ಕೆಲಸ ಬೇಕಾ ಕೆಲಸ ?
ನಮ್ಮ ದೇಶದ ಯುವಕರು ಯಾಕೆ ನಿರುದ್ಯೋಗಿಗಳಾಗಿದ್ದಾರೆ?ಯಾಕೆ ಕೆಲಸ ಖಾಲಿ ಇದ್ದರೂ ಸಂಸ್ಥೆಗಳಿಗೆ ಸರಿಯಾದ ಜನ ಸಿಗುತ್ತಿಲ್ಲ? ಇದಕ್ಕೆ ಪರಿಹಾರವೇನು? ಈ ಎಲ್ಲ ಸಂಗತಿಗಳ ಬಗ್ಗೆ ಟೀಮ್ ಲೀಸ್ ಎಂಬ ಸಂಸ್ಥೆಯು ಒಂದು ಮಹತ್ವಪೂರ್ಣವಾದ ಸಂಶೋಧನೆಯನ್ನು ನಡೆಸಿ ವರದಿಯನ್ನು ಪ್ರಕಟಿಸಿದೆ. ಆಂಗ್ಲ ಪತ್ರಿಕೆಯೊಂದರಲ್ಲಿ ಈ ಬಗ್ಗೆ ಬಂದ ವರದಿಯನ್ನು ನೋಡಿದ ಮೇಲೆ, ಮೂಲ ವರದಿಯನ್ನು ಹುಡುಕಿ ಈ ಅಂಕಣ ಬರೆದಿರುವೆ. ನೀವು ನಕಲು ಎಂದಾದರೂ ತಿಳಿಯಿರಿ, ಪರವಾಗಿಲ್ಲ; ಯಾಕೆಂದರೆ ಒಳ್ಳೆಯ ಸಂಗತಿಗಳನ್ನು ನಕಲು ಮಾಡುವುದರಲ್ಲಿ, ಮಾಹಿತಿ ಹಂಚಿಕೆಗಾಗಿ ಬಳಸುವುದರಲ್ಲಿ ನನಗೆ ಬೇಜಾರಿಲ್ಲ!
ಮೊದಲು ಕೆಲವು ಮಾಹಿತಿಗಳನ್ನು ನೋಡೋಣ:
ನಮ್ಮ ದೇಶದಲ್ಲಿ ಕೆಲಸಕ್ಕೆ ಸೇರಿದ ಶೇ. ೫೩ರಷ್ಟು ಯುವಕರಲ್ಲಿ ಕೌಶಲ್ಯದ ಕೊರತೆ ಇದೆ. ದೇಶದ ಶೇ. ೫೭ರಷ್ಟು ಯುವಕರು ಒಂದಲ್ಲ ಒಂದು ಬಗೆಯ ನಿರುದ್ಯೋಗದ ಸಮಸ್ಯೆಗೆ ಒಳಗಾಗಿದ್ದಾರೆ. ದೇಶದಲ್ಲಿ ಯಾವುದಾದರೂ ಕೆಲಸಕ್ಕೆ ಹಚ್ಚಬಲ್ಲ ಎಂಟೂಕಾಲು ಕೋಟಿ ಯುವಕರಲ್ಲಿ ಆಮೂಲಾಗ್ರ ಹೊಂದಾಣಿಕೆ ಅಗತ್ಯವಿರುವವರು ಐದೂವರೆ ಕೋಟಿ ಯುವಕರು. ಮಧ್ಯಮ ಪ್ರಮಾಣದ ಹೊಂದಾಣಿಕೆ ಬೇಕಾದವರು ಎರಡು ಕೋಟಿ ಯುವಕರು. ಇನ್ನುಳಿದವರಿಗೆ ಕೊಂಚ ತಿಳಿವಳಿಕೆ ನೀಡಿದರೆ ಸಾಕು, ಕೆಲಸಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ.
ಇಂಥ ತರಬೇತಿ ಅಗತ್ಯವಿರುವ ಯುವಕರನ್ನು ಸೂಕ್ತವಾಗಿ 'ರಿಪೇರಿ' ಮಾಡಲು ಎರಡು ವರ್ಷಗಳಿ ಯೋಜನೆ ಹಾಕಿಕೊಳ್ಳಬಹುದು. ಇದಕ್ಕೆ ತಗುಲುವ ವೆಚ್ಚ ಸುಮಾರು ಐದು ಕೋಟಿ ರೂ.ಗಳು. ಈಗಿರುವ ಬಜೆಟ್ಟಿನಲ್ಲಿ ಈ ಮೊತ್ತದ ಶೇ. ೨೫ರಷ್ಟು ಮೊತ್ತ ಇರುವುದೇನೋ ನಿಜ. ಆದರೆ ಹಣ ನೀಡಿದ ಮಾತ್ರಕ್ಕೆ ಎಲ್ಲವೂ ಆಗಿಬಿಡುವುದಿಲ್ಲ.
ಹೀಗೆ ಈ ಮೊತ್ತವನ್ನು ಸೂಕ್ತವಾಗಿ ವಿನಿಯೋಗಿಸಿದರೆ ೧೭೫೧ ಸಾವಿರ ಕೋಟಿ ರೂ. ಆಂತರಿಕ ಉತ್ಪನ್ನ ದೊರಕುತ್ತದೆ ಎಂದು ಟೀಮ್ ಲೀಸ್ ವರದಿ ಹೇಳುತ್ತದೆ.
ನಮ್ಮ ಯುವಕರು ಕಲಿಯುವ ಪಾಠಗಳಲ್ಲಿ ಶೇ. ೯೦ರಷ್ಟು ಮಾಹಿತಿಗಳು ಕೇವಲ ಪಠ್ಯರೂಪದ
&
#3246;ಾಹಿತಿಗಳು. ಶೇ. ೧೦ರಷ್ಟು ಮಾತ್ರ ಪ್ರಾಯೋಗಿಕ ಮಾಹಿತಿಗಳು. ಆದರೆ ಶೇ. ೯೦ರಷ್ಟು ಉದ್ಯೋಗಗಳಲ್ಲಿ ವೃತ್ತಿಪರ ಕೌಶಲ್ಯ ಬೇಕೇ ಬೇಕು. ಎಂಥ ವಿರೋಧಾಭಾಸ ನೋಡಿ! ಎಂಟನೇ ತರಗತಿ ಹೊತ್ತಿಗೆ ಶಾಲೆ ಬಿಡುವವರು ಶೇ. ೫೭ರಷ್ಟು ಹುಡುಗ ಹುಡುಗಿಯರು. ಶೇ. ೫೮ರಷ್ಟು ಪದವೀಧರರು ವರ್ಷಕ್ಕೆ ಪಡೆಯುವ ಒಟ್ಟು ಸಂಬಳ ೭೫ ಸಾವಿರ ರೂಪಾಯಿ ದಾಟುವುದಿಲ್ಲ.
ಭಾರತದಲ್ಲಿ ಇರುವ ಯುವ ನೌಕರರ ಸಂಖ್ಯೆ ೧೪.೫ ಕೋಟಿ. ರಿಪೇರಿ ಅಗತ್ಯವಾದ ನಿರುದ್ಯೋಗಿಗಳ ಸಂಖ್ಯೆ ೧.೧ ಕೋಟಿ. ಒಟ್ಟು ಕೆಲಸಗಳ ಸಂಖ್ಯೆ : ೪೫.೫ ಕೋಟಿ. ಇದರಲ್ಲಿ ತಿಳಿವಳಿಕೆ ಆಧಾರದ್ದು: ಶೇ. ೯.೩ರಷ್ಟು ಮಾತ್ರ. ಕೌಶಲ್ಯದ್ದು ಮೊದಲೇ ಹೇಳಿ ಹಾಗೆ ಶೇ. ೯೦ರಷ್ಟು. ತಿಳಿವಳಿಕೆ ಮತ್ತು ಕೌಶಲ್ಯ ಎರಡೂ ಬೇಕಾಗಿರುವಕೆಲಸದ ಪ್ರಮಾಣ ಶೇ. ೧ ಮಾತ್ರ. ಅಶಿಕ್ಷಿತ ನೌಕರರಲ್ಲಿ ಶೇ. ೮೦ರಷ್ಟು ಜನ ವರ್ಷಕ್ಕೆ ಕೇವಲ ೨೫ ಸಾವಿರ ರೂ.ಗಳಿಗೂ ಕಡಿಮೆ ಸಂಪಾದನೆ ಮಾಡುತ್ತಿದ್ದಾರೆ.
ಐಟಿ ಬಿಟಿ (ಇನ್‌ಫಾರ್ಮೇಶನ್ ಟೆಕ್ನಾಲಜಿ ಮತ್ತು ಬಯೋಟೆಕ್ನಾಲಜಿ) ಬಗ್ಗೆ ಮಾತನಾಡುವವರು ಈ ಮಾಹಿತಿ ಗಮನಿಸಬೇಕು: ಈಗ ಹೊರಬರುತ್ತಿರುವ ಐಟಿ ಪದವೀಧರರಲ್ಲಿ ಶೇ. ೩೦ರಷ್ಟು ಜನರು ಮಾತ್ರವೇ ಕೆಲಸ ಮಾಡುವ ಅರ್ಹತೆ ಹೊಂದಿದ್ದಾರೆ. ೨೦೧೦ರ ಹೊತ್ತಿಗೆ ಇನ್ನೂ ಐದು ಲಕ್ಷ ಸೂಕ್ತ ಐಟಿ ಪದವೀಧರರ ಅಗತ್ಯ ದೇಶಕ್ಕೆ ಒದಗಲಿದೆ. ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಭಾರತದ ಶೇ. ೨೩ರಷ್ಟು ಮ್ಯಾನೇಜ್‌ಮೆಂಟ್ ಪದವೀಧರರು ಮಾತ್ರವೇ ಕೆಲಸ ಪಡೆಯಬಲ್ಲರು.
ಇನ್ನೊಂದೆಡೆ ಹಳ್ಳಿಗಳಲ್ಲಿ ಭೂಹಿಡುವಳಿ ಪ್ರಮಾಣ ತಲಾವಾರು ೧.೩೪ ಹೆಕ್ಟೇರಿನಿಂದ (೧೯೯೧-೯೨) ೧.೦೬ ಹೆಕ್ಟೇರಿಗೆ (೨೦೦೨ – ೦೩) ಕುಸಿದಿದೆ. ದೇಶದ ಆರ್ಥಿಕತೆಯ ಮೇಲೆ ಇದೂ ಪರಿಣಾಮ ಬೀರಲಿದೆ.
ದಕ್ಷಿಣ ಕೊರಿಯಾ, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾದ ಶಿಕ್ಷಣ ಪದ್ಧತಿಯ ಬಗ್ಗೆಯೂ ಈ ವರದಿ ಬೆಳಕು ಚೆಲ್ಲಿದೆ.
ಹಾಗೆಯೇ ಈ ಟೀಮ್ ಲೀಸ್ ಸಂಸ್ಥೆಯು ಇನ್ನೇನು ಮಾಹಿತಿ ನೀಡಿದೆ ಎಂದು ಹುಡುಕಿದಾಗ ಈ ಕೆಲವು ತಾಜಾ ವರದಿಗಳು ದೊರೆತವು:
ಕೆಲಸದ ಬಗ್ಗೆ ಈಗ ಭಾರತದಲ್ಲಿ ಕಂಡುಬರುತ್&#
3236
;ಿರುವ ಪ್ರಮುಖ ಅಂಶಗಳ ಬಗ್ಗೆ ಇರುವ ವರದಿಯಲ್ಲಿ ಈ ಅಂಶಗಳಿವೆ:
ಈಗ ಲಿಂಗಭೇದ ಅಷ್ಟಾಗಿ ಕಾಣುತ್ತಿಲ್ಲ.
ಜೀವನಪರ್ಯಂತ ಒಂದೇ ಉದ್ಯೋಗ ಎಂಬುದೊಂದು ಭ್ರಮೆಯಾಗಿದೆ.
ಒಂದು ಕೌಶಲ್ಯವು ಇನ್ನೊಂದು ಕೆಲಸಕ್ಕೂ ಅನುಕೂಲವಾಗುತ್ತಿದೆ.
ವೇತನ ವ್ಯವಸ್ಥೆಯು ಈಗ ವೃತ್ತಿಸಾಧನೆಯ ಮೇಲೆ ನಿಂತಿದೆಯೇ ಹೊರತು ನಿಶ್ಚಿತ ಸಂಬಳ ಎಂಬ ಸ್ಥಿತಿ ಮಾಯವಾಗುತ್ತಿದೆ.
ಬೆಳಗ್ಗೆ ೯ರಿಂದ ಸಂಜೆ ೬ರವರೆಗೆ ಕೆಲಸ ಮಾಡಬೇಕೆಂಬ ಸಾಂಪ್ರದಾಯಿಕ ವೇಳಾಪಟ್ಟಿಯೂ ಮರೆಯಾಗುತ್ತಿದೆ. ತಾತ್ಕಾಲಿಕ ನೇಮಕಾತಿ, ಬೇಕೆಂದಾಗ ಬಂದು ಕೆಲಸ ಮಾಡುವುದು, ಅರೆಕಾಲಿಕ ಕೆಲಸಗಳು ಆದ್ಯತೆ ಪಡೆಯುತ್ತಿವೆ.
ಕೆಲವು ಮೆದು ಕೌಶಲ್ಯಗಳನ್ನೇ ಸರಿಪಡಿಸಿಕೊಂಡರೆ ಅದೇ ದೊಡ್ಡ ಕೆಲಸವನ್ನೂ ಹುಡುಕಿಕೊಡುತ್ತದೆ.
“ವಿಶೇಷತಃ " ಎಲ್ಲ ಕೆಲಸಗಳಲ್ಲೂ ಭಾಗಿಯಾಗಬಲ್ಲವರು ಸಂಸ್ಥೆಗಳಲ್ಲೆ ಹೆಚ್ಚು ಮೌಲ್ಯ ಪಡೆಯುತ್ತಾರೆ.
ಬದುಕು ಮತ್ತು ವೃತ್ತಿಯ ಬಗ್ಗೆ ಒಂದು ಪರಿಪೂರ್ಣ ನೋಟ ಇಟ್ಟುಕೊಳ್ಳುವುದೇ ಯಶಸ್ಸು ಎಂಬ ನಂಬಿಕೆ ಈಗ ಕ್ರಮೇಣವಾಗಿ ಬೇರೂರುತ್ತಿದೆ.
ಟೀಮ್ ಲೀಸ್‌ನ ಇನ್ನೊಂದು ವರದಿಯಲ್ಲಿ ಈ ಅಂಶಗಳಿವೆ: ಬೆಂಗಳೂರಿನಲ್ಲಿ ಮಾನವ ಸಂಪನ್ಮೂಲ, ಮಾರಾಟದ ಕೆಲಸಗಳಿಗೆ ಹೆಚ್ಚು ಬೇಡಿಕೆ ಇದೆ; ಮುಂಬಯಿಯಲ್ಲಿ ಲೆಕ್ಕಪರಿಶೋಧಕರಿಗೆ ಹೆಚ್ಚು ಅವಕಾಶಗಳಿವೆ. ದಿಲ್ಲಿಯಲ್ಲಿ ಆಡಳಿತ ನಿರ್ವಹಣೆಯ ಕೆಲಸಗಳಿಗೆ ಜನ ಬೇಕಾಗಿದ್ದಾರೆ. ಬೆಂಗಳೂರಿನಲ್ಲಿ ಲೆಕ್ಕಪತ್ರ – ಹಣಕಾಸು ಕೆಲಸಗಳನ್ನು ಮಾಡುವ ಪದವೀಧರರು ಮತ್ತು ಕೆಳಹಂತದ ಶಿಕ್ಷಿತರು ಹೆಚ್ಚು ವೇತನ ಪಡೆಯುತ್ತಿದ್ದಾರೆ. ಸ್ನಾತಕೋತ್ತರ ಪದವಿ ಮಾಡಿದವರಿಗೆ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸಗಳಿವೆ.
ಕೆಲಸ ಮಾಡೋರಿಗೆ ಕೆಲಸ ಇದ್ದೇ ಇರುತ್ತದೆ ಎನ್ನುವುದು ನನ್ನ ಎಂದಿನ ಮಾತು. ಅಕಸ್ಮಾತ್ ನೀವು ಕೆಲಸ ಹುಡುಕುತ್ತಿದ್ದರೆ, ಈ ಅಂಶಗಳನ್ನು ಗಮನಿಸಿ. ಕೆಲಸ ಹುಡುಕಬೇಕಾದರೆ ಕೆಲಸಗಳ ಚಹರೆ ಬದಲಾಗುತ್ತಿರುವ ಬಗ್ಗೆಯೂ ಗಮನಿಸುತ್ತ ಇರಬೇಕು. ಅದಿಲ್ಲವಾದರೆ ನೀವು ಖಂಡಿತ ನಾಳೆ ಇರ್ರ&am
p;#3
263;ಲವೆಂಟ್ ಆಗುತ್ತೀರಿ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: www.teamlease.com