ಕಳೆದ ವಾರವಷ್ಟೇ ನಾನು ಪತ್ರಕರ್ತ ಮಿತ್ರನೊಬ್ಬನ ಬಳಿ ಚಾಟ್ ಮಾಡುತ್ತ, ಅವನ ಪತ್ರಗಳಿಗೆ ಉತ್ತರಿಸುತ್ತ ಬರೆದಿದ್ದೆ:
I always oppose the Life-threatening revolutions. I have read hundreds of stories of death of SC ST policemen, commoners and other low class, poor people tortured, killed, and amputated in various parts of nation, particularly Andhra, by naxalites.
ಕನ್ನಡಪ್ರಭದಲ್ಲಿ ಬಂದ ಛಾಯಾಚಿತ್ರ ನೋಡಿದಾಗ ಇಲ್ಲಿನ ನಕ್ಸಲೀಯರೂ ಇದೇ ತಂತ್ರವನ್ನು ಅನುಸರಿಸಿದ್ದಾರೆ ಎಂಬುದು ಖಚಿತವಾಗುತ್ತೆ. ಪೊಲೀಸ್ ಮಾಹಿತಿದಾರರಿಗೆ ಪಾಠ ಕಲಿಸುವ ಕರಪತ್ರಗಳ ಚಿತ್ರಗಳನ್ನು ನಾವೆಲ್ಲರೂ ಪತ್ರಿಕೆಗಳಲ್ಲಿ ನೋಡಿದ್ದೇವೆ. ನಮ್ಮ ಬ್ಲಾಗುಗಳಲ್ಲಿ ಕಾವ್ಯ, ಚಾರಣ, ವಿವಾದದ ಚರ್ಚೆ, ರಾಜಕಾರಣ, ಸಂಗೀತ, ಹೀಗೆ ಎಲ್ಲ ಬಗೆಯ ಮನೋರಂಜಕ ವಿಷಯಗಳ ಬಗ್ಗೆ ಬರೆಯುವವರು ಬೇಕಾದಷ್ಟಿದ್ದಾರೆ. ಆದರೆ ಬಂದೂಕಿಲ್ಲದವರ ಜೀವವನ್ನು ನಡುರಾತ್ರಿ ಬಂದು ತೆಗೆಯುವಂಥ ಹೃದಯಹೀನರು ಮತ್ತು ವಿಕೃತದ್ವೇಷಿಗಳ ಬಗ್ಗೆ ಬರೆಯುವವರು ಯಾರು? ಎಲ್ಲರಿಗೂ ಲೈಫ್ ಥ್ರೆಟ್ ಇದ್ದೇ ಇರುತ್ತೆ. ಥ್ರೆಟ್ ಇಲ್ಲ ಎಂದುಕೊಂಡವರೂ ಹೇಗೆ ಚಿಲ್ಲರೆಯಾಗಿ ನಗರದ ರಸ್ತೆಗಳಲ್ಲಿ ಜೀವ ಕಳೆದುಕೊಳ್ಳುತ್ತಾರೆ ಅಲ್ವೆ? ಆದರೆ ನಮಗೆ ನಕ್ಸಲರ ಬಗ್ಗೆ ಬರೆಯಬೇಕಾದರೆ ಜೀವಭಯ; ಒಳಗೆಲ್ಲೋ ನಡುಕ… ನಮ್ಮ ಮನೆಗೂ ರಾತ್ರಿ ಯಾರಾದರೂ ನಕ್ಸಲರು ಬಂದರೆ…. ನಮ್ಮ ಜೀವವನ್ನು ತೆಗೆದುಬಿಟ್ಟರೆ? ಇಷ್ಟಾಗಿಯೂ ನಾವು ನಕ್ಸಲರ ವೈಚಾರಿಕ ಸಂಗತಿಗಳನ್ನು ವಿರೋಧಿಸುವುದಾದರೂ ಹೇಗೆ?
ನಾನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಯುವ ಕಾರ್ಯಕರ್ತನಾಗಿದ್ದ ೧೯೮೬-೯೧ರ ದಿನಗಳಲ್ಲಿ ಆಂಧ್ರದಲ್ಲಿ ನಮ್ಮ ಹಲವು ಕಾರ್ಯಕರ್ತರು ಇದೇ ಜೀವವಿರೋಧಿ ನಕ್ಸಲರಿಂದ ಹತರಾದರು. ಪ್ರತೀ ಸಲವೂ ಅವರನ್ನು ನಕ್ಸಲರು ಅಟ್ಟಾಡಿಸಿಕೊಂಡು ಗುಂಡು ಹೊಡೆದು ಸಾಯಿಸಿದ ಕಥೆಗಳನ್ನು ನಮ್ಮ ಹೈದರಾಬಾದಿನ ಕಾರ್ಯಕರ್ತರು ಹೇಳುತ್ತಿದ್ದರು. ಪೊಲೀಸ್ ಮಾಹಿತಿದಾರರು ಎಂದೇ ಹೇಳಿ ನೂರಾರು ಅಮಾಯಕರ ಕೈಕಾಲುಗಳನ್ನು ಕತ್ತರಿಸಿದ ಕಥೆಗಳು ನಮ್ಮೆದುರು ಇದ್ದವು. ಈ ಕಥೆ ಅಂದಿನಿಂದಲೂ ಮುಂದುವರಿದುಕೊಂಡೇ ಬಂದಿದೆ.
ನಾವು ಮಾತ್ರ ಬ್ಲಾಗಮಂಡಲದಲ್ಲಿ ಹಾಯಾಗಿದ್ದೇವೆ ಅನ್ನಿಸುವುದಿಲ್ಲವೆ? ನಮ್ಮ ಬ್ಲಾಗುಗಳಲ್ಲಿ ಕೇವಲ ವೈಯಕ್ತಿಕ ಅಭಿವ್ಯಕ್ತಿಯ ಮಾಧ್ಯಮವಾಗುವುದು ಬಿಟ್ಟು ಸಾಮಾಜಿಕ ಕಳಕಳಿಯ ವೇದಿಕೆಯಾಗುವುದು ಯಾವಾಗ? ಓದುಗರೆ, ಇದೇನು ನನ್ನ ಕಟಕಿಯಲ್ಲ; ವ್ಯಥೆಯಿಂದ ಮೂಡಿಬಂದ ಪ್ರಶ್ನೆ.
ಎಂಟು ವರ್ಷಗಳ ಹಿಂದೆ ನಾನು ಈ ಕಮ್ಯುನಿಸ್ಟರ ಕಥೆ ಏನು ಎಂದು ಓದಲಾರಂಭಿಸಿದೆ. ಅದಕ್ಕೇ ನಾನು ಚೀನಾ – ಟಿಬೆಟ್ ಬಗ್ಗೆ ಹೆಚ್ಚು ತಿಳಕೊಂಡೆ. ಪುಸ್ತಕಗಳನ್ನು ಅನುವಾದಿಸಿದೆ. ಕನ್ನಡದಲ್ಲಿ ಚೀನಾ – ಟಿಬೆಟ್ ಬಗ್ಗೆ ಹೆಚ್ಚು ಬರೆದವನು ನಾನೇ ಎಂಬ ಹಮ್ಮೂ ನನಗಿದೆ. ಈಗಲೂ ನಾನು ಈ ವಿಷಯಗಳನ್ನು ಓದುವುದನ್ನು ಬಿಟ್ಟಿಲ್ಲ; ಟಿಬೆಟನ್ನರ ಗೆಳೆತನವನ್ನು ಉಳಿಸಿಕೊಂಡಿದ್ದೇನೆ. ಜೊತೆಗೆ ನಮ್ಮವರೇ ಆದ ನಕ್ಸಲರ ಜೀವವಿರೋಧಿ, ಹಂತಕ ಪ್ರವೃತ್ತಿಯ ಬಗ್ಗೆ ನಿಜಕ್ಕೂ ಆಘಾತಗೊಂಡಿದ್ದೇನೆ.
