ನೀವು ಕನ್ನಡದಲ್ಲಿ ಮಾತನಾಡುತ್ತೀರಿ. ಕಂಪ್ಯೂಟರ್‌, ನಿಮ್ಮದೇ ಧ್ವನಿಯಲ್ಲಿ ನೀವು ಮಾತಾಡಿದ್ದನ್ನು ಗ್ರೀಕ್‌ ಭಾಷೆಯಲ್ಲಿ ಅಥವಾ ಇನ್ನಾವುದೇ ಭಾಷೆಯಲ್ಲಿ,  ವಾಕ್ಯದಲ್ಲಿ ಇರಬೇಕಾದ ಎಲ್ಲ ಏರಿಳಿತಗಳೊಂದಿಗೆ ಅನುವಾದಿಸಿ ಉಲಿಯುತ್ತದೆ! ಇಂಥದ್ದೊಂದು ಮಹತ್ತರ ಸಂಶೋಧನೆಯನ್ನು ಮೈಕ್ರೋಸಾಫ್ಟ್‌ ಸಂಸ್ಥೆಯು ಸಾಕಾರಗೊಳಿಸುತ್ತಿದೆ. ಮೈಕ್ರೋಸಾಫ್ಟನ್ನು ಟೀಕಿಸುವವರೂ `ಅಬ್ಬ, ಎಂಥ ಕ್ರಾಂತಿಕಾರಿ ಸಂಶೋಧನೆ’ ಎಂದು ಅಚ್ಚರಿಪಡುವಂಥ ಈ ಸಂಶೋಧನೆಯನ್ನು ಮಾರ್ಚ್‌ ೬ರಂದು ಮೈಕ್ರೋಸಾಫ್ಟ್‌ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. 

ಫ್ರಾಂಕ್‌ ಸೂಂಗ್‌

ರಿಕ್ ರಶೀದ್‌

ಯಾವುದೇ ಭಾಷೆಯಲ್ಲಿ ಮಾತನಾಡಿದ್ದನ್ನು  ಇನ್ನಾವುದೇ ಭಾಷೆಗೆ, ಮೂಲ ಧ್ವನಿಯಲ್ಲಿ, ಅದೇ ಏರಿಳಿತಗಳೊಂದಿಗೆ ಅನುವಾದಿಸುವುದು ಎಂದರೆ ….
೧) ಒಬ್ಬ ವ್ಯಕ್ತಿಯ ಧ್ವನಿಯಲ್ಲೇ ಅನುವಾದವನ್ನು ಕೇಳಬಹುದು.
೨) ಈಗ ಮಾತನಾಡಿದ್ದು ಅರೆಗಳಿಗೆಯಲ್ಲಿ ಇನ್ನೊಂದು ಭಾಷೆಗೆ ಅನುವಾದಗೊಳ್ಳುವುದರಿಂದ ವಿಶ್ವವಿಡೀ  ಈ ಮಾತನ್ನು ಕ್ಷಣಮಾತ್ರದಲ್ಲಿ ಅರಿಯುತ್ತದೆ.
೩) ಟೆಕ್ಸ್ಟ್‌ ಟು ಸ್ಪೀಚ್‌  – ಟಿಟಿಎಸ್‌))  –  –    ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ, ಇದೆಲ್ಲವೂ ಅಂಧರಿಗೆ ಮತ್ತು ಸಾಕ್ಷರರಲ್ಲದವರಿಗೂ ಬಳಕೆಯಾಗಬಹುದು.
೪) ಮುಂದಿನ ದಿನಗಳಲ್ಲಿ ಅನುವಾದದ ರಗಳೆಯೇ  ಇರದೆ ಸಂಸ್ಕೃತಿ, ಪರಂಪರೆ, ಸಮಕಾಲೀನ ಬದುಕು, ಸಾಹಿತ್ಯ – ಎಲ್ಲವನ್ನೂ ಅರಿಯಬಹುದು. ಪ್ರವಾಸ ಮಾಡುವವರು ಮೈಕ್ರೋಸಾಫ್ಟ್‌ ತಂತ್ರಾಂಶಗಳನ್ನು ಇಟ್ಟುಕೊಂಡರೆ ಸಾಕು, ಯಾವುದೇ ಮೂಲೆಯಲ್ಲೂ ಸಂವಹನ ಸಾಧಿಸಬಹುದು!
೫) ನೊಬೆಲ್‌ ಪ್ರಶಸ್ತಿಗಾಗಿ ಕನ್ನಡ ಅಥವಾ ಇನ್ನಾವುದೇ ಭಾಷೆಯ ಸಾಹಿತ್ಯವನ್ನು ಸ್ವಿಸ್‌ ಭಾಷೆಗೆ ಅನುವಾದ ಮಾಡಿಸುವ ತುರ್ತಿಲ್ಲ!
ಇದೆಲ್ಲವೂ ಈಗಲೇ ಆಗಿಬಿಡುವ ಸಂಶೋಧನೆಯೇನಲ್ಲ. ಆದರೆ ಈವವರೆಗೆ ಆದ ಸಂಶೋಧನೆಯೇನೂ ಸಾಮಾನ್ಯವಲ್ಲ.

