2019 ರ ನವೆಂಬರ್ ತಿಂಗಳಿನಿಂದ ಆರಂಭವಾದ ಕನ್ನಡ ತಂತ್ರಜ್ಞಾನ ಕುರಿತ ಸಮುದಾಯ ಸಂವಾದ, ಸಲಹಾ ಸಭೆಯಿಂದ ಹಿಡಿದು ನಂತರದ ಹಲವು ಸರ್ಕಾರಿ ಸಭೆಗಳು, ಮೈಸೂರಿನಲ್ಲಿ ನಡೆದ ಎರಡು ದಿನಗಳ ಇ – ಕನ್ನಡ ಕಮ್ಮಟ – ಈ ಹೆಜ್ಜೆಗಳ ಮುಂದುವರಿಕೆಯಾಗಿ ಕರ್ನಾಟಕ ಸರ್ಕಾರ ಇ – ಆಡಳಿತ ಇಲಾಖೆಯು ಇದೇ ಮಾರ್ಚ್ 13 ರಂದು ನಾಲ್ಕು ಪ್ರಮುಖ ಸರ್ಕಾರಿ ಆದೇಶಗಳನ್ನು ಪ್ರಕಟಿಸಿದೆ (ಇ-ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 211 ಇಜಿಎಂ 2019 ಬೆಂಗಳೂರು, ದಿನಾಂಕ : 13-03-2020) ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ.
ಈ ಆದೇಶಗಳು ಹೀಗಿವೆ:
- ಕನ್ನಡ ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನಗಳ ಸ್ಥೂಲ ಮಾನದಂಡಗಳು
- ಇ-ಕನ್ನಡ ಕಲಿಕಾ ಅಕಾಡೆಮಿ ಹಿನ್ನೆಲೆಯಲ್ಲಿ ಪೋರ್ಟಲ್ ನಿರ್ವಹಣೆ ಮಾಡಲು ಸರ್ಕಾರ ಮತ್ತು ಸಮುದಾಯಗಳ ಪ್ರತಿನಿಧಿಗಳಿರುವ ಸಮಿತಿ ರಚನೆ
- ಕನ್ನಡ ಪದಕಣಜದ ಕೆಲಸಕ್ಕಾಗಿ ತಜ್ಞರ ಸಮಿತಿ ರಚನೆ
- ಇ-ಆಡಳಿತದಲ್ಲಿ ಕನ್ನಡ ಪದಗಳಿಗಾಗಿ ( ದೇಸೀಕರಣ – ಲೋಕಲೈಸೇಶನ್) ತಜ್ಞರ ಸಮಿತಿ ರಚನೆ
ಇ-ಕಲಿಕಾ ಕನ್ನಡ ಅಕಾಡೆಮಿ ಪೋರ್ಟಲ್ ನಿರ್ವಹಣೆ ಸಮಿತಿ ಹೀಗಿದೆ:
ಅಧ್ಯಕ್ಷರು : ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)
ಸದಸ್ಯರು: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ; ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ; ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ; ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ, ಕನ್ನಡ ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಅಧ್ಯಕ್ಷರು, ಕನ್ನಡ ಅಭಿವೃದ್ದಿ ಪ್ರಾಧಿಕಾರ
ವಿಶೇಷ ಆಹ್ವಾನಿತರು: ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ; ಕುಲಪತಿಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು
ವಿಷಯ ತಜ್ಞ ಸದಸ್ಯರು: ಶ್ರೀ ಟಿ.ಆರ್.ಅನಂತರಾಮು, ಬೆಂಗಳೂರು, ಶ್ರೀ ಅರವಿಂದ ಚೊಕ್ಕಾಡಿ, ಮೂಡಬಿದರೆ, ಶ್ರೀ ರೋಹಿತ್ ಚಕ್ರತೀರ್ಥ, ಬೆಂಗಳೂರು ; ಶ್ರೀ ಜಿ.ಎಸ್.ಜಯದೇವ್, ಚಾಮರಾಜನಗರ; ಡಾ.ಎಂ.ಸಿ.ಮನೋಹರ್, ಮೈಸೂರು; ಡಾ.ಯು.ಬಿ.ಪವನಜ, ಬೆಂಗಳೂರು
ಭಾಷಾ ತಜ್ಞ ಸದಸ್ಯರು : ಡಾ.ಕೆ.ಚಿದಾನಂದಗೌಡ, ಮೈಸೂರು; ಡಾ.ಎ.ಮುರಿಗೆಪ್ಪ, ವಿಶ್ರಾಂತ ಕುಲಪತಿ, ಹಂಪಿ ವಿಶ್ವವಿದ್ಯಾನಿಲಯ, ಸಾಗರ ; ಶ್ರೀ ರಾಘವೇಂದ್ರ ಪ್ರಸಾದ್, ಬೆಂಗಳೂರು ; ಶ್ರೀ ಟಿ.ಎಸ್.ಗೋಪಾಲ್, ಬೆಂಗಳೂರು ; ಶ್ರೀ ನಲ್ಲತಂಬಿ, ಬೆಂಗಳೂರು ; ಶ್ರೀ ನಿರಂಜನ ಆರಾಧ್ಯ, ಬೆಂಗಳೂರು
ಸದಸ್ಯ ಕಾರ್ಯದರ್ಶಿ : ಯೋಜನಾ ನಿರ್ದೇಶಕರು (ಕನ್ನಡ ಕಂಪ್ಯೂಟಿಂಗ್ ಯೋಜನೆ) ಇ-ಆಡಳಿತ ಕೇಂದ್ರ
