ಪತ್ರಕರ್ತರಿಗೆ ಲ್ಯಾರಿ, ಓವೆನ್ಸ್ ಮತ್ತು ಬ್ರಿಗ್ಸ್ ಕಿವಿಮಾತು, ಕಲಿಕೆಯ ಮಾಹಿತಿ
ಪತ್ರಿಕೋದ್ಯಮವು ಸಾಕಷ್ಟು ಬೆಳೆದಿದೆ ಎಂದು ಎಲ್ಲರೂ ಹೇಳುತ್ತಾರೆ. ಪತ್ರಿಕೋದ್ಯಮದ ಮೇಲೆ ಆಂತರಜಾಲದ (ಇಂಟರ್‌ನೆಟ್) ಪ್ರಭಾವ ಸಾಕಷ್ಟು ಬೆಳೆದಿದೆ. ಹಾಗಂತ ಪತ್ರಿಕೋದ್ಯಮದ ತಿರುಳಿಗೂ, ಪತ್ರಿಕೋದ್ಯಮದ ಮಾಧ್ಯಮಗಳಿಗೂ ನಡುವೆ ಇರುವ ವ್ಯತ್ಯಾಸವನ್ನು ಮರೆಯಬಾರದು ಎನ್ನುತ್ತಾರೆ, ಲ್ಯಾರಿ ಲಫ್. ಲ್ಯಾರಿ ಯಾರು ಎಂದು ನನಗೂ ಗೊತ್ತಿಲ್ಲ. ಆದರೆ ಅವರು ಹೋವಾರ್ಡ್ ಓವೆನ್ಸ್ ಎಂಬ ಪತ್ರಕರ್ತನ ಬ್ಲಾಗಿನಲ್ಲಿ ಹೀಗೆ ಒಂದು ಪ್ರತಿಕ್ರಿಯೆ ಬರೆದಿದ್ದಾರೆ. ಹಾಗಾದರೆ ಹೋವಾರ್ಡ್ ಓವೆನ್ಸ್ ಯಾರು ಎಂದು ನೀವು ಕೇಳಿದರೆ ಮತ್ತೆ ನಾನು ಮೌನಿ. ಆವರು ನನಗೆ ಮುಖತಃ ಪರಿಚಿತರಲ್ಲ. ಅವರ ಬ್ಲಾಗಿನ ವಾರ್ತೆಗಳು ನನ್ನ ಗೂಗಲ್ ಈ ಮೈಲ್ ಕೋಠಿಯಲ್ಲಿ ಬರುತ್ತಲೇ ಇರುತ್ತವೆ.
ಮೊದಲು ಲ್ಯಾರಿ ಹೇಳುವ ೧೨ ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡುತ್ತೇನೆ:
೧) ನೀವು ಮಾಡುವ ಎಲ್ಲ ಕೆಲಸದಲ್ಲೂ ಸಾರ್ವಜನಿಕ ಬದ್ಧತೆ ಇರುತ್ತದೆ ಎಂಬುದನ್ನು ಖಚಿತ ಮಾಡಿಕೊಳ್ಳಿ.
೨) ನಿಮ್ಮ ಶ್ರೋತ್ರುಗಳು ಯಾರು ಎಂಬುದನ್ನು ಮೊದಲು ಗುರುತಿಸಿಕೊಳ್ಳಿ. ಆವರೊಂದಿಗೇ ನಿಮ್ಮ ಬದುಕು, ನಿಮ್ಮ ಕಲಿಕೆ, ನಿಮ್ಮ ಆಲಿಕೆ ಎಲ್ಲವೂ ನಡೆಯುತ್ತದೆ.
೩) ವಿಶ್ವಾಸಾರ್ಹತೆಯನ್ನು ಸ್ಥಪಿಸಲು ಮತ್ತು ಅದನ್ನು ಉಳಿಸಿಕೊಂಡು ಹೋಗಲು ನಿಖರತೆಗೆ ಮತ್ತು ನ್ಯಾಯಕ್ಕೆ ಒತ್ತು ನೀಡಬೇಕು ಎಂಬುದನ್ನು ಮರೆಯಬೇಡಿ.
