ಸದ್ಯಕ್ಕೆ ಇವರನ್ನು ದತ್ತಾಜಿ ಅಮ್ಮ ಎಂದೇ ಕರೆಯೋಣ. ಅವರನ್ನು ನಾನು ಎಷ್ಟೋ ವರ್ಷಗಳಿಂದ ನೋಡುತ್ತಿದ್ದೇನೆ. ಎಂದೂ ಅವರ ಮುಖದಲ್ಲಿ ಜೀವನೋತ್ಸಾಹ ಮಾಸಿದ್ದು ಕಂಡಿಲ್ಲ. ಕಿವಿ ಕೈ ಕೊಟ್ಟರೂ ಕಣ್ಣು ಸೂಕ್ಷ್ಮ. ಬದುಕನ್ನು ನೋಡುವ, ಅನುಭವಿಸುವ ಹೃದಯವೂ ಸೂಕ್ಷ್ಮ.

ದೇಸಿ ಸಸ್ಯಶಾಸ್ತ್ರದಲ್ಲಿ ದತ್ತಾಜಿ ಅಮ್ಮನದು ತಜ್ಞತೆ. ಎಂಥ ಗಿಡ, ಎಲ್ಲಿ ಹೇಗೆ ಬೆಳೆಯುತ್ತೆ ಎಂಬ ಬಗ್ಗೆ ಅವರಿಂದ ಮೌಖಿಕವಾಗಿ ಪ್ರಬಂಧಗಳನ್ನೇ ಕೇಳಿಸಿಕೊಳ್ಳಬಹುದು! ಕುಶಲ ಕಲೆಯಲ್ಲಿ ದತ್ತಾಜಿ ಅಮ್ಮ ಎತ್ತಿದ ಕೈ. ಮೊನ್ನೆ ಸೊರಬದಲ್ಲಿ ಅವರ ಮನೆಗೆ ದತ್ತಾಜಿ ಬಂದಿದ್ದರು ಎಂದು ನೋಡಲು ಹೋದಾಗ ಅಮ್ಮ ಸಿಕ್ಕಿ ಮಾತಾಡಿದ್ದೆಷ್ಟು…. ತೋರಿಸಿದ್ದೆಷ್ಟು….. (ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಸರಕಾರ್ಯವಾಹರಾಗಿರುವ ದತ್ತಾಜಿ ಮನೆಗೆ ಬರುವುದೇ ಅಪರೂಪ, ಗೊತ್ತಿರಲಿ…)

ಕಂಪ್ಯೂಟರ್ ಬಳಕೆದಾರರು ದಂಡಿಯಾಗಿ ಬಳಸಿ ಎಸೆಯುವ ಕಾಂಪಾಕ್ಟ್ ಡಿಸ್ಕ್‌ಗಳನ್ನು ಬಳಸಿ ಅವರು ತಯಾರಿಸಿದ ಈ ಮದುವೆ ಸಂದರ್ಭದ ಅಲಂಕಾರಿಕೆಗಳನ್ನು ನೋಡಿ…. ಅವರ ಕೈ ಎಷ್ಟು ಸೃಜನಶೀಲ ಅನ್ನೋದಕ್ಕೆ ಬೇರೆ ಉದಾಹರಣೆ ಬೇಕೆ?

ಇಂಥ ಜೀವನೋತ್ಸಾಹದ ಅಮ್ಮಂದಿರು ಇರೋದ್ರಿಂದಲೇ ಬದುಕು ಸಹನೀಯವಾಗಿದೆ. ಎಂಥ ಅಮ್ಮ ಎಂದು ಅಮ್ಮನ ಮಾತುಗಳನ್ನೇ ಗಮನವಿಟ್ಟು ಕೇಳ್ತಾ ಇರೋ ದತ್ತಾಜಿಯವರನ್ನೇ ನೋಡಿ….

ಇದೇ ಹೊತ್ತಿನಲ್ಲಿ ಬಂದಿದ್ದ ಸಚಿವ, ಸ್ನೇಹಿತ ಕಾಗೇರಿ ವಿಶ್ವೇಶ್ವರ ಹೆಗಡೆಯವರಿಗೂ, ಮಗ ಸುಧಾಂಶು ಮಿತ್ರನಿಗೂ ಹೈಟ್ ಕಾಂಪಿಟಿಶನ್ ನಡೆದಿದ್ದು ಬಾಕ್ಸ್ ಐಟಂ! ನಾನೇರುವೆತ್ತರಕೆ ನೀನೇರಬಲ್ಲೆಯ ಎಂದು ಅವರು ಮಿತ್ರನನ್ನು ಕೇಳುತ್ತಿರುವಂತಿದೆ ಅಲ್ವೆ?!

ತನ್ನಷ್ಟು ಎತ್ತರ ಯಾರೂ ಇಲ್ಲ ಎಂದೇ ಸದಾ ಬೀಗುತ್ತಿದ್ದ ಕಾಗೇರಿಗೆ ಸ್ನೇಹಿತನ ಮಗನಿಂದಲೇ ಒಳ್ಳೆ ಸವಾಲ್ ಎದುರಾಗಿ ಸ್ವಲ್ಪ ಕಂಗಾಲಾದರಂತೆ ಅಂತ ಅಮೇಲೆ ತಿಳೀತು!!!!

 

Share.
Leave A Reply Cancel Reply
Exit mobile version