ಒಂದು ಗುಟ್ಟಿನ ಮಾತು
ಮುಚ್ಚಿಬಿಡಿ ಚಹದ ಸವಿ
ಕೇಳಿ ಕಿವಿ ಬಿಚ್ಚುತ್ತ
ಒಂದು ಗುಟ್ಟಿನ ಮಾತು
ಕತೆಯಾಗಿದ್ದ ಹೇಳುವೆ
ಮಳೆಯ ತುಟಿಮೀರಿ ಬಿದ್ದ
ತುಂತುರು ಕುಡಿದು ಅರಳಿದ್ದ
ಹೂವು ಮುಟ್ಟಿದರೆ ಬಿದ್ದು
ಮುತ್ತಿನ ತೊಟ್ಟು ಉಳಿದಿತ್ತು
ಕುಳಿತಿತ್ತು ದುಗುಡದ ಸೋಡ
ಎದೆಯೊಳಗೆ ನಾನು ಗಲಿಬಿಲಿ ಮೋಡ
ನೋಡುತ್ತ ನೆಲದಲ್ಲಿ ಹುಗಿದ ಮೌನ
ನೆಲದುಗುರು ಕಚ್ಚಿ ಬೆಳೆದ ಗಿಡದಲ್ಲಿ
ಉಳಿದ ಒಂದೇ ತೊಟ್ಟು
ಮೌನದ ರಾಣಿ
ಬಿಡಿಸಬಹುದಿತ್ತು ಸಂಬಂಧ
ಮೌನದ್ದು ಮೋಡದ್ದು
ಒಡೆದ ಗುಟ್ಟಿನ ಗೂಡು, ಗೊತ್ತಲ್ಲ
ಗೊತ್ತಾಯಿತಲ್ಲ ಇವರೇ
ಯಾಕಾಗಲಿಲ್ಲ
ಬಿಡಿಸಲಿಕೆ ಅಂತ ?