ಸಮೀಕರಣ
೨೦-೭-೮೮
ಬೆಂಗಳೂರು
ನಿನ್ನ ಮುತ್ತು ನನ್ನ ಗಲ್ಲ ಸಮೀಕರಣವಾದವೇ?
ನಿನ್ನ ಪ್ರಶ್ನೆ ನನ್ನುತ್ತರ ಸಮೀಕರಣವಾದವೇ
ನಿನ್ನ ಕಣ್ಣು ನನ್ನ ರೆಪ್ಪೆ ಸಮೀಕರಣವಾದವೇ
ಸಮೀಕರಣ ಸೂತ್ರವೆಲ್ಲ ಸಮೀಕರಣವಾದವೇ?
ನಿನ್ನ ನೆನಪು ನಿಟ್ಟುಸಿರು ಸಮೀಕರಣವಾದವೇ
ಬೆರಳಿಗೆ ಬೆರಳೊಂದು ತಾಗಿ ಸಮೀಕರಣವಾದವೇ
ಹೊಸಿಲು ಮತ್ತು ರಂಗವಲ್ಲಿ ಸಮೀಕರಣವಾದವೇ
ಸಮೀಕರಣ ಸೂತ್ರವೆಲ್ಲ ಸಮೀಕರಣವಾದವೇ?
ಗಡಿಯಾರದ ಕ್ಷಣಗಳೆಲ್ಲ ಸಮೀಕರಣವಾದವೇ
ಸೂರ್ಯಕಿರಣ ಕಾಂತಿಯೆಲ್ಲ ಸಮೀಕರಣವಾದವೇ
ಪಾಪಿನ್ಸಿನ ಬಣ್ಣಗಳೂ ಸಮೀಕರಣವಾದವೇ
ಸಮೀಕರಣ ಸೂತ್ರವೆಲ್ಲ ಸಮೀಕರಣವಾದವೇ?
ಕುಂಕುಮಕ್ಕೆ ಹಣೆಗೆರೆಗಳು ಸಮೀಕರಣವಾದವೇ
ಕಾಲುಂಗುರ ಕೈಗೆ ಕೈ ಸಮೀಕರಣವಾದವೇ
ಎದೆಗೆ ಎದೆಯ ಭದ್ರತೆಗಳು ಸಮೀಕರಣವಾದವೇ
ಸಮೀಕರಣ ಸೂತ್ರವೆಲ್ಲ ಸಮೀಕರಣವಾದವೇ?
ನಾಳೆ ನಿನ್ನ ಕಾಲಮಾನ ಸಮೀಕರಣವಾದವೇ
ಇಂದು ನಿನ್ನ ಹೆಜ್ಜೆ ಹಗಲು ಸಮೀಕರಣವಾದವೇ
ಹೇಳೆ ನೀನು ನಾನು ಇಲ್ಲಿ ಸಮೀಕರಣವಾದೆವೇ
ಸಮೀಕರಣ ಸೂತ್ರದಲ್ಲಿ ಸಮೀಕರಣವಾದೆವೇ
ಸಮೀಕರಣ ಸೂತ್ರದಲ್ಲಿ ಜಾರಿಬಿದ್ದೇವೇ?
ಹೇಳಿ ಕೇಳಿ ಹಗಲುಗನಸು ಕರಗುತ್ತಿದ್ದವೇ?