಸುವುದು ಎಂದರೆ ಅದರ ಮೂಲ ಉದ್ದೇಶಗಳಿಗೆ ಕೊಡಲಿ ಪೆಟ್ಟು ನೀಡುವುದು ಎಂದೇ ಅರ್ಥ.

ಇನ್ನೂ ಒಂದು ಕಾರಣವಿದೆ. ೨೦೦೮ರ ಚುನಾವಣೆಯಲ್ಲಿ ಬಿಜೆಪಿಯು ಜನತೆಯ ಮುಂದಿಟ್ಟ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯ ಸ್ಪಷ್ಟವಾಗಿದೆ: 

ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಅಧ್ಯಯನ, ಸಂಶೋಧನೆಗಾಗಿ ಉತ್ತೇಜನ. ಹಂಪೆಯ ಪ್ರಾಚೀನ ಸ್ಮಾರಕಗಳು ಹಾಗೂ ಪರಿಸರವನ್ನು ಕಾಪಾಡಲು ವಿಶೇಷ ಆದ್ಯತೆ. 

೮೦ ಎಕರೆಯನ್ನೇ ಬೇರೆ ಉದ್ದೇಶಕ್ಕೆ ಬಳಸುವುದೇ ಇದರ ಅರ್ಥವೆ? 

ಮಸ್ಕಿಯಿಂದ ಪಕ್ಷದ ನೀತಿಯ ಉಲ್ಲಂಘನೆ 

ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬ ಮಾತಿಗೆ ಸದಾ ಉದಾಹರಣೆಯಾಗುವ ಈ ಮಸ್ಕಿಗಂತೂ ತನ್ನನ್ನು ತಾನು ಸಮರ್ಥಿಸಿಕೊಳ್ಳುವುದೇ ಆಗಿದೆ. ಡೆಕ್ಕನ್ ಕ್ರಾನಿಕಲ್‌ನ ಈ ಸುದ್ದಿ ನೋಡಿ: 

  

Legislators step up pressure

By By DC Correspondent  Mar 03 2010

March 2: Call it a delayed ‘Telengana Effect’. BJP Council member Manohar Maski on Tuesday called for separate statehood for the Hyderabad-Karnataka region during a meeting of the Hyderabad-Karnataka Agitation Co-ordination Committee even as other leaders from the region restricted themselves to seeking a special status for it under Article 371 of the Constitution. 

“Why are we asking for an amendment to the Constitution? The Union government will have to undertake the same exercise to carve out a different state. So, our aim should be separate statehood instead of harping on the amendment to Article 371”, Mr. Maski said.

He was admonished by the committee’s secretary Lakshman Dasti, who said, “Members speaking in this forum are not supposed to raise the issue of separate statehood. We have gathered here to discuss a solution to the backwardness of the region”. Other members, cutting across party lines, urged Mr. Maski to stop his speech.

Mr Maski, however, asserted that he had the right to express his opinion in the forum and he would continue to do so. Speaking to this newspaper on the sidelines of the meeting, the legislator maintained that he had neither violated any code of the meeting nor had he done anything wrong by demanding separate statehood. “Our party’s national policy is clear on the preference for smaller states as they are easier to govern as well as to carry out r apid development. Therefore, I cannot be accused of indulging in anti-party activities”, he said.

ಈಗ ಹಂಪಿ ವಿವಿಗೆ ಕೊಟ್ಟ ಭರವಸೆಯ ಹೆಣದ ಮೇಲೆ ಕೂತು ೮೦ ಎಕರೆಯನ್ನು ಟ್ರಸ್ಟ್‌ಗೆ ಕೊಡೋದು ಸರಿ ಎಂದು ವಾದಿಸುತ್ತಿರುವ ಮಸ್ಕಿಯು ಸರ್ಕಾರಕ್ಕೆ, ಪಕ್ಷದ ಘನತೆಗೆ ಇನ್ನಷ್ಟು ಮಸಿ ಬಳಿದರೆ ಏನೂ ಅಚ್ಚರಿಯಿಲ್ಲ.

 ಅಂದರೆ ತಾನು ಪಕ್ಷದ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಾತನಾಡಿಲ್ಲ ಎನ್ನುವ ಮನೋಹರ ಮಸ್ಕಿಗೆ ತನ್ನ ಪ್ರಣಾಳಿಕೆಯ ಜೊತೆಗೆ ಬಿಜೆಪಿಯ ೨೦೦೮ರ ಚುನಾವಣಾ ಪ್ರಣಾಳಿಕೆಯೂ ಮರೆತುಹೋಗಿದೆ. ೨೦೦೮ರ ಬಿಜೆಪಿ ಪ್ರಣಾಳಿಕೆಯು ಈ ಕೆಳಗಿನಂತೆ ಸ್ಪಷ್ಟವಾಗಿ ಹೇಳಿದೆ.