ಪದಕಣಜ ಮತ್ತು ದೇಸೀಕರಣ ಕುರಿತು ರಚನೆಯಾದ ಸಮಿತಿ:
ಅಧ್ಯಕ್ಷರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು
ಸದಸ್ಯರು: ಶ್ರೀ ವಿ.ಕೃಷ್ಣ , ಶ್ರೀ ವಸುಧೇಂದ್ರ , ಶ್ರೀ ಓಂಶಿವಪ್ರಕಾಶ್ , ಶ್ರೀ ಸಿ.ಪಿ.ರವಿಕುಮಾರ್, ಶ್ರೀ ರಜನೀಕಾಂತ್, ಶ್ರೀಮತಿ ನಾಗವೇಣಿ ಎನ್.ಮಂಚಿ, ಡಾ.ಎನ್.ಎಸ್.ತಾರಾನಾಥ, ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ, ಶ್ರೀ ಆರ್.ವಿ.ಎಸ್ ಸುಂದರಂ, ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಇದರ ಪ್ರತಿನಿಧಿ
ಸದಸ್ಯ ಕಾರ್ಯದರ್ಶಿ ಯೋಜನಾ ನಿರ್ದೇಶಕರು (ಕನ್ನಡ ಕಂಪ್ಯೂಟಿಂಗ್ ಯೋಜನೆ) ಇ-ಆಡಳಿತ ಕೇಂದ್ರ
ಕನ್ನಡದಲ್ಲಿ ಇ-ಆಡಳಿತ ಪದಗಳನ್ನು ಅಳವಡಿಸಲು ರಚನೆಯಾಗಿರುವ ಭಾಷಾ ತಜ್ಞರ ಮತ್ತು ವಿಷಯ ತಜ್ಞರ ಸಮಿತಿ
ಅಧ್ಯಕ್ಷರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು
ಸದಸ್ಯರು: ಶ್ರೀ ಅಬ್ದುಲ್ ರೆಹಮಾನ್ ಪಾಷಾ, ಶ್ರೀ ಸತ್ಯನಾರಾಯಣ, ಡಾ.ಕೆ.ಎಂ.ಮೇತ್ರಿ, ಶ್ರೀ ಯತೀಂದ್ರನಾಥ್, ಶ್ರೀ ಸ.ರ.ಸುದರ್ಶನ, ಶ್ರೀ ಕಬ್ಬಿನಾಲೆ ವಸಂತ ಭಾರದ್ವಾಜ್, ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಇದರ ಪ್ರತಿನಿಧಿ
ಸದಸ್ಯ ಕಾರ್ಯದರ್ಶಿ ಯೋಜನಾ ನಿರ್ದೇಶಕರು (ಕನ್ನಡ ಕಂಪ್ಯೂಟಿಂಗ್ ಯೋಜನೆ) ಇ-ಆಡಳಿತ ಕೇಂದ್ರ
ಈ ಆದೇಶಗಳು ರೂಪುಗೊಂಡು ಪ್ರಕಟವಾಗಲು ಕಾರಣವಾದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರು, ಅವರ ಕಚೇರಿಯ ಉನ್ನತ ಅಧಿಕಾರಿಗಳು, ಇ – ಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಾಜೀವ್ ಚಾವ್ಲಾ ಮತ್ತು ಅವರ ಕಚೇರಿಯ ಅಧಿಕಾರಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಟಿ ಎಸ್ ನಾಗಾಭರಣ, ಇ-ಆಡಳಿತದ ಕನ್ನಡ ಕಂಪ್ಯೂಟಿಂಗ್ ಸೇರಿದಂತೆ ಹಲವು ಯೋಜನೆಗಳ ಯೋಜನಾ ನಿರ್ದೇಶಕರಾದ ಶ್ರೀ ಎಚ್ ಎಲ್ ಪ್ರಭಾಕರ್, ಕನ್ನಡ ತಂತ್ರಜ್ಞಾನ ಕೆಲಸಗಳಿಗೆ ತುಂಬು ಹೃದಯದಿಂದ ಕೈಜೋಡಿಸಿರುವ ಸಮುದಾಯದ ತಜ್ಞರು, ತಂತ್ರಜ್ಞರು, ಭಾಷಾಭಿಮಾನಿಗಳು – ಎಲ್ಲರಿಗೂ ನನ್ನ ಅತ್ಯಂತ ಹೃತ್ಪೂರ್ವಕ ವಂದನೆಗಳು.
ಮುಂದಿನ ದಿನಗಳಲ್ಲಿ ಈ ಎಲ್ಲಾ ಆದೇಶಗಳೂ ಜಾರಿಯಾಗುವಂತೆ ಕ್ರಿಯಾ ಯೋಜನೆ ರೂಪಿಸಿ ಎಲ್ಲರನ್ನೂ ಭಾಗವಹಿಸುವಂತೆ ಮಾಡಿ ಕನ್ನಡದ ಬಳಕೆ, ಅನುಷ್ಠಾನ,ಅಭಿವೃದ್ಧಿ ಕಾರ್ಯಗಳನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವ ಗುರುತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ!!
ವಂದನೆಗಳು.
ಈ ಆದೇಶಗಳನ್ನು ಡೌನ್‌ಲೋಡ್ ಮಾಡಲು ಇಲ್ಲಿಗೆ ಬನ್ನಿ:
https://drive.google.com/file/d/1IS0qhihHQCs3XhjIknBGrjlUsRy-EYXo/view?usp=sharing