ಅದೇನಂತಾ
ಅದೇನಂತಾ ದೊಡ್ಡದೇನಲ್ಲ
ಬಿಡಿ
ಹೃದಯಕ್ಕಿಂತಾ…. ಹಗೂರಾಗಿರಬೇಕು
ನೋಡಿ
ತೆರೆದ ರೆಕ್ಕೆಗಳಲ್ಲಿ ಬಣ್ಣದ ರೇಖೆ
ಬಿಸಿಲಿಗೆ ಹೊಳೆಯುತ್ತೆ ಹೇಗೆ
ನಗುತಾದೆ ಈ ಹೂವುಗಳು
ಹಾಗೆ
ಬದುಕಿದರಷ್ಟೆ ಸಾಕಲ್ಲವೆ ?
ಹೊತ್ತು ಕಳೆಯುವುದು ಈ
ಜೀವಕ್ಕೊಂದು ಕೆಲಸ
ಆದಮೇಲೆ
ನಾವಿದ್ದೇನು ಬಂತು ಭಾವಕ್ಕೆ
ಎನ್ನದಿರಿ ದಮ್ಮಯ್ಯ
ವಸ್ತುರೂಪವ ದಾಟಿ
ಭಾವಗಳು ಬದುಕೋದಿಲ್ಲ
ಬಹಳ ಹೊತ್ತು.
ಅನುಭವದಲ್ಲಿ ನಿಜವಾಗುವಂತೆ
ಯಾವುದರಲ್ಲೂ ಏನು
ಏನೇನೂ ಆಗುವುದಿಲ್ಲ.
ಉದಾಗೆ ಸೇಬೂಹಣ್ಣು ಉದುರಿದ್ದೊಂದು
ಐತಿಹಾಸಿಕ ಸತ್ಯ. ನಂಬುತೀರಾ ?