ಅಸಮಾನತೆ ನಿವಾರಿಸಿ, ಒಮ್ಮುಖದ ಪ್ರಗತಿ ಸಾಧನೆಗೆ ಬಿಜೆಪಿ ಬದ್ಧವಾಗಿದೆ.

 ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ೩೭೧ನೇ ವಿಧಿಯನ್ವಯ ವಿಶೇಷ ಸ್ಥಾನ ಮಾನ ನೀಡಲು ಕೇಂದ್ರದ ಮೇಲೆ ಒತ್ತಡವನ್ನು ತರಲಾಗುವುದು.

ಅಂದರೆ ಬಿಜೆಪಿಯು ಪ್ರತ್ಯೇಕ ರಾಜ್ಯವನ್ನು ಕೇಳಿಲ್ಲ; ಬದಲಿಗೆ ವಿಶೇಷ ಸ್ಥಾನಮಾನಕ್ಕಾಗಿ ಹೋರಾಡುವ ಭರವಸೆಯನ್ನು ನೀಡಿದೆ. ಅಂದಮೇಲೆ ಮಸ್ಕಿಯು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿ ಪಕ್ಷದ ನೀತಿಯನ್ನು ಉಲ್ಲಂಘಿಸಿದಂತಾಗಲಿಲ್ಲವೆ? ನೀವೇ ನಿರ್ಧರಿಸಿ.

ಪಕ್ಷದಲ್ಲಿ ಹೇಗಾದರೂ ಮಾಡಿ ಅನುಭವಿ ಶಾಸಕ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲು ಈ ಬಗೆಯ ತಪ್ಪು, ಸುಳ್ಳು ಮಾಹಿತಿಗಳನ್ನು ನೀಡುತ್ತಿರುವ ಮನೋಹರ ಮಸ್ಕಿಯ ಬಗ್ಗೆ ಪಕ್ಷದ ಶಿಸ್ತು ಸಮಿತಿಯವರು ಸುಮ್ಮನಿದ್ದಾರೆ ಎಂದರೆ ಏನರ್ಥ?

ಮಸಿ ಹಚ್ಚುವ ಬ್ಯುಸಿನೆಸ್

ಈಗ ಕಂಪ್ಯೂಟರಿನ ಪ್ರಿಂಟರ್‌ಗಳಿಗೆ ರಿಫಿಲ್ ಇಂಕ್ ಬಳಸಿದ ಕಾರ್ಟ್‌ರಿಜ್‌ಗಳನ್ನು ಮಾರುವ ವ್ಯವಹಾರಕ್ಕೆ ತನ್ನ ಸಂಸಾರವನ್ನೇ ಇಳಿಸಿರುವ ಮನೋಹರ ಮಸ್ಕಿಯ ಎಲ್ಲ ಹಣದ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ. ಎಲೈಟ್ ಎಂಟರ್‌ಪ್ರೈಸಸ್ ಎಂಬ ಪಾಲುದಾರಿಕೆ ಸಂಸ್ಥೆಯನ್ನು  ಹುಟ್ಟುಹಾಕಿ ಪುಣೆಯ ಯಾವುದೋ ಒಂದು ಸಂಸ್ಥೆಯ ಮಾಸ್ಟರ್ ಫ್ರಾಂಚೈಸ್ ಪಡೆಯಲಾಗಿದೆ. ಎಚ್ ಪಿ ಯಂಥ ಪ್ರತಿಷ್ಠಿತ ಸಂಸ್ಥೆಗಳ ಟೋನರ್‌ಗಳು ದುಬಾರಿ ಮತ್ತು ಕಳಪೆ ಎಂದು ಪ್ರಚಾರ ಮಾಡಿ ತನ್ನ ರಿಫಿಲ್ ಇಂಕೇ ಬಹಳ ಉತ್ತಮ ಗುಣಮಟ್ಟದ್ದು ಎಂದೆಲ್ಲ ಈ ಸಂಸ್ಥೆ ಪ್ರಚಾರ ಮಾಡುತ್ತಿದೆ. ಬ್ಯಾಂಕಿನಲ್ಲಿ ದಾಖಲೆಗಳನ್ನು ಪ್ರಿಂಟ್ ಮಾಡುವವರು, ಸ್ಟಾಂಪ್ ಪೇಪರ್ ಮೇಲೆ ಒಪ್ಪಂದ ಬರೆಯುವವರು ಈ ರಿಫಿಲ್ ಇಂಕುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದೆ. ನಕಲಿ ಛಾಪಾ ಹಗರಣದ ಹಾಗೆ ನಕಲಿ ರಿಫಿಲ್ ಹಗರಣ ನಡೆದರೆ ನನ್ನನ್ನು ಕೇಳಬೇಡಿ.

 

Share.
Leave A Reply Cancel Reply
Exit mobile version