ಪಾಕಿಸ್ತಾನಿ ಗಝಲ್‌ಗಳನ್ನು ಕೇಳುವುದು ನನಗೊಂದು ವಿಚಿತ್ರ ಹುಚ್ಚು. ಅದರಲ್ಲೂ ಪಠಾಣ್ ಖಾನ್‌ನಂಥ ಗಝಲ್ ಗಾಯಕರ ಚೀಸ್ ಸಿಕ್ಕರೆ ಮುಗಿದೇ ಹೋಯ್ತು…. ಎಷ್ಟೋ ವರ್ಷಗಳ ಹಿಂದೆ ನನ್ನ ಬ್ಲಾಗ್‌ಸ್ಪಾಟ್‌ನಲ್ಲಿ ಪಾಕಿಸ್ತಾನಿ ಗಝಲ್‌ಗಳು ದೊರೆಯುವ ಕೆಲವು ಕೊಂಡಿಗಳನ್ನು ಪ್ರಕಟಿಸಿದ್ದೆ. ಈಗ ಕಾಲ ಬದಲಾಗಿದೆ.

ಈ ಕೊಂಡಿಯಲ್ಲಿ ಸಾಕಷ್ಟು ಗಝಲ್‌ಗಳ ಸಂಗ್ರಹವಿದೆ. ಯಾವುದೋ ಕಂಪ್ಯೂಟರಿನಲ್ಲಿ ನಾನು ಗಂಟೆಗಟ್ಟಳೆ ಕೆಲಸ ಮಾಡಬೇಕಾದಾಗ ಇಲ್ಲಿಗೆ ಬಂದು ಪಠಾಣ್ ಖಾನ್‌ನ ಮೇರಾ ಇಶ್ಖ್ ವಿ ತೂ ಗಝಲ್‌ನ್ನು ಡೌನ್‌ಲೋಡ್ ಮಾಡಿಕೊಂಡು ಕೇಳಿದೆ.

ನಿಮಗೇನಾದರೂ ಇಂಥ ವಿಷಯಾಸಕ್ತಿ ಇದ್ದರೆ ಖಂಡಿತ ಹೋಗಿ ನೋಡಿ.
ಬಿಸಿಲಿನ ಝಳದಲ್ಲೊಮ್ಮೆ ಗಝಲ್‌ಗಳ ತಂಪು ನಿಮ್ಮನ್ನು ಕೂಲ್ ಮಾಡುವುದು ಖಾತ್ರಿ.

http://music.ekalaam.com/index.php 

ಹಾಗೇನೇ ಪಾಕಿಸ್ತಾನಿ ಸಂಗೀತದ ವಿವಿಧ ಆಲ್ಬಮ್‌ಗಳನ್ನು ಕೇಳ್ಬೇಕು ಅಂತಿದ್ರೆ ಇಲ್ಲೊಂದು ಒಳ್ಳೆ ಲಿಂಕ್ ಇದೆ:
http://www.pakistanipopmusic.co.uk (ನಿಮ್ಮ ಕಂಪ್ಯೂಟರಿನಲ್ಲಿ ರಿಯಲ್ ಪ್ಲೇಯರ್ ಇರಬೇಕು)

Share.
Leave A Reply Cancel Reply
Exit mobile version