೪) ನೀವು ಯಾವಾಗಲೂ ಒಂದು ನಿಲುವಿಗೆ ಆಂಟಿಕೊಂಡಿದ್ದೀರಿ ಎಂಬ ಅರಿವಿನಿಂದಲೇ ಬದುಕಿ. ಯಾವುದಕ್ಕೂ ಕೇರ್ ಮಾಡದವರು ಸಾಮಾನ್ಯವಾಗಿ ವಸ್ತುನಿಷ್ಠವಾಗಿ ಕಾಣಿಸುತ್ತಾರೆ; ಆದರೆ ಪತ್ರಕರ್ತರು ಹೀಗೆ ಕೇರ್ ಮಾಡದೇ ಬದುಕುವಂತಿಲ್ಲ.
೫) ನಿಮ್ಮ ತನಿಖಾ ಬುದ್ಧಿ ಯಾವಾಗಲೂ ಜೀವಂತವಾಗಿರಲಿ; ಆದರೆ ಸುದ್ದಿಗಳ, ಸುದ್ದಿಮೂಲಗಳ ಹಿಂದಿನ ನಿಲುವುಗಳ ಬಗ್ಗೆ ಎಚ್ಚರಿಕೆ ಇರಲಿ.
೬) ಪತ್ರಕರ್ತರಿಗೆ ಯಾವಾಗಲೂ ತಿಳಿವಳಿಕೆ ಕಡಿಮೆ ಎಂಬುದರ ಬಗ್ಗೆ ಹೆಮ್ಮೆ ಇರಲಿ
;.
Wಳಿಸುವುದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮಾಹಿತಿಯನ್ನು ಪಡೆದಿರಬೇಕು ಎಂಬುದು ಗಮನದಲ್ಲಿರಲಿ.
೭) ಸಾರ್ವಜನಿಕ ಮಾಹಿತಿ ಸಂಗ್ರಹದ ಕಾಯ್ದೆಗಳನ್ನು ಚೆನ್ನಾಗಿ ಅರಿಯಿರಿ. ಆದರೆ ಅದರ ಜೊತೆಗೇ ಒಳ್ಳೆಯ ಸಂಬಂಧಗಳಿಂದಲೂ ಮಾಹಿತಿ ಸಿಗುತ್ತದೆ ಎಂಬುದನ್ನು ಮರೆಯಬೇಡಿ.
೮) ನಿಮ್ಮ ಮಾಹಿತಿಯನ್ನು ನಿರೂಪಿಸಲು ಅಭಿವ್ಯಕ್ತಿ ನೇರವಾಗಿರಲಿ, ಎಲ್ಲರಿಗೂ ಅರ್ಥವಾಗುವಂತಿರಲಿ.
೯) ರಾಜಕೀಯ, ಸೈದ್ಧಾಂತಿಕ ಹಾಗೂ ಪಕ್ಷಪಾತೀಯ ನಿಲುವುಗಳಿಗೆ ಅತಿಯಾಗಿ ಸ್ಪಂದಿಸಬೇಡಿ.
೧೦) ಪ್ರಮಾಣಿಸಿ ನೋಡುವ ಪತ್ರಿಕೋದ್ಯಮವನ್ನು ಅನುಸರಿಸಿ; ವಾದವನ್ನು ಹೇರುವುದಕ್ಕೆ ಹೋಗಬೇಡಿ. ವರದಿ ಆಧಾರಿತ ಪತ್ರಿಕೋದ್ಯಮವನ್ನು ನೀವು ಮಾಡದಿದ್ದರೆ ನೀವು ಮಾಡಿದ್ದು ಪತ್ರಿಕೋದ್ಯಮವೇ ಅಲ್ಲ.
೧೧) ಮಾಹಿತಿಯನ್ನು ಪಡೆಯಲು ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳಿ. ವಿಶ್ವಾಸಾರ್ಹ ಮಾಹಿತಿಯನ್ನು ಸಕಾಲಿಕವಾಗಿ, ಕ್ರಿಯಾಶೀಲವಾಗಿ ನೀಡುವ ಬಗೆಯನ್ನು ಅರಿತುಕೊಳ್ಳಿ.
೧೨) ಹೊವಾರ್ಡ್ ಓವೆನ್ಸ್‌ರವರ ಪತ್ರಿಕೋದ್ಯಮವನ್ನು ಉಳಿಸಲು ಪತ್ರಕತೃರು ಮಾಡಬಹುದಾದ ೧೨ ಸಂಗತಿಗಳನ್ನು'' ಓದಿ ಮತ್ತು ಗೌರವಿಸಿ. ಆದರೆ ವಿಷಯಕ್ಕೂ ವಿಷಯವನ್ನು ರವಾನಿಸುವ ಮಾಧ್ಯಮಕ್ಕೂ ಇರುವ ವ್ಯತ್ಯಾಸದ ಬಗ್ಗೆ ಗೊಂದಲ ಇಟ್ಟುಕೊಳ್ಳಬೇಡಿ.
