ಫ್ರೀ ಸಾಫ್ಟ್‌ವೇರ್ ಚಳವಳಿ, ಇರಲಿ ನಿಮ್ಮದೂ ಬಳುವಳಿ
This article was published in Sudha Weekly in the month of February 2006. I wrote this article out of my experience and knowledge which I gained over a period of eight years.
ಏನ್ರೀ ಈ ಶೀರ್ಷಿಕೆ? ಫ್ರೀ ಸಾಫ್ಟ್‌ವೇರ್ , ಚಳವಳಿ… ಏನಿದೆಲ್ಲ? ಸ್ವಲ್ಪ ಬಿಡಿಸಿ ಹೇಳ್ತೀರಾ ಅಥವಾ….
ಯಾಕ್ರೀ ಅನುಮಾನ… ನಿಮಗೆ ಕಂಪ್ಯೂಟರ್ ಗೊತ್ತಲ್ವ, ಅದರಲ್ಲಿ ಕೆಲಸ ಮಾಡೋದು ಹ್ಯಾಗೆ? ಅದರ ಮೆದುಳಿಗೆ ವಿಷಯ ತುಂಬಿಸ್ಬೇಕು ತಾನೆ? ಇದನ್ನೇ ಸಾಫ್ಟ್‌ವೇರ್ ಅಥ್ವಾ ತಂತ್ರಾಂಶ ಅಂತ ಕರೀತಾರೆ.
ಅದೇನೋ ಸರಿ, ಆದ್ರೆ ಅದು ಫ್ರೀನಾ? ಬಿಟ್ಟಿಯಾಗಿ ಸಿಗುತ್ತಾ?
ಫ್ರೀ ಅಂದ್ರೆ ಬಿಟ್ಟಿ ಅನ್ನೋ ಅರ್ಥದಲ್ಲಿ ಇಲ್ಲಿ ಬಳಸಿಲ್ಲ ಅನ್ನೋದನ್ನ ನಿಮಗೆ ಬಿಡಿಸಿ ಹೇಳಬೇಕು. ಇಲ್ಲಿ ಫ್ರೀ ಅಂದ್ರೆ ಮುಕ್ತ, ಸ್ವತಂತ್ರ ಅಂತ್ಲೇ ಹೊರತು ಬಿಟ್ಟಿ ಅಂತಲ್ಲ. ಕಂಪ್ಯೂಟರುಗಳಿಗೆ ಬೇಕಾದ ಸಾಫ್ಟ್‌ವೇರ್‌ಗಳೆಲ್ಲವೂ ಮುಕ್ತವಾಗಿರಬೇಕು ಅನ್ನೋದೇ ಫ್ರೀ ಸಾಫ್ಟ್‌ವೇರ್ ಚಳವಳಿಯ ಘೋಷಣೆ. ಖರೀದಿಸಿದ ವಸ್ತುವಿನ ಮೇಲೆ ನಿಮಗೆ ಸಂಪೂರ್ಣ ಸ್ವಾತಂತ್ರ್ಯ ಇದ್ದರೆ ಅದು ಫ್ರೀ, ಅಂದ್ರೆ ಮುಕ್ತ.
ನೋಡಿ, ಮತ್ತೆ ಕನ್‌ಫ್ಯೂಸ್ ಮಾಡ್ತಿದೀರ. ಸ್ವಲ್ಪ ಕ್ಲಿಯರ್ ಆಗಿ ಹೇಳ್ರಿ: `ಮುಕ್ತ'ಅಂದ್ರೆ ಮೆಗಾ ಸೀರಿಯಲ್ ಅಲ್ಲ ಅಂತ ತಿಳೀತು. ಆದ್ರೆ ಮುಕ್ತ ಸಾಫ್ಟ್‌ವೇರ್ ಅಂದ್ರೆ? ಈಗ ಇರೊ ಸಾಫ್ಟ್‌ವೇರ್‌ಗಳು ಮುಕ್ತವಾಗಿಲ್ವ?
ಇದನ್ನು ತಿಳ್ಕೋಬೇಕು ಅಂದ್ರೆ ನೀವು ಸ್ವಲ್ಪ ಮೂಲಕ್ಕೆ ಹೋಗಬೇಕು. ಸಾಮಾನ್ಯವಾಗಿ ಕಂಪ್ಯೂಟರನ್ನ ಆನ್ ಮಾಡಿದಾಗ ಕಾಣ್ಸೋದೇನು? ವಿಂಡೋಸ್ ಹೆಸರಿನಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯ ಸಾಫ್ಟ್‌ವೇರ್ ಮೊದಲು ಕಾಣಿಸಿಕೊಳ್ಳುತ್ತೆ. ಇದನ್ನು ಆಪರೇಟಿಂಗ್ ಸಿಸ್ಟಮ್ ಅಂದ್ರೆ ಮೂಲಾಧಾರ ಸಾಫ್ಟ್‌ವೇರ್ (ಕನ್ನಡದಲ್ಲಿ ಕರ್ಯಾಚರಣಾ ವ್ಯವಸ್ಥೆ) ಅಂತ ಕರೀತಾರೆ. ಕಪ್ಪು ಪರದೆ ಹೋದ ಕೂಡಲೇ ಕಿಟಕಿ ಹಾಕಿದ ಆಕಾಶ ನೋಡ್ತೀರ ತಾನೆ? ಅದಾದ ಮೇಲೆ ನಿಮ್ಮ ಕಂಪ್ಯೂಟರಿನಲ್ಲಿ ಬೇರೆ ಬೇರೆ ಸಾಫ್ಟ್‌ವೇರ್‌ಗಳು ಕಾಣುತ್ತವೆ. ಉದಾಹರಣೆಗೆ ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಅಡೋಬ್ ಪೇಜ್‌ಮೇಕರ್,ಫೋಟೋಶಾಪ್,ಕೋರ
;&
#3270;ಲ್‌ಡ್ರಾ, ಟ್ಯಾಲಿ, …. ಹೀಗೆ. ಆಫೀಸಿನಲ್ಲಿ, ಮನೆಗಳಲ್ಲಿ, ಡಿಟಿಪಿ ಮiಡೋ ಅಂಗಡಿಗಳಲ್ಲಿ, ಪತ್ರಿಕಾಕಚೇರಿಗಳಲ್ಲಿ, ಎಲ್ಲೆಲ್ಲೂ ಸುಮಾರಾಗಿ ಈ ಥರಾನೇ ಕಂಪ್ಯೂಟರ್‌ಗಳು ಇರುತ್ತವೆ. ಆಕಾಶ, ಕಿಟಕಿ, ಆಕಾಶ, ಕಿಟಕಿ!
ಈಗ ಕೇಳಿಸ್ಕೊಳ್ಳಿ: ಈ ಯಾವುದೇ ಸಾಫ್ಟ್‌ವೇರ್ ಕೂಡಾ ನಾನು ಹೇಳಿದ ಹಾಗೆ `ಫ್ರೀ' ಅಲ್ಲ. ಅವೆಲ್ಲವೂ ಯಾವುದೋ ಸಂಸ್ಥೆಯು ತಯಾರಿಸಿ ಮಾರುಕಟ್ಟೆಗೆ ಬಿಟ್ಟ `ಒಡೆತನದ' ಸಾಫ್ಟ್‌ವೇರ್‌ಗಳು. ಅವು ನಾನು ಹೇಳಿದ ಥರ ಫ್ರೀನೂ ಅಲ್ಲ; ನೀವು ಹೇಳೋ ಥರ ಬಿಟ್ಟೀನೂ ಅಲ್ಲ.
ರೀ,ಸುಮ್ನೆ ರೈಲು ಬಿಡಬೇಡ್ರಿ…. ನನ್ನ ಫ್ರೆಂಡ್ ಮನೇಲಿ ಇವೆಲ್ಲವೂ ಇದೆ. ಆದ್ರೆ ಅವನು ಅದಕ್ಕೆ ನಯಾಪೈಸೆ ಬಿಚ್ಚಲಿಲ್ಲ, ಕಂಪ್ಯೂಟರ್ ಮಾರಾಟ ಮಾಡಿದವನೇ ಎಲ್ಲಾನೂ ಕಂಪ್ಯೂಟರಿನಲ್ಲಿ ಹಾಕಿಕೊಟ್ನಂತೆ?
ಸ್ವಲ್ಪ ಸಮಾಧಾನ ಮಾಡ್ಕೊಳ್ಳಿ. ಒಳ್ಳೆ ಪ್ರಶ್ನೆ ಕೇಳಿದೀರ. ಭಾರತ ದೇಶದಲ್ಲಿ ಇರೋ ೪೦ ಲಕ್ಷ ಕಂಪ್ಯೂಟರುಗಳೂ ನಿಮ್ಮ ಫ್ರೆಂಡ್ ಕಂಪ್ಯೂಟರ್ ಥರಾನೇ. ಎಲ್ಲದರಲ್ಲೂ ಹೀಗೇ ಬೇಕಾದಷ್ಟು ಸಾಫ್ಟ್‌ವೇರ್‌ಗಳಿವೆ. ವಿಷ್ಯ ಇಷ್ಟ: ಇವೆಲ್ಲವೂ ಕದ್ದ ಮಾಲು! ಈ ಸಾಫ್ಟ್‌ವೇರ್‌ಗಳನ್ನು ಕದ್ದುಬಿಡ್ತಾರೆ. ಅದಕ್ಕೆ ರಹಸ್ಯ ಸಂಕೇತ ಇದ್ರೆ ಅದನ್ನು ಒಡೆದು ಓಪನ್ ಮಾಡಿ ಕಂಪ್ಯೂಟರಿನಲ್ಲಿ ಹಾಕ್ತಾರೆ. ಒಂದು ಸಿಡಿ (ಕಾಂಪಾಕ್ಟ್ ಡಿಸ್ಕ್, ಮಾಹಿತಿ ತಟ್ಟೆ) ಒಳಗೆ ಇರೋ ಯಾವುದೇ ಸಾಫ್ಟ್‌ವೇರನ್ನೂ ಇನ್ನೊಂದು ಸಿಡಿಗೆ ವರ್ಗಾಯಿಸಬಹುದು. ರಹಸ್ಯ ಸಂಕೇತಪದಗಳನ್ನು ತಯಾರು ಮಾಡಿಕೊಡೋ ಬಿಟ್ಟಿ ಸಾಫ್ಟ್‌ವೇರ್‌ಗಳೂ ಇಂಟರ್‌ನೆಟ್ (ಅಂತರಜಾಲ)ನಲ್ಲಿ ಸಿಗುತ್ವೆ. ಒಂದು ಒರಿಜಿನಲ್ ಸಾಫ್ಟ್‌ವೇರ್ ಸಿಕ್ರೆ ಸಾಕು; ಅದನ್ನೇ ನೂರಾರು ಪ್ರತಿ ಮಾಡಿ ಹಂಚ್ತಾರೆ. ಇದನ್ನೇ ಬಹಳ ಟಿಪ್‌ಟಾಪಾಗಿ ಪೈರಸಿ ಅಂತ ಕರೀತರೆ. ಅಂದ್ರೆ ನಿಮ್ಮ ಫ್ರೆಂಡ್, ನಿಮ್ಮ ಸಣ್ಣ ಕಚೇರಿ, ನಿಮ್ಮ ಪಕ್ಕದ್ಮನೆಯಲ್ಲಿರೋ ಡಿಟಿಪಿ… ಸಾಮಾನ್ಯವಾಗಿ ಶೇ. ೯೦ರಷ್ಟು ಕಂಪ್ಯೂಟರುಗಳಲ್ಲಿ ಹೀಗೆ ಕದ್ದ ಸಾಫ್ಟ್‌ವೇರ್‌ಗಳೇ ಬಳಕೆಯಾಗ್ತಿವೆ ಸ್ವಾಮಿ…
ಈ ಥರ ಹಕ್ಕುಸ್ವಾಮ್ಯ ಉಲ್ಲಂಘನೆಯಿಂದ &a
mp;#
3221;ೇವಲ ಅಮೆರಿಕಾ ದೇಶಕ್ಕೆ ೧೩.೦೮ ಬಿಲಿಯ ಡಾಲರ್ ನಷ್ಟವಾಗಿದೆ. ಅಮೆರಿಕಾದಲ್ಲೇ ಈ ರೀತಿ ತಂತ್ರಾಂಶ ಕದಿಯುವ ಪ್ರಮಾಣ ಶೇ. ೨೪. ಯುರೋಪ್‌ನಲ್ಲಿ ಶೇ. ೩೫. ಎನ್ನುತ್ತೆ ವಿಶ್ವಸಂಸ್ಥೆಯ ವರದಿ.
ಅಂದ್ರೆ ಎಲ್ರೂ ಕಳ್ಳರು ಅಂತ ಕರೀತೀರೇನ್ರಿ? ಎಷ್ಟು ಧೈರ್ಯಾರೀ ನಿಮಗೆ!
ಹಂಗಲ್ಲರೀ, ಹಾಗೆ ಬಯ್ಯೋದಕ್ಕೆ ಹೊರಟಿಲ್ಲ. ಆದರೆ ಹಾಗೆ ನಮ್ಮ ಜನ ಇರೋದು ನಿಜ. ಭಾರತ ಯಾಕೆ, ಚೀನಾ, ಪಾಕಿಸ್ಥಾನ, ರಶ್ಯಾ – ಎಲ್ಲಾ ದೇಶಗಳಲ್ಲೂ ಈ ಥರ ಪೈರಸಿ ನಡೆದೇ ಇದೆ. ಒಂದು ಮಾತು ನಿಜ; ಈ ತಂತ್ರಾಂಶಗಳಿಗೆ ತುಂಬಾ ಬೆಲೆ. ಅಡೋಬ್ ಪೇಜ್‌ಮೇಕರ್‌ಗೆ (ಒಂದು ಕಂಪ್ಯೂಟರ್‌ನಲ್ಲಿ ಸ್ಥಾಪಿಸಲು) ೩೩೫ ಡಾಲರ್ ; ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್ ಎಲ್ಲಾ ಸೇರಿ ಕನಿಷ್ಠ ೫೦೦ ಡಾಲರ್ ಕಕ್ಕಬೇಕು. ನಿಮ್ಮ ಕಂಪ್ಯೂಟರಿನಲ್ಲಿ ಅಧಿಕೃತವಾಗಿ ಸಾಫ್ಟ್‌ವೇರ್ ಸಂಸ್ಥೆಗಳಿಂದಲೇ ಖರೀದಿ ಮಾಡಿದ ಸಾಫ್ಟ್‌ವೇರ್ ಗಳನ್ನೇ ಬಳಸೋದಾದ್ರೆ ಕಂಪ್ಯೂಟರಿಗಿಂತ ಈ ತಂತ್ರಾಂಶಗಳ ಖರ್ಚೇ ಹೆಚ್ಚು. ಒಂದು ಸಾಮಾನ್ಯ ಕಂಪ್ಯೂಟರಿಗೆ ಈಗ ಅಬ್ಬಬ್ಬಾ ಅಂದ್ರೆ ೨೫ ಸಾವಿರ ರೂಪಾಯಿ. ಅಂದಮೇಲೆ ನೀವೇ ಲೆಕ್ಕ ಹಾಕಿ.
ಸಾಫ್ಟ್‌ವೇರ್ ಬೆಲೆ ಹೀಗೆ ಹುಚ್ಚಾಪಟ್ಟೆ ಇರೋದಕ್ಕೇ ಪೈರಸಿ ನಡೀತಾ ಇದೆ. ಆದ್ದರಿಂದ ನಾನು ನಮ್ಮ ಜನರನ್ನು ಬೈತಾ ಇಲ್ಲ. ಅವರಿಗೆ ಅದು ಅನಿವಾರ್ಯ ಆಗಿದೆ. ಹಾಗಂತ ಯಾವಾಗಲೂ ನಾವು ಕಳ್ಳರು ಅಂತ ಹುಳ್ಳಹುಳ್ಳಗೆ ಇರೋದು ಸರೀನಾ? ಕಳ್ಳತನದ ಮಾನಸಿಕತೆಯಲ್ಲೇ ನಾವು ಬದುಕಬೇಕಾ? ಅದಕ್ಕೇ ನಾನು ಫ್ರೀ ಸಾಫ್ಟ್‌ವೇರ್ ಚಳವಳಿಯಲ್ಲಿ ಭಾಗವಹಿಸ್ರೀ ಅಂತ ಹೇಳಿರೋದು…
ಇಂಥ ಒಡೆತನದ ತಂತ್ರಾಂಶಗಳನ್ನು ಖರೀದಿಸಿದರೆ ನಿಮ್ಮ ಮೇಲೆ ಈ ನಿರ್ಬಂಧಗಳು ಇರುತ್ತವೆ:
ನೀವು ಈ ತಂತ್ರಾಂಶವನ್ನು ಬೇರೆ ಯಾರಿಗೂ ವರ್ಗಾಯಿಸಬಾರದು ; ಬಹಿರಂಗವಾಗಿ ತಂತ್ರಾಂಶ ಸರಿಯಿಲ್ಲ ಎಂದು ಟೀಕಿಸಬಾರದು. ಬಳಕೆದಾರರಾದ ನಿಮ್ಮ ಚಟುವಟಿಕೆಗಳನ್ನು `ಸ್ಪೈ' ಮಾಡಬಹುದು. ಈ ತಂತ್ರಾಂಶವನ್ನು ತಯಾರಿಸಿದ ಬಗೆಯನ್ನು ತಿಳಿದು (ಅಂದ್ರೆ ರಿವರ್ಸ್ ಇಂಜಿನಿಯರಿಂಗ್ ಮಾಡಿ) ಇಂಥದೇ ತಂತ್ರಾಂ&am
p;#3
254;ವನ್ನು ರೂಪಿಸುವಂತಿಲ್ಲ. ಮರೀಬೇಡಿ: ನಾವು ಯಾವುದೇ ಸೂಚನೆ ನೀಡದೆಯೇ ಇದನ್ನು ಬದಲಾಯಿಸಬಹುದು! ಅಂದಹಾಗೆ, ಈ ತಂತ್ರಾಂಶವು ನಿಮ್ಮ ಕಂಪ್ಯೂಟರನ್ನು ಹಾಳುಗೆಡಹಿದರೆ ನಾವು ಜವಾಬ್ದಾರರಲ್ಲ!
ಒಡೆತನದ ತಂತ್ರಾಂಶಗಳನ್ನು ಒಡೆದು ಏನಿದೆ ಎಂದು ನೋಡಲಾಗದು. ಈ ತಂತ್ರಾಂಶದಲ್ಲಿ ಯಾವುದಾದರೂ ನಿಗೂಢ ಉದ್ದೇಶಗಳೇನಾದರೂ (ಹಿಡನ್ ಅಜೆಂಡಾ) ಇರಬಹುದು. ೧೯೯೯ರಲ್ಲಿ ಆಗಿದ್ದೇ ಹೀಗೆ: ಮೈಕ್ರೋಸಾಫ್ಟ್ ವಿಂಡೋಸ್‌ನಲ್ಲಿ ಎನ್ ಎಸ್ ಎ ಕೀ ಎಂಬ ಸಂಕೇತ ಕಂಡುಬಂತು. ಅಂದರೆ ಅಮೆರಿಕಾದ ನ್ಯಾಶನಲ್ ಸೆಕ್ಯುರಿಟಿ ಏಜೆನ್ಸಿಗಾಗಿ ( ಎನ್ ಎಸ್ ಎ ಎನ್ನುವುದೇ ಇದರ ಸಂಕ್ಷಿಪ್ತ ನಾಮ!) ರೂಪುಗೊಂಡ ರಹಸ್ಯ ಕೀಲಿ. ಮೈಕ್ರೋಸಾಫ್ಟ್ ಇದನ್ನು ನಿರಾಕರಿಸಿತು. ಆದರೆ ಸಂಕೇತಗಳನ್ನು ಪಡೆಯುವ ಪರಿಣತರು ಇದನ್ನು ಒಪ್ಪಲಿಲ್ಲ. ನೆಟ್‌ಗೇರ್ ಮತ್ತು ಸಿಸ್ಕೋ ಸಂಸ್ಥೆಗಳೂ ತಮ್ಮ ವೈರ್‌ಲೆಸ್ ರೂಟರ್‌ಗಳಲ್ಲಿ ರಹಸ್ಯ ಕೀಲಿಪದ, ಬಳಕೆಪದಗಳನ್ನು ತುಂಬಿಸಿದ್ದಾಗಿ ಒಪ್ಪಿಕೊಂಡಿವೆ.
ಏನೋ ಬಿಡಿ…. ಉದ್ದುದ್ದು ಭಾಷಣ ಹೊಡೆದು ನಾವೆಲ್ರೂ ತಪ್ಪು ಮಾಡ್ತಿದೀವಿ ಅಂತಿದೀರ.. ಅದಿರ್ಲಿ, ಫ್ರೀ ಸಾಫ್ಟ್‌ವೇರ್ ಎಲ್ಲಿ ಸಿಗುತ್ತೆ ಅಂತ ಹೇಳಿ ಸಾಕು. ವಿಂಡೋಸ್ ಆಪರೇಟಿಂಗ್ ಸಿಸ್ಟಂ ಅಂತೂ ಇದೆಯಲ್ಲ… ಅದರ ಮೇಲೆ ಈ `ಮುಕ್ತ' ಸಾಫ್ಟ್‌ವೇರ್ ಹಾಕ್ಕೊಳ್ತೇವೆ.
ಇರ್ರಿ ಸ್ವಾಮಿ. ಈ ವಿಂಡೋಸ್ ಕೂಡಾ ಮೈಕ್ರೋಸಾಫ್ಟ್ ಸಂಸ್ಥೆಗೆ ಸೇರಿದ `ಒಡೆತನದ' ಸಾಫ್ಟ್‌ವೇರ್. ವಿಂಡೋಸ್ ಆಪರೇಟಿಂಗ್ ವ್ಯವಸ್ಥೆಯ ವೆಚ್ಚ ಒಬ್ಬರ ವಾರ್ಷಿಕ ವರಮಾನಕ್ಕೆ ಸಮ ಅನ್ನೋ ಕಲ್ಪನೆ ನಿಮಗಿದೆಯೇನ್ರಿ… ಇದರ ಬದಲಿಗೆ ಬೇಕಾದಷ್ಟು ಬೇರೆ ಆಪರೇಟಿಂಗ್ ಸಾಫ್ಟ್‌ವೇರ್‌ಗಳು ನೀವು ಮೊದಲು ಕೇಳಿದ ಹಾಗೆ ಬಿಟ್ಟಿಯಾಗಿ,ದಂಡಿಯಾಗಿ ಸಿಗುತ್ವೆ.
ವಿಂಡೋಸ್ ಬದಲಿಗೆ ಹ್ಯಾಗಪ್ಪಾ?
ಹೌದ್ರಿ. ಆಕಾಶಕ್ಕೆ ಕಿಟಕಿ ಹಾಕಿದ್ದು ಸಾಕು. ಆಕಾಶಾನೇ ನಿಮಗೆ ಕೊಡೋ ದಿನ ಬಂದಿದೆ. ೧೦ ವರ್ಷಗಳ ಹಿಂದೆ ಗ್ನು / ಲಿನಕ್ಸ್ ಅನ್ನೋ ಹೊಸ ಆಪರೇಟಿಂಗ್ ಸಿಸ್ಟಮ್‌ನ್ನು (ಓ ಎಸ್) ಲೈನಸ್ ಟೋರ್ವಾಲ್ಡ್ಸ್ ಅ&a
mp;#
3240;್ನೋ ಯುವಕ ರೂಪಿಸಿದ. ಅದಕ್ಕೂ ಹಿಂದೆ ಯೂನಿಕ್ಸ್ ಅನ್ನೋ ಆಪರೇಟಿಂಗ್ ವ್ಯವಸ್ಥೆ ಇತ್ತು ಬಿಡಿ. ಈಗ ಲಿನಕ್ಸ್ ದೇಹಕ್ಕೆ ಬಣ್ಣಬಣ್ಣದ ಅಂಗಿ ಹೊಲಿಸಿದ ಹಾಗೆ ವೈವಿಧ್ಯಮಯ ಗ್ನು/ಲಿನಕ್ಸ್ ಬ್ರಾಂಡ್ ಆಪರೇಟಿಂಗ್ ವ್ಯವಸ್ಥೆಗಳು ಸಿಗುತ್ತವೆ.
ಮೊದಲಿಗೆ ಉಬುಂಟು. ಅಂದರೆ ಇನ್ನೊಬ್ಬರ ಬಗ್ಗೆ ಮಾನವೀಯತೆ ತೋರುವುದು ಎಂದರ್ಥ. ಆಫ್ರಿಕಾದ ಪ್ರಾಚೀನ ಪದ. ಉಬುಂಟು ಆಪರೇಟಿಂಗ್ ಸಿಸ್ಟಂ ಸಾಫ್ಟ್‌ವೇರನ್ನು ನೀವು ಡಬ್ಕು ಡಬಲ್ ಅಥವಾ ಒಂದು ಡಜನ್ ಹೀಗೆ ಎಷ್ಟು ಬೇಕಾದರೂ ಉಚಿತವಾಗಿ ಆಫ್ರಿಕಾದಿಂದ ತರಿಸಿಕೊಳ್ಳಬಹುದು. ನಿಮಗೆ ಸೂಸೆ, (ಸೊಸೆ ಅಲ್ಲ!), ರೆಡ್‌ಹ್ಯಾಟ್, ಮಾಂಡ್ರೇಕ್, ಸ್ಲಾಕ್‌ವೇರ್, ಡೆಬಿಯನ್, ಫ್ರೀ ಬಿ ಎಸ್ ಡಿ … ಹೀಗೆ ಬಗೆಬಗೆಯ ಗ್ನು/ ಲಿನಕ್ಸ್ ಓ ಎಸ್‌ಗಳು ಸಿಗುತ್ತವೆ. ಕೆಲವಕ್ಕೆ ಅತಿ ಕಡಿಮೆ ಬೆಲೆ. ಉಬುಂಟುನಂಥ ಕೆಲವು ಸಂಪೂರ್ಣ ಉಚಿತ. ಇವೆಲ್ಲವೂ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಮ್‌ಗಳ ವಿವಿಧ ರೂಪಗಳು.
ಆಪರೇಟಿಂಗ್ ಸಿಸ್ಟಮ್ ಬದಲಾಯಿಸಬೇಕು ಅಂತೀರ…
ಸ್ವಾತಂತ್ರ್ಯದ ಮೊದಲ ಪಾಠವೇ ಅದು. ಸಮಗ್ರ ಕ್ರಾಂತಿ ಥರ ನಾವು ಆಮೂಲಾಗ್ರವಾಗಿ ಕಂಪ್ಯೂಟರ್ ಬಳಕೆಯನ್ನು ಬದಲಿಸ್ಕೋಬೇಕು ಸ್ವಾಮಿ…..
ಮತ್ತೆ ಲೆಕ್ಚರ್ ಹೊಡೀಬೇಡಿ. ಆಮೇಲೆ ಯಾವ್ಯಾವ ಸಾಫ್ಟ್‌ವೇರ್ ಹಾಕ್ಕೋಬೇಕು ಹೇಳಿ? ವಿಂಡೋಸ್ ಮೇಲೆ ಹಾಕಿದ್ದ ಪೇಜ್‌ಮೇಕರ್, ವರ್ಡ್ ಇವೆಲ್ಲವನ್ನೂ ಅದರಲ್ಲಿ ಇನ್‌ಸ್ಟಾಲ್ ಮಾಡಬಹುದಾ?
ಆಪರೇಟಿಂಗ್ ಸಿಸ್ಟಮ್ ಬದಲಾದ್ರೆ ಅದರ ಮೇಲೆ ಹಾಕೋ ಸಾಫ್ಟ್‌ವೇರ್‌ಗಳೂ ಬದಲಾಗ್ಲೇ ಬೇಕು. ಹಾಗಂತ ಭಯ ಬೀಳ್ಬೇಡಿ. ವಿಂಡೋಸ್ ಓ ಎಸ್ ಮೇಲೆ ಸಿಗೋ ಸುಮಾರು ಎಲ್ಲಾ ಸಾಫ್ಟ್‌ವೇರ್‌ಗಳ ಬದಲಿಗೆ ಗ್ನು / ಲಿನಕ್ಸ್ ಓ ಎಸ್ ಮೇಲೂ ಸಾಫ್ಟ್‌ವೇರ್‌ಗಳು ಸಿಗುತ್ವೆ.
ಉದಾಹರಣೆಗೆ ಫೋಟೋಶಾಪ್ ಬದಲಿಗೆ `ಗಿಂಪ್'. ಎಂ ಎಸ್ ಆಫೀಸ್ ಬದಲಿಗೆ ಓಪನ್ ಆಫೀಸ್. ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಬದಲಿಗೆ ಮೊಝಿಲ್ಲಾ ಫೈರ್ ಫಾಕ್ಸ್. ಕೋರೆಲ್‌ಡ್ರಾ ಬದಲಿಗೆ ಇಂಕ್‌ಸ್ಕೇಪ್. ಪೇಜ್‌ಮೇಕರ್ ಬದಲಿಗೆ `ಸ್ಕ್ರೈಬಸ್'. ಟ್ಯಾಲಿ ಜಾಗದಲ್&
;#32
50;ಿ `ಗ್ನು ಕ್ಯಾಶ್'. ಮೈಕ್ರೋಸಾಫ್ಟ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಬದಲಿಗೂ ಫ್ರೀ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ತಂತ್ರಾಂಶ. ಡಾಟಾಬೇಸ್ ನಿರ್ವಹಣೆಗೆ ಮೈ ಎಸ್ ಕ್ಯೂ ಎಲ್. ಎಲ್ಲವೂ ಫ್ರೀ. ಬಳಸಲು, ಬದಲಿಸಲು, ಹಂಚಲು ಮುಕ್ತ. ಇದಿಷ್ಟೇ ಅಲ್ಲ. ನಿಮ್ಮ ಕಂಪ್ಯೂಟರ್‌ನಲ್ಲಿ ಸಿನಿಮಾ ನೋಡಲಿಕ್ಕೆ, ಹಾಡು ಕೇಳಲಿಕ್ಕೆ, ಪ್ರಿಂಟ್ ಮಾಡಲು… ಸಾಮಾನ್ಯವಾದ ಎಲ್ಲ ತಂತ್ರಾಂಶಗಳೂ ಫ್ರೀ….
ಸರಿ, ಇದಕ್ಕೆಲ್ಲ ಎಷ್ಟು ದುಡ್ಡು ಖರ್ಚಾಗುತ್ತೆ? ಅವೂ ಬಿಟ್ಟಿ ಅಲ್ಲ ಅಂತ ಹೇಳಿದೀರಲ್ಲ? ಮತ್ತೇನು ಅವನ್ನೂ ಕದೀಬೇಕಾ ಹ್ಯಾಗೆ?!
ಹಾಗೇನಿಲ್ಲ. ನೀವು ಒಂದು ಗ್ನು / ಲಿನಕ್ಸ್ ಮೂಲಾಧಾರ ತಂತ್ರಾಂಶಾನಾ ಸ್ಥಾಪನೆ ಮಾಡ್ತೀರ ಅಂದ್ಕೊಳ್ಳಿ. ಈ ತಂತ್ರಾಂಶವೇ ನಿಮಗೆ ಮನೆ ಬಳಕೆಗೆ ಬೇಕಾದ ಹತ್ತಾರು ಸಾಫ್ಟ್‌ವೇರ್‌ಗಳನ್ನು ಬಿಟ್ಟಿಯಾಗೇ ಸ್ಥಾಪಿಸಿಬಿಡುತ್ತೆ. ಹಾಗೆ ಹೆಚ್ಚುವರಿ ಸಾಫ್ಟ್‌ವೇರ್ ಬೇಕು ಅಂದ್ರೆ ನೀವು ಗ್ನು / ಲಿನಕ್ಸ್ ಬಳಸ್ತಾ ಇರೋರಿಂದ ಬಿಟ್ಟಿಯಾಗಿ ಪಡೆಯಬಹುದು; ಅಥವಾ ಸ್ವಲ್ಪ ಒಳ್ಳೆ ಕೆಪಾಸಿಟಿ ಇಂಟರ್‌ನೆಟ್ ಸಂಪರ್ಕ (ಬ್ರಾಡ್‌ಬ್ಯಾಂಡ್ ಅಂತಾರಲ್ಲ ಅದು) ಇದ್ರೆ ನೇರವಾಗಿ ಇಂಟರ್‌ನೆಟ್‌ನಿಂದ್ಲೇ ಇವನ್ನೆಲ್ಲ ಬಿಟ್ಟಿಯಾಗಿ ಡೌನ್‌ಲೋಡ್ ಮಾಡ್ಕೋಬಹುದು.
ನೋಡಿ, ಈಗ ಹೊಸ ಕನ್‌ಫ್ಯೂಜನ್ ಶುರುವಾಯ್ತು… ಮೊದಲು `ಫ್ರೀ' ಅಂದ್ರೆ ಬಿಟ್ಟಿ ಅಲ್ಲ ಅಂದ್ರಿ. ಈಗ ನೋಡಿದ್ರೆ ಬಿಟ್ಟಿಯಾಗೂ ಸಿಗುತ್ತೆ ಅಂತೀರ.
ನನಗೂ ಈ ಗೊಂದಲ ಇತ್ತು. ಹಾಗಾದ್ರೆ ಈ ಫ್ರೀ ಸಾಫ್ಟ್‌ವೇರ್ ಮಾಡೋರು ಯಾರು? ಅವರು ಯಾಕೆ ಹೀಗೆ ಉಚಿತ ಸೇವೆ ನೀಡಬೇಕು? ಅವರಿಗೆ ಖರ್ಚು ಹುಟ್ಟೋದು ಹ್ಯಾಗೆ? ಕೊನೆಗೆ ನೋಡಿದ್ರೆ, ಇಲ್ಲೂ ದಾಸೋಹ ನಡೀತಿದೆ. ನಿಮಗೆ ಹೋಟೆಲ್ ಬಿಲ್ ಕೊಡೋದಕ್ಕೆ ಆಗದಿದ್ರೆ ಏನ್ ಮಾಡ್ತೀರ? ಅನ್ನದಾನ ಮಾಡೋ ಕಡೆ ಹೋಗ್ತೀರ ತಾನೆ? ಹಾಗೇ ಇಲ್ಲೂ ಪರಿಸ್ಥಿತಿ ವಿಚಿತ್ರವಾಗಿದೆ. ಕೆಲವು ಸ್ವತಃ ಆಸಕ್ತಿಯಿಂದ ನಿಜಕ್ಕೂ ಚಿಕ್ಕಾಸಿಗೂ ಬಾಯಿಬಿಡದೆ ಸಾಫ್ಟ್‌ವೇರ್ ತಯಾರಿಸ್ತಿದಾರೆ. ಕೆಲವರು ವಿಶೇಷ ಸೇವೆಗಳನ್ನು ಸೇರಿಸಿ ಅಗ್ಗದ ಬ&#
3270
;ಲೆಗೆ ಮಾರ್‍ತಾ ಇದಾರೆ. ಜಗತ್ತಿನ ಕೆಲವು ಶ್ರೀಮಂತರು ಈ ಬಗೆಯ ಸಾಫ್ಟ್‌ವೇರ್ ತಯಾರಿಸೋದಕ್ಕೆ ಹಣ, ಕೊಟ್ಟಿದಾರೆ. ಉಬುಂಟು ಅಂತ ಹೇಳಿದ್ನಲ್ಲ, ಅದನ್ನು ರೂಪಿಸೋದರ ಹಿಂದೆ ದಕ್ಷಿಣ ಆಫ್ರಿಕಾದ ಮೊಟ್ಟಮೊದಲ ಗಗನಯಾತ್ರಿ ಮಾರ್ಕ್ ಶಟಲ್‌ವರ್ಥ್‌ನ ಹಣ ಇದೆ. ಉಳ್ಳವರು ಕೇವಲ ಶಿವಾಲಯ ಮಾಡ್ತಾರೆ ಅಂತ ತಿಳ್ಕೋಬೇಡಿ. ಕೆಲವರು ಫ್ರೀ ಸಾಫ್ಟ್‌ವೇರ್ ಮಾಡ್ತಾರೆ!
ಹಾಗಂತ ನೀವು ಉಚಿತವಾಗೇ ಹಂಚಬೇಕು ಅಂತೇನಿಲ್ಲ; ಈ ತಂತ್ರಾಂಶಗಳ ಮೇಲೆ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಈ ತಂತ್ರಾಂಶಗಳನ್ನು ನೆಂಟರಿಷ್ಟರಿಗೆ ಹಂಚಬಹುದು. ಅವರೂ….. ಹಂಚುವಾಗ, ಸೇವೆ ನೀಡುವಾಗ, ಸ್ವಲ್ಪ ಹಣ ಶುಲ್ಕವಾಗಿ ವಿಧಿಸಿ! ಅದನ್ನು ನೀವೇ ಪೂರ್ತಿ ಜೇಬಿಗಿಳಿಸದೆ ಒಂದಂಶವನ್ನು ಈ ತಂತ್ರಾಂಶಕ್ಕಾಗಿ ಹೆಣಗುತ್ತಿರುವ ಫ್ರೀ ಸಾಫ್ಟ್‌ವೇರ್ ಕಾರ್ಯಕರ್ತರ ಸಂಸ್ಥೆಗಳಿಗೆ ಕಳಿಸಿಕೊಡಿ; ಋಣ ತೀರಿಸಿಕೊಳ್ಳಿ.
ಫ್ರೀ ಸಾಫ್ಟ್‌ವೇರ್ ಅಂದ್ರೆ ಒಂಥರ ಜನರ ಚಳವಳಿ. ಒಂದು ಸಮುದಾಯವೇ ಸೇರಿ ಏನೆಲ್ಲ ಮಾಡಬಹುದು ಅನ್ನೋದಕ್ಕೆ ಇದೂ ಒಂದು ಉದಾಹರಣೆ.
ಸೋರ್ಸ್‌ಫೋರ್ಜ್ ಡಾಟ್ ನೆಟ್ ನಲ್ಲಿ ನಿಮಗೆ ಸಿಗೋದೆಲ್ಲವೂ ಉಚಿತವೇ. ಆದರೆ ಅವುಗಳಿಗೆ ಹಕ್ಕುಸ್ವಾಮ್ಯ ಇರೋದೂ ನಿಜ. ಈ ಹಕ್ಕುಸ್ವಾಮ್ಯ ಇರೋದು ನಿಮ್ಮ ಸ್ವಾತಂತ್ರ್ಯವನ್ನು ರಕ್ಷಿಸಲಿಕ್ಕೆ. ಅಂದರೆ ಇಲ್ಲಿ ಸಿಗೋ ತಂತ್ರಾಂಶಗಳಲ್ಲಿ `ಇವನ್ನು ಉಳಿದವರಿಗೂ ಹೀಗೆಯೇ ಹಂಚಬೇಕೇ ಹೊರತು ಬೇರಾವ ಷರತ್ತುಗಳನ್ನೂ ವಿಧಿಸಬಾರದು' ಎಂದು ಷರತ್ತು ಇರುತ್ತೆ! ಇದನ್ನೇ ಕಾಪಿಲೆಫ್ಟ್ ಎನ್ನುತ್ತಾರೆ . ಹಾಗೆ ಮಾಡಿದಾಗ ತ ಂತ್ರಾಂಶದ ಮೇಲೆ ಹಕ್ಕು ಸ್ಥಾಪಿಸಲು ಹಿತಾಸಕ್ತರಿಗೆ ಸಾಧ್ಯವಾಗುವುದಿಲ್ಲ.
ಫ್ರೀ ಸಾಫ್ಟ್‌ವೇರ್ ಬಳಸಿ ಏನಾರಾ ಯಡವಟ್ಟಾದ್ರೆ ಯಾರು ಸರ್ವಿಸ್ ಕೊಡ್ತಾರೆ ಗೊತ್ತ?
ಸರ್ವಿಸ್ ಬಗ್ಗೆ ಹೇಳೋದಾದ್ರೆ, ಮುಕ್ತ ತಂತ್ರಾಂಶಗಳ ಬಗ್ಗೆ ಸಮಸ್ಯೆ ನಿವಾರಣೆಗೆ ಜಗತ್ತಿನ ಎಲ್ಲ ಬಳಕೆದಾರರೂ ತಯಾರು; ಅವರದೇ ಚರ್ಚಾತಾಣಗಳಿವೆ. ತಂತ್ರಾಂಶ ತಯಾರಕರೂ ಸದಾ ನೆರವಿಗೆ ಸ&
#322
8;್ಜು. ವಾರಂಟಿ ವಿಷಯಕ್ಕೆ ಬಂದ್ರೆ ಗೊತ್ತಲ್ಲ, ಒಡೆತನದ ತಂತ್ರಾಂಶಗಳಿಗೂ ವಾರಂಟಿ ಇಲ್ಲ! ಎಲ್ಲ ಲೊಳಲೊಟ್ಟೆ! ಇನ್ನು ಪೈರಸಿ ಮಾಡ್ಕೊಂಡ ಸಾಫ್ಟ್‌ವೇರ್ ಬಗ್ಗೆ ಮಾತೆತ್ತಿದರೆ ಜೈಲಿಗೆ ಹೋಗ್ತೀರ!
ಫ್ರೀ ಸಾಫ್ಟ್‌ವೇರ್ ಬಳಸೋದೇ ನನಗೆ ಲಾಭದಾಯಕ ಅನ್ನಿ.
`ನನಗೆ' ಅನ್ನಬೇಡಿ. `ನಮಗೆ' ಅನ್ನಿ. ಈಗ ಮಾತ್ರ ನಾನು ಒಂದು ಪುಟ್ಟ ಭಾಷಣ ಹೊಡೀತೇನೆ.
ಫ್ರೀ ಸಾಫ್ಟ್‌ವೇರ್‌ನ ಪರವಾನಗಿ ವೆಚ್ಚ ಸೊನ್ನೆ. ಉಚಿತ ಮರುಬಳಕೆ ಸಾಧ್ಯ. ಯಾರಾದರೂ ಇವುಗಳನ್ನು ಮರು ರೂಪಿಸಬಹುದು. ಮೊದಲೇ ಕಂಡುಹಿಡಿದದ್ದೆಲ್ಲವೂ ಇಲ್ಲಿ ಮುಂದಿನ ಪೀಳಿಗೆಗೆ ಸುಲಭವಾಗಿ ದಕ್ಕುತ್ತೆ.
ಸಾಮಾನ್ಯವಾಗಿ ಒಂದು ಮುಕ್ತ ತಂತ್ರಾಂಶ ಇದ್ದರೆ ಅದಕ್ಕೆ ಇನ್ನಷ್ಟು ಅನುಕೂಲಗಳನ್ನು ಸೇರಿಸಿ ಮಾರುಕಟ್ಟೆಯಲ್ಲಿ ಮಾರಲು ಸಂಸ್ಥೆಗಳು ಮುಂದಾಗುತ್ತವೆ. ಇದರಿಂದಾಗಿ ಸ್ಪರ್ಧೆ ಹೆಚ್ಚುತ್ತೆ. ಗುಣಮಟ್ಟವೂ ಹೆಚ್ಚುತ್ತೆ ತಾನೆ? ಯಾವುದೋ ಕಾಲದಲ್ಲಿ ಮಾಡಿದ ಸಂಶೋಧನೆ ಹಕ್ಕುಗಳನ್ನೇ ಇಟ್ಟುಕೊಂಡು ದಶಕಗಳ ಕಾಲ ಹಣ ಸುಲಿಯುವ ಯತ್ನ ಇಲ್ಲಿಲ್ಲ.
ಯಾವುದೇ ಗಾತ್ರದ ಸಮುದಾಯವಿರಲಿ, ಅದು ತನಗೆ ಬೇಕಾದ ಹಾಗೆ ಫ್ರೀ ತಂತ್ರಾಂಶಗಳನ್ನು ರೂಪಾಂತರಿಸಿಕೊಳ್ಳಬಹುದು. ಅಂದರೆ ಮುಕ್ತ ತಂತ್ರಾಂಶಗಳು ಸಾಮುದಾಯಿಕ ಪರಂಪರೆಯ ಕೊಂಡಿಗಳನ್ನು ರಕ್ಷಿಸುತ್ತವೆ. ನೀವು ಕನ್ನಡ, ಧಾರವಾಡ ಕನ್ನಡ, ಮೈಸೂರು ಕನ್ನಡ, ಮಂಡ್ಯದ ಗಂಡುಕನ್ನಡ – ಹೀಗೆ ಯಾವುದೇ ಭಾಷಾ ಶೈಲಿಯನ್ನು ಈ ತಂತ್ರಾಂಶಗಳಿಗೆ ಅಳವಡಿಸಿಕೊಳ್ಳಬಹುದು.
ಒಡೆತನದ ತಂತ್ರಾಂಶವನ್ನು ಆಮದು ಮಾಡಿಕೊಳ್ಳುವುದು ಎಂದರೆ ಭಾರೀ ವಿದೇಶಿ ವಿನಿಮಯವನ್ನು ಕಕ್ಕೋದು! ಅಭಿವೃದ್ಧಿಶೀಲ ದೇಶಗಳಿಗಂತೂ ಇದು ದೊಡ್ಡ ಹೊರೆ. ಆದ್ರೆ ಫ್ರೀ ಸಾಫ್ಟ್‌ವೇರ್‌ಗಳನ್ನು ಯಾವುದೇ ಖರ್ಚಿಲ್ಲದೆ ತರಿಸಿಕೊಳ್ಳಬಹುದು.
ಫ್ರೀ ಸಾಫ್ಟ್‌ವೇರ್ ಚಳವಳಿ ಅಂದ್ರೆ ಒಂಥರ ಜಾನಪದ ಚಳವಳಿ ಥರ ಕಾಣುಸ್ತಿದೆಯಲ್ರೀ?
ಹಾಗೇನಿಲ್ಲ. ಫ್ರೀ ಸಾಫ್ಟ್‌ವೇರ್ ಚಳವಳಿಯ ನಾಯಕ ರಿಚರ್ಡ್ ಸ್ಟಾಲ್‌ಮನ್‌ಅನ್ನೋವ್ನು. ಕಾಪಿಲೆಫ್ಟ್ ಅನ್ನೋ
ಕಲ್ಪನೇನ ಜಾರಿಗೆ ತಂದಿದ್ದೇ ಈತ. ಇವರು ವಿಶ್ವದಾದ್ಯಂತ ಈ ಚಳವಳಿಗಾಗಿ ಓಡಾಡ್ತಿದಾರೆ. ಆಗಾಗ ಭಾರತಕ್ಕೂ ಆಗಾಗ ಬರ್‍ತಾರೆ. ಮನೆಯಿಲ್ಲದ, ಮೊಬೈಲ್ ಬಳಸದ ಈ ಸಾಫ್ಟ್‌ವೇರ್ ಬೈರಾಗಿಯನ್ನು ಈ ಲೇಖನಕ್ಕಾಗಿ ಈ ಮೈಲ್ ಮೂಲಕ ಸಂದರ್ಶಿಸಿದಾಗ ಹೇಳಿದ್ದಿಷ್ಟು: ಫ್ರೀ ಸಾಫ್ಟ್‌ವೇರ್ ಚಳವಳಿ ಬೆಳೆಯಬೇಕಾದರೆ ನಾನೊಬ್ನೇ ಇದ್ರೆ ಸಾಕಾಗಲ್ಲ ಸ್ವಾಮಿ… . ಈ ಸೈಬರ್ ಜಗತ್ತಿನಲ್ಲಿ ಸ್ವಾತಂತ್ರ್ಯ ಸಿಗಬೇಕು ಅಂತ ನಾವೆಲ್ಲರೂ ಹೋರಾಡುತ್ತಿದ್ದೇವೆ. ಗೆಲ್ಲೋದು ನಿಮ್ಮನ್ನೇ ಅವಲಂಬಿಸಿದೆ.
ಹಾಗಂತ ಈ ಚಳವಳಿ ಬೇರೆ ದೇಶದಲ್ಲೂ ನಡೆದಿದೆಯ? ಅಮೆರಿಕಾದವ್ರು ಏನಂತಾರೆ?
ಅಂತರ್ಜಾಲವನ್ನು ಇನ್ನೂ ತನ್ನ ಬಿಗಿಮುಷ್ಟಿಯಲ್ಲೇ ಇಟ್ಟುಕೊಂಡಿರುವ ಅಮೆರಿಕಾಗೂ ಮುಕ್ತ ತಂತ್ರಾಂಶವೇ ಭದ್ರತೆಯನ್ನು ಒದಗಿಸಿದೆ! ಫಾಸ್‌ನನ್ನೇನಾದರೂ ನಿಷೇಧಿಸಿದರೆ ತನ್ನ ಭದ್ರತಾ ವ್ಯವಸ್ಥೆಯ ಲೋಪಗಳನ್ನು ಹುಡುಕಲಾಗುವುದಿಲ್ಲ ಎಂದು ಅಮೆರಿಕಾದ ರಕ್ಷಣಾ ಇಲಾಖೆ ಹೇಳಿದೆ.
ಅಮೆರಿಕಾದ ಲಾರ್ಗೋ ನಗರದಲ್ಲಿ ವರ್ಷಕ್ಕೆ ಒಂದು ಮಿಲಿಯ ಡಾಲರ್ ಉಳಿತಾಯವಾಗಿದೆ. ಸ್ವೀಡನ್ ಸರ್ಕಾರಕ್ಕೆ ವರ್ಷಕ್ಕೆ ಒಂದು ಬಿಲಿಯ ಡಾಲರ್ ಉಳಿದಿದೆ ಡೆನ್ಮಾರ್ಕ್‌ಗೆ ೭೩೦ ಮಿಲಿಯ ಡಾಲರ್ ಉಳಿದಿದೆ.
೨೦೦೨ರ ಬ್ರೆಝಿಲ್‌ವರದಿ ನೋಡಿ: ಆ ದೇಶದಲ್ಲಿ ಸಾಫ್ಟ್‌ವೇರ್‌ನ ರಾಯಧನ ಮತ್ತು ಪರವಾನಗಿಗಾಗಿ ನೀಡಿದ ಹಣವೇ ಕಂಪ್ಯೂಟರ್ ಮತ್ತು ಮಾಹಿತಿಗಾಗಿ ಖರ್ಚು ಮಾಡಿದ್ದಕ್ಕಿಂತ ಹೆಚ್ಚು. ಈ ಖರ್ಚೇ ಬ್ರೆಝಿಲ್‌ನ ಕುಸಿತಕ್ಕೆ ಕಾರಣ ಎಂಬ ವಾದವೂ ಇದೆ. ದಕ್ಷಿಣ ಆಫ್ರಿಕಾ, ತೈವಾನ್ ಮತ್ತು ದಕ್ಷಿಣ ಕೊರಿಯಾಗಳಲ್ಲೂ ಇದೇ ಸಮಸ್ಯೆ. ಅಲ್ಲೆಲ್ಲ ಫ್ರೀ ಸಾಫ್ಟ್‌ವೇರ್ ಬಳಕೆ ಜಾಗೃತಿ ಮೂಡಿದೆ.
ಕಾಪಿರೈಟ್ ಉಲ್ಲಂಘನೆಯ ಸಮಸ್ಯೆಯೇ ವಿಯೆಟ್‌ನಾಮ್ ದೇಶವು ಫಾಸ್ ( ಊuಖಖ, ಅಂದ್ರೆ ಫ್ರೀ ಎಂಡ್ ಓಪನ್‌ಸೋರ್ಸ್ ಸಾಫ್ಟ್‌ವೇರ್) ನೀತಿಗೆ ಮೊರೆಹೋಗಲು ಇದ್ದ ಒಂದು ಮುಖ್ಯ ಕಾರಣ.
ಯಾವುದೇ ಪರಿಶೋಧನೆ ಮಾಡಲಾಗದ ತಂತ್ರಾಂಶಗಳನ್ನು ಇಟ್ಟುಕೊಂಡರೆ ರಾಷ್ಟ್ರೀಯ ಭದ್ರತೆಗ&
;#32
70; ಅಪಾಯ ಎಂದರಿತೇ ಚೀನಾವು ಮುಕ್ತ ತಂತ್ರಾಂಶಕ್ಕೆ ಮೊರೆಹೋಗಿದೆ.
ಓಹೋಹೋ, ದೊಡ್ಡ ಕಥೇನೇ ಹೇಳ್ತಿದೀರ… ಹಾಗೆ ಭಾರತದಲ್ಲಿ ಯಾವ ಸ್ಥಿತಿ ಇದೆ ಅಂತ್ಲೂ ತಿಳಿಸಿ.
ಕೇರಳದಲ್ಲಿ ಈಗಾಗಲೇ ಎಫ್ ಎಸ್ ಎಫ್ ಚಳವಳಿ ಆರಂಭವಾಗಿದೆ. ಈ ಚಳವಳಿಯ ಮುಂಚೂಣಿಯಲ್ಲಿ ಇರುವ ಸುನಿಲ್ ಅಬ್ರಹಾಂ ಬೆಂಗಳೂರಿನಲ್ಲೇ ಕಾರ್ಯನಿರತರು. ಹಾಗೆ ನೋಡಿದರೆ ದೇಶದಲ್ಲೇ ಮಾಹಿತಿ ತಂತ್ರeನದ ರಾಜಧಾನಿ ಅಂತ ಜಂಬ ಕೊಚ್ಕೋತಿರೋ ಬೆಂಗಳೂರಿನಲ್ಲಿ ಫ್ರೀ ಸಾಫ್ಟ್‌ವೇರ್ ಬಗ್ಗೆ ತಲೆಕೆಡಿಸಿಕೊಂಡ ಮಹಾನ್ ಸಾಫ್ಟ್‌ವೇರ್ ಸಂಸ್ಥೆಗಳು ಇಲ್ಲವೇ ಇಲ್ಲ. ಕೆಲವು ಪುಟ್ಟ ಸಂಸ್ಥೆಗಳು ಒಂದಷ್ಟು ಕೆಲಸ ಮಾಡ್ತಾ ಇವೆ.
ಸರಿ ಮಾಹಿತಿ ತಂತ್ರeನ ರಂಗದಲ್ಲಿ ಹೀಗೆ ಸಾಫ್ಟ್‌ವೇರ್ ಮಾತ್ರ ಉಚಿತವಾಗಿ ಸಿಗಬೇಕು ಅಂತಿದೆಯ ಅಥವಾ ಇನ್ನೇನಾರಾ ಫ್ರೀಯಾಗಿ ಸಿಗುತ್ತ? ಯಾಕೋ ನಿಮ್ಮ ಮಾತು ಕೇಳಿದ ಮೇಲೆ ನನ್ನ ಸ್ವಾರ್ಥ ಹೆಚ್ಚಾಗಿದೆ!
ನೋಡಿ, ಮಾಹಿತಿ ಉಚಿತವಾಗಿ ಸಿಗಬೇಕು ಅನ್ನೋದು ಈಗಿನ ಸಮಾಜವಾದಿ ಮಂತ್ರ. ಇಂಟರ್‌ನೆಟ್‌ನಲ್ಲಿ ಪುಸ್ತಕ, ಹಾಡು, ಸಿನೆಮಾ, ಸಲಹೆ, ಸೂಚನೆ ಎಲ್ಲವೂ ಉಚಿತವಾಗಿ ಸಿಗಬೇಕು ಅನ್ನೋ ಘೋಷಣೆ ವಸ್ತುಶಃ ಜಾರಿಯಾಗ್ತಾ ಇದೆ. ನೀವು ತಿತಿತಿ.ಚಿಡಿಛಿhive.oಡಿg ಅನ್ನೋ ವೆಬ್‌ಸೈಟ್‌ಗೆ ಹೋದ್ರೆ ಈ ಚಳವಳಿ ಯಾವ ಬೃಹತ್ ಸ್ವರೂಪ ಪಡೆದಿದೆ ಅನ್ನೋ ಝಲಕ್ ಸಿಗುತ್ತೆ.
ಆಯ್ತು. ಸಾಕಷ್ಟು ಮಾಹಿತಿ ಕೊಟ್ಟಿದೀರ. ನನಗಂತೂ ಬೇರೆ ಪ್ರಶ್ನೆ ಹೊಳೀತಿಲ್ಲ. ಹೆಚ್ಚು ಮಾಹಿತಿ ಇದ್ರೆ ನೀವೇ ಕೊಡಿ.
ನೋಡಿ, ಒಡೆತನದ ಸಾಫ್ಟ್‌ವೇರ್ ಆಗಿದ್ರೂ ಬಿಟ್ಟಿಯಾಗಿ ಸಿಗೋಕೆಲವು ಸಾಫ್ಟ್‌ವೇರ್‌ಗಳು ಸಿಗುತ್ತವೆ. ಉದಾಹರಣೆಗೆ ವಿನ್‌ಝಿಪ್, ವಿನ್ ಆಂಪ್ ,ಎ ವಿ ಜಜಿ ಆಂಟಿ ವೈರಸ್ ಇತ್ಯಾದಿ. ಇವನ್ನು ಫ್ರೀವೇರ್ ಅಂತ ಕರೀತಾರೆಯೇ ಹೊರತು ಫ್ರೀ ಸಾಫ್ಟ್‌ವೇರ್ ಅಲ್ಲ. ಇವುಗಳನ್ನು ಒಡೆದು ನೋಡಲಾಗಲ್ಲ; ಅಥವಾ ಬದಲಿಸಲಾಗಲ್ಲ. ಉಚಿತವಾಗಿ ಹಂಚಬಹುದು; ಬಳಸಬಹುದು ಅಷ್ಟೆ. ನೀವು ಇಂಟರ್‌ನೆಟ್‌ನಲ್ಲಿ ಇಂಥ ಸಾವಿರಾರು ತಂತ್ರಾಂಶಗಳನ್ನು ಕಾಣಬಹುದು. ಅವು ಮುಂದೆ ಒ&#
3233
;ೆತನದ ಸಾಫ್ಟ್‌ವೇರ್ ಆಗಿಬಿಡುವ ಸಾಧ್ಯತೆ ಇದೆ. ಆರಂಭಿಕ ಆಫರ್ ಥರ.
ಇನ್ನು ನೀವು ಸೋರ್ಸ್‌ಫೋರ್ಜ್ ವೆಬ್‌ಸೈಟ್‌ಗೆ ಹೋದಾಗ ಫ್ರಿ ಸಾಫ್ಟ್‌ವೇರ್ ಅಂತ ಕಾಣಿಸದೇ ಬರೀ ಓಪನ್ ಸೋರ್ಸ್ ಅಂತ ಕಾಣಿಸಬಹುದು. ಹಾಗಂತ ಗೊಂದಲ ಬೇಡ. ಎರಡೂ ಒಂದೇ.
ಫ್ರೀ ಸಾಫ್ಟ್‌ವೇರ್ ಜಿಂದಾಬಾದ್! ನಾನೀಗ ಹೇಗೆ ಮುಂದಿನ ಹೆಜ್ಜೆ ಇಡಬೇಕು ಅಂತ ಸಂಕ್ಷಿಪ್ತವಾಗಿ ಹೇಳ್ತೀರ?
ಮೊದಲು ನಿಮ್ಮ ವಿಂಡೋಸ್ ಆಪರೇಟಿಂಗ್ ವ್ಯವಸ್ಥೆಯ ಜೊತೆಗೇ ಇನ್ನೊಂಡು ಹಾರ್ಡ್ ಡಿಸ್ಕ್ ಪಾರ್ಟಿಶನ್ ಮಾಡಿಕೊಂಡು ಅದರಲ್ಲಿ ಗ್ನು/ಲಿನಕ್ಸ್ ಆಪರೇಟಿಂಗ್ ವ್ಯವಸ್ಥೆಯನ್ನು ಸ್ಥಾಪಿಸಿ. ಇದರಿಂದ ನೀವು ಹೊಸ ವ್ಯವಸ್ಥೆಯನ್ನು ಕಲಿಯುವವರೆಗೆ ವಿಂಡೋಸ್‌ನಲ್ಲಿಯೂ ಕಾರ್ಯ ಮುಂದುವರಿಸಬಹುದು. ಕಂಪ್ಯೂಟರನ್ನು ಆನ್ ಮಾಡಿದ ಕೂಡಲೇ ನಿಮ್ಮ ಆಯ್ಕೆಯ ವಿಂಡೋಸ್ ಅಥವಾ ಗ್ನು/ಲಿನಕ್ಸ್ ಆಪರೇಟಿಂಗ್ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಆಮೇಲೆ ವೆಬ್‌ಸೈಟ್‌ಗಳ ನೆರವು ಪಡೆದುಕೊಂಡು ವಿವಿಧ ತಂತ್ರಾಂಶಗಳನ್ನು ಅದರಲ್ಲಿ ಸ್ಥಾಪಿಸಿ. ಅವುಗಳನ್ನು ಬಳಸಿ ಅಭ್ಯಾಸ ಮಾಡಿಕೊಳ್ಳಿ.
ಗ್ನು/ಲಿನಕ್ಸ್‌ನಲ್ಲಿ ಕನ್ನಡವೂ ಸಾಧ್ಯ. ಈಗ ವಾಣಿಜ್ಯಿಕ ಕನ್ನಡ ತಂತ್ರಾಂಶಗಳೂ ಈ ವ್ಯವಸ್ಥೆಗಾಗಿ ರೂಪುಗೊಂಡಿವೆ.
ಕ್ರಮೇಣವಾಗಿ ವಿಂಡೋಸ್ ಬಳಕೆ ನಿಲ್ಲಿಸಿ; ಕಾಪಿರೈಟ್ ಉಲ್ಲಂಘನೆಯ ಮಾನಸಿಕತೆಯಿಂದ ಹೊರಗೆ ಬನ್ನಿ. ಗ್ನು/ಲಿನಕ್ಸ್ ಮೂಲಕ ಮುಕ್ತತೆಯ ಅನುಭವ ಪಡೆಯಿರಿ. ಅಪರಾಧಿ ನಾನಲ್ಲ ಎಂದು ಘೋಷಿಸಿ.
ಫ್ರೀ ಸಾಫ್ಟ್‌ವೇರ್ ಆಂದೋಳನದ ಮಾಹಿತಿಗಳನ್ನು ತಿಳಿಸಲಿಕ್ಕೇ ಫ್ರೀ ಸಾಫ್ಟ್‌ವೇರ್ ಮ್ಯಾಗಜಿನ್ ಇದೆ . ಅದನ್ನು ನಿಯಮಿತವಾಗಿ ಓದಿ.
ಸರಿ, ನನ್ನ ಬಳುವಳಿ ಏನ್ ಬಂತು?
ಫ್ರೀ ಸಾಫ್ಟ್‌ವೇರ್ ಬಳಸೋದೇ ಬಳುವಳಿ. ಹಂಚಿದ್ರೆ ಅದೇ ಚಳವಳಿ. ಬರ್‍ಲಾ?
ಈ ಲೇಖನದಲ್ಲಿ ಬಳಸಿದ ಆಂಗ್ಲ ಪದಗಳಿಗೆ ವಿವರಣೆ/ ಸಮಾನಾರ್ಥಕ ಕನ್ನಡ ಪದಗಳು
ಆಪರೇಟಿಂಗ್ ಸಿಸ್ಟಮ್(ಓ ಎಸ್ ) : ಕಾರ್ಯಾಚರಣಾ ವ್ಯವಸ್ಥೆ
ಸಾಫ್ಟ್‌ವೇರ್ : ತಂತ್ರಾಂಶ
ಇನ್‌ಸ್ಟಾಲ್ : ಸ್ಥಾಪಿಸ&a
mp;#
3265;
ಡೌನ್‌ಲೋಡ್ : ಯಾವುದೇ ಕಂಪ್ಯೂಟರ್ ಕಡತವನ್ನು ಇಂಟರ್‌ನೆಟ್ ಮೂಲಕ ನಮ್ಮ ಗಣಕಕ್ಕೆ ತರಿಸಿ(ಇಳಿಸಿ)ಕೊಳ್ಳುವುದು.
ಫೈಲ್ : ಕಡತ
ವೆಬ್‌ಸೈಟ್ : ಜಾಲತಾಣ
ಫ್ರೀ ಸಾಫ್ಟ್‌ವೇರ್ : ಮುಕ್ತ ತಂತ್ರಾಂಶ
ಫ್ರೀವೇರ್ : ಉಚಿತ ತಂತ್ರಾಂಶ
ಓಪನ್‌ಸೋರ್ಸ್ ಸಾಫ್ಟ್‌ವೇರ್ : ಮುಕ್ತ ಮೂಲದ ತಂತ್ರಾಂಶ
ಹಾರ್ಡ್ ಡಿಸ್ಕ್ : ಕಂಪ್ಯೂಟರಿನಲ್ಲಿ ಮಾಹಿತಿಗಳನ್ನು ಶೇಖರಿಸಿ ಇಡುವ ತಟ್ಟೆ.
ಇಂಟರ್‌ನೆಟ್ : ಅಂತರಜಾಲ
ಕಾಪಿರೈಟ್ : ಹಕ್ಕುಸ್ವಾಮ್ಯ
ಫಾಸ್ (ಊuಖಖ) : ಫ್ರೀ ಎಂಡ್ ಓಪನ್‌ಸೋರ್ಸ್ ಸಾಫ್ಟ್‌ವೇರ್
ಫ್ರೀ ಸಾಫ್ಟ್‌ವೇರ್ :
ಹೆಚ್ಚಿನ ಮಾಹಿತಿಗೆ…
ಓಪನ್ ಸೋರ್ಸ್ ಬಗ್ಗೆ ತಿಳಿದುಕೊಳ್ಳಲು
www.opensource.org
ಹಕ್ಕುಸ್ವಾಮ್ಯದ ಬಗ್ಗೆ ಮಾಹಿತಿ
perens.com/Articles/Patents.html
www.osdir.com
ರಿಚರ್ಡ್ ಸ್ಟಾಲ್‌ಮನ್‌ರ ಫ್ರೀ ಸಾಫ್ಟ್‌ವೇರ್ ಚಳವಳಿ
www.fsf.org
ಓಪನ್ ಸೋರ್ಸ್ ತಂತ್ರಾಂಶಗಳ ದಾಸ್ತಾನು
www.sourceforge.net
ಉಬುಂಟು ಎಂಬ ಒಂದು ಗ್ನು/ಲಿನಕ್ಸ್ ಆಪರೇಟಿಂಗ್ ವ್ಯವಸ್ಥೆ ಸೇವೆ ನೀಡುವ ಸಂಸ್ಥೆ
www.ubuntu.org
ಓಪನ್ ಸೋರ್ಸ್‌ನಲ್ಲಿ ಕನ್ನಡದ ಕೆಲಸ ಹೇಗೆ ನಡೆದಿದೆ?
kannada.sourceforge.net
ಮಾಂಡ್ರೇಕ್‌ನಲ್ಲಿ ಕನ್ನಡದ ಕೆಲಸ
www.mandrakelinux.com/l10n/kn.php3
ಭಾರತೀಯ ಭಾಷೆಗಳ ಓಪನ್ ಸೋರ್ಸ್ ಮಾಹಿತಿ
brahmi.sourceforge.net
ಭಾರತೀಯ ಭಾಷೆಗಳಲ್ಲಿ ಮಾತಾಡಿದ್ದನ್ನು ಪಠ್ಯವಾಗಿ ಪರಿವರ್ತಿಸುವ ತಂತ್ರಾಂಶ
sourceforge.net/projects/dhvani
ಫ್ರೀ ಸಾಫ್ಟ್‌ವೇರ್ ಚಳವಳಿಯ ತಿಂಗಳ ಪತ್ರಿಕೆ
www.freesoftwaremagazine.com
ಫ್ರೀ ಸಾಫ್ಟ್‌ವೇರ್ : ಸ್ವಾತಂತ್ರ್ಯ, ಕಾನೂನಿನ ಬಗ್ಗೆ ಮಾಹಿತಿ
http://www.softwarefreedom.org
ಉಚಿತವಾಗಿ ಪಠ್ಯ, ಪುಸ್ತಕ, ಹಾಡು, ಸಿನೆಮಾ ಇತ್ಯಾದಿ ಪಡೆಯಲು
www.archive.org