ಇಬ್ಬನಿ
ಇಬ್ಬನಿಯ ಚಿಗುರೊಳಗೆ ಮಬ್ಬು ನೆನಪಿನ ರಾಗ
ಯಾಕೋ ಇಂಪಾಗಿಲ್ಲ, ಗೆಳೆಯ, ಯಾಕಂತ ನೆನಪಿಲ್ಲ
ಇಬ್ಬನಿಯ ತಂಪೊಳಗೆ ತಬ್ಬಿಕೊಂಡಂಥ ನೆನಪುಗಳು
ಏನೋ ತಣ್ಣಗೆ ಕೊರೆದು ಬರೆದದ್ದು ಇನ್ನೂ ಸತ್ತಿಲ್ಲ.
ಇಬ್ಬನಿಯ ನೀರಲ್ಲಿ ನೀರಾದ ನೆನಪುಗಳು
ಯಾಕೆ ಸಿಹಿಯಿಲ್ಲಂತ ಗೆಳೆಯ, ಗೊತ್ತಲ್ಲ ನಿನಗೆ ?
ಚಿಗುರಿದಿಬ್ಬನಿಯ ತಂಪು ನೀರಲ್ಲಿ ನೆನಪುಗಳ
ಲಹರಿ ಹರಿದಿಲ್ಲ ಬಿರಿದಿಲ್ಲ ಬದುಕಿನೊಳಗೆ