ಫೆಬ್ರುವರಿ ೧೭ರಿಂದ ೧೯ರವರೆಗೆ ನಡೆಯೋ ಈ ಎಕೋ ಡ್ರೈವಥಾನ್‌ನಲ್ಲಿ ನೀವು ಮಾಡಬೇಕಾದ್ದು ಇಷ್ಟೆ: ಬೆಂಗಳೂರಿನಿಂದ ಶೃಂಗೇರಿಗೆ (೩೩೩ ಕಿಮೀ) ಹಾಸನ ಮಾರ್ಗವಾಗಿ ಹೋಗುವುದು ಮತ್ತು ವಾಪಸು ಬರುವುದು. ಆದರೆ ಒಂದೇ ಒಂದು ಪ್ರಮುಖ ಶರತ್ತಿದೆ: ನಿಮ್ಮ ವಾಹನವು ೨೬೦೦ ಸಿಸಿ ಒಳಗಿನ ಡೀಸೆಲ್‌ ವಾಹನ ಆಗಿರಬೇಕು ಮತ್ತು ಅದರಲ್ಲಿ ಶೇಕಡಾ ೧೦,೨೦ ಅಥವಾ ೩೦ರಷ್ಟು ಜೈವಿಕ ಇಂಧನವನ್ನು ಡೀಸೆಲ್‌ಗೆ ಬೆರೆಸಿರಬೇಕು!  ಇದಲ್ಲದೆ ಹಲವು ನಿಗದಿತ ಚೆಕ್‌ ಪಾಯಿಂಟ್‌ಗಳನ್ನು ಭೇಟಿ ಮಾಡಬೇಕು; ಹಾಸನದ ಮಡೇನೂರಿನಲ್ಲಿರುವ ಜೈವಿಕ ಇಂಧನ ಪಾರ್ಕ್‌ನಲ್ಲಿ  ಜೈವಿಕ ಇಂಧನ ಸಸ್ಯಗಳನ್ನು ನೆಡಬೇಕು.  ಶೃಂಗೇರಿಯಲ್ಲಿ ನಡೆಯುವ ಕ್ವಿಜ್‌ ಕಾರ್ಯಕ್ರಮದಲ್ಲಿಯೂ ಅಂಕ ಪಡೆಯಬೇಕು!

ಈ ಕುರಿತ ಒಂದು ಪವರ್‌ಪಾಯಿಂಟ್‌ ಕಡತವನ್ನು, ನೀತಿ ನಿಯಮಗಳನ್ನು, ನೋಂದಾವಣೆ  ಅರ್ಜಿಯನ್ನು  ಮತ್ತು ಇತರೆ ಮಾಹಿತಿಗಳನ್ನು ಇಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಓದಿ.

https://drive.google.com/open?id=0Bwhktmslydi5ZDJMb2pXN0dxZ2c

ಈ ಐತಿಹಾಸಿಕ ಜೈವಿಕ ಇಂಧನ ಎಕೋ ಡ್ರೈವಥಾನನ್ನು ಬೆಂಗಳೂರಿನ ಸೆಂಟರ್‌ ಫಾರ್‌  ಇನ್‌ಕ್ಯುಬೇಶನ್‌, ಇನ್ನೋವೇಶನ್‌, ರಿಸರ್ಚ್‌ ಎಂಡ್‌ ಕನ್ಸಲ್ಟನ್ಸಿ (CIIRC)ಯು (ಇದು ಶ್ರೀ ಶೃಂಗೇರಿ ಶಾರದಾ ಪೀಠ ಮತ್ತು ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಗಳ ಜಂಟಿ ಉಪಕ್ರಮ) ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ , ಇಂಡಿಯನ್‌ ಆಯಿಲ್‌, ಎಚ್‌ಪಿ, ಭಾರತ್‌ ಪೆಟ್ರೋಲಿಯಂ, ಬಯೋಡೀಸೆಲ್‌ ಅಸೋಸಿಯೇಶನ್ ಆಫ್‌ ಇಂಡಿಯಾ, ಡೆಕಾಥ್ಲಾನ್‌, ಹಿನ್‌ರೇನ್‌ ಟೆಕ್ನಾಲಜೀಸ್‌ – ಈ ಸಂಸ್ಥೆಗಳ ಸಹಯೋಗದೊಂದಿಗೆ ಸಂಘಟಿಸಿದೆ. ಈ ಸಂಸ್ಥೆಯ ನಿರ್ದೇಶಕ ಡಾ|| ಕೃಷ್ಣ ವೆಂಕಟೇಶ ಅವರು ನಾಡಿನ ಪ್ರಖ್ಯಾತ ವಿಜ್ಞಾನಿ.

ಬಹುಮಾನ: ಶೇ. ೧೦ ಜೈವಿಕ ಇಂಧನ ಬೆರೆಸಿ ಓಡಿಸಿ ಗೆದ್ದವರಿಗೆ ೫೦ ಮತ್ತು ೩೦ ಸಾವಿರ ರೂ.ಗಳ ಮೊದಲ,ಎರಡನೆಯ ಬಹುಮಾನ, ಶೇ. ೨೦ ಬೆರೆಸಿದವರಿಗೆ ೬೦,೪೦ ಸಾವಿರ ರೂ. ಮತ್ತು ಶೇ. ೩೦ ಬೆರೆಸಿದವರಿಗೆ ೭೦ ಮತ್ತು ೫೦ ಸಾವಿರ ರೂ. ಬಹುಮಾನವಿದೆ. ಈ ಬಹುಮಾನಗಳನ್ನು ಅಬ್ದುಲ್‌ ಕಲಾಂ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಎಂದು ಕರೆಯಲಾಗಿದೆ.

ನಿಮ್ಮ ಹೆಸರು ನೋಂದಾಯಿಸಲು ಫೆಬ್ರುವರಿ ೮ ಕೊನೇ ದಿನ.

ಇನ್ನೇಕೆ ತಡ?

ಭಾಗವಹಿಸಿ, ಜೈವಿಕ ಇಂಧನ ಬಳಕೆಯ ಬಗ್ಗೆ ಜನಾಭಿಪ್ರಾಯ ಮೂಡಿಸಿ.

ಡೀಸೆಲ್‌ ಪ್ರಯಾಣ ಎಷ್ಟು ದಿನ? ಜೈವಿಕ ಇಂಧನ ಚಿರಂತನ!

 

 

 

 

 

Share.
Leave A Reply Cancel Reply
Exit mobile version