ಖುಷಿ ಕೊಡದ ಕೆಲಸ ಬಿಡಿ ; 'ವರಿ' ಇಲ್ದೆ ಹೆಜ್ಜೆ ಇಡಿ
ಕೊನೆಗೂ ನಾನು ನನ್ನ ವೃತ್ತಿಜೀವನದ ಹದಿನಾರನೇ ಕೆಲಸವನ್ನು ಬಿಡುತ್ತಿದ್ದೇನೆ!
ಮೊದಲನೇ ಕೆಲಸ ಯಾವುದು, ಈ ವಾರವಷ್ಟೇ ಬಿಟ್ಟ ಕೆಲಸ ಯಾವುದು, ಅವತ್ತಿನ ಸಂಬಳ ಎಷ್ಟು, ಇವತ್ತಿನ ಗಳಿಕೆ ಎಷ್ಟಾಗಿತ್ತು ಎಂಬ ಲೆಕ್ಕಾಚಾರಗಳನ್ನೆಲ್ಲ ನಿಮಗೆ ತಿಳಿಸುತ್ತ ನನ್ನನ್ನೇ ನಾನು ವೈಭವೀಕರಿಸಿಕೊಳ್ಳುವುದಕ್ಕೆ ಈ ಅಂಕಣವನ್ನು ಬಳಸಲಾರೆ. ಕೆಲಸ ಬಿಡುವುದು ಮತ್ತು ಸೇರುವುದೇ ನನ್ನ ಜಾಯಮಾನವೇನೋ ಎಂದು ತಿಳಿದರೆ ತಪ್ಪು ನಿಮ್ಮದಲ್ಲ. ಆದರೆ ಖುಷಿ ಇರುವಷ್ಟು ದಿನವಷ್ಟೇ ಕೆಲಸ ಮಾಡುವೆ ಎಂದಷ್ಟೆ ಇಲ್ಲಿ ಹೇಳಬಲ್ಲೆ. ಪ್ರತಿಯೊಂದು ಕೆಲಸವನ್ನು ಸೇರುವುದಕ್ಕೆ ವಿಶೇಷ ಕಾರಣಗಳಿದ್ದವು ; ಬಿಡಲೂ ವಿಭಿನ್ನವಾದ ಕಾರಣಗಳಿದ್ದವು. ದೋಸ್ತಿಯ ಮೇಲೆ ಸೇರಿದ ಕೆಲಸಗಳನ್ನೂ ಕಟು ಅನುಭವದ ಮೇಲೆ ಬಿಟ್ಟ ಮೇಲೆ ಅಪರಿಚಿತರ, ನವಪರಿಚಿತ ಸಂಸ್ಥೆಗಳ ಬಳಿ ಮಾಡುತ್ತಿದ್ದ ಕೆಲಸ ಬಿಡುವುದೇನು ದೊಡ್ಡದು ಹೇಳಿ!
ಕೆಲಸದ ಖುಷಿಯ ಬಗ್ಗೆ ಮಾತನಾಡುವಾಗೆಲ್ಲ ನನಗೆ ಹಿರಿಯ ಪತ್ರಕರ್ತ ವಿನೋದ್ ಮೆಹ್ತಾ ನೆನಪಾಗುತ್ತಾರೆ. ಔಟ್‌ಲುಕ್ ಸೇರುವ ಮುನ್ನ ಅವರು ಹದಿನಾರು ಚಿಲ್ಲರೆ ಪತ್ರಿಕೆಗಳಲ್ಲಿ ದುಡಿದಿದ್ದರು. ನನ್ನ – ಅವರ ಹೋಲಿಕೆ ಇಲ್ಲಿಗೇ ನಿಲ್ಲುತ್ತದೆ!
ನಾನು ಹದಿನಾಲ್ಕನೇ ಕೆಲಸ ಸೇರಿದಾಗ `ಕೆಲಸ ಬಿಟ್ರಾ ? ವರಿ ಮಾಡ್ಕೋಬೇಡಿ' ಎಂಬ ಲೇಖನ ಬರೆದಿದ್ದೆ. ಅದನ್ನೇ ನಾನು ಮೆಲುಕು ಹಾಕುವುದಿಲ್ಲ. ಕೆಲಸ ಬಿಟ್ಟ ಮೇಲೆ ಇನ್ನೊಂದು ಕೆಲಸ ಸೇರುವ ಮುನ್ನ ಕೊಂಚ ರಿಫ್ರೆಶ್ ಆಗುವುದಕ್ಕೆ ಪ್ರಯತ್ನಿಸುವೆ. ನಿಮ್ಮ ಬಳಿ ಈ ವಿಷಯ ಹಂಚಿಕೊಳ್ಳುವುದಕ್ಕೂ ಇದೇ ಕಾರಣ. ಇರುವ ಕೆಲಸವ ಬಿಟ್ಟು ಇನ್ನೊಂದು ಕೆಲಸದ ಹುಡುಕಾಟದಲ್ಲಿರುವ ಎಲ್ಲರಿಗೂ ಒಂದೇ ಕಿವಿಮಾತು: ನಿಜಕ್ಕೂ ವರಿ ಮಾಡ್ಕೊಳ್ಳುವಂಥಾದ್ದು ಏನೂ ಇಲ್ಲ.
ಈ ಬಾರಿ ನಾನು ಮತ್ತೆ ಬೆಂಗಳೂರಿಗೆ ಬರಬೇಕಾಗಿದೆ. ಬಿಟ್ಟುಹೋದ ಸಂಗೀತ ಕಲಿಕೆ ಅನುಕೂಲವಾಗಲಿ ಎಂದು ಸಂಗೀತಶಾಲೆಯ ಹತ್ತಿರದಲ್ಲೇ ಮನೆ ಹುಡುಕಿದೆ. ವೃತ್ತಿಯಷ್ಟೇ ನ&a
mp;#32
46;್ಮ ಪ್ರವೃತ್ತಿಯೂ ಮುಖ್ಯ. ಒಳ್ಳೆಯ ಸಂಬಳಕ್ಕಾಗಿ ಈ ಏಳೆಂಟು ತಿಂಗಳುಗಳ ಕಾಲ ನನ್ನೆಲ್ಲ ಸಂಗೀತ ಕಲಿಕೆಯನ್ನು ಬಲಿಕೊಟ್ಟ ಬಗ್ಗೆ ನನಗೆ ತೀರಾ ವಿಷಾದವಿದೆ. ಈ ಸಲದ ದೊಡ್ಡ ಅನುಭವವೇ ಇದು. ನನ್ನ ಸಂಗೀತದ ಗುರುಗಳೇ ನನಗೆ ಮನೆ ಹುಡುಕಲು ನೆರವಾದರು.
ಆದ್ದರಿಂದ ಈ ಸಲದ ಹೊಸ ಪಾಠ: ಕಿಸೆಯನ್ನು ಭರ್ತಿ ಮಾಡುವ ಕೆಲಸ ಎಂಬ ಒಂದೇ ಕಾರಣಕ್ಕೆ ನಿಮ್ಮ ಹವ್ಯಾಸಗಳನ್ನು ಬಲಿಕೊಡಬೇಡಿ. ಬದುಕಿನಲ್ಲಿ ಹವ್ಯಾಸಗಳ ಬಗ್ಗೆ ತೀವ್ರವಾದ ಪ್ಯಾಶನ್ – ಗಾಢಾನುರಕ್ತಿ (ಫ್ಯಾಶನ್ ಅಲ್ಲ) ಇಟ್ಟುಕೊಳ್ಳಿ. ನಿಮ್ಮ ಪ್ರವೃತ್ತಿಯೇ ನಿಮ್ಮ ವೃತ್ತಿಬದುಕಿನ ಉತ್ಸಾಹವನ್ನೂ ಹೆಚ್ಚಿಸುತ್ತದೆ.
ಪದೇ ಪದೇ ಕೆಲಸ ಬಿಡುವುದರಿಂದ ಇಮೇಜ್ ಹಾಳಾಗುತ್ತದೆ ಎಂಬ ಇನ್ನೊಂದು ಭ್ರಮೆಯ ಬಗ್ಗೆ ನಿಮ್ಮನ್ನು ಎಚ್ಚರಿಸಲು ಬಯಸುವೆ. ನಿಮ್ಮಲ್ಲಿ ಯಾವುದೇ ಕೆಲಸವನ್ನು ನೀಟಾಗಿ ಮತ್ತು ವೃತ್ತಿಪರವಾಗಿ ಮಾಡುವ ಕಸುಬುಗಾರಿಕೆ ಇದ್ದರೆ ಇಮೇಜ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನನ್ನ ಈ ಎರಡನೇ ಕಿವಿಮಾತಿನ ಕೊರಾಲರಿ (ಉಪಸಿದ್ಧಾಂತ) ಹೀಗಿದೆ: ಯಾವುದೇ ಕೆಲಸವನ್ನೂ ಮಾಡಿದರೂ, ಅದರಲ್ಲಿ ಕಸುಬುಗಾರಿಕೆ ಬೆಳೆಸಿಕೊಳ್ಳಿ.
`ಮನಸ್ಸಿದಲ್ಲಿ ಮಾರ್ಗ' ಕಾರ್ಯಕ್ರಮಕ್ಕಾಗಿ ಧಾರವಾಡ ಆಕಾಶವಾಣಿಗಾಗಿ ನಾನು ಕೊಟ್ಟ ಪುಟ್ಟ ಮತ್ತು ದಿಢೀರ್ ಸಂದರ್ಶನದಲ್ಲೂ ಇದೇ ಮಾತನ್ನು ಹೇಳಿದ್ದೇನೆ. ಯುವಕರಿಗೆ ಈ ಮಾತು ಹೆಚ್ಚು ಅನ್ವಯಿಸುತ್ತದೆ. ಮೊದಲ ಎರಡನೇ ಕೆಲಸದ ನಡುವೆ ಹೆಚ್ಚು ಅಂತರವಿರಲಿ! ಮೊದಲ ಕೆಲಸದಲ್ಲಿ ಕಸುಬುಗಾರಿಕೆಯನ್ನು ಕಲಿತು ಎರಡನೇ ಕೆಲಸದಲ್ಲಿ ಅದನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಿ. ಮೂರ್‍ನಾಲ್ಕಾದ ಮೇಲೆ ನಾನು ಹೇಳುವುದೇನೂ ಇರುವುದಿಲ್ಲ. ನಿಮ್ಮ ತಾಜಾ ಅನುಭವಗಳಿಂದ ನಾನೂ ಕಲಿಯಬಹುದು. ಕೆಲಸಗಾರರಿಗೆ ಕೆಲಸ ಇದ್ದೇ ಇರುತ್ತದೆ. `ಯಾವುದಾದರೂ ಕೆಲಸ ಮಾಡುತ್ತೇನೆ' ಎಂಬ ಹೇಳಿಕೆಯನ್ನು ಮಾತ್ರ ಕೊಡಬೇಡಿ. `ಸರ್, ನಾನು ಈ ಮೂರು ಕೆಲಸಗಳನ್ನು ಮಾಡುತ್ತೇನೆ ; ಈ ನಾಲ್ಕು ಕೆಲಸಗಳನ್ನು ಕಲಿಯುತ್ತಿದ್ದೇನೆ ; ಈ ವಿಷಯದ ಬಗ್ಗೆ ನನಗೆ ಏನೂ ಗೊತ್ತಿಲ್&
;#32
50;' – ಹೀಗೆ ಸ್ಪಷ್ಟವಾಗಿ ಕೆಲಸಗಳನ್ನು ಪಟ್ಟಿ ಮಾಡಿ. ಒಂದು ಸಲ ಹೀಗೆ `ನಾನು ಯಾವ ಕೆಲಸವನ್ನಾದರೂ ಮಾಡುತ್ತೇನೆ' ಎಂದ ಡಾಕ್ಟರೇಟ್ ಪಡೆದ ನಿರುದ್ಯೋಗಿಗೆ `ಯಶವಂತಪುರದಲ್ಲಿ ಅಕ್ಕಿ ಮೂಟೆ ಹೊರುತ್ತೀಯಾ?' ಎಂದು ಕೇಳಿ ತಬ್ಬಿಬ್ಬು ಮಾಡಿದ್ದೆ. ಈ ಮಾಕಿಗೆ ಕಾರಣವೂ ಇತ್ತು. ಮುದ್ರಣ ಮಾಧ್ಯಮದಲ್ಲಿ ಪತ್ರಕರ್ತನಾಗಬೇಕೆಂಬ ಕನಸು ಹೊದ್ದುಕೊಂಡು ಬೆಂಗಳೂರಿನ ಛಳಿಯಲ್ಲಿ ಹುಡುಕಿದಾಗ ನನಗೆ ಸಿಕ್ಕಿದ್ದು ಅಟೆಂಡರ್ ಕೆಲಸ; ಕಸ ಗುಡಿಸುವುದು, ಚಾ ತರುವುದು, ಪ್ರಕಾಶಕರ ಟೇಬಲ್ ಒರೆಸುವುದು…. ಹೀಗೆ.
ಹೌದು. ನನ್ನ ಮೂರನೇ ಕಿವಿಮಾತು: ಕಸುಬು ಕಲಿಯುವುದಕ್ಕಾಗಿ, ಬದುಕುವುದನ್ನು ತಿಳಿಯುವುದಕ್ಕಾಗಿ ಹೊಸ ಅನುಭವಗಳಿಗೆ ಸದಾ ತೆರೆದುಕೊಳ್ಳಿ. ಅದು ಕಹಿ ಇದ್ದರೂ ಪರವಾಗಿಲ್ಲ; ನಿಮ್ಮನ್ನು ಹದ ಮಾಡುತ್ತದೆ. ನನ್ನ ಎರಡನೇ, ಹತ್ತನೇ ಮತ್ತು ಹದಿನಾರನೇ ಕೆಲಸದ ಹಾಗೆ! ಹನ್ನೆರಡನೇ ಮತ್ತು ಹದಿಮೂರನೇ ಕೆಲಸಗಳು ಕೊಟ್ಟ ಸಿಹಿ ಅನುಭವಗಳು ಈಗಲೂ ನನ್ನ ಸ್ಮರಣೆಯಲ್ಲಿವೆ. ಬಂದದ್ದನ್ನು ಅನುಭವಿಸಿ ಎಂದು ಹೇಳುತ್ತಿಲ್ಲ.
ನಾಲ್ಕನೆಯದು: ಕೆಲಸವನ್ನು ಬದಲಿಸಿದರೂ, ಒಂದು ಕ್ಷೇತ್ರಕ್ಕೆ, ಒಂದು ವಿಷಯಕ್ಕೆ ಅಂಟಿಕೊಳ್ಳಿ. ಲೆಕ್ಕಪತ್ರವನ್ನು ನೋಡಿಕೊಳ್ಳುವಕೆಲಸ ಎಲ್ಲ ಕಂಪೆನಿಗಳಲ್ಲೂ ಇರುತ್ತದೆ. ಮಾಧ್ಯಮಕ್ಕೆ ಸಂಬಂಸಿದ ಕೆಲಸಗಳು ಚಿತ್ರವಿಚಿತ್ರವಾಗಿ ಇರುತ್ತವೆ. ಕಲಾವಿದರು ಸಿನೆಮಾಗೂ ಸೆಟ್‌ಗಳನ್ನು ಕಂಪ್ಯೂಟರಿನಲ್ಲಿ ವಿನ್ಯಾಸ ಮಾಡುವ ಕೆಲಸ ಮಾಡಬಹುದು. ಸಾಫ್ಟ್‌ವೇರ್ ಕಲಿತವರು ಕಂಪ್ಯೂಟರ್ ಗೇಮ್‌ಗಳನ್ನು ಸೃಜಿಸಬಹುದು. ಒಂದೇ ಕೆಲಸದ ಪರಿಣತಿ ಇದ್ದವರು ವಿವಿಧ ರಂಗಗಳಿಗೆ ಒಡ್ಡಿಕೊಂಡರೆ ಅದರ ಮಜಾನೇ ಬೇರೆ!
ಖುಷಿ ಇದ್ದರೆ ಕೆಲಸವೂ ಸರಾಗವಾಗಿ ನಡೆಯುತ್ತದೆ. ನೀವು ಖುಷಿಯಿಂದ ಕೆಲಸ ಮಾಡಿದರೆ ಒಂದು ಒಳ್ಳೆಯ ಸಂಸ್ಥೆ ಅದನ್ನು ಖಂಡಿತ ಗುರುತಿಸುತ್ತದೆ. ಹಾಗೆ ಗುರುತಿಸಿಲ್ಲ ಎಂದಾದರೆ, ಕೆಲಸ ಬಿಡಿ. ನಿಮ್ಮ ಖುಷಿಯನ್ನೇ ನಿರ್ಬಂಸುವ ಯಜಮಾನರನ್ನೂ ದೂರ ಇಡಿ. ಖುಷಿಯೇ ಯಶಸ್ಸಿನ ಮೂಲ. ಕೇವಲ ಕಠಿಣ ಶ್ರಮ ಹಾಕಿದರೆ ಏನೂ &
amp;
#3244;ರುವುದಿಲ್ಲ. ನೂರಾರು ಸಲ ಪರ್ವತಗಳನ್ನು ಹತ್ತಿ ಇಳಿದ ಸುಸ್ತಿನಲ್ಲೂ ನಮ್ಮ ಪರ್ವತಾರೋಹಿ ಅರುಣಾಚಲ ಶಾಸ್ತ್ರಿಯವರು ದಾರಿಯುದ್ದಕ್ಕೂ ಕಂಡ ಹೂವುಗಳನ್ನು ಕ್ಲಿಕ್ ಮಾಡಿದ್ದನ್ನು ಒಮ್ಮೆ ನೋಡಿ. ಅವರ ದಣಿವಿನ ಪಸೆ ಅಲ್ಲಿ ಕಾಣಿಸುವುದೇ ಇಲ್ಲ. ಎಲ್ಲ ಚಿತ್ರಗಳಲ್ಲೂ ಹಿಮಾಲಯದ ಆರ್ದ್ರತೆ; ಮಾರ್ದವತೆ; ನೀರವತೆ; ಮತ್ತು ಛಾಯಾಗ್ರಹಣದ ವೃತ್ತಿಪರತೆ. ಶಾಸ್ತ್ರಿಯವರ ತದೇಕಚಿತ್ತತೆ. ಅಪಘಾತವೊಂದರಿಂದ ಚೇತರಿಸಿಕೊಳ್ಳುತ್ತಿರುವ ಅವರೀಗ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎಂದು ಕೇಳಿ ಬಲ್ಲೆ. `ಉದಯವಾಣಿ' ದೀಪಾವಳಿ ವಿಶೇಷಾಂಕದಲ್ಲಿ ಅವರ ಚಿತ್ರಲೇಖನಗಳಿವೆ, ನೋಡಿ.
ಎಲ್ಲರೂ ಕೆಲಸ ಬಿಡುತ್ತ ಹೋದರೆ ಅರಾಜಕತೆಯೇ ಉಂಟಾಗುತ್ತಲ್ಲ ಮಾರಾಯ್ರೆ ಎಂದು ನೀವು ಕನವರಿಸಬಹುದು. ನಿಜ. ಇದೇ ಈಗಿನ ಟ್ರೆಂಡ್ ಎಂದು ಹೊಚ್ಚ ಹೊಸ ಮಾನವ ಸಂಪನ್ಮೂಲ ವರದಿಗಳು ಹೇಳುತ್ತಿವೆ. ಕೆಲಸವನ್ನು ಕಲಿತು ಬಿಡುವುದಕ್ಕೆ ಈಗ ತುಂಬಾ ಬೆಲೆ ಬಂದಿದೆ. ಪತ್ರಿಕೋದ್ಯಮವನ್ನು ಅರಸಿ ಬಂದವರಿಗೆ ಅಟೆಂಡರ್ ಕೆಲಸ ಸಿಗುವ ಕಾಲ ಹೋಯಿತು.
ನನ್ನ ಹದಿನೈದನೇ ಕೆಲಸದಲ್ಲಿ ನನ್ನ ಅಟೆಂಡರ್ ಆಗಿದ್ದವನೀಗ ಕೊಂಚ ಕೊಂಚವೇ ಕೋರೆಲ್ ಡ್ರಾ ಕಲಿಯುತ್ತಿದ್ದಾನೆ. ತಿಂಗಳಿಗೊಮ್ಮೆ ತಪ್ಪದೇ `ಸುಮ್ಮನೆ' ಫೋನ್ ಮಾಡಿ ತನ್ನ ಬೆಳವಣಿಗೆಯನ್ನು ತಿಳಿಸುತ್ತಾನೆ. ಅವನಿಗೆ `ಕಲಿ – ಯುವ' ಮನಸ್ಸಿದೆ ಎಂಬುದೇ ನನಗೆ ಸಮಾಧಾನ.
ಐದನೇ ಕಿವಿಮಾತು: ವರಿ ಕೊಡೋ ಕೆಲಸ ಬಿಡಿ ; ಖುಷಿ ಪಡಿ!
ಅಂದಹಾಗೆ, ನನ್ನ ಹದಿನೇಳನೇ ಕೆಲಸ ಹೇಗಿರುತ್ತದೆ ಎಂಬ ಕುತೂಹಲ ನನಗಿದೆ!
——-