ಎದೆಶಿಥಿಲ ನಡೆಜಟಿಲ ಶ್ರುತಿಯೊಡೆದ ಬೆರಳು; ಸರಿದ ಬಾಗಿಲಿನಾಚೆ ಖಾಲಿ ನೆರಳು.ಶರಣು ಬಂದರೂ ನೀವು ಸಿಗಲಿಲ್ಲ ಕೊನೆಗೂ. ಕೈಚಾಚಿದಷ್ಟೂ ಕಪ್ಪುಹೊರಳು.ಬೆಳಕು ಹರಿಯುವ ಮುನ್ನ ಕರೆದು ಕೂರಿಸಿ ನನ್ನ ಬೇಗುದಿಯ ಕಳೆದವರು ನೀವು.ಮರೆಯಾದಿರೇಕೆ? ದನಿಹಗುರ ಸ್ವರಪದರ ಧ್ಯಾನಸ್ಥ ಜತಿನೋಟ;…
Browsing: ಕವನಗಳು
ನಾನು ಎಂದೋ ಬರೆದ ಕವನಗಳಿವು. `ಗೂಗಲ್ ಎಂಬ ಸರ್ಚ್ ಇಂಜಿನ್ ಕವನ `ಭಾವನಾ’ದ ವಿಶೇಷಾಂಕದ ಪ್ರಕಟವಾಗಿತ್ತು. ಈ ಕವನ ಎಲ್ಲಿದೆ ಎಂದು ಆನ್ಲೈನ್ನಲ್ಲಿ ಯಾರೋ ಹುಡುಕುತ್ತಿದ್ದರು ಎಂದೂ ಇತ್ತೀಚೆಗೆ ಗಮನಿಸಿದೆ. ಇಂಟರ್ನೆಟ್ ಅದೇ ತಾನೆ ನಮ್ಮ ದೇಹವನ್ನೆಲ್ಲ…
1. ಜೈವಿಕ ಇಂಧನ ಚಿರಂತನ ಹೊಂಗೆಯ ದೀಪವ ಹೊತ್ತಿಸಬನ್ನಿ ಬೇವಿನೆಣ್ಣೆಯನು ಬಸಿಯುವ ಬನ್ನಿ ಹಿಪ್ಪೆಯ ಹಿಂಡಿಯ ಬಳಸುವ ಬನ್ನಿ ಜೈವಿಕ ಇಂಧನ ಒಳ್ಳೆಯದಣ್ಣ ಡೀಸೆಲ್ ಪೆಟ್ರೋಲ್ ಎಷ್ಟು ದಿನ? ಜೈವಿಕ ಇಂಧನ ಚಿರಂತನ !
ಒಂದು ಕ್ಷಣದಲ್ಲಿ ನೀನು ನನ್ನನ್ನು ಬೈದುಕೊಳ್ಳುತ್ತೀಯೆ ಎಂಥ ಕಟುಹೃದಯಿ, ಅಶಾಂತ, ನಿರ್ದಯಿ ಎದೆ ಒಳಗೆ ಘನವಾಗಿ ಹರಿಯುತ್ತಿದೆ ಯಾವುದೋ ದ್ವೇಷ. ನೀನೇನಂಥ ಮೆದು ಹುಡುಗನಲ್ಲ, ಬರಿಯ ಕಲ್ಲು. ಒಂದು ದಿನವೂ ನೀನು ಹೀಗೆ ಕರ್ಟನು…
I wrote this poem as a small reaction in Apara’s blog stanzas of Madyasaara. Those poems are now a book… ಅಪಾರ, ನಿನ್ನ ಜೊತೆ ಕೆಲವೊಮ್ಮ್ಮೆ ನಾನೂ ಕೂತಿದ್ದೆ …
ನನ್ನ ಹಿರಿಯ ಗೆಳೆಯ, ನನ್ನೊಳಗಿನ ಕವಿಯನ್ನು ತಿದ್ದಿ ತೀಡಿದ ಕಣಜನಹಳ್ಳಿ ನಾಗರಾಜ್ ಈಗಿನ ಪೀಳಿಗೆಯ ಸಾಹಿತಿಗಳಿಗೆ ಗೊತ್ತಿಲ್ಲದ ಕವಿ. ಅವರು ಕವನದ ಮಾರುಕಟ್ಟೆಯಲ್ಲಿ ಏನಾದರೂ ಸ್ಟ್ರಾಟೆಜಿ ಮಾಡಿದ್ದರೆ ಇಷ್ಟು ಹೊತ್ತಿಗೆ ನಾಡಿನ ಪ್ರಖ್ಯಾತ ಕವಿಯಾಗುತ್ತಿದ್ದರು. ಏನೋ,…
ಮಗು, ತಣ್ಣಗೆ ಮಲಗಿದೆ ರಸ್ತೆ, ಎಬ್ಬಿಸಬೇಡ. ಭರ್ರನೆ ಬೀಸೋ ಗಾಳಿಗೆ ಬೀಗಬೇಡ. ಟಾರು ಗೀರುತ್ತ ಹಾಗೆ ರೊಯ್ಯನೆ ಹೋಗಬೇಡ. ಹೆದ್ದಾರಿಯಿದು. ನಗರದುದ್ದಕ್ಕೂ ಹರಿದಿರೋ ರಕ್ತನಾಳ ಕೆಲವೊಮ್ಮೆ ಬಿಗಿಯಾಗಿ ಸುತ್ತುತ್ತೆ ನಮ್ಮನ್ನೆ. ಉಸಿರುಗಟ್ಟಿಸೋದಿರಲಿ, ಕಪಾಲವನ್ನೇ ಒಡೆದು ಮೈಮೇಲೆ…
ಮತ್ತೆ ನೋಡಿದರೆ ಕಾಣದ ಹಾಗೆ ನೆಲದಲ್ಲೇ ಕರಗಿಹೋಗಿದ್ದ ಕುರುಹಿಲ್ಲದ ನೆರಳು ಎಲ್ಲಿಯವರೆಗೆ ಹಾದು ಹೋಗಿರಬಹುದು ಒಳಗೆ ನೆಲ ಕದಡಿರಬಹುದು, ನೀರು ತಣ್ಣಗೆ ಕೊಯ್ದಿರಬಹುದು ಅಥವಾ ಲಾವಾರಸ ಹೀಗೆ ಮುಟ್ಟಿ ಮುಟ್ಟಿ ಸುಟ್ಟಿರಬಹುದು ನನ್ನ ನೆರಳಿನ ಕೋಮಲತೆಯನ್ನು…
ಎಲ್ಲಿರಬಹುದು ಈ ಆಶಾ ಎಟ್ ಯಾಹೂ ಡಾಟ್ಕಾಮ್ ಎಂಬ ಹುಡುಗಿ/ಹುಡುಗ/ಮುದುಕ/ಮುದುಕಿ/ಪೋರ? ಯಾವ ಕಂಪ್ಯೂಟರಿನಲ್ಲಿ ಟಕಟಕಾಯಿಸುತ್ತಿರಬಹುದು ಯಾವ ಪ್ರಾಸೆಸರಿನಲ್ಲಿ ಎಷ್ಟು ರಭಸವಾಗಿ ಧುಮ್ಮಿಕ್ಕಬಹುದು ಊಹಿಸಿದ್ದೀರ? ಎಲ್ಲಿಂದಳೋ ಬರೆಯುತ್ತಾಳೆ ಭ್ರಮಾಧೀನ ವಿಶ್ವದೊಳಗೆ ಬೆಳಕಿನಂತೇ ತೂರಿ ನನ್ನ ಮೇಜಿನ ಮೇಲೆ…
ನಿನಗಾಗಿ ಉಡುಗೊರೆಯ ತಂದಿರುವೆ ನೋಡೇ ತೆಗೆದುಕೋ ನನ್ನನ್ನೆ ಪೂರ್ಣವಾಗಿ ಸುಖಮಜಲುಗಳ ನಿನಗೆ ತೋರಿಸುವೆ ತೆರೆದರೆ ಪಡೆದುಕೋ ನನ್ನನ್ನೆ ಪೂರ್ಣವಾಗಿ. ಗತನೆನಪುಗಳ ಭಗ್ನ ಗೋಡೆಗಳ ಮರೆತುಬಿಡು ತೆಗೆದುಕೋ ನನ್ನನ್ನೆ ಪೂರ್ಣವಾಗಿ ಹಿತ ರಾತ್ರಿಗಳು , ನವಿರು ಹಗಲುಗಳು…