ಉಡುಪಿ ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ದಾದಿಯರಾಗಿ ದುಡಿಯುತ್ತಿರುವ ಮಹಿಳೆಯರಿಗೆ ಸರಕಾರವೇ ನಿಗದಿಪಡಿಸಿದ ಮಾಸಿಕ ವೇತನ ವನ್ನು ಪಾವತಿಸದೆ ಜುಜುಬಿ  ಮೊತ್ತವನ್ನು ನೀಡುತ್ತಿರುವ ಪ್ರಕರಣದಲ್ಲಿ  ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಅಂತಿಮ ತೀರ್ಪು ನೀಡಿ ಕಾನೂನು ಸಮ್ಮತ ವೇತನ ಪಾವತಿಸಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದೆ.

ಕಳೆದ ಹದಿನಾಲ್ಕು ವರ್ಷಗಳಿಂದ ಉಡುಪಿಯ ಜಿಲ್ಲಾ  ಆಸ್ಪತ್ರೆ  ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಪೂರ್ಣಾವಽ ಸೇವೆ ಸಲ್ಲಿಸುತ್ತಿರುವ ದಾದಿಯರ ಮಾಸಿಕ ವೇತನ ರೂ. ೧೭,೬೫೦ ಎಂದು ಸರಕಾರಿ ದಾಖಲೆಗಳಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದ್ದರೂ ಕೇವಲ  ೪,೫೭೫ ರೂ.ಗಳನ್ನು ನೀಡುವ ಮೂಲಕ ಆರೋಗ್ಯ ಇಲಾಖೆ ವಂಚಿಸುತ್ತಿದೆ ಎಂದು ಈ ದಾದಿಯರ ಪರವಾಗಿ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನ ರಾಜ್ಯ ಆಯೋಗದಲ್ಲಿ  ದಾವೆ ಹೂಡಿತ್ತು.

ಪ್ರಕರಣದ ಹಿನ್ನೆಲೆ

ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ೨೦೦೦ ಇಸವಿಯ ಅಕ್ಟೋಬರ್‌ನಲ್ಲಿ  ಉಡುಪಿ ಜಿಲ್ಲಾ  ಆರೋಗ್ಯ ಅಽಕಾರಿಗಳು ೧೬ ಮಂದಿ ಶುಶ್ರೂಷಕಿಯರಿಗೆ ತಾತ್ಕಾಲಿಕ ನೇಮಕಾತಿ ಆದೇಶ ನೀಡಿದ್ದರು. ಆರಂಭದಲ್ಲಿದ್ದ ೩,೩೦೦ ರೂಪಾಯಿಗಳ ಅವರ ಮೂಲವೇತನವನ್ನು ೨೦೦೬ರಿಂದ ಅನ್ವಯವಾಗುವಂತೇ ರೂ. ೪,೫೭೫ಗಳೆಂದು ನಿಗದಿಪಡಿಸಲಾಯಿತು.

ಪುನಃ ೨೦೦೭ರಲ್ಲಿ  ವೇತನವನ್ನು  ೮,೮೨೫ ರೂಪಾಯಿ ಗಳಿಗೆ ಏರಿಸಿದ ಸರಕಾರ ೨೦೧೨ರಿಂದ ತಿಂಗಳಿಗೆ  ರೂ. ೧೭,೬೫೦ ಎಂದು ಘೋಷಿಸಿತು. ವೇತನವನ್ನು ಮೂರು ಬಾರಿ ಏರಿಸಿದರೂ ದಾದಿಯರ ಕೈಗೆ ಸೇರುತ್ತಿದ್ದುದು ಕೇವಲ ೪,೫೭೫ ರೂ. ಮಾತ್ರ. ವಿವಿಧ ಕಾಲಘಟ್ಟಗಳಲ್ಲಿ ಏರಿಸಿದ ಈ ವೇತನ ಶ್ರೇಣಿ ಕೇವಲ ಕಡತಗಳಲ್ಲೇ ಕೊಳೆಯುತ್ತಿರುವ ಘೋಷಣೆಗಳು ಎಂದು ಗಮನಿಸಿದ ಪ್ರತಿಷ್ಠಾನವು ಮಾಹಿತಿ ಹಕ್ಕು ಕಾಯ್ದೆಯ ಆಧಾರದಲ್ಲಿ ಎಲ್ಲ ದಾಖಲೆಗಳನ್ನು ಸಂಗ್ರಹಿಸಿತು. ಆದರೆ ದಾದಿಯರಿಗೆ ಪೂರ್ಣವೇತನವನ್ನು  ತಡೆಹಿಡಿಯುತ್ತಿರುವ ಅಽಕಾರಿ ಯಾರು ಎಂಬುದು ತಿಳಿಯಲೇ ಇಲ್ಲ.

