Browsing: ಲೇಖನಗಳು

೨೦೧೩. ಜಯನಗರದ ದೊಡ್ಡ ಹೋಟೆಲಿನಲ್ಲಿ ಕುಳಿತಿದ್ದೇನೆ. ಒಂದು ಪಾರ್ಟಿಗಾಗಿ ನನ್ನನ್ನ ಕರೆದಿದ್ದಾರೆ. ಮೊದಲು ಸ್ಟಾರ್ಟರ್‌; ತಿಳಿಹಳದಿ  ಹೋಳುಗಳ ಒಂದು ರಾಶಿ ಹೊತ್ತ ಪ್ಲೇಟು ನನ್ನ ಮುಂದಿದೆ. ಇದೇನು ಎಂದು ಕೇಳುತ್ತೇನೆ. ಪಪಾಯ ಕಾಯಿಯಿಂದ ಮಾಡಿದ ಸ್ಟಾರ್ಟರ್‌,…

ಮಿಂಚಂಚೆ ಅರ್ಥಾತ್‌ ಈಮೈಲ್  ಹುಟ್ಟಿದ್ದು ಯಾವಾಗ? ಅದನ್ನು ಕಂಡು ಹಿಡಿದವರು ಯಾರು? ಈ ಪ್ರಶ್ನೆಗಳನ್ನು ನಾನು ಈಗ ಕೇಳುತ್ತಿರೋದೇಕೆ, ಅಷ್ಟೂ ಗೊತ್ತಿಲ್ಲವೆ ಎಂದು ಮೂಗು ಮುರಿಯಬೇಡಿ. ನಾನೂ ನಿಮ್ಮಂತೆಯೇ  ರೇ ಟೋಮಿಲ್‌ಸನ್‌ ಎಂಬಾತನೇ ಈಮೈಲ್‌ ಜನಕ…

೧೯೮೭ರಲ್ಲಿ ವಿಶ್ವವ್ಯಾಪಿ ಜಾಲವೇ (world wide web, www) ಇರಲಿಲ್ಲ.  ಆಗ  ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ವಿಜ್ಞಾನ ಬರವಣಿಗೆಗೆ ಹಚ್ಚಿದವರು `ಉತ್ಥಾನ’ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಎಸ್‌ ಆರ್‌ ರಾಮಸ್ವಾಮಿಯವರು. ಎರಡನೇ ಮಹಡಿಯಿಂದ…

ನೀವು ಮೊಬೈಲ್‌ ಖರೀದಿಸಿದ ಒಂದೇ ವಾರದಲ್ಲಿ ಅದಕ್ಕಿಂತ ಸುಧಾರಿತ ಮೊಬೈಲ್‌ ಬಂದಿದೆಯಂತೆ, ಇನ್ನೂ `ಕಡಿಮೆ’ ದರವಂತೆ ಎಂಬ ಸುದ್ದಿ ನಿಮ್ಮನ್ನು ಅಪ್ಪಳಿಸುತ್ತದೆ. ಕಳೆದ ವರ್ಷ ಕೊಂಡಿದ್ದ ಮೊಬೈಲ್‌ನಲ್ಲಿ ಇಲ್ಲದ ಯಾವುದೋ ಫೀಚರ್‌ ನಿಮ್ಮ ಸ್ನೇಹಿತರ ಮೊಬೈಲಿನಲ್ಲಿ…

ಪುಟಾಣಿ ಮಕ್ಕಳಿಗೆ ಆಡಲು ನೂರಾರು ಗೇಮ್‌ಗಳು, ಹದಿಹರೆಯದವರಿಗೆ ಹರಟಲು ಹತ್ತಾರು ಸಾಮಾಜಿಕ ಜಾಲಗಳು, ಪತ್ರಕರ್ತರಿಗೆ ಓದಲು ನೂರಾರು ಪತ್ರಿಕೆಗಳು, ಹೆಣ್ಣುಮಕ್ಕಳಿಗೆ ನೂರಾರು ಪಾಕ ವಿಧಾನಗಳು, ಸೌಂದರ್ಯ ವರ್ಧನೆಯ ಕಿವಿಮಾತುಗಳು,  ಕಾಲೇಜು ವಿದ್ಯಾರ್ಥಿಗಳಿಗೆ  ಸೈಂಟಿಫಿಕ್  ಕ್ಯಾಲ್ಕುಲೇಟರ್, ಹಬ್ಬ…

ನೀವು `ತಂಬಾಕು ವಿರೋಧಿ ದಿನ’ ಎಂದು ಆರೂವರೆ ಸೆಕೆಂಡುಗಳಲ್ಲಿ ಓದುತ್ತೀರಿ ಎಂದುಕೊಳ್ಳೋಣ. ಅಷ್ಟುಹೊತ್ತಿಗೆ ಅದೇ ತಂಬಾಕಿನಿಂದ ವಿಶ್ವದ ಯಾವುದೋ ಮೂಲೆಯಲ್ಲಿ ಒಬ್ಬರು ತಂಬಾಕಿನ ಸೇವನೆಯಿಂದಲೇ ಸತ್ತಿರುತ್ತಾರೆ. ಈ ಮಾಹಿತಿಪತ್ರವನ್ನು ಕೈಯಲ್ಲಿ ಹಿಡಿದು ಓದುತ್ತಿರುವ ನಿಮಗೆ ಅಭಿನಂದನೆಗಳು. 

ಮಲೆನಾಡಿನ ಜಡಿಮಳೆಯ ಮುಂಜಾನೆ. ಮುಂಜಾನೆಯ ಒಂದೇ ಗಂಟೆಯಲ್ಲಿ ೨೬ ಸಾವಿರ ಜೈವಿಕ ಇಂಧನ ಸಸಿಗಳ ನಾಟಿ. ಇಂಥದ್ದೊಂದು ದಾಖಲೆ ಸಾಧಿಸಿದ ಕೀರ್ತಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ತಟ್ಟಿಹಳ್ಳ ಟಿಬೆಟನ್ ಸೆಟಲ್‌ಮೆಂಟ್‌ನ ಲಾಮಾಗಳದ್ದು.