ನಿನ್ನೆ ಅಂದರೆ ೨೨ ಜನವರಿ ೨೦೧೪ರಂದು ಕರ್ನಾಟಕ ಸರಕಾರವು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಮೇಲ್ವಿಚಾರಣೆಯಲ್ಲಿ ಯುನಿಕೋಡ್ ಶಿಷ್ಟತೆಯನ್ನು ಅಂಗೀಕರಿಸಿ ಕನ್ನಡ ತಂತ್ರಾಂಶಗಳನ್ನು Unicode compliant’ ಆಗಿ ಅಭಿವೃದ್ಧಿಪಡಿಸಿ ಬಳಕೆಗೆ ಬಿಡುಗಡೆ ಮಾಡಿರುವುದು ಒಂದು ಉತ್ತಮ ಹಾಗು ಸ್ವಾಗತಾರ್ಹ ಬೆಳವಣಿಗೆಈ ತಂತ್ರಾಂಶಗಳ ಪೈಕಿ “ಕನ್ನಡ Braille” ತಂತ್ರಾಂಶವನ್ನೂ (type ಮಾಡಿದ ಅಕ್ಷರಗಳನ್ನು ಧ್ವನಿ ರೂಪಕ್ಕೆ ಪರಿವರ್ತಿಸಿ ಹೆಳುವ ಸೌಲಭ್ಯ) ಇದೆ ಎಂದು ಕೇಳಿ ಸಂತಸವಾಗಿತ್ತು. ಸರಕಾರಕ್ಕೆ ಅಂಧರಿಗೂ ಸಾಮಾನ್ಯರಂತೆ ತಂತ್ರಜ್ಞಾನವನ್ನು ಒದಗಿಸಿಕೊಡುವ ಕಾಳಜಿ ಇದೆ ಎಂಬ ವಿಚಾರ ತಿಳಿದು ಹರ್ಷವೆನಿಸಿತು. ಆ ತಂತ್ರಾಂಶವನ್ನು ನಾನೂ ಉಪಯೋಗಿಸಿ ನೋಡಬೇಕೆಂದು ಅದರ ಬಿಡುಗಡೆಯಾದ ತಕ್ಷಣ ನನ್ನ Computerನಲ್ಲಿ install ಮಾಡಿಕೊಂಡೆ. ಆದರೆ ಆ ತಂತ್ರಾಂಶವು ನನ್ನ ನಿರೀಕ್ಷೆಗಳನ್ನೆಲ್ಲಾ ಹುಸಿಗೊಳಿಸಿ ನನ್ನನ್ನು ನಿರಾಶೆಗೊಳಿಸಿತು.