ಹೇಳಿದೆನಲ್ಲ, ಕಳೆದ ವಾರ ಪತ್ರಕರ್ತನ ಜೊತೆ ನಡೆಸಿದ ಮಾತುಕತೆಯ ಹೊತ್ತಿನಲ್ಲಿ ಅವನಿಗೆ ನಕ್ಸಲರು ಹೇಗೆ ದಲಿತರನ್ನು ಕೊಚ್ಚಿಹಾಕಿದ್ದಾರೆ ಎಂಬ ಅಂಕಿ ಆಂಶವನ್ನು ಒದಗಿಸಿದೆ. ನಿಜ, ಕೆ ಪಿ ಎಸ್ ಗಿಲ್ ಎಂಬ ಪೊಲೀಸ್ ಅಧಿಕಾರಿ ಈ ವೆಬ್‌ಸೈಟಿನಲ್ಲಿ ಮಾಹಿತಿ ನೀಡಿದ್ದಾರೆ. ಅದನ್ನು ನಂಬದಿರಲು ಅದೊಂದೇ ಕಾರಣವಾಗಬೇಕೆ?
ಇನ್ನೂ ಒಂದು ಪ್ರಶ್ನೆಯನ್ನು ನನ್ನ ಮಿತ್ರನಲ್ಲಿ ಕೇಳಿದ್ದೆ: ಈ ನಕ್ಸಲರು ಯಾಕೆ ಮಲೆನಾಡಿನಲ್ಲೇ ತಮ್ಮ ಚಳವಳಿಯನ್ನು ಆರಂಭಿಸಬೇಕು? ಗೆರಿಲ್ಲಾ ಸಮರ ಮಾಡಬೇಕಲ್ಲ…. ಬಯಲುಸೀಮೆಯಲ್ಲಿ ತಪ್ಪಿಸಿಕೊಳ್ಳುವುದು ಕಷ್ಟ. ನಿಶ್ಶಸ್ತ್ರವಾಗಿರುವ ಜನರನ್ನು ನಡುರಾತ್ರಿ ಗುಂಡಿಟ್ಟು ಕೊಂದು ಪರಾರಿಯಾಗುವುದು ಎಂದರೆ ಸಾಮಾನ್ಯವೆ? ಎಂಥ ಧೈರ್ಯ ಇವರದ್ದು? ಛೀ ಎನ್ನುತ್ತದೆ ನನ್ನ ಮನಸ್ಸು. ರಾತ್ರಿ ಬಂದು ಮುಂಬಯಿಯನ್ನು ನಡುಗಿಸಿದ ಭಯೋತ್ಪಾದಕರಿಗೂ, ಇವರಿಗೂ ಏನಾದರೂ ವ್ಯತ್ಯಾಸ ಇದೆಯೆಂದು ನನಗೆ ಅನ್ನಿಸುವುದಿಲ್ಲ.
ನಿಜ, ನಮ್ಮ ರಾಜಕೀಯ ವ್ಯವಸ್ಥೆ ಸತ್ತುಹೋಗಿರಬಹುದು; ಭ್ರಷ್ಟಾಚಾರ ಮಿತಿ ಮೀರಿರಬಹುದು; ಸಮಾಜದಲ್ಲಿ ಬಡತನ ಹೆಚ್ಚಾಗಿರಬಹುದು. ಇದಕ್ಕಿಂತ ದುರವಸ್ಥೆ ರಾಜ ಮಹಾರಾಜರ ಕಾಲದಲ್ಲೂ ಇತ್ತಲ್ಲವೆ? ನಿನ್ನೆ ಮೈಸೂರಿನ ಅರಮನೆಯಲ್ಲಿ ಅಡ್ಡಾಡಿದಾಗ ಈ ಪ್ರಶ್ನೆ ನನ್ನನ್ನು ಬಲವಾಗಿ ಕಾಡಿತು. ಎಂಥ ವೈಭೋಗದಲ್ಲಿ ಇದ್ದರಲ್ಲವೆ ಅಂದಿನ ರಾಜರು, ರಾಣಿಯರು ಎಂದು ಊಹಿಸಿಕೊಳ್ಳಿ….. ಈಗ ರಾಜರೇನೋ ಇಲ್ಲ; ಬಂಡವಾಳಶಾಹಿಗಳು ಬೆಳೆದಿದ್ದಾರೆ. ಅವರು ರಾಜಕಾರಣಿಗಳನ್ನು ಕುಣಿಸುತ್ತಾರೆ. ಪಾತ್ರಗಳು ಬದಲಾಗಿವೆ; ಪರಿಸ್ಥಿತಿ ಹಾಗೆಯೇ ಇದೆ.
ಹಾಗಂತ ಸಮಾಜ ಸುಧಾರಣೆಯ ಕಾರ್ಯವೇನೂ ನಡೆಯಲಿಲ್ಲವೆ? ನಮ್ಮ ಬಸವೇಶ್ವರರು ಮಹಾಮಂತ್ರಿಯಾಗಿದ್ದೂ ಕೊನೆಗೆ ಸಾಮಾಜಿಕ ಕ್ರಾಂತಿಯನ್ನು ಮಾಡಿದರಲ್ಲ… ಎಂದಾದರೂ ಖಡ್ಗ ಹಿಡಿದರೆ? ಸಂತ ಕಬೀರ ಎಂದಾದರೂ ಕತ್ತಿ ಹಿರಿದನೆ? ಸ್ವಾಮಿ ವಿವೇಕಾನಂದರು ಮೂವತ್ತರ ಹರೆಯದಲ್ಲೇ ದೇಶದ ಅಸ್ಮಿತೆಯನ್ನು ಎತ್ತಿ ಹಿಡಿದರಲ್ಲ, ದಲಿತರ ಬಗ್ಗೆ ಸಿರಿವಂತರ ಮನಸ್ಸಿಗೆ ಚುಚ್ಚುವಂತೆ ಮಾತನಾಡಿದರಲ್ಲ…. ಎಂದಾದರೂ ಹಿಂಸೆಯನ್ನು ಪ್ರಚೋದಿಸಿದರೆ? ಎಪ್ಪತ್ತಕ್ಕೂ ಹೆಚ್ಚು ದೇಶಗಳ ಸ್ವಾತಂತ್ರ್ಯಕ್ಕೆ ಕಾರಣರಾದ ಮಹಾತ್ಮಾ ಗಾಂಧಿ ಎಂದಾದರೂ ಅಹಿಂಸೆಯ ಹಾದಿ ಬಿಟ್ಟರೆ? ಅಂಬೇಡ್ಕರ್ ಎಂದಾದರೂ ದಲಿತರು ಧರ್ಮವನ್ನು ಅಫೀಮು ಎನ್ನಬೇಕೆಂದು ಕರೆ ಕೊಟ್ಟರೆ? ಸಾಮಾಜಿಕ ಸೇವಕ ಬಾಬಾ ಆಮ್ಟೆ ಎಂದಾದರೂ ಬಂದೂಕಿನ ಮಾತಾಡಿದರೆ? ಹತ್ತಾರು ಕೆರೆಗಳಿಗೆ ಮತ್ತೆ ಜೀವ ತಂದ ರಾಜೇಂದ್ರ ಸಿಂಗ್ ಮರುಭೂಮಿಯಲ್ಲೇ ವಿಶ್ವಪ್ರಸಿದ್ಧ ಜೀವನಕ್ರಾಂತಿ ಮಾಡಲಿಲ್ಲವೆ?
ಹಾಗಾದರೆ ದೇಶರಕ್ಷಣೆಗೆ ಜೀವಹರಣ ಮಾಡುವ ಸೈನಿಕರೂ ಅಪರಾಧಿಗಳಲ್ಲವೆ ಎಂದು ಯಾರಾದರೂ ಕೇಳಬಹುದು. ಸೇನೆ-ಸಮರ-ರಕ್ತಪಾತದ ಬಗ್ಗೆ ಮಾತನಾಡುವ ಅಥಾರಿಟಿ ನನಗಿಲ್ಲ. ಅಲ್ಲದೆ ದೇಶ, ಗಡಿ, ರಕ್ಷಣೆಯ ಬಗ್ಗೆ ಹೆಚ್ಚು ಹೇಳುವುದಕ್ಕೂ ನನಗೆ ಮನಸ್ಸಿಲ್ಲ. ಸರಸ್ವತೀ ನದಿಯನ್ನು ನನ್ನ ಹಿರೀಕರ ತೊಟ್ಟಿಲು ಎಂದು ಕಾಣುವ ನನಗೆ, ಸಿಂಧೂ ಸಂಸ್ಕೃತಿಯೇ ನನ್ನ ಇವತ್ತಿನ ಈ ಅಕ್ಷರಗಳ ಮೂಲತಾಣ ಎಂದು ನಂಬಿರುವ ನನಗೆ ಪಾಕಿಸ್ತಾನದ ನೆಲವೂ ನನ್ನ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವೇ ಎನಿಸುತ್ತದೆ. ಕಂದಹಾರದಿಂದ ಬಂದ ಕಾಬೂಲಿವಾಲಾ, ಕ್ಯಾಂಬೋಡಿಯಾದ ಆಂಗ್‌ಕಾರ್ ವಾಟ್ – ಎಲ್ಲವೂ ನನ್ನ ಪರಿಚಿತ ಬದುಕು ಎಂದೇ ನನಗೆ ಯಾವಾಗಲೂ ಭಾಸವಾಗುತ್ತದೆ. ಜಪಾನಿನಲ್ಲಿ ಹರಡಿರೋ ಬೌದ್ಧಧರ್ಮ, ಚೀನಾದ ಅಪಾರ ಪ್ರಾಚೀನ ಇತಿಹಾಸ ಮತ್ತು ಕಲೆ – ಸಂಸ್ಕೃತಿ, ಅಮೆಝಾನ್ ತಟದಲ್ಲಿರುವ ಶಮಾನ್‌ಗಳು, ಪೆರು ದೇಶದ ಹಿರೀಕರು – ಎಲ್ಲರೂ ಒಂದಲ್ಲ ಒಂದು ಥರ ನನ್ನ ಪರಿಸರದ ಕೊಂಡಿಗಳಾಗಿದ್ದಾರೆ ಅನ್ನಿಸುತ್ತದೆ.
ಆದರೆ ಹೇತಲಾಂಡಿಗಳಂತೆ ಕಾಡಿನಲ್ಲಿ ಕೂತು, ಬಂದೂಕನ್ನೇ ನೋಡದ ಮನುಷ್ಯರನ್ನು ಕಟ್ಟಿ ಕೊಲ್ಲುವ ನಕ್ಸಲೀಯರು ಮಾತ್ರ ಎಲ್ಲೂ, ಎಲ್ಲೆಲ್ಲೂ ಈ ಸಂಸ್ಕೃತಿಗೆ, ಈ ನೆಲಕ್ಕೆ ಸೇರದ ಜನ ಎಂದು ಮತ್ತೆ ಮತ್ತೆ ಅನ್ನಿಸುತ್ತದೆ. ನಕ್ಸಲರ ಬೇಡಿಕೆಗಳನ್ನು ನೋಡಿ: ಅದನ್ನು ಒಂದು ರ್‍ಯಾಲಿಯ ಮೂಲಕವೂ ಜನತೆಯ ಮುಂದಿಡಲು, ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಿದೆ. ಮಹೇಂದ್ರ ಸಿಂಗ್ ತಿಕಾಯತ್ ಮಾಡಿದ್ದು ಇನ್ನೇನು? ನಮ್ಮ ಹಿಂದಿನ ರೈತಸಂಘ ಮಾಡಿದ್ದೂ ಇದೇ ಅಲ್ಲವೆ? ಈ ರೈತ ಚಳವಳಿ ಇವತ್ತು ಮೂರಾಬಟ್ಟೆಯಾಗಿದ್ದರೆ ಅದಕ್ಕೆ ರಾಜಕಾರಣಿಗಳು ಕಾರಣವೋ, ಅಥವಾ ನಮ್ಮೊಳಗೇ ಬೆಳೆಯುತ್ತಿರುವ ರಾಜಕೀಯ ನೇತೃತ್ವದ ದುರಾಸೆ ಕಾರಣವೋ? ಯೋಚಿಸಿ. ರುದ್ರಪ್ಪ, ಸುಂದರೇಶ್, ನಂಜುಂಡಸ್ವಾಮಿ ಶುರು ಮಾಡಿದ ಕ್ರಾಂತಿ ಇವತ್ತು ಯಾಕೆ ಹೀಗಾಗಿದೆ? ಉನ್ನತ ಸಾಮಾಜಿಕ ಚಿಂತನೆಯೊಂದಿಗೆ ಆರಂಭವಾದ ದಲಿತ ಸಂಘರ್ಷ ಸಮಿತಿ ಇಬ್ಭಾಗವಾದರೆ ಅದಕ್ಕೆ ಯಾರು ಹೊಣೆ? ಮಾರ್ಕ್ಸ್‌ವಾದವನ್ನೇ ಮೂಲವಾಗಿಟ್ಟುಕೊಂಡ ನಕ್ಸಲೀಯರು ಹತ್ತಾರು ಸ್ಪ್ಲಿಂಟರ್ ಗುಂಪುಗಳಾಗಿ ಒಡೆದಿದ್ದರೆ ಅದಕ್ಕೆ ಈ ವ್ಯವಸ್ಥೆ ಕಾರಣವೆ? ಕಾಂಗ್ರೆಸ್, ಬಿಜೆಪಿ, ದಳಗಳಲ್ಲಿ ಇರುವ ಸ್ವಾರ್ಥವೇ ಇವರಲ್ಲಿ ಇಲ್ಲವಾಗಿದ್ದರೆ ಹೀಗಾಗುತ್ತಿತ್ತೆ?
ಹೇಡಿಗಳು ಹಲವು ಸಲ ಸಾಯುತ್ತಾರೆ; ಧೈರ್ಯವಂತ ಒಮ್ಮೆ ಮಾತ್ರ ಸಾಯುತ್ತಾನೆ ಎಂಬ ಮಾತಿದೆ. ಬದುಕಿನ ಬೆಲೆ ಗೊತ್ತಿದ್ದವರಿಗೆ ಮಾತ್ರ ಇದು ಅರ್ಥವಾಗುತ್ತದೆ.
ಪಶ್ಚಿಮಘಟ್ಟ ನಮ್ಮ ವಿಶ್ವದ ಪ್ರಮುಖ ಎಕಲಾಜಿಕಲ್ ಹಾಟ್‌ಸ್ಪಾಟ್; ಇಲ್ಲಿನ ಪ್ರತಿಯೊಂದೂ ಸೂಕ್ಷ್ಮಜೀವಿಯೂ ಬದುಕಬೇಕು ಎಂದು ಪರಿಸರಪ್ರೇಮಿಗಳು ಹೋರಾಡುತ್ತಿದ್ದಾರೆ. ತದಡಿಯಲ್ಲಿ ಕಲ್ಲಿದ್ದಲಿನ ಸ್ಥಾವರ ಬರಬಾರದು ಎಂದು ನಾಡಿನ ಹಿರಿಯರು ಘೋಷಿಸಿದ್ದಾರೆ. ಈ ಕಾಡಿನಲ್ಲಿ ಪರಿಸರವನ್ನು ಉಳಿಸಿಕೊಂಡೇ ಗಣಿಗಾರಿಕೆ ಮಾಡುವ ಬಗ್ಗೆ ಅಧ್ಯಯನ ಮಾಡುವ ಉಲ್ಲೇಖವನ್ನು ಇತ್ತೀಚೆಗೆ ಬಿಡುಗಡೆಯಾದ ರಾಜ್ಯ ಗಣಿ ನೀತಿಯಲ್ಲಿ ಉಸುರಲಾಗಿದೆ. ಆದರೆ ಇಲ್ಲಿಯ ಜನರ ಜೀವರಕ್ಷಣೆಯ ಬಗ್ಗೆ ಯಾರು ಗಮನ ಹರಿಸುತ್ತಾರೆ? ನನಗೆ ಗೊತ್ತಿಲ್ಲ.
ವಿಶ್ವಮಾನವ ಕುವೆಂಪು, ಕಡಲ ತೀರದ ಭಾರ್ಗವ ಕಾರಂತ, ಕಥೆಗಾರ, ಮಾತುಗಾರ ಯು.ಆರ್. ಅನಂತಮೂರ್ತಿ, ಕವಿ ಎಸ್ವಿಪಿ, ಕೋ. ಲ. ಕಾರಂತರು, ಚೇರ್ಕಾಡಿ ರಾಮಚಂದ್ರರಾಯರು, ಶಾಂತವೇರಿ ಗೋಪಾಲಗೌಡರು, ಪೂಚಂತೇ – ಎಲ್ಲ ವಿಚಾರವಂತರು ಹುಟ್ಟಿಬೆಳೆದ ಮಲೆನಾಡಿನಲ್ಲಿ ಈಗ ನಕ್ಸಲರು ಜೀವಹರಣದ ಕುದ್ರ ಕಾಯಕದಲ್ಲೇ ತೃಪ್ತಿಪಡುತ್ತಿದ್ದಾರೆ. ಇವರನ್ನು ಮಟ್ಟ ಹಾಕುವ ಮಾತಾಡುವ ಸರ್ಕಾರವು ಕಾರ್ಮಿಕರ ಕಲ್ಯಾಣದ ಪೊಳ್ಳು ಭರವಸೆಗಳನ್ನೇ ನೀಡುತ್ತಿದೆ. ನಮಗೆ ನಕ್ಸಲ್ ನಿಗ್ರಹ ಪಡೆಗಿಂತ ಸಮಾಜವನ್ನು ಕಟ್ಟಿ ಬೆಳೆಸುವ ಪಡೆ ಕಟ್ಟಬೇಕಿದೆ. ಆಗಲಾದರೂ ಈ ನಕ್ಸಲರೆಂಬ ನಮ್ಮವರೇ ಮನೆಗೆ ಬಂದು ಚಾಪೆಯ ಮೇಲೆ ಕೂತು ಮಾತಾಡಬಹುದು; ಅಂಗಳದಲ್ಲಿ ಬೆಳೆದ ಕೆಂಪು ಹೂವನ್ನು ನೋಡಿ ನಸುನಗಬಹುದು; ಅರೆ, ಜೀವ ಎಂಬುದಕ್ಕೆ ಎಂಥ ವಿಶಿಷ್ಟ ಸೊಗಸಿದೆ ಎಂದು ಅಚ್ಚರಿಪಡಬಹುದು.
ಈ ಕನಸು ನನಸಾಗುವವರೆಗೆ, ಅಥವಾ ನನ್ನ ಜೀವಿತದವರೆಗೆ, ಬರಿಗೈಯಲ್ಲಿ ಇರುವವರ ಹಣೆಗೆ ಬಂದೂಕು ಹಿಡಿದ ನಕ್ಸಲರನ್ನು ನಾನು ವಿರೋಧಿಸುವೆ. ಬಯಲಿಗೆ ಬಂದು ಸತ್ಯಾಗ್ರಹ ಮಾಡುವ ಕಾಮ್ರೇಡ್‌ಗಳನ್ನು ನಾನು ಸ್ವಾಗತಿಸುವೆ. ನನ್ನ ಮಿತಿಯಲ್ಲಿ ನಾನೂ ಸಾಮಾಜಿಕ ಬದಲಾವಣೆಯ ಹೋರಾಟದಲ್ಲಿ ಭಾಗಿಯಾಗುವೆ.
4 Comments
ಈ ಬ್ಲಾಗ್ ಗಳನ್ನು ಬಂದೂಕು ಬಳಸುವ ನಕ್ಸಲ್ ಗಳು ಓದುವುದಾದರೆ ಅರಹಗಳಿಗೆ ಅರ್ಥವಿರುತ್ತದೆ. ಬದಲಾವಣೆ ನಿರೀಕ್ಷಿಸಬಹುದು. ಆದರೆ ನಮ್ಮಲ್ಲಿ ಆಗುವುದು ಎಲ್ಲಾ ಉಲ್ಟಾ. ಬಡವನ ಕಥೆ ಬಡವನೇ ಓದಿದರೆ ಏನು ಪ್ರಯೋಜನ. ಬಂದೂಕಿನಿಂದ ಉತ್ತರ ಕೊಡುತ್ತೇವೆ ಎಂದು ಹೊರಡುವ ಜನರು ಅಪ್ಪಿತಪ್ಪಿಯೂ ಇದನ್ನು ಓದುವುದಿಲ್ಲ. ಇದನ್ನು ಓದುವವರು ಬಂದೂಕು ಬಳಸುವುದಿಲ್ಲ. ಹಾಗಾಗಿ ನಮ್ಮಷ್ಟಕ್ಕೆ ನಾವು ಹಲವು ತೀರ್ಮಾನಗಳನ್ನು ಕೈಗೊಂಡಂತ್ಯಾಗುತ್ತದೆ.
ಇನ್ನು ಚಳುವಳಿಗಳ ವಿಚಾರ. ಇವತ್ತಿನ ಜನಸಾಮಾನ್ಯ ಚಳವಳಿ ಎಂಬುದನ್ನು ಮರ್ತೆತಿದ್ದಾನೆ. ಆತನಿಗೆ ಎರಡು ಗೊತ್ತಿರುವುದು ಒಂದು ರಾಜಕೀಯ ಸಮಾವೆಶ, ಎರಡು ಧಾರ್ಮಿಕ ಸಮಾರಂಭ. ಮೊದಲನೆಯದಕ್ಕೆ ಹೋದರೆ ಆಳಿಗಿಷ್ಟು ಎಂಬ ಪಗಾರ ಸಿಗುತ್ತದೆ. ಎರಡನೆಯದಕ್ಕೆ ಹೋದರೆ ಭವಿಷ್ಯದಲ್ಲಿ ದೇವರು ಕಾಪಾಡುತ್ತಾನೆ ಎಂಬ ಸಮಾಧಾನ ಸಿಗುತ್ತದೆ. ನ್ಯಾಯಪರ ಚಳವಳಿ ನಡೆಸುವವರು ಪೇಮೆಂಟ್ ಎಲ್ಲಿಂದ ತಂದಾರು?.ಹಾಗಾಗಿ ಬಂದೂಕು ಆದರೆ ಕ್ರೇಝ್ ಇದೆ. ಎಲ್ಲರೂ ಹೆದರುತ್ತಾರೆ. ಹಾಗಾಗಿ ಅದನ್ನು ಆಕೆಮಾಡೀಕೊಂಡವರ ಸಂಖ್ಯೆ ಹೆಚ್ಚುತ್ತಿದೆ.
Dear Shreeshum
don’t think naxals dont read this blog. They have a good presence on internet. They run the blogs in wordpress, blogspot etc., Just search naxalites and you will find a number of them.
belur,
you are not right while writting “against” naxals. you once again cross check the fact that they visited and ran back in the midnight! It is not true. And,please give some respect to facts! unlike V.Baht? He dont care facts.
My question is your democratic state police buys and piles up a lot of arms ? why your police kills farmers ? Do they(state) believe in Mao and his preachings ?
Why Vasundara Raje mucilessly killed her own people in MP ?
Why Bajaranga Dal activists killed theire own counterpart in Mangalore ?
Dear sram
i am not commenting that this particular incident happened during midnight. I know it was late evening. Please don’t take my statement as a technical report. But what these naxals do is typical of a cowardice act . That is what I meant. Whether it is day or night, does it matter much when they kill unarmed people? When they cannot live with a so-called police informer, how can they survive the whole State?
If they are sure of winning the hearts of the peasants, then why should they bother about the informers?
You have referred V Bhat. I don’t know what you meant by this statement. I am dead against giving distorted facts. I have never, ever given a wrong information,as far as my information goes. And, please mind, I will never exaggerate ,or quote without references. You can sift through my articles and you can get a feeling of it.
Your other comments (police, bajrang Dal etc.,): I am neither supporting police, or any person with a gun. If you think these so-called criminals too must have been guided by Mao’s preaches, I don’t argue. It is your opinion. Because, as far as I know, from my studies, Mao has killed his own people as part of his idealogy. You can read more on this in my forthcoming translation.
Thanks for the response. I will publish it with these comments. Keep visiting. You will have the fun of a serious reading.