ಮೈಕ್ರೋಸಾಫ್ಟ್‌ ಸಂಸ್ಥೆಯ ಮುಖ್ಯ ಸಂಶೋಧನಾ ಅಧಿಕಾರಿ  ರಿಕ್‌ ರಶೀದ್‌ ಈ ಕುರಿತು ನೀಡಿದ ಭಾಷಣದ ವಿಡಿಯೋವನ್ನು ನೀವು ನೋಡಿದರೆ ನಾನು ಹೇಳಿದ ಸಂಗತಿಗಳೆಲ್ಲ ಸಂಗತಿಗಳೆಲ್ಲ ನಿಚ್ಚಳವಾಗುತ್ತವೆ. 
ಇಂದು ಟೆಕ್ನಾಲಜಿ ರಿವ್ಯೂ ಮ್ಯಾಗಜಿನ್‌ನಲ್ಲಿ ಪ್ರಕಟವಾದ ಸುದ್ದಿಯನ್ನು ಆಧರಿಸಿ ಹಲವು ಸುದ್ದಿಸಂಸ್ಥೆಗಳು ಈ ಸುದ್ದಿಯನ್ನು ಪ್ರಕಟಿಸಿವೆ. ಬಹುಶಃ ವಿಡಿಯೋ ಲಿಂಕನ್ನು ಹುಡುಕಿ ಹಾಕುತ್ತಿರುವ ಜಾಲತಾಣ ಮಿತ್ರಮಾಧ್ಯಮವೊಂದೇ ಅನ್ನಿಸುತ್ತದೆ!
ಅದೇನೇ ಇರಲಿ, ಈ ಸಂಶೋಧನೆಯನ್ನು ಕೈಗೊಂಡ ಮೈಕ್ರೋಸಾಫ್ಟ್ ತಂಡವನ್ನು ಅಭಿನಂದಿಸೋಣ.
ಈ ಅನುವಾದಕ್ಕಿಂತ ಮುನ್ನ ಈ ತಂತ್ರಾಂಶಕ್ಕೆ ಒಂದು ತಾಸಿನ ಕಾಲ ಮೂಲ ಧ್ವನಿಯಲ್ಲಿ ತರಬೇತಿ ನೀಡಬೇಕು, ಅಷ್ಟೆ ಎನ್ನುತ್ತಾರೆ ಈ ಸಂಶೋಧನೆಯನ್ನು ಮೂಲತಃ ಒಂದು ರೂಪಕ್ಕೆ ತಂದ ಫ್ರಾಂಕ್‌ ಸೂಂಗ್‌… …..; ವಾಸ್ತವವಾಗಿ ಇಲ್ಲಿ ಟಿ ಟಿ ಎಸ್‌ ಮೂಲಕ ಬಂದ ಮೂಲ ಧ್ವನಿಯನ್ನು ೫ ಮಿಲಿಸೆಕೆಂಡ್‌ಗಳಿಗೊಂದರಂತೆ ತುಂಡುತುಂಡು ಮಾಡಿ, ಅದನ್ನೆಲ್ಲ ಇನ್ನೊಂದು ಭಾಷೆಯ ಟಿ ಟಿ ಎಸ್ ಗೆ ಊಡಿಸುತ್ತಾರೆ. (ರಿಕ್ ರಶೀದ್ ಕುರಿತು ತಿಳಿಯಲು ಇಲ್ಲಿಗೆ ಬನ್ನಿ. )
ಈ ಸುದ್ದಿಯನ್ನು ನಮ್ಮ ಯುವ ಸಂಶೋಧಕ, ದೃಷ್ಟಿಸವಾಲಿನ ಟಿ ಎಸ್‌ ಶ್ರೀಧರ್‌ಗೆ ತಿಳಿಸಿದಾಗ ಅವರು ಪ್ರತಿಕ್ರಿಯೆ ನೀಡಿದ್ದು: ನಿಜಕ್ಕೂ ಇದೊಂದು ರೆವೊಲುಶನರಿ ತಂತ್ರಜ್ಞಾನ.
 

Share.

1 Comment

  1. ನಮಗೆ ತಂತ್ರಜ್ಠಾನದ ಪರಿಚಯವಾದಾಗ ಅಂದುಕೊಳ್ಳುತ್ತಿದ್ದುದುಂಟು… ನಾವು ಮಾತಾಡೋದೆಲ್ಲ ಟೈಪಾಗೋದಾದ್ರೆ ಹೇಗೆ ಅಂತ! ಆಧ್ರೆ ಇದು ಅದಕ್ಕೂ ತುಂಬ ಮುಂದೆ ಹೋಗಿದೆ. ನಂಬಲಿಕ್ಕೂ ಆಗದಂಥ ಆವಿಶ್ಕಾರ! ಮಾನವನ ಮೆದುಳಿ ಏನೆಲ್ಲ ಯೋಚಿಸಬಲ್ಲದು…

Leave A Reply Cancel Reply
Exit mobile version