  • ಅಂಧರನ್ನೇ target group’ಮಾಡಿಕೊಂಡು ರೂಪಿಸಿದ ಈ ತಂತ್ರಾಂಶವು ಅಂಧರು ಬಳಸುವ screen reader’ (ಗಣಕದ ಪರದೆಯ ಮೇಲೆ ಮೂಡುವ ಪಠ್ಯವನ್ನು ಅಂಧರಿಗೆ ಓದಿ ಹೇಳುವ ತಂತ್ರಾಂಶ) ದ ಜೊತೆಗೆ ಹೊಂದಿಕೊಳ್ಳುತ್ತಿಲ್ಲ. ತಾಂತ್ರಿಕವಾಗಿ ಹೇಳುವುದಾದರೆ ಅಂಧರಿಗಾಗಿ ರೂಪಿಸಿದ ಈ ತಂತ್ರಾಂಶವು “accessibleಆಗಿಲ್ಲ. “ Software Accessibility” ಮತ್ತು Web Accessibility” ಗಳು ಜಾಗತಿಕ ಮಟ್ಟದಲ್ಲಿ ತುಂಬಾ seriousಆಗಿ considerಆಗುತ್ತಿರುವ ವಿಚಾರಗಳು. ಅನೇಕ software ಹಾಗು web ದೈತ್ಯ companyಗಳು, ಉದಾಹರಣೆಗೆ “Microsoft,” “Oracle,” “SAPLabs,” “Google,” “Facebook,” “Yahoo,” ಇಂತಹ ದಿಗ್ಗಜ companyಗಳು ತಮ್ಮ ಎಲ್ಲ ತಂತ್ರಾಂಶ ಅಥವಾ ಸೇವೆಗಳೂ ಎಲ್ಲ ತರಹದ ಜನರಿಗೂ ತಲುಪಬೇಕೆಂದು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. “Accessibility”ಅಂದರೆ ಯಾವುದೇ ಬಗೆಯ ನ್ಯೂನತೆಗಳನ್ನು (ಉದಾ: ದೃಷ್ಟಿ ದೋಶ / ಶ್ರವಣ ದೋಶ / ಇತರೆ ದೈಹಿಕ ಸಮಸ್ಯೆ / ಅಂಗವೈಕಲ್ಯ) ಗಳಿಂದ ತೊಂದರೆಗೀಡದವರೂ ಮಾಹಿತಿ ತಂತ್ರಜ್ಞಾನವನ್ನು ಇತರ ಸಾಮಾನ್ಯರಂತೆ ಬಳಸುವಂತೆ ಮಾಡುವುದು ಎಂದು ಸ್ಥೂಲವಾಗಿ ಹೇಳಬಹುದು. ನಾನು ಮೇಲೆ ಹೇಳಿದ companyಗಳು ತಮ್ಮದೇ ಆದ dedicated accessibility teamಗಳನ್ನು ಹೊಂದಿವೆ. ತಂತ್ರಾಂಶ ಅಥವ web ಸೇವೆಗಳು ಎಲ್ಲ ತರಹದ ನ್ಯೂನತೆಗಳನ್ನು ಹೊಂದಿದವರಿಗೂ ಸಮಾನವಾಗಿ ಸಿಗುವಂತೆ ನೋಡಿಕೊಳ್ಳುವುದೇ ಈ teamಗಳ ಕೆಲಸ. ಖಾಸಗಿ companyಗಳೇ ಈ ವಿಚಾರವನ್ನು seriousಆಗಿ ತೆಗೆದುಕೊಂಡಿರುವಾಗ, ಸರಕಾರಕ್ಕಾಗಿ ತಯಾರಾದ (ತಂತ್ರಾಂಶದ target group ಅಂಧರೆಂದು ಮತ್ತೆ ಹೇಳಬೇಕಾಗಿಲ್ಲವಷ್ಟೆ?) ತಂತ್ರಾಂಶದಲ್ಲಿ accessibilityಯನ್ನು ಗಣನೆಗೇ ತೆಗೆದುಕೊಂಡಿಲ್ಲ ಎಂಬುದನ್ನು ನೋಡಿ ಆಶ್ಚರ್ಯ ಹಾಗು ವಿಷಾದಗಳೆರಡೂ ಒಟ್ಟಿಗೇ ಆಗುತ್ತಿವೆ. ನನ್ನ ಅನುಭವಕ್ಕೆ ಬಂದಂತೆ ಈ ಕನ್ನಡ Braille ತಂತ್ರಾಂಶವನ್ನು ಒಬ್ಬ ಅಂಧ independentಆಗಿ ಬಳಸಲು ಸಾಧ್ಯವೇ ಇಲ್ಲ!

  • ಈ ತಂತ್ರಾಂಶದ Controlಗಳು ಅಂದರೆ ತಂತ್ರಾಂಶದಲ್ಲಿರುವ ಪಠ್ಯ ಹಾಗು button ETC ಗಳನ್ನು ಅಂಧರು ಬಳಸುವ screen reader ತಂತ್ರಾಂಶಗಳು ಗುರುತಿಸುವುದೇ ಇಲ್ಲ! ಅದಲ್ಲದೇ, ಈ ತಂತ್ರಾಂಶದಲ್ಲಿ ಯಾವುದೇ keyboard shortcutಗಳಿಲ್ಲ! ಅಂಧರು ಸಾಮಾನ್ಯವಾಗಿ mouse ಬಳಸುವುದಿಲ್ಲ, ಎಲ್ಲ ಕೆಲಸಗಳನ್ನೂ keyboard ಬಳಸಿಕೊಂಡೇ ಮಾಡುತ್ತಾರೆ. ಈ ತಂತ್ರಾಂಶದಲ್ಲಿ mouse ಬಳಸದೇ typing ಬಿಟ್ಟು ಬೇರೆ ಕೆಲಸ keyboardನಿಂದ ಮಾಡಲು ಸಾಧ್ಯವಿಲ್ಲ! ಅಂದರೆ, ಬೇರೊಬ್ಬರು ಈ ತಂತ್ರಾಂಶವನ್ನು open ಮಾಡಿಕೊಟ್ಟರೆ, ಒಬ್ಬ ಅಂಧ ಇದರಲ್ಲಿ Braille ನಂತೆ type ಮಾಡಬಹುದು.

  • ಇದರಲ್ಲಿ ಬಳಸಲಾಗಿರುವ Braille ಕೀಲಿಮಣೆ ವಿನ್ಯಾಸವನ್ನು ಈಗ ಬಳಸುವವರು ಕಡಿಮೆ. ಇದೇ ತಂತ್ರಾಂಶವನ್ನು ೯೦ರ ದಶಕದ ಅಂತ್ಯದಲ್ಲಿ ಅಥವ ೨೦೦೦ರ ದಶಕದ ಆರಂಭದಲ್ಲಿ ಮಾಡಿದ್ದರೆ ಅದು ಉಪಯೋಗಕ್ಕೆ ಬರುತ್ತಿತ್ತು. ಅಂದರೆ, ಇದನ್ನು ಬಳಸಲು ನಾವು ಕನಿಷ್ಟ ೧೦ ವರ್ಷ ಹಿಂದಕ್ಕೆ ಹೋಗಬೇಕು! ಅಲ್ಲದೇ, ಅಂಧರು ಇದರಲ್ಲಿ type ಮಾಡಿದಾಗ ಅವರು ಸರಿಯಾಗಿ type ಮಾಡಿದ್ದಾರೆಯೇ ಎಂದು ಮತ್ತೊಮ್ಮೆ ಪರಿಶೀಲಿಸಲು ಅವಕಾಶ ನನಗಂತು ಕಂಡುಬರಲಿಲ್ಲ!

  • ಇಂತಹ ತಂತ್ರಾಂಶದ ಬದಲು, ಒಂದು ಸಣ್ಣ Unicode-to-Braille converterಅನ್ನು ತಯಾರಿಸಿದ್ದರೆ ಸಾಕಾಗುತ್ತಿತ್ತು. ಈ ಕನ್ನಡ braille ತಂತ್ರಾಂಶವು ಕೇವಲ primitive featureಗಳನ್ನು ಹೊಂದಿದೆ. English ಅಥವ ಬೇರೆ ಭಾಷೆಗಳ Braille ತಂತ್ರಾಂಶಗಳು ಇದಕ್ಕಿಂತ ತುಂಬಾ ಮುಂದಿವೆ.

  • ಇದೇ ಬಗೆಯ ತಂತ್ರಾಂಶವನ್ನು IIT ರಗ್‌ಪುರದ ವಿದ್ಯಾರ್ಥಿಗಳು ಸುಮಾರು ೮೧೦ ವರ್ಷಗಳ ಹಿಂದೆಯೇ ಸಿದ್ಧಪಡಿಸಿದ್ದರು. http://www.dnis.org/print_news.php?news_id=562 ಮೇಲಿನ ಕೊಂಡಿಯು ಹೆಚ್ಚಿನ ಮಾಹಿತಿ ನೀಡುತ್ತದೆ.

  • ಕೊನೆಯ ಮಾತು, ದುರಂತವೆಂದರೆ ಈ ಕನ್ನಡ Braille ತಂತ್ರಾಂಶದ help file ಕೂಡ ಅಂಧರಿಗೆ accessible ಆಗಿಲ್ಲ!

– ಟಿ ಎಸ್ ಶ್ರೀಧರ 

(ಶ್ರೀ ಟಿ ಎಸ್‌ ಶ್ರೀಧರ ಅವರು ದೃಷ್ಟಿ ಸವಾಲು ಹೊಂದಿರುವ, ಕನ್ನಡ ತಂತ್ರಜ್ಞಾನಗಳಲ್ಲಿ ಆಸಕ್ತಿ ಹೊಂದಿ ಕೆಲಸ ಮಾಡುತ್ತಿರುವ ಯುವಕರು. ಈ ಸ್ಪೀಕ್‌ ಎಂಬ ಟೆಕ್ಸ್ಟ್‌ ಟು ಸ್ಪೀಚ್‌ ತಂತ್ರಾಂಶದ ಕನ್ನಡ ಭಾಗವನ್ನು ರೂಪಿಸಿದವರು. ಅವರ ಈ ಅಭಿಪ್ರಾಯಗಳನ್ನು ಕನ್ನಡದ ಹಿತದೃಷ್ಟಿಯಿಂದ ಪ್ರಕಟಿಸಲಾಗಿದೆ- ಬೇಳೂರು ಸುದರ್ಶನ)

ಹಾಗೆಯೇ ಶ್ರೀಧರ ಅವರು ಕಳಿಸಿಕೊಟ್ಟ ಈ ಕೆಳಗಿನ ಹಳೆ ದಾಖಲೆಯು ಈ ತಂತ್ರಜ್ಞಾನದ ಬಗ್ಗೆ ಎಷ್ಟೋ ವರ್ಷಗಳ ಹಿಂದೆಯೇ ಕೆಲಸ ಆಗಿದ್ದನ್ನು ತಿಳಿಸುತ್ತದೆ.  ಈ ಬಗ್ಗೆ ತಿಳಿದವರು ಇನ್ನಷ್ಟು ಬೆಳಕು ಚೆಲ್ಲಬಹುದು

 

 

 

 

Share.
Leave A Reply Cancel Reply
Exit mobile version