ಈಗ ಹೋವಾರ್ಡ್ ಓವೆನ್ಸ್ ಏನು ಹೇಳುತ್ತಾರೆ ಎಂಬುದನ್ನು ಬರೆಯುತ್ತೇನೆ:
೧) ಬ್ಲಾಗಿಂಗ್ ಮಾಡಿ. ಅಂದರೆ ನಿಮ್ಮ ಅಭಿವ್ಯಕ್ತಿಗಾಗಿ ಒಂದು ಜಾಲತಾಣವನ್ನು ಆರಿಸಿಕೊಳ್ಳಿ. ಅದಕ್ಕಿಂತ ಹೆಚ್ಚಾಗಿ ಬ್ಲಾಗ್‌ಗಳನ್ನು ಓದಿ. ಪ್ರತಿದಿನವೂ ನಇಮಗೆ ಆಸಕ್ತಿ ಇರುವ ಮತ್ತು ನಿಮ್ಮ ವಿಷಯತಜ್ಞತೆಯನ್ನು ಹೆಚ್ಚಿಸುವ ಮಾಹಿತಿಗಳನ್ನು ನೀಡುವ ಬ್ಲಾಗ್‌ಗಳನ್ನು ಗಮನಿಸಿ.
೨) ನಿರ್ಮಾಪಕರಾಗಿ. ಡಿಜಿಟಲ್ ರಎಕಾರ್ಡರ್ ತೆಗೆದುಕೊಳ್ಳಿ. ಕ್ಯಾಮೆರಾ ಖರೀದಿಸಿ. ವಿಡಿಯೋ ಕ್ಯಾಮೆರಾ ಆದರೆ ತುಂಬಾ ಒಳ್ಳೆಯದು. ಪಠ್ಯವನ್ನೂ ಮೀರಿದ ದೃಶ್ಯಮಾಹಿತಿಯನ್ನು ನಿರ್ಮಿಸಿ. ನಿಮ್ಮ ಕೆಲಸದ ಭಾಗವಾಗಿ ಇದನ್ನು ಮ&a
mp;#
3262;ಡಲಾಗದಿದ್ದರೆ ಕೊನೇಪಕ್ಷ ಖಾಸಗಿಯಾದರೂ ಇದನ್ನು ಮಾಡಿ. ಇಂಥ ವಿಡಿಯೋಗಳನ್ನು ಯೂ ಟ್ಯೂಬ್‌ಗೋ, ಫ್ಲಿಕರ್‌ಗೋ ಅಪ್‌ಲೋಡ್ ಮಾಡಿ.
೩) ಭಾಗವಹಿಸಿ. ಬ್ಲಾಗ್‌ಗಳನ್ನು ಓದುವ ಹಾಗೆಯೇ ಅವುಗಳಲ್ಲಿ ಭಾಗವಹಿಸಿ. ಅಲ್ಲಿರುವ ಲೇಖನಗಳಿಗೆ ಪ್ರತಿಕ್ರಿಯೆ ಬರೆಯಿರಿ. ನೀವು ದಿನಾಲೂ ಓದುವ ಪತ್ರಿಕೆಯ ಜಾಲತಾಣದಲ್ಲಿ ನಿರಂತರವಾಗಿ ಪ್ರತಿಕ್ರಿಯೆಗಳನ್ನು ಬರೆಯಿರಿ.
೪) ನಿಮ್ಮದೇ ಜಾಲತಾಣ ನಿರ್ಮಿಸಿಕೊಳ್ಳಿ. ವೆಬ್‌ಸೈಟ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳಲು ಇದು ತುಂಬಾ ಸಹಕಾರಿ. ಯಾಕೆಂದರೆ ಬ್ಲಾಗ್‌ಗಿಂತ ಇವು ಭಿನ್ನ. ನಿಮಗೆ ಕಲಿಯುವ ತಾಕತ್ತಿತ್ತದರೆ ಎಚ್ ಟಇ ಎಂ ಎಲ್, ಕೋಲ್ಡ್ ಫ್ಯೂಝನ್, ಪಿ ಎಚ್ ಪಿ, ಜಾವಾಸ್ಕ್ರಿಪ್ಟ್ ಕಲಿಯಿರಿ.
