ಈ ಪೋಸ್ಟನ್ನು ಸವಿನೆನಪಿನ ರೀತಿ ಹಾಕಬೇಕು ಅಂತ ಬರೆದಿಟ್ಟುಕೊಂಡಿದ್ದೆ. ಈಗ ಅವರ ನಿಧನದ ಸುದ್ದಿ ತಿಳಿದು….. ಇನ್ನೇನು ಮಾಡಲಿ ಅನ್ನಿಸಿಬಿಟ್ಟಿತು.
1985. ಎಬಿವಿಪಿ ವತಿಯಿಂದ ಸಂಕ್ರಾಂತಿ ಹಬ್ಬವನ್ನು ದಾವಣಗೆರೆಯ ಸೆರೆಮನೆಯಲ್ಲಿ ಆಚರಿಸಬೇಕೆಂದು ನಿರ್ಧರಿಸಿ ಸಾಹಿತಿ ನಾ ಡಿಸೋಜಾರನ್ನು ಕರೆದಿದ್ದೆವು! ಅವರು ವಾಪಸಾದ ಮೇಲೆ ಬರೆದ ಪತ್ರದಿಂದಲೇ ಅವರೆಂತಹ ಸೂಕ್ಷ್ಮ ಸಂವೇದನಾಶೀಲ ಎಂದು ಅರಿವಾಗುತ್ತದೆ.
ಅದಾದ ಮೇಲೆ ಅವರನ್ನು ಒಂದು ಸಮ್ಮೇಳನಕ್ಕೆ ಆಹ್ವಾನಿಸಿದಾಗ ಸಂತೋಷದಿಂದ ಒಪ್ಪಿಕೊಂಡಿದ್ದರೂ, ಅವರನ್ನು ಕರೆತರಲಾಗದೇ ನೋವಿನಿಂದ ಚಡಪಡಿಸಿದ್ದೆ; ಕಾರಣ ಬೇಡ ಬಿಡಿ! ಆದ್ರೆ ನಾ ಡಿಸೋಜಾ ಮಾತ್ರ ಬೇಸರಿಸಲಿಲ್ಲ.
ಎರಡೂ ಸಂದರ್ಭಗಳಲ್ಲಿ ಅವರು ನನ್ನನ್ನು 20ರ ಹರೆಯದ ಹುಡುಗ ಎಂದು ಅಲಕ್ಷಿಸದೆ ಅತ್ಯಂತ ಗೌರವದಿಂದ ನೋಡಿಕೊಂಡಿದ್ದನ್ನು ಮರೆಯಲಾದೀತೆ?
ಬಾಲ್ಯದಲ್ಲಿ ನನ್ನೂರು ಸಾಗರ ಎಂದಾಕ್ಷಣ ನನಗೆ ಅವರದೇ ನೆನಪು. ಕೊನೆಗೆ ಅವರ ಮನೆಗೆ ಒಮ್ಮೆ ಹೋಗಿ ಬಂದಾಗಲೇ ಸಮಾಧಾನ ಆಗಿತ್ತು. ಎಷ್ಟು ಸರಳ ಜೀವಿ, ಎಂತಹ ಸಜ್ಜನಿಕೆ….. ಬರವಣಿಗೆಯಲ್ಲಿ ಎಂತಹ ಸಹಜತೆ… ಸಂಭಾಷಣೆಗಳಲ್ಲಿ ಏನೆಲ್ಲ ಕತೆಗಳು, ವ್ಯಥೆಗಳು……. ನಿಜದಲ್ಲಿ ಅವರೊಬ್ಬ ಅಕ್ಷರ ಸಂತ; ಕನ್ನಡ ಚಿಂತನೆಯ ಮಹಾಸಮುದ್ರ.
ನನ್ನ ಅಂತಿಮ ನಮನಗಳು.
Share.
Leave A Reply Cancel Reply
Exit mobile version