ಬೆರಳುಗಳ ತಟ್ಟದಿರು ಹುಡುಗಿ ನಾನು ನಡುಗುವೆ ನಿನ್ನ ಸ್ಪರ್ಶಕ್ಕೆ ಕಣ್ಣುಗಳ ಕೂಡಿಸದಿರು ಕಡುಸಂಜೆ ನಾನು ನಡುಗುವೆ ನಿನ್ನ ಪ್ರೀತಿಗೆ ಅಂಗೈ ಹಿಡಿದು ಬಿಸಿಯೇರಿದಂತೆ ನಾನು ನಡುಗುವೆ ಕಣೇ ನಿನ್ನ ಹಣೆಮುಟ್ಟಿ ಹೇಳುವೆ ಕೇಳು ನಾನು ನಡುಗುವೆ…
Browsing: ಕವನಗಳು
ಕಾನು ಕತ್ತಲು ಬತ್ತಿ, ಧಗೆಯ ಬಿಗಿ ಹಗುರಾಗಿ, ಹೊಗೆ ಮಂಜು ಹರಡುತ್ತ ; ನೆತ್ತಿಯ ಪಕ್ಕ ಎದ್ದಿರುವ ಬೆಳ್ಳಿ ಚುಕ್ಕೆ ; ನೋಡುವಳು ಅವಳು ಹೊರಗೆ ಕಟ್ಟೆಯ ಮೇಲೆ ಕೂಡುವಳು ಹೂವ ಕಡೆಗೆ ಚಿಗುರು ನಾಚಿಕೆಯಲ್ಲಿ…
ನಿನ್ನ ಗುರ್ತಿದೆ ನನಗೆ ಎದೆ ಕಳಚಿ ನಡೆದವಳೆ ಸ್ವಪ್ನಸೂಕ್ಷ್ಮದ ಸಮಯ ಬೇಡವೆಂದೆ. ಅಪಮುಹೂರ್ತದ ಹೊತ್ತು ಕಳೆದೆ ಮುತ್ತಿನ ಗುರ್ತು ಕೆನೆಮಾತು, ತುಟಿಗೀತ ತೊರೆದುಬಿಟ್ಟೆ ಸಾಲುಬೆಟ್ಟದ ನೆರಳುಸಂಜೆಗೆ ಮುನ್ನ ಕಡಿದಿದ್ದೆ ಬೆರಳು- ದಿಕ್ಕುಗಳು ತೆಕ್ಕೆಮುಕ್ಕೆ. “ಹೆಜ್ಜೆ ಹಿತವಿಲ್ಲ…
ನನಗೆ ಹಾಡು ಕಚಗುಳಿಯಿಟ್ಟು ಕೇಳುವುದಿಷ್ಟ ಸ್ಪಷ್ಟ ಪದಗಳ ಕಟ್ಟು ನನಗೆ ಹಾಡು. ನೀನೂ ಹಾಡು ದನಿ ಹರಿಸುವುದಿಷ್ಟ ಕಷ್ಟವಿದೆಯೇ ಹೇಳು ? ನೀನು ಹಾಡು. ಅವಳು ಹಾಡು ತನಿ ಬೆರೆಸಿ ಎರೆಯುವಳಲ್ಲ ನಷ್ಟವಿದೆಯೇ ಹಾಡು ?…
ನನ್ನ ಕವನ ಓದಬೇಡ ಯಾಕೆ ಗೊತ್ತ ಹುಡುಗೀ ಅಕ್ಷರಗಳ ಆಟದಲ್ಲಿ ನಾನು ಇರುವುದಿಲ್ಲ. ಪದಗಳಲ್ಲಿ ಪವನಪತ್ರ ನೋಡಿ ನಲಿಯಬೇಡ ನದಿ ಹರಿಸುವೆ, ನಾನು ತೇಲಿ ಬರುವುದಿಲ್ಲ. ಯಾವುದೋ ವಿಷಾದಗಾನ ಎದೆಯ ತೀಡಿದಾಗ ಸಖೀ ನೆಲದ ಮೇಲೆ…
ಧುಮ್ಮಿಕ್ಕದಿರು ಹುಡುಗಿ ರಭಸ ಗೆಲ್ಲದು ನಿನ್ನ ಎದೆಗೆ ಒಬ್ಬಂಟಿತನ ಕೆಲವು ಸಂಜೆ. ತಟದಲ್ಲಿ ನಡೆವಾಗ ಕಣ್ಣು ತೀಡಲಿ ಗಾಳಿ ತೇಲಿಬಿಡು ವೇದನೆಗಳ ತಡವರಿಸದಿರು ಇನ್ನು ಕೆಲವೇ ಹೊತ್ತು ಕಾದಿರಿಸು ಕಾಮನೆಗಳ. ತುಟಿಯಲ್ಲಿ ತುಡಿವ ನೂರು ಏಕಾಂತಗಳು…
ದ್ವೇಷದ ಹಾದಿ ಗೊತ್ತ ಬಾ ಹೇಳಿಕೊಡುತ್ತೇನೆ ಹೇಗೆ ಸಿಗರೇಟು ಸುಡುತ್ತ ಕರಗಿಸುತ್ತೆ ನೋವನ್ನು ಫುಟ್ಪಾತ್ ಕಳಕೊಂಡಿದೆ ಸೂಕ್ಷ್ಮತೆಯನ್ನ ಲಕ್ಷ ಲಕ್ಷ ಹೆಜ್ಜೆಗಳಿಂದ ಮೆಟ್ಟಿಸಿಕೊಂಡು ಗೊತ್ತೇನೇ ಸಮುದ್ರೋಪಾದಿಯಲ್ಲಿ ಹರಡಿದ ಸುಖದ ಕಣಗಳೆಲ್ಲ ದ್ವೇಷದ ಹೊಗೆಯೊಳಗಿಂದ ಮೂಡಿವೆ ಹೇಳಿಕೊಡುತ್ತೇನೆ…
ನನ್ನ ನಿನ್ನೆಗಳನ್ನು ಎಳೆದೆಳೆದು ತಂದಿರುವೆ ಬಾ ಹುಡುಗಿ ಕೊಡುವೆ ನಿನಗೆ. ನನ್ನ ದುಃಖದ ಜಾಡು ಕಡಿದು ತಂದಿರುವೆ ನಡೆದುಬಿಡು ಒಂದು ಗಳಿಗೆ. ಹುದುಗಿರೋ ಗತಬಿಂದುಗಳನ್ನ ಪೋಣಿಸುವೆ ಸರದ ಹಾಗೆ. ತೊಡಿಸುವೆನು ಹೀಗೆ ನಿನ್ನೆದೆ ತುಂಬ ಇರಲಿಬಿಡು…
ನಿನ್ನ ಹುಡುಕಿದ ಮೇಲೆ
ನೆಲವಾಗಿ ಹಬ್ಬಿದವಳಿಗೆ