ಅಸಹಾಯಕ ದಾದಿಯರು

ಅನ್ಯಾಯಕ್ಕೊಳಗಾದ ಈ ೧೬ ಮಂದಿ ದಾದಿಯರಲ್ಲಿ ಹೆಚ್ಚಿನವರು ಉಡುಪಿಯರಾಗಿದ್ದು ಪ್ರತಿದಿನ ದೂರದ ಹೆಬ್ರಿ, ಬೈಂದೂರು ಮುಂತಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ನೀಡುತ್ತಿದ್ದರು. ಕೆಲವರ ಪ್ರಯಾಣ ವೆಚ್ಚವೇ ತಿಂಗಳಿಗೆ ೩೦೦೦ ರೂಪಾಯಿಗಳಷ್ಟು ಆಗುತ್ತಿತ್ತು. ಪ್ರಯಾಣದ ಖರ್ಚು ಉಳಿಸಲು ಬಾಡಿಗೆ ಮನೆ ಪಡೆಯಲು ಇನ್ನು ಹೆಚ್ಚಿನ  ಖರ್ಚು ಇದೆ.
ಇವರೆಲ್ಲ ಜಿಲ್ಲಾಽಕಾರಿಗಳಿಂದ ಹಿಡಿದು ಆರೋಗ್ಯ ನಿರ್ದೇಶನಾಲಯದ ವಿವಿಧ ಅಽಕಾರಿಗಳಿಗೆ, ಮಂತ್ರಿಗಳಿಗೆ ಹತ್ತಾರು ಬಾರಿ ಪ್ರಾರ್ಥನೆ, ಮನವಿ, ಆಗ್ರಹ ಪತ್ರ ಇತ್ಯಾದಿಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪ್ರತಿಬಾರಿಯೂ ಸಿಗುತ್ತಿದ್ದದ್ದು  ಕೇವಲ ಆಶ್ವಾಸನೆಗಳು ಮಾತ್ರ!

ಅಂತೂ ೨೦೧೩ರ ಮೇ ತಿಂಗಳಲ್ಲಿ ಉಡುಪಿಯ ಜಿಲ್ಲಾಽಕಾರಿ ಆದೇಶವೊಂದನ್ನು ಹೊರಡಿಸಿ ಹಿಂದಿನ ಬಾಕಿ ಸಹಿತ ಇವರಿಗೆಲ್ಲ ಪೂರ್ತಿವೇತನ ರೂ. ೧೭, ೬೫೦ ಗಳನ್ನು ನೀಡಬೇಕೆಂದು ಸೂಚಿಸಿದ್ದರು. ವರ್ಷವೊಂದು ಕಳೆದರೂ ಈ ಆದೇಶದ ಪಾಲನೆಯೂ ಆಗಿರಲಿಲ್ಲ.

ಪ್ರತಿಷ್ಠಾನದ ಕಾರ್ಯಾಚರಣೆ

ಈ ಪ್ರಕರಣದಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವು ಜಿಲ್ಲಾ ಆರೋಗ್ಯ ಅಽಕಾರಿಯಿಂದ ಹಿಡಿದು ಆರೋಗ್ಯ, ನಿರ್ದೇಶಕರವರೆಗೂ ಪ್ರತಿಯೋರ್ವ ಅಽಕಾರಿಗೂ  ಆಗ್ರಹಪತ್ರ ಬರೆದರೂ ಸಮಸ್ಯೆ ಬಗೆಹರಿಯಲಿಲ್ಲ.

ಆಶ್ಚರ್ಯವೆಂದರೆ ೨೦೦೦ ಇಸವಿಯ ಅನಂತರದ   ದಿನಗಳಲ್ಲಿ  ಇದೇ ಜಿಲ್ಲೆಯ ಆಸ್ಪತ್ರೆಗಳಿಗೆ  ಸೇರಿದ ದಾದಿಯರಿಗೆಲ್ಲ  ಖಾಯಂ ನೇಮಕಾತಿ ದೊರೆತಿದ್ದು ಪೂರ್ಣ ಪ್ರಮಾಣದ ಸಂಬಳ ಪಡೆಯುತ್ತಿದ್ದರೂ ಈ ೧೬ ಮಂದಿ ಇನ್ನೂ ತಾತ್ಕಾಲಿಕ ನೆಲೆಯಲ್ಲಿ ಗುಲಾಮರಂತೆ ದುಡಿಯುತ್ತಿದ್ದರು.

ತಾತ್ಕಾಲಿಕ ನೆಲೆಯಲ್ಲಿದ್ದ  ದಾದಿಯರು ನ್ಯಾಯಾಲಯದಲ್ಲಿ ದಾವೆ ಹೂಡಿದಲ್ಲಿ ಕೆಲಸದಿಂದ ವಜಾ ಆಗುವ ಭೀತಿ ಇರುವುದನ್ನು ಗಮನಿಸಿದ ಪ್ರತಿಷ್ಠಾನವು ಸ್ವತಃ ಈ ಪ್ರಕರಣವನ್ನು ಕೈಗೆತ್ತಿಕೊಂಡು ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದಾವೆ ಹೂಡಿತ್ತು.

ಆಯೋಗದ ಆದೇಶ ಹೊರಟು ಈಗಾಗಲೇ ಒಂದು ತಿಂಗಳು ಕಳೆದರೂ ಇನ್ನೂ ದಾದಿಯರಿಗೆ ಬಾಕಿವೇತನ ಬಿಡುಗಡೆಯಾಗಿಲ್ಲ. ಇನ್ನೊಂದು ವಾರದೊಳಗೆ ಬಾಕಿವೇತನ ಪಾವತಿಯಾಗದಿದ್ದಲ್ಲಿ ಪ್ರತಿಷ್ಠಾನವು ನ್ಯಾಯಾಂಗ ನಿಂದನೆಯ ದೂರನ್ನೂ ದಾಖಲಿಸಲಿದೆ.

ಉತ್ತರ ಕರ್ನಾಟಕದಲ್ಲೂ  ಗುಲಾಮ ದಾದಿಯರು

ಉಡುಪಿಯ ಆಸ್ಪತ್ರೆಗಳಲ್ಲಿ ಗುಲಾಮರಂತೇ  ದುಡಿಯುತ್ತಿರುವ ದಾದಿಯರ ಪರವಾಗಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ರಾಜ್ಯ ಆಯೋಗದಲ್ಲಿ ದಾವೆ ದಾಖಲಿಸಿರುವುದನ್ನು ಟಿ.ವಿ. ಹಾಗೂ ಪತ್ರಿಕಾ ಮಾದ್ಯಮಗಳ ಮೂಲಕ ತಿಳಿದ ಇಂತಹದೇ ಸಮಸ್ಯೆಯಿಂದ ಬಳಲುತ್ತಿರುವ ಉತ್ತರ ಕರ್ನಾಟಕ ಜಿಲ್ಲೆಗಳ  ಇನ್ನೂ ಹಲವಾರು ದಾದಿಯರು ಪ್ರತಿಷ್ಠಾನವನ್ನು  ಸಂಪರ್ಕಿಸಿ ಬೆಂಬಲ ಯಾಚಿಸಿದ್ದಾರೆ. ಅವರೆಲ್ಲರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ನ್ಯಾಯಪಡೆಯಲ ಅವರಿಗೂ ಮಾರ್ಗದರ್ಶನ ಹಾಗೂ ಸಹಕಾರ ನೀಡಲಾಗುವುದು.

ಬಾಕಿ ವೇತನಕ್ಕೆ ಬಡ್ಡಿಯೂ ಸಿಗಬೇಕಾಗಿದೆ

ರಾಜ್ಯ ಮಾನವ ಹಕ್ಕು ಆಯೋಗದ ಆದೇಶದಂತೆ ಉಡುಪಿಯ ಆಸ್ಪತ್ರೆಯ ಪ್ರತಿಯೋರ್ವದಾದಿಗೂ ಸುಮಾರು ೭ ಲಕ್ಷದಷ್ಟು ಬಾಕಿವೇತನ ಸಿಗಲಿದೆ. ಈ ಮೊತ್ತದೊಂದಿಗೆ  ಕಳೆದ ಏಳು ವರ್ಷಗಳ ಬಡ್ಡಿಯನ್ನೂ  ಸೇರಿಸಿ ಕೊಡಬೇಕಾದ್ದು ನ್ಯಾಯಯುತ. ಒಂದು ವೇಳೆ, ಆರೋಗ್ಯ ಇಲಾಖೆ ಬಡ್ಡಿ ನೀಡದಿದ್ದಲ್ಲಿ “ಬಡ್ಡಿಗಾಗಿ ನ್ಯಾಯಾಂಗ ಹೋರಾಟ” ಮಾಡಲೂ ಪ್ರತಿಷ್ಠಾನ ಬದ್ಧವಾಗಿದೆ.

ದಿನಾಂಕ: ೨೮-೭-೨೦೧೪
ಡಾ| ರವೀಂದ್ರನಾಥ್ ಶ್ಯಾನುಭಾಗ್
ಉಡುಪಿ
ಅಧ್ಯಕ್ಷರು
ದೂರವಾಣಿ: 8971033582

ENGLISH PRESS NOTE

Human Rights Protection Foundation, Udupi.

First Floor,Vaikunta Baliga College of Law, Kunjibettu Udupi- 576 102

Press Release issued on 28.07.2014
——————————————————————————————————-
Udupi Nurses’ meagre salary case

Order from Human Rights Commission of Karnataka
Nurses of Udupi finally get justice

Karnataka State Human Rights Commission has given its verdict regarding the case where several nurses of the district working in Government health centres were not given the salary fixed by the Government itself.  The Department of Health and Family Welfare has been directed to pay the nurses their lawful salaries.

Human Rights Protection Foundation Udupi had filed a suit in the Commision in favour of the nurses working full time at District and Primary Health centres, who were fraudulently paid only Rs. 4,575 per month since fourteen years, albeit the Government documents clearly stated their monthly salary to be Rs 17,650.

Background Story

About fourteen years ago, somewhere in 2000, sixteen nurses were given temporary appointment orders by the District Health Officers in the year 2000.  The initial salary of Rs. 3,300 was later fixed to Rs 4,575 in February 2007.

In May 2007, the Government then incremented the salary to Rs 8,825, and yet again to Rs 17,650 in 2012.  The regular increments in pay scale were merely wasted words in the documents and never implemented!  The nurses have been receiving a salary of Rs. 4,575 since 2006.

Helpless nurses

Most of these nurses belong to Udupi and commute to District Health centres as far as Hebri and Baindur.  They incur close to a sum of Rs. 3,000/- to Rs. 3,500/- for travelling from their residence to place of work.They made numerous requests writing to the District Health officer, District Health and Family Welfare Office, Ajjarkad, to increase monthly basic salary rightly due to them.

Ultimately in May, 2013, the order was passed that the salary of Rs. 17,650 must be paid including the arrears.  And no payment was received even after a year.

The Foundation takes up the case

Human Rights Protection Foundation wrote appealing to every official starting from district collector to Director of Health.  District Health Officer of Udupi responded to the letter saying he has requested the Director of Health to release the money and nothing happened.

Astonishingly, although the services of drivers, doctors and other posts, besides nurses appointed afterwards, have been regularized, these 16 nurses continue to be retained on contract basis.

Observing that the nurses feared losing their temporary jobs if they moved the court, the Foundation took up the matter to the State Human Rights Commission.
It is already a month since the order from the Commission was passed, and there has been no release of the salary amount.  The Foundation will file a contempt petition, if the salary amount is not paid within a week.

Slave nurses in North Karnataka too

After the news of nurses working as slaves in Udupi and the petition filed by Human Rights Protection Foundation Udupi, at the State Human Rights Commission was published in public media, several nurses with similar issues have approached the Foundation and requested support.  Their documents are being studied and rightful assistance will be provided.

Arrears plus interest to be paid

As per the order from the State Human Rights Commission, each nurse is to get about 7 lakhs.  It is only lawful to pay the interest for seven years.  In case the Health Department fails to pay the interest, the Foundation is prepared to fight for interest payment.

Dr Ravindranath Shanbhag
President
Human Rights Protection Foundation, Udupi.
Telephone: 8971033582

ಲಗತ್ತಿಸಿದೆ

ಸರ್ಕಾರದ ಆದೇಶ ಪತ್ರ 

ENCLOSED:

Government Order copy 

Share.
Leave A Reply Cancel Reply
Exit mobile version