೫) ಜಾಲಶಿಕ್ಷಿತರಾಗಿ. ಫ್ಲಾಶ್ ಎಂದರೇನು, ಅರ್ ಎಸ್ ಎಸ್ ಎಂದರೇನು (ರಾ.ಸ್ವ.ಸಂಘ ಎನ್ನಬೇಡಿ), ಎಕ್ಸ್ ಎಂ ಎಲ್, ಎಚ್ ಟಿ ಟಿ ಪಿ, ಎಫ್ ಟಿ ಪಿ, ಐ ಪಿ – ಹೀಗೆ ತಾಂತ್ರಿಕ ಪರಿಭಾಷೆಯನ್ನು ಅರಿತುಕೊಳ್ಳಲು ಯತ್ನಿಸಿ.
೬) ಅರ್ ಎಸ್ ಎಸ್ ನ್ನು (ರಿಯಲಿ ಸಿಂಪಲ್ ಸಿಂಡಿಕೇಟ್) ಬಳಸಿ. ಇದರಿಂದಾಗಿ ನಿಮಗೆ ಬೇಕಾದ ಮೂಲದಿಂದ ಬೇಕಾದ ಮಾಹಿತಿ ನಿಮಗಾಗಿ ನಿಮ್ಮ ಗಣಕಕ್ಕೇ ಬಂದು ಬೀಳುತ್ತದೆ.
೭) ಆನ್‌ಲೈನ್ ಖರೀದಿ ಹೆಚ್ಚಿಸಿ.
೮) ಮೊಬೈಲ್ ಸಾಧನಗಳನ್ನು ಬಳಸಿ. ವಿಡಿಯೋ ಐ ಪಾಡ್ ಖರೀದಿಸಿ.
೯) ಡಿಜಿಟಲ್ ಮಾಹಿತಿಗಳನ್ನು ಸದಾ ಕಬಳಿಸುವುದಕ್ಕೆ ತಯಾರಾಗಿ. ಓವಿ, ಇಂಟರ್‌ನೆಟ್, ಹೀಗೆ ಯಾವಾಗಲೂ ಸುದ್ದಿಯ ಬೆಂಬತ್ತಿ.
೧೦) ಕಲಿಕೆಯನ್ನು ಬೆಳೆಸಿಕೊಳ್ಳಿ. ಇಂದು ತಂತ್ರಜ್ಞಾನ ಮತ್ತು ಸಂಸ್ಕೃತಿ ಎರಡೂ ಬದಲಾಗುತ್ತಿವೆ. ನಿಮಗೆ ಕಲಿಕೆಯ ಹುಮ್ಮಸ್ಸು ಇರದಿದ್ದರೆ ಕಾಲಕ್ಕೆ ತಕ್ಕಂತೆ ಇರಲಾಗುವುದಿಲ್ಲ. ಮುಂದೆ ಮೂಡಬಹುದಾದ ಜಗತ್ತನ್ನು ಎದುರಿಸುವ ಸಾಮರ್ಥ್ಯ ಬರುವುದು ಕಲಿಯುವವರಿಗೆ ಮಾತ್ರ.
೧೧) ನೀವು ಏನನ್ನು ಕಲಿಯುತ್ತಿದ್ದೀರಿ ಎಂಬುದನ್ನು ನಿಮ್ಮ ಸಹ ಉದ್ಯೋಗಿಗಳಿಗೆ ತಿಳಿಸಿಹೇಳಿ. ನೀವೇ ಬದಲಾವಣೆಯ ನೇರ ಪ್ರತಿನಿಧಿಗಳಾಗಿ. ಹೊಸ ಹೊಸ ಮಾಹಿತಿ ಸಾಧನಗಳ ಬಗ್ಗೆ ನ&
#326
4;ವೇ ಹೆಚ್ಚು ಮಾಹಿತಿಯನ್ನು ಕೊಡುವವರಾಗಿ.
೧೨) ಕೊನೆಯದಾಗಿ ಮಾರ್ಕ್ ಬ್ರಿಗ್ಸ್ ಬರೆದ ಜರ್ನಲಿಸಮ್ ೨.೦' ಪುಸ್ತಕವನ್ನು ಓದಿ. ಈ ಮೇಲೆ ತಿಳಿಸಿದ ಎಲ್ಲ ಅಂಶಗಳನ್ನು ಹೇಗೆ ಕಲಿಯಬೇಕು ಎಂಬ ಬಗ್ಗೆ ಇದರಲ್ಲಿ ಸಾಕಷ್ಟು ಮಾಹಿತಿಗಳಿವೆ.
ಇಷ್ಟು ಹೇಳಿದ ಮೇಲೆ ಓವೆನ್ಸ್ ಉಪಸಂಹಾರ ಮಾಡಿದ್ದು ಹೀಗೆ:
ನೀವು ಕಲಿಯಬೇಕು ಎಂದು ನಿಮ್ಮ ಬಾಸ್ ಹೇಳುವವರೆಗೆ ನೀವು ದಯಮಾಡಿ ಕಾಯಬೇಡಿ. ನಿಮ್ಮ ಕೆಲಸ ಸಂಬಳ ತೆಗೆದುಕೊಳ್ಳುವುದು ಮಾತ್ರ,. ನಿಮ್ಮ ವೃತ್ತಿ ಏನು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಿ. ನಿಮ್ಮ ವೃತ್ತಿಜೀವನಕ್ಕೆ ನಿಮ್ಮ ಬಾಸ್ ಕಾರಣೀಭೂತರಾಗುವುದಿಲ್ಲ. ನೀವೇ. ಮುದ್ದಾಂ!! ಬೇರೆ ಯಾರಾದರೂ ಬಂದು ಬದಲಾವಣೆ ಮಾಡಲಿ ಎಂದು ಕಾಯಬೇಡಿ. ನಿಮ್ಮ ಸ್ವಂತ ಲಾಭಕ್ಕಾಗಿಯೇ ನೀವು ಬದಲಾವಣೆಯನ್ನು ಮಾಡಲು ಆರಂಭಿಸಿ. ಅಕಸ್ಮಾತ್ ನಿಮಗೆ ಒಬ್ಬ ಒಳ್ಳೆಯ ಬಾಸ್ ಸಿಕ್ಕಿದರೆ, ಸಂತೋಷ. ನಿಮಗೆ ಹೆಚ್ಚು ಲಾಭ.
ಮಿತ್ರಮಾಧ್ಯಮ ಜಾಲತಾಣದ ಕಲಿಯುಗ ಅಂಕಣದಲ್ಲಿ ನಾನು ಓವೆನ್ಸ್‌ರ ಮಾತುಗಳನ್ನೂ ಮಾರ್ಕ್ ಬ್ರಿಗ್ಸ್‌ರವರ ಪುಸ್ತಕವನ್ನೂ ಇಟ್ಟಿದ್ದೇನೆ. ಅಂತರಜಾಲಕ್ಕೆ ಹೋಗಿ ಈ ಉಚಿತಪುಸ್ತಕವನ್ನು ನಿಮ್ಮದಾಗಿಸಿಕೊಳ್ಳಬಹುದು.
ನಿಮಗೆ ಕಷ್ಟವಾದರೆ ಇಂಟರ್‌ನೆಟ್ ಮೂಲಕ ಈ ಲಿಂಕ್‌ಗಳನ್ನು ಸಂಪರ್ಕಿಸಿ: http://beluru.googlepages.com/Journalism_20.pdf
http://beluru.googlepages.com/Twelvethingsjournalistscandotosavejo.pdf
ಈ ಮಾತುಗಳು ಕೇವಲ ಪತ್ರಿಕೋದ್ಯಮದ ಬಗ್ಗೆ ಮಾತ್ರ ಅನ್ವಯಿಸುತ್ತವೆ ಎಂದೇನೂ ಇಲ್ಲ. ಕಲಿಕೆಯ ತವಕ ಇರುವವರೆಲ್ಲರೂ ತಮ್ಮ ವಿಷಯಕ್ಕೆ ಈ ಅಂಕಣವನ್ನು ಹೊಂದಿಸಿಕೊಳ್ಳಬಹುದು!
(ಗಮನಿಸಿ: ಮೇಲೆ ತಿಳಿಸಿದ ಜಾಲತಾಣದಲ್ಲಿ ನಾನು ನಿಮ್ಮ ಮಾಹಿತಿಗಾಗಿ ಹಲವು ಪುಸ್ತಕಗಳನ್ನು, ತಂತ್ರಾಂಶಗಳನ್ನು ಇಟ್ಟಿದ್ದೇನೆ. ಕೇವಲ ವೈಯಕ್ತಿಕ ಬಳಕೆಗಾಗಿ ಮತ್ತು ಮಾಹಿತಿ ಹಂಚಿಕೆಗಾಗಿ ಇದನ್ನು ಬಳಸಿಕೊಳ್ಳಲು ನೀವು ಸ್ವತಂತ